Seetharama Kalyana Review : 'ಸೀತಾರಾಮ ಕಲ್ಯಾಣ', ಇದು ಎಲ್ಲದರ ಮಿಶ್ರಣ

ಅಮ್ಮ ಮಗಳ ಸೆಂಟಿಮೆಂಟ್, ತಂದೆ ಮಗನ ಬಾಂದವ್ಯ, ನಾಯಕ ನಾಯಕಿಯ ಲವ್ ಸ್ಟೋರಿ, ಗೆಳೆಯರ ಜೊತೆಗಿನ ಕೀಟಲೆ, ಆಗಾಗ ಆಕ್ಷನ್, ಬೇಕಾದಷ್ಟು ಡೈಲಾಗ್ಸ್ ಈ ಎಲ್ಲದರ ಮಿಶ್ರಣವೇ 'ಸೀತಾರಾಮ ಕಲ್ಯಾಣ'. ಮನರಂಜನೆ ದೃಷ್ಟಿಯಿಂದ ಮಾಡಿರುವ ಈ ಚಿತ್ರ ಒಂದು ಫ್ಯಾಮಿಲಿ ಸಿನಿಮಾ.

Rating:
3.0/5
Star Cast: ನಿಖಿಲ್ ಕುಮಾರ್, ರಚಿತಾ ರಾಮ್
Director: ಹರ್ಷ

ಕಥೆಯಲ್ಲಿ ಅಂಥ ಹೊಸತನವಿಲ್ಲ

ಕಥೆಯಲ್ಲಿ ಅಂಥ ಹೊಸತನವಿಲ್ಲ

'ಸೀತಾರಾಮ ಕಲ್ಯಾಣ' ಸಿನಿಮಾದ ಕಥೆ ವಿಚಾರವನ್ನೇ ಮೊದಲು ತೆಗೆದುಕೊಳ್ಳುವುದಾದರೆ, ಅಲ್ಲಿ ಅಷ್ಟೊಂದು ವಿಶೇಷ, ವಿಭಿನ್ನ ಏನಿಲ್ಲ. ಇಂತಹ ಕಥೆಗಳು ಈಗಾಗಲೇ ಅನೇಕ ಸಿನಿಮಾಗಳು ಬಂದಿದೆ. ತೆಲುಗಿನಲ್ಲಂತು ಇಂತಹ ಸಾಲು ಸಾಲು ಸಿನಿಮಾಗಳು ಬಂದಿವೆ. ಸಿನಿಮಾದ ಕೆಲವು ವಿಷಯಗಳು ಅನೇಕ ಚಿತ್ರಗಳನ್ನು ಹೋಲುತ್ತಿವೆ.

ಸಿಟಿ ಆರ್ಯ, ಹಳ್ಳಿ ಗೀತಾ

ಸಿಟಿ ಆರ್ಯ, ಹಳ್ಳಿ ಗೀತಾ

ಸಿಟಿ ಹುಡುಗ ಆರ್ಯ (ನಿಖಿಲ್ ಕುಮಾರ್) ಸ್ನೇಹಿತನ ಮದುವೆಗೆ ಹಳ್ಳಿಗೆ ಬರುತ್ತಾನೆ. ಅಲ್ಲಿ ಗೀತಾ (ರಚಿತಾ ರಾಮ್) ನೋಡಿ ಪ್ರೀತಿಯಲ್ಲಿ ಬೀಳುತ್ತಾನೆ. ಬರೀ ಸ್ನೇಹಿತರಾಗಿ ಇರೋಣ ಎನ್ನುವ ಗೀತಾನ ಪ್ರೀತಿಯನ್ನು ಆರ್ಯ ಗೆಲ್ಲುತ್ತಾನೆಯೇ ಎನ್ನುವುದು ಚಿತ್ರದ ಕುತೂಹಲಕಾರಿ ಅಂಶ. ಹೀಗಿರುವ ಕಥೆಗೆ ಒಂದು ಟಿಸ್ಟ್ ಸಿಗುತ್ತದೆ.

