For Quick Alerts
  ALLOW NOTIFICATIONS  
  For Daily Alerts

  Guru Shishyaru Twitter Review : ಗುರು ಶಿಷ್ಯರು ಹಿಟ್ಟಾ ಫ್ಲಾಪಾ? ಫಸ್ಟ್ ಶೋ ನೋಡಿದವರು ಹೇಳಿದ್ದಿಷ್ಟು

  |

  ಶರಣ್ ಹಾಗೂ ನಿಶ್ವಿಕಾ ನಾಯ್ಡು ನಾಯಕ ಹಾಗೂ ನಾಯಕಿಯಾಗಿ ಕಾಣಸಿಕೊಂಡಿರುವ ಗುರು ಶಿಷ್ಯರು ಚಿತ್ರ ಇಂದು ( ಸೆಪ್ಟೆಂಬರ್ 23 ) ಭರ್ಜರಿಯಾಗಿ ಬಿಡುಗಡೆಗೊಂಡಿದೆ. ಈ ಹಿಂದೆ ಪ್ರಜ್ವಲ್ ದೇವರಾಜ್ ಅವರಿಗೆ ಜಂಟಲ್‌ಮನ್ ರೀತಿಯ ವಿಭಿನ್ನ ಕಥಾಹಂದರವಿರುವ ಚಿತ್ರವನ್ನು ನಿರ್ದೇಶಿಸಿದ್ದ ಜಡೇಶ್ ಕುಮಾರ್ ಹಂಪಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರಕ್ಕೆ ಸ್ವತಃ ನಟ ಶರಣ್ ಹಾಗೂ ತರುಣ್ ಸುಧೀರ್ ಬಂಡವಾಳ ಹೂಡಿದ್ದಾರೆ.

  ಇನ್ನು ಈ ಚಿತ್ರದಲ್ಲಿ ಸ್ಟಾರ್ ನಟರ ಪುತ್ರರೂ ಸಹ ಅಭಿನಯಿಸಿರುವುದು ವಿಶೇಷವಾಗಿದ್ದು, ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಚಿತ್ರದ ಮೇಲಿನ ಭರವಸೆಯನ್ನು ಹೆಚ್ಚಿಸಿತ್ತು. ಇನ್ನು ಚಿತ್ರ ಬಿಡುಗಡೆಗೂ ಮುನ್ನ ಸಿನಿಮಾ ಮೇಲೆ ನಿರೀಕ್ಷೆ ಹುಟ್ಟಲು ಬೇಕಿದ್ದ ಪ್ರಚಾರ ಮಾಡುವಲ್ಲಿ ಚಿತ್ರತಂಡ ಯಶಸ್ವಿಯಾಗಿತ್ತು. ಹೀಗೆ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಹಿಟ್ ಆಗಿ, ಹಿಟ್ ನಿರ್ದೇಶಕನ ಅಡಿಯಲ್ಲಿ ಮೂಡಿ ಬಂದ ಚಿತ್ರ ತೆರೆಗೆ ಅಪ್ಪಳಿಸಿದ ನಂತರ ಯಾವ ರೀತಿಯ ಪ್ರತಿಕ್ರಿಯೆಯನ್ನುಯ ಪಡೆದುಕೊಳ್ಳುತ್ತಿದೆ, ಜನರಿಗೆ ಸಿನಿಮಾ ಹೇಗನಿಸಿದೆ ಎಂಬುದನ್ನು ವೀಕ್ಷಕರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಹಾಗಿದ್ದರೆ ಗುರು ಶಿಷ್ಯರು ಚಿತ್ರದ ಮೊದಲ ಪ್ರದರ್ಶನ ನೋಡಿ ಬಂದ ಪ್ರೇಕ್ಷಕ್ ಹೇಳಿದ್ದೇನು ಎಂಬುದರ ಕುರಿತ ಮಾಹಿತಿ ಈ ಕೆಳಕಂಡಂತಿದೆ.

