Dunki First Review: ಶಾರುಖ್ ಖಾನ್- ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ 'ಡಂಕಿ' ಹೇಗಿದೆ?
ಈ ವರ್ಷ ಎರಡು ಹಿಟ್ ಸಿನಿಮಾ ನೀಡಿ ಸಾವಿರಾರು ಕೋಟಿ ಬಾಕ್ಸ್ ಅಫೀಸ್ ದಾಖಲೆ ಮಾಡಿರುವ ಬಾಲಿವುಡ್ ನಟ ಶಾರುಖ್ ಖಾನ್ ಈ ವರ್ಷದ ಮತ್ತೊಂದು ಹಿಟ್ ನೀಡಲು ಮುಂದಾಗಿದ್ದಾರೆ. ಸಿದ್ಧಾರ್ಥ್ ಆನಂದ್ ಅವರ 'ಪಠಾನ್' ಮತ್ತು ಅಟ್ಲೀ ನಿರ್ದೇಶನದ 'ಜವಾನ್' ಸಿನಿಮಾಗಳ ಮೂಲಕ ಎರಡು ಸೂಪರ್ ಹಿಟ್ ಸಿನಿಮಾಗಳು ಶಾರುಖ್ ಖಾನ್ ತೆಕ್ಕೆಗೆ ಸೇರಿಕೊಂಡಿದ್ದು, ಮೂರನೇ ಗೆಲುವಿಗಾಗಿ ಕಾಯುತ್ತಿದ್ದಾರೆ.
ಇದೇ ಮೊದಲ ಬಾರಿಗೆ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮತ್ತು ಶಾರುಖ್ ಖಾನ್ ಜೋಡಿಯಾಗಿದ್ದು, ಸಿನಿಮಾದಲ್ಲಿ ಶಾರುಖ್ ಜೊತೆಗೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮತ್ತು ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ವರ್ಷದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಇದು ಕೂಡ ಒಂದಾಗಿದೆ.

ಕಮಾಲ್ ಮಾಡಿದ್ಯಾ ಶಾರುಖ್-ರಾಜ್‌ಕುಮಾರ್ ಹಿರಾನಿ ಜೋಡಿ?
ನಾಲ್ಕು ರಾಷ್ಟ್ರ ಪ್ರಶಸ್ತಿ ಗೆದ್ದಿರುವ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಮುನ್ನಾ ಬಾಯ್ ಎಂಬಿಬಿಎಸ್, ತ್ರೀ ಇಡಿಯಟ್ಸ್, ಪಿಕೆ ಮತ್ತು ಸಂಜು ರೀತಿ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಇದೇ ಮೊದಲ ಬಾರಿಗೆ ಶಾರುಖ್ ಖಾನ್ ಜೊತೆಗೆ ಕೈ ಜೋಡಿಸಿದ್ದು, ಡಂಕಿ ಸಿನಿಮಾ ಮೇಲೆ ಸಕತ್ ನಿರೀಕ್ಷೆ ಮೂಡಿಸಿದೆ.

ಫಸ್ಟ್ ಲುಕ್ ಪೋಸ್ಟರ್‌ನಿಂದ ಟೀಸರ್, ಟ್ರೈಲರ್ ಮತ್ತು ಹಾಡುಗಳವರೆಗೆ 'ಡಂಕಿ' ಎಲ್ಲಾ ರೀತಿಯಲ್ಲೂ ಜನರನ್ನು ತಲುಪಿದೆ. ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಅರಂಭವಾಗಿದ್ದು, ಶಾರುಖ್ ಖಾನ್ ಅಭಿನಯದ 'ಡಂಕಿ' ಚಿತ್ರದ ಮೊದಲ ವಿಮರ್ಶೆ ಇಲ್ಲಿದೆ.
ಆಲ್ವೇಸ್ ಬಾಲಿವುಡ್ ಹಂಚಿಕೊಂಡಿರುವ ಟ್ವೀಟ್ ಪ್ರಕಾರ, ಡಂಕಿ ಹೃದಯಸ್ಪರ್ಶಿ ಸಿನಿಮಾ ಎಂದು ಹೇಳಲಾಗಿದೆ. ಟ್ವೀಟ್‌ನಲ್ಲಿ ಶಾರುಖ್ ಖಾನ್ ಮತ್ತು ಬೊಮನ್ ಇರಾನಿ ಅವರ ಅಭಿನಯವನ್ನು ಶ್ಲಾಘಿಸಲಾಗಿದೆ. ಟ್ವೀಟ್‌ನಲ್ಲಿ, "ಡಂಕಿ ಸಿನಿಮಾ ಹೃದಯಸ್ಪರ್ಶಿ ಮತ್ತು ಸೂಕ್ಷ್ಮ ಸಂವೇದನೆಗಳನ್ನು ಅದರ ಮನರಂಜನಾ ಅಂಶದೊಂದಿಗೆ ನಮ್ಮ ಮುಂದೆ ಇಡಲಿದೆ. ಇದು ನಿಮ್ಮ ಹೃದಯದಲ್ಲಿ ನೆಲೆಗೊಳ್ಳುತ್ತದೆ ಮತ್ತು ಮನೆಯ ಹಂಬಲವನ್ನು ನಿಮ್ಮಲ್ಲಿ ತರುತ್ತದೆ. ನಟ ಶಾರುಖ್ ಖಾನ್ ಮತ್ತು ಬೊಮನ್ ಇರಾನಿ ಅಭಿನಯ ಇಲ್ಲಿ ಅತ್ಯುತ್ತಮವಾದದ್ದು" ಎಂದು ಹೇಳಿದೆ. ಜೊತೆಗೆ ಸಿನಿಮಾಗೆ 5 ರಲ್ಲಿ 4 ಸ್ಟಾರ್‌ಗಳನ್ನು ನೀಡಿದೆ.
ಇನ್ನು, ಶಾರುಖ್ ಅವರ 'ಡಂಕಿ' ಸಿನಿಮಾ ಪ್ರಭಾಸ್ ಅವರ ಬಹು ನಿರೀಕ್ಷಿತ ಸಲಾರ್ ಜೊತೆಗೆ ತೆರೆಕಾಣಲಿದೆ. ಸಲಾರ್ ಡಿಸೆಂಬರ್ 22 ರಂದು ಬಾಕ್ಸ್ ಆಫೀಸ್‌ಗೆ ಲಗ್ಗೆ ಇಡಲಿದೆ. ಸಲಾರ್ ಮತ್ತು ಡಂಕಿ ನಡುವೆ ಪೈಪೋಟಿ ಆರಂಭವಾಗಿದ್ದು, ಈಗಾಗಲೇ ಸಲಾರ್ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ದಾಖಲೆ ಮಾಡುತ್ತಿದೆ. ಡಂಕಿ ಕೂಡ ಈವರೆಗೂ ಸುಮಾರು 4.5 ರೂಪಾಯಿ ಕಲೆಕ್ಷನ್ ಮಾಡಿದೆ.


Click it and Unblock the Notifications