ಈ ಅಂಶದ ಮೇಲೆ ಅನೇಕ ಚಿತ್ರಗಳು ಬಂದಿವೆ

ಈ ಅಂಶದ ಮೇಲೆ ಅನೇಕ ಚಿತ್ರಗಳು ಬಂದಿವೆ

ಸಿನಿಮಾದ ಸೆಕೆಂಡ್ ಹಾಫ್ ಆರಂಭದಲ್ಲಿ ಬರುವ ಒಂದು ಅಂಶ ಈಗಾಗಲೇ ಅನೇಕ ಚಿತ್ರಗಳಲ್ಲಿ ಬಂದು ಬಿಟ್ಟಿದೆ. ನಾಯಕ - ನಾಯಕಿಯ ತಂದೆ ಅಥವಾ ಕುಟುಂಬಗಳ ನಡುವೆ ವೈರತ್ವ ಇರುತ್ತದೆ. ಫ್ಲಾಶ್ ಬ್ಯಾಕ್ ನಲ್ಲಿ ಅದನ್ನು ರಿವೀಲ್ ಮಾಡಲಾಗುತ್ತದೆ. ಈ ರೀತಿಯ ಬೇಕಾದಷ್ಟು ಸಿನಿಮಾಗಳನ್ನು ಈಗಾಗಲೇ ಎಲ್ಲರೂ ನೋಡಿ ಆಗಿದೆ. ಇಲ್ಲಿಯೂ ಅದು ಪುನರಾವರ್ತನೆ ಆಗುತ್ತದೆ.

ನಿಖಿಲ್ ಫೈಟ್, ರಚಿತಾ ಕ್ಯೂಟ್

ನಿಖಿಲ್ ಫೈಟ್, ರಚಿತಾ ಕ್ಯೂಟ್

ನಟ ನಿಖಿಲ್ ನಟನೆ ಇಷ್ಟ ಆಗುತ್ತದೆ. ಕಾಮಿಡಿ, ಆಕ್ಷನ್, ಲವ್ ಹೀಗೆ ಯಾವುದೇ ದೃಶ್ಯವಿದ್ದರೂ ನಿಖಿಲ್ ನಿರ್ಭಯವಾಗಿ ನಟಿಸಿದ್ದಾರೆ. ಸಾಹಸ ದೃಶ್ಯಗಳಲ್ಲಂತು ನಿಖಿಲ್ ಅಬ್ಬರ ಸೂಪರ್. ರಚಿತಾ ರಾಮ್ ಸಿಕ್ಕಾಪಟ್ಟೆ ಕ್ಯೂಟ್ ಆಗಿ ನಟಿಸಿದ್ದಾರೆ. ಲಂಗ ದಾವಣಿ ಹಾಕಿ ಗೀತಾ ತೆರೆ ಮೇಲೆ ಬಂದರೆ ನೋಡುಗರಿಗೆ ಆನಂದ ಆಗುತ್ತದೆ. ಈ ಹಿಂದೆ ರಚಿತಾ ಹಳ್ಳಿ ಹುಡುಗಿ ಪಾತ್ರ ಮಾಡಿದ್ದರು, ಇಲ್ಲಿ ಇನ್ನಷ್ಟು ಚೆಂದವಾಗಿ ಕಾಣ್ತಾರೆ.