  ಇದು ಪ್ಯಾನ್ ಇಂಡಿಯಾಗೂ ಕಡಿಮೆ ಇಲ್ಲ

  ಇದು ಪ್ಯಾನ್ ಇಂಡಿಯಾಗೂ ಕಡಿಮೆ ಇಲ್ಲ

  ಗುರು ಶಿಷ್ಯರು ಚಿತ್ರ ವೀಕ್ಷಿಸಿದ ದರ್ಶನ್ ಅಭಿಮಾನಿಯೋರ್ವ ಟ್ವಿಟರ್ ಖಾತೆಯಲ್ಲಿ ಚಿತ್ರದ ಕುರಿತು ಬರೆದುಕೊಂಡಿದ್ದು, ಚಿತ್ರ ಎಲ್ಲಾ ವಿಭಾಗಗಳಲ್ಲಿಯೂ ಸಖತ್ತಾಗಿದೆ ಹಾಗೂ ಇದು ಪ್ಯಾನ್ ಇಂಡಿಯಾ ಚಿತ್ರದ ಅಂಶಕ್ಕಿಂತ ಕಡಿಮೆ ಏನಿಲ್ಲ, ಚಿತ್ರತಂಡ ಮಾಸ್ಟರ್ ಪೀಸ್ ಒಂದನ್ನು ನೀಡಿದ್ದು, ಇದು ಯಶಸ್ಸಿಗೆ ಅರ್ಹವಾಗಿದೆ, ಎರಡನೇ ಯೋಚನೆ ಮಾಡದೇ ಚಿತ್ರವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿ ಎಂದಿದ್ದಾರೆ.

  ಒಂದು ಬಾರಿ ನೋಡಬಹುದು

  ಒಂದು ಬಾರಿ ನೋಡಬಹುದು

  ಮತ್ತೋರ್ವ ಸಿನಿ ಪ್ರೇಕ್ಷಕ ಗುರು ಶಿಷ್ಯರು ವೀಕ್ಷಿಸಿದ ನಂತರ ಟ್ವೀಟ್ ಮಾಡಿದ್ದು, ಖೋ ಖೋ ಆಟವನ್ನು ಪ್ರೋತ್ಸಾಹಿಸಲು ಮಾಡಿರುವ ಗುರು ಶಿಷ್ಯರು ಒಂದೊಳ್ಳೆ ಪ್ರಯತ್ನ ಎಂದಿದ್ದಾರೆ. ಡೀಸೆಂಟ್ ಸ್ಟೋರಿ ಲೈನ್ ಹೊಂದಿರುವ ಚಿತ್ರವಾಗಿದ್ದು, ನೋಡಬಹುದಾದಂತ ಚಿತ್ರಕತೆಯಿದೆ, ವಿಎಫ್ಎಕ್ಸ್ ಇನ್ನೂ ಕೊಂಚ ಚೆನ್ನಾಗಿರಬಹುದಿತ್ತು, ಕತೆ ದ್ವಿತೀಯಾರ್ಧದಲ್ಲಿ ಪಿಕ್ ಅಪ್ ಆಗಲಿದ್ದು, ಊಹಿಸಬಹುದಾಗಿದೆ, ಆದರೆ ಅಂತಿಮ ಹಂತದವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲಿದೆ, ಒಂದು ಬಾರಿ ಚಿತ್ರವನ್ನು ನೋಡಬಹುದು ಎಂದು ಬರೆದುಕೊಂಡಿದ್ದಾರೆ.

  ಅವಾರ್ಡ್ ಗೆಲ್ಲುವಂತ ಸಿನಿಮಾ

  ಅವಾರ್ಡ್ ಗೆಲ್ಲುವಂತ ಸಿನಿಮಾ

  ಶಿವಪ್ರಸಾದ್ ಎಲ್ ಎಮ್ ಎನ್ನುವವರು ಚಿತ್ರದ ಕುರಿತು ಬರೆದುಕೊಂಡಿದ್ದು, ಗುರುಶಿಷ್ಯರು ಅದ್ಭುತವಾಗಿ ಹೆಣೆದಿರುವ ಸ್ಪೋರ್ಟ್ಸ್ ಡ್ರಾಮಾ ಎಂದಿದ್ದಾರೆ. ಹುಡುಗರು ಹಾಗೂ ಶರಣ್ ಅತ್ಯುತ್ತಮವಾಗಿ ನಟಿಸಿದ್ದು, ಜಡೇಶ್ ಕುಮಾರ್ ಹಂಪಿ ನಿರ್ದೇಶನ ಹಾಗೂ ಅಜನೀಶ್ ಬಿ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್ ಎಂದಿದ್ದಾರೆ ಹಾಗೂ ಗುರು ಶಿಷ್ಯರು ಚಿತ್ರ ಹಿಟ್ ಆಗಲು ಮತ್ತು ಸಾಕಷ್ಟು ಅವಾರ್ಡ್ ಗೆಲ್ಲಲು ಅರ್ಹವಾದ ಚಿತ್ರ ಎಂದು ಬರೆದುಕೊಂಡಿದ್ದಾರೆ.

  English summary
  Sharan and Nishvika Naidu starrer Guru Shishyaru movie twitter review is here. Take a look
  Friday, September 23, 2022, 16:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X