»   » ಸತ್ಯ 2 ವಿಮರ್ಶೆ: ಭೂಗತ ಜಗತ್ತಿನ ಮರುಹುಟ್ಟು

ಸತ್ಯ 2 ವಿಮರ್ಶೆ: ಭೂಗತ ಜಗತ್ತಿನ ಮರುಹುಟ್ಟು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

'ದಾವೂದ್ ಇಬ್ರಾಹಿಂ ನಿವೃತ್ತಿ ಹೊಂದಿದ್ದಾನೆ. ಛೋಟಾ ಶಕೀಲ್ ನಿಷ್ಕ್ರಿಯನಾಗಿದ್ದಾನೆ. ಹೀಗಾಗಿ ಭೂಗತ ಜಗತ್ತು, ರೌಡಿಸಂ ಇನ್ನಿಲ್ಲ ಎಂದು ಅನೇಕ ಜನ ತಿಳಿದಿದ್ದಾರೆ. ಆದರೆ, ಮನುಷ್ಯರಲ್ಲಿ ಆಸೆ, ಆಕಾಂಕ್ಷೆ ಇರುವ ತನಕ ಭೂಗತ ಜಗತ್ತು ಮರೆಯಾಗುವುದಿಲ್ಲ. ಭೂಗತ ಜಗತ್ತಿನ ಸ್ವರೂಪ ಬದಲಾಗಬಹುದು ಅಷ್ಟೇ' ಎನ್ನುವ ಮೂಲಕ ಸತ್ಯ 2 ಮರುಹುಟ್ಟು

ಭೂಗತ ಜಗತ್ತಿನ ಹೊಸ ಆವಿಷ್ಕಾರ ಅಥವಾ ಮರುಹುಟ್ಟು ಕಾಣಬಹುದು ಎಂದಿದ್ದ ವರ್ಮಾ ಸಾಲು ಸಾಲು ಫ್ಲಾಪ್ ಚಿತ್ರಗಳ ನಂತರ ಗಂಭೀರವಾಗಿ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ ಎಂಬುದು ಸತ್ಯದ ಮೂಲಕ ಸಾಬೀತಾಗಿದೆ. ಸುಮಾರು 15 ಕೋಟಿ ಬಜೆಟ್ ನಲ್ಲಿ ತಯಾರಾಗಿ ಸತ್ಯ 2 ಚಿತ್ರ ಹೈಪ್ ಗೆ ತಕ್ಕಂತೆ ಚಿತ್ರಿತವಾಗಿದೆ. ಕಾರ್ಪೊರೇಟ್ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಪುನೀತ್, ಅನೈಕ್ ಸೊಟಿ ಹಾಗೂ ಅರಾಧಾನ ಗುಪ್ತ ಅವರಿಗೆ ಈ ಚಿತ್ರ ಬ್ರೇಕ್ ನೀಡುವ ನಿರೀಕ್ಷೆ ಇಟ್ಟುಕೊಳ್ಳಬಹುದು.

ಸತ್ಯ, ಕಂಪನಿ ಹಾಗೂ ಡಿ ಚಿತ್ರಗಳ ನಂತರ ಮತ್ತೊಮ್ಮೆ ಭೂಗತ ಜಗತ್ತಿನ ಕಥೆಯನ್ನು ವರ್ಮಾ ಬಳಸಿಕೊಂಡಿದ್ದಾರೆ. ಸತ್ಯ 2 ಮೊದಲ ಚಿತ್ರದ ಮುಂದುವರೆದ ಭಾಗವೇನಲ್ಲ ಎಂದಿದ್ದಾರೆ. ಮುಂಬೈಗೆ ವಲಸೆ ಬಂದ ಯುವಕನೊಬ್ಬ ಹೇಗೆ ಭೂಗತ ಜಗತ್ತಿನ ಮೇಲೆ ನಿಯಂತ್ರಣ ಸಾಧಿಸಿ ವ್ಯವಸ್ಥಿತವಾಗಿ ಸಂಭಾಳಿಸುತ್ತಾನೆ ಎಂಬ ಕಥೆಯಿದೆ.