ಕಾಮಿಡಿ ಚೆನ್ನಾಗಿದೆ

ಕಾಮಿಡಿ ಚೆನ್ನಾಗಿದೆ

ಸಿನಿಮಾದಲ್ಲಿ ಕಾಮಿಡಿ ತುಂಬ ಚೆನ್ನಾಗಿದೆ. ಫಸ್ಟ್ ಹಾಫ್ ಕಾಮಿಡಿ ಇರುವ ಕಾರಣಕ್ಕೆ ಇಷ್ಟವಾಗುತ್ತದೆ. ಚಿಕ್ಕಣ್ಣ ಜೊತೆಗೆ ಕಾಮಿಡಿ ಕಿಲಾಡಿಗಳು ನಯನ, ಶಿವರಾಜ್ ಕೆ ಆರ್ ಪೇಟೆ, ಸಂಜು ಬಸಯ್ಯ, ಲೋಕಿ ನಗಿಸುತ್ತಾರೆ. ಉಳಿದಂತೆ, ರವಿಶಂಕರ್, ಶರತ್ ಕುಮಾರ್, ಆದಿತ್ಯ ಮೆನನ್ ಅನುಭವ ಸಿನಿಮಾಗೆ ಸಹಾಯವಾಗಿದೆ.

ಇವು ಸಿನಿಮಾಗೋ, ಸಿನಿಮಾದ ಆಚೆಗೋ

ಇವು ಸಿನಿಮಾಗೋ, ಸಿನಿಮಾದ ಆಚೆಗೋ

ಚಿತ್ರದ ಕೆಲ ಸಂಭಾಷಣೆಗಳು ಹಾಗೂ ಕೆಲ ದೃಶ್ಯಗಳು ಸಿನಿಮಾಗೋ.. ಸಿನಿಮಾದ ಆಚೆಗೋ ಎನ್ನುವ ಗೊಂದಲ ಮೂಡುತ್ತದೆ. ಸಿನಿಮಾದ ಕೆಲವು ಸಂಭಾಷಣೆಗಳು ಕುಮಾರಸ್ವಾಮಿ ಅವರಿಗೆಯೇ ಹೇಳಿದ ಆಗಿದೆ. ಡ್ಯಾಮ್ ಕಟ್ಟಿಸುವುದು, ರೈತರ ಆತ್ಮಹತ್ಯೆ ಹೀಗೆ ಕೆಲವೊಂದು ಅಂಶಗಳನ್ನು ಚಿತ್ರದಲ್ಲಿ ಸೇರಿಸಲಾಗಿದೆ.

ಮೇಕಿಂಗ್ ಹಾಗೂ ಮ್ಯೂಸಿಕ್

ಮೇಕಿಂಗ್ ಹಾಗೂ ಮ್ಯೂಸಿಕ್

ಸಿನಿಮಾದಲ್ಲಿ ಇಷ್ಟ ಆಗುವ ಅಂಶಗಳಲ್ಲಿ ಮೇಕಿಂಗ್ ಕೂಡ ಒಂದು. ಸ್ವಾಮಿ ಜಿ ತಮ್ಮ ಕ್ಯಾಮರಾ ಮೂಲಕ ಚೆಂದದ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಚಿತ್ರದ ಪ್ರತಿ ದೃಶ್ಯದಲ್ಲಿಯೂ ಶ್ರೀಮಂತಿಕೆ ಇದೆ. ಒಂದೆರಡು ಹಾಡುಗಳು ಇಷ್ಟ ಆಗುತ್ತವೆ. ಹಿನ್ನಲೆ ಸಂಗೀತ ಸಿನಿಮಾಗೆ ಪ್ಲಸ್ ಆಗಿದೆ.

ಒಮ್ಮೆ ನೋಡಬಹುದು

ಒಮ್ಮೆ ನೋಡಬಹುದು

ನಿರ್ದೇಶಕ ಹರ್ಷ ಮತ್ತೆ ಕಥೆಯಲ್ಲಿ ಎಡವಿ, ಮೇಕಿಂಗ್ ನಲ್ಲಿ ಗೆದ್ದಿದ್ದಾರೆ. ಯಾವುದೇ ಮುಜುಗರವಿಲ್ಲದ ಕೌಟುಂಬಿಕ ಸಿನಿಮಾ ಇದಾಗಿದೆ. ಮನರಂಜನೆ ದೃಷ್ಟಿಯಿಂದ ಸಿನಿಮಾವನ್ನು ಒಮ್ಮೆ ನೋಡಬಹುದು.

More from Filmibeat

English summary
C M Kumaraswamy son Nikhil Kumar's 'Seetharama Kalyana' movie review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X