Rating:
2.0/5

ಉರ್ಮಿಳಾ ಮತೋಂಡ್ಕರ್, ಅಫ್ತಾಬ್ ಶಿವದಾಸನಿ, ಮನೋಜ್ ಬಾಜಪೇಯಿ, ರಣದೀಪ್ ಹೂಡಾ ಸಾಲಿಗೆ ಪುನೀತ್ ಸಿಂಗ್ ರತ್ನ್ ಅವರನ್ನು ವರ್ಮಾ ತಂದು ನಿಲ್ಲಿಸಿದ್ದಾರೆ. ಪುನೀತ್ ಕೂಡಾ ಭರವಸೆ ಹುಟ್ಟಿಸಿದ್ದಾರೆ.

ಹಿಂದಿ ಚಿತ್ರರಂಗಕ್ಕೆ ರಕ್ತದ ವಾಸನೆ, ಭೂಗತ ಜಗತ್ತಿನ ಭಯಂಕರ ಸತ್ಯಗಳು, ದೈನಂದಿನ ಬದುಕಿನ ತಲ್ಲಣಗಳ ಪರಿಚಯ ಮಾಡಿಕೊಟ್ಟ ನಿರ್ಮಾಪಕ, ನಿರ್ದೇಶಕ ವರ್ಮಾ ಅವರ ಹೊಸ ಕಾನ್ಸೆಪ್ಟ್ ಪ್ರೇಕ್ಷಕರಿಗೆ ತಕ್ಷಣಕ್ಕೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ.

ಕಥಾ ಹಂದರ

ಕಾರ್ಪೋರೇಟ್ ಅಂಡರ್ ವರ್ಲ್ಡ್ ಬಗ್ಗೆ ಉಪೇಂದ್ರ ಅವರ ಸೂಪರ್, ಪುರಿ ಜಗನ್ನಾಥ್ ಅವರ ಬಿಸಿನೆಸ್ಮೆನ್ ಚಿತ್ರದಲ್ಲಿ ಹೇಳಿದ್ದನ್ನು ಬಿಟ್ಟು ಬೇರೆ ಕಥೆ ಹೇಳಲು ವರ್ಮಾ ಹೊರಟ್ಟಿದ್ದಾರೆ. ನಾಯಕ ಮುಂಬೈಗೆ ವಲಸೆ ಬಂದು ಹೊಸ ಕಂಪನಿ ಶುರು ಮಾಡುತ್ತಾನೆ. ಈ ಹಿಂದೆ ಇದ್ದ ಡಾನ್ ಗಳ ನ್ಯೂನ್ಯತೆಗಳನ್ನು ಮೆಟ್ಟಿ ತನ್ನ ಯೋಜನೆಗಳನ್ನು ಸಾಕಾರಗೊಳಿಸುತ್ತಾನೆ. ಈ ಹಂತದಲ್ಲಿ ಮೂವರು ಪ್ರಮುಖ ವ್ಯಕ್ತಿಗಳಾದ ಉದ್ಯಮಿ, ಪೊಲೀಸ್ ಆಯುಕ್ತ, ಮಾಧ್ಯಮ ದೊರೆಯನ್ನು ಕೊಲ್ಲುತ್ತಾನೆ ಮುಂದೇನು? ಸಮಯ, ತಾಳ್ಮೆಇದ್ದರೆ ಚಿತ್ರಮಂದಿರದಲ್ಲಿ ನೋಡಿ

ನಟನೆ ಅಷ್ಟಕಷ್ಟೆ

ಮನೋಜ್ ಬಾಜಪೇಯಿ, ಜೆಡಿ ಚಕ್ರವರ್ತಿಗೆ ಒಳ್ಳೆ ಬ್ರೇಕ್ ಕೊಟ್ಟ ವರ್ಮಾ ಚಿತ್ರ ಹೊಸ ಸಾಧ್ಯತೆಯನ್ನು ಬಾಲಿವುಡ್ ಗೆ ಪರಿಚಯಿಸಿತ್ತು. ಆದರೆ, ಸತ್ಯ 2 ನಲ್ಲಿ ಎಲ್ಲಾ ಹೊಸಬರು ನಟನೆ ತರಬೇತಿ ಇಲ್ಲದೆ ಪ್ರಮುಖ ದೃಶ್ಯಗಳಲ್ಲಿ ಒದ್ದಾಡುವುದನ್ನು ಗಮನಿಸಬಹುದು. ಅರಾಧನಾ ಗುಪ್ತ ಇರೋದಲ್ಲಿ ಪರ್ವಾಗಿಲ್ಲ. ಬಿಲ್ಡರ್ ಪವನ್ ಲಹೊಟಿಯಾಗಿ ಮಹೇಶ್ ಠಾಕೂರ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಆದರೆ, ನಟನೆ ಚಿತ್ರ ಗೆಲ್ಲಿಸಲು ಸಾಧ್ಯವಿಲ್ಲ

ಮತ್ತೇನಿದೆ ಚಿತ್ರದಲ್ಲಿ

ವರ್ಮಾ ಚಿತ್ರದ ಹೈಲೇಟ್ ಎನಿಸುವ ಛಾಯಾಗ್ರಹಣ ಹಾಗೂ ಹಿನ್ನೆಲೆ ಸಂಗೀತ ಕೂಡಾ ಈ ಚಿತ್ರದಲ್ಲಿ ಅಲ್ಲಲ್ಲಿ ಕೈಕೊಟ್ಟಿದೆ. ಹಾಡುಗಳು ಅನಗತ್ಯವಾಗಿದ್ದರೂ ಕಥೆಯ ಓಟಕ್ಕೆ ಬ್ರೇಕ್ ಹಾಕಲು ಅವಶ್ಯ ಎನ್ನಬಹುದು. ಕಲ್ಪನೆಗೆ ಮಿತಿ ಇಲ್ಲ ಬಿಡಿ

ಥ್ರೀಲ್ ಇಲ್ಲ

ಸಾಹಸಭರಿತ, ತಂತ್ರಗಾರಿಕೆ ರೋಚಕ ಚಿತ್ರ ಎನ್ನಲಾದ ಸತ್ಯ 2 ಬೋರ್ ಹೊಡೆಸುತ್ತದೆ. ಟೈಮ್ ಪಾಸ್ ಗೆ ಹೋಗಿ ಮಧ್ಯದಲ್ಲೆ ಎದ್ದು ಬಂದರೆ ಯಾವ ತೊಂದರೆಯೂ ಇಲ್ಲ.

ವರ್ಮಾ ಅವರ ಪ್ರಯತ್ನಕ್ಕೆ, ಹೊಸಬರಿಗೆ ನೀಡಿದ ಅವಕಾಶಕ್ಕೆ ಬೆಂಬಲಿಸುವುದಕ್ಕೆ ಚಿತ್ರ ನೋಡಬಹುದು ಅಷ್ಟೆ. ಉತ್ತಮ ಚಿತ್ರವಾಗಬೇಕಿದ್ದ ಸತ್ಯ 2 ಚಿತ್ರಾನ್ನ ವಾಗಿಬಿಟ್ಟಿದೆ. ಸತ್ಯನನ್ನು ರಾಬಿನ್ ಹುಡ್ ಮಾದರಿ ಎಂದುಕೊಂಡರೆ ತನ್ನ ಭ್ರಷ್ಟ ಆರ್ಥಿಕ ತಜ್ಞರನ್ನು ಯಾಕೆ ಸುಮ್ಮನೆ ಬಿಟ್ಟ ಎಂಬುದಕ್ಕೆ ಉತ್ತರವಿಲ್ಲ. Special ಹೆಸರಿನ ಕಥೆ ಬಗ್ಗೆ ತಿಳಿಯುವುದೇ ಇಲ್ಲ. ಲಹೋಟಿ ಬಳಿ ಸತ್ಯ ಬಂದಿದ್ದು ಏಕೆ? ಬಹುಶಃ ಉತ್ತರ ಸತ್ಯ 3 ರಲ್ಲಿ ನಿರೀಕ್ಷಿಸಿ

English summary
Satya 2 has been thrilling as well as gripping. But, we aren't convinced yet, if this one can 'reinvent the underworld', as promised by Ram Gopal Varma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada