Choo Mantar Review: 'ಮಾರ್ಗನ್ ಹೌಸ್' ದೆವ್ವಗಳ ರಹಸ್ಯ.. 'ಛೂ ಮಂತರ್' ಕೊಡೋ ಟ್ವಿಸ್ಟ್‌ ಒಂದೆರಡಲ್ಲ!

By ಯಶವಂತ್

Rating:
3.0/5

ಸಿನಿಮಾ ಮಂದಿ ಪ್ಯಾನ್ ಇಂಡಿಯಾ, ಲವ್ ಸ್ಟೋರಿ, ಮಾಸ್ ಸಬ್ಜೆಕ್ಟ್‌ಗಳ ಹಿಂದೆ ಹೋಗಿದ್ದೇ ಹೆಚ್ಚು. ಆದರೆ, ಹಾರರ್ ಅಂತ ಒಂದು ಕ್ಯಾಟಗರಿನೇ ಇದೆ ಅನ್ನೋದನೇ ಮರೆತು ಹೋಗುವಷ್ಟು ತಿರಸ್ಕರಿಸಿದ್ದರು. ಆದರೆ, ಹಾರರ್ ಸಿನಿಮಾ ನೋಡುವುದನ್ನು ಪ್ರೇಕ್ಷಕರು ಇಷ್ಟ ಪಡುತ್ತಾರೆ ಅನ್ನೋದು ಈಗಾಗಲೇ ಸಾಬೀತಾಗಿದೆ. ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದ 'ಸ್ತ್ರೀ 2'ನೇ ಒಂದು ಉದಾಹರಣೆ.

ಈಗ ಕನ್ನಡದಲ್ಲೂ ಹಾರರ್ ಸಿನಿಮಾ ಪ್ರಿಯರನ್ನು ರಂಜಿಸುವುದಕ್ಕೆ 'ಛೂ ಮಂತರ್' ಇಂದು(ಜನವರಿ 10) ರಿಲೀಸ್ ಆಗಿದೆ. ಥಿಯೇಟರ್‌ಗಳು ಸಿಗುತ್ತಿಲ್ಲ ಅಂತ ಗೋಳಾಡುತ್ತಲೇ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ಈ ಸಿನಿಮಾ ಪ್ರೇಕ್ಷಕರಿಗೆ ಕಿಕ್ ಕೊಡುತ್ತಾ? ವರ್ಷದ ಮೊದಲ ಹಿಟ್ ಸಿನಿಮಾ ಆಗುತ್ತಾ? ಮತ್ತೆ ಹಾರರ್ ಸಿನಿಮಾಗಳು ಹೆಚ್ಚಾಗುವಂತೆ ಮಾಡುತ್ತಾ?

Sharan Chikkanna Aditi Prabhudeva film Choo Mantar Kannada review and rating

'ಛೂ ಮಂತರ್' ಹಾರರ್-ಕಾಮಿಡಿ ಸಿನಿಮಾ. ಶರಣ್, ಚಿಕ್ಕಣ್ಣ ಅಂತಹ ಹಾಸ್ಯ ಲೋಕದ ದಿಗ್ಗಜರು ಇರುವಾಗ ಕಾಮಿಡಿ ಇಲ್ಲದೆ ಇದ್ದರೆ ಹೇಗೆ? ಹೀಗಾಗಿ 'ಕರ್ವ' ಸಿನಿಮಾದ ನಿರ್ದೇಶಕ ನವನೀತ್ ಭಯನೂ ಹುಟ್ಟಿಸಬೇಕು. ನಗುವನ್ನೂ ತರಿಸಬೇಕು ಅಂತಹ ಕಥೆಯನ್ನು ಆಯ್ಕೆ ಮಾಡಿಕೊಂಡು ತೆರೆಮೇಲೆ ಬಂದಿದ್ದಾರೆ. ಹಾಗಿದ್ದರೆ, 'ಛೂ ಮಂತರ್' ಸಿನಿಮಾ ಹೇಗಿದೆ? ಪ್ಲಸ್ ಏನು? ಮೈನಸ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

'ಛೂ ಮಂತರ್' ಕಥೆಯೇನು?

ದೆವ್ವ ಬಿಡಿಸುವುದರಿಂದಲೇ 'ಛೂ ಮಂತರ್' ಸಿನಿಮಾದ ಕಥೆ ಆರಂಭ ಆಗುತ್ತೆ. ಹಾಗಂತ 'ಛೂ ಮಂತರ್' ಅನ್ನೋದು ಮಂತ್ರನೋ ಮತ್ತೊಂದೋ ಏನೂ ಅಲ್ಲ. ಇದೊಂದು ದೆವ್ವ ಬಿಡಿಸುವ ಆಫೀಸಿನ ಹೆಸರು. ಅದರಲ್ಲಿ ಶರಣ್, ಚಿಕ್ಕಣ್ಣ, ಅದಿತಿ ಪ್ರಭುದೇವ ಪ್ರಮುಖರು. ದೆವ್ವ ಬಿಡಿಸೋದ್ರಲ್ಲಿ ನಿಸ್ಸೀಮನಾಗಿರುವ ಶರಣ್, ಚಿಕ್ಕಣ್ಣ ಹಾಗೂ ಅದಿತಿ ಪ್ರಭುದೇವ ನಿಧಿಯನ್ನು ಹುಡುಕಿಕೊಂಡು ಮಾರ್ಗನ್ ಹೌಸ್‌ಗೆ ಹೋಗುತ್ತಾರೆ. ಅಲ್ಲಿಂದ ಕಥೆಯೊಳಗೊಂದೊಂದು ಕಥೆ ತೆರೆದುಕೊಳ್ಳುತ್ತಾ ಹೋಗುತ್ತೆ. ಪ್ರತಿಯೊಂದು ಕಥೆಗೂ ಒಂದೊಂದು ಕನೆಕ್ಷನ್ ಇದೆ. ಆ ಕಥೆಗಳಿಗೂ ಶರಣ್, ಅದಿತಿ ಪ್ರಭುದೇವಗೂ ಲಿಂಕ್ ಇದೆ. ಅದೇನದು? ಅಂತ ತಿಳಿಯುವುದಕ್ಕೆ ಸಿನಿಮಾ ನೋಡಬೇಕು.

Sharan Chikkanna Aditi Prabhudeva film Choo Mantar Kannada review and rating

ಯಾರಿಲ್ಲಿ ಹೈಲೈಟ್ ?

'ಛೂ ಮಂತರ್' ಸಿನಿಮಾದಲ್ಲಿ ಮೂರು ಪಾತ್ರಗಳು ಹೈಲೈಟ್. ಶರಣ್ ಎರಡು ಪಾತ್ರಗಳಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾರೆ. ಹಾರರ್ ಸ್ಟೋರಿಯಲ್ಲೂ ಚಿಕ್ಕಣ್ಣನ ಕಾಮಿಡಿ ಕಿಕ್ ಎದ್ದು ಕಾಣುತ್ತೆ. ಅದಿತಿ ಪ್ರಭುದೇವ ಪಾತ್ರ ಇಷ್ಟ ಪಡುವಂತಿದೆ. ಇವರೊಂದಿಗೆ ಮೇಘನಾ ಗಾಂವ್ಕರ್, ಪ್ರಭು ಮುಂಡ್ಕರ್, ರಜನಿ ಭಾರದ್ವಾಜ್, ಗುರುಕಿರಣ್, ಪ್ರಥಮ್, .ಓಂ ಪ್ರಕಾಶ್ ರಾವ್ ಕೂಡ ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ.

ಹೇಗಿದೆ ನಿರ್ದೇಶನ?

'ಕರ್ವ' ಅಂತಹ ಹಿಟ್ ಸಿನಿಮಾವನ್ನು ನೀಡಿದ್ದ ನವನೀತ್ ಮತ್ತೊಂದು ಹಾರರ್ ಸಿನಿಮಾ ನಿರ್ದೇಶಿಸಿ ಯಶಸ್ವಿಯಾಗಿದ್ದಾರೆ. ಕೆಲವು ಚಿಕ್ಕ ಪುಟ್ಟ ತಪ್ಪುಗಳು ಕಂಡರೂ ಪ್ರೇಕ್ಷಕರಿಗೆ ಮನರಂಜನೆ ಕೊಡುವಲ್ಲಿ ಹಿಂದೆ ಬಿದ್ದಿಲ್ಲ. ಹಾಲಿವುಡ್ ಸಿನಿಮಾ ಫೀಲ್ ಕೊಡುವಂತೆ ನಿರ್ದೇಶಿಸಿದ್ದಾರೆ. ಆದರೆ, ಇಂಟರ್‌ವಲ್‌ಗೆ ಗಮನ ಕೊಟ್ಟಂತೆ ಕ್ಲೈಮ್ಯಾಕ್ಸ್‌ಗೂ ಕೊಟ್ಟಿದ್ದರೆ ಪ್ರೇಕ್ಷಕರು ಮತ್ತಷ್ಟು ಇಷ್ಟ ಪಡುತ್ತಿದ್ದರು ಅಂತಲೂ ಅನಿಸುತ್ತೆ.

'ಛೂ ಮಂತರ್' ಪ್ಲಸ್ ಏನು?

ಈ ಸಿನಿಮಾದ ಇಂಟರ್‌ವಲ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ. 15 ನಿಮಿಷದ ಪ್ರೇಕ್ಷಕರಲ್ಲಿ ಭಯವನ್ನು ಹುಟ್ಟಿಸುತ್ತಾ ಸಖತ್ ಕಿಕ್ ಕೊಡುತ್ತೆ. ಮಾರ್ಗನ್ ಹೌಸ್ ಅನ್ನು ಚೆನ್ನಾಗಿ ಸೆರೆ ಹಿಡಿಯಲಾಗಿದೆ. ಅನೂಪ್ ಕಟ್ಟುಕಾರನ್ ಛಾಯಾಗ್ರಹಣ ಕಣ್ಮುಂದೆ ಬರುತ್ತೆ. ಕ್ಲೈಮ್ಯಾಕ್ಸ್‌ನಲ್ಲಿ ಬರುವ ವಿಷ್ಣುದಾದ ಇಡೀ ಸಿನಿಮಾದಲ್ಲಿಯೋ ಹೈಲೈಟ್. ಅದ್ಯಾಕೆ? ಹೇಗೆ ಬಂದರು? ಅನ್ನೋದನ್ನು ಸಿನಿಮಾದಲ್ಲಿಯೇ ನೋಡಬೇಕು.

ಮೈನಸ್ ಏನು?

'ಛೂ ಮಂತರ್' ಸಿನಿಮಾದಲ್ಲಿ ನಿರ್ದೇಶಕ ನವನೀತ್ ಅಲ್ಲಲ್ಲಿ ಕೆಲವು ತಪ್ಪುಗಳನ್ನು ಮಾಡಿದ್ದಾರೆ ಅನಿಸುತ್ತೆ. ಕೆಲವು ಸನ್ನಿವೇಶಗಳಿಗೆ ಕಾರಣ ಸಿಗುವುದಿಲ್ಲ. ಹಾಗೇ ಪವರ್‌ಫುಲ್ ಇಂಟರ್‌ವಲ್ ನೋಡಿದವರಿಗೆ ಕ್ಲೈಮ್ಯಾಕ್ಸ್ ಅಯ್ಯೋ ಇಷ್ಟಕ್ಕೆ ಮುಗಿದು ಹೋಯ್ತಾ ಅನಿಸುತ್ತೆ. ಪಾರ್ಟ್‌ 2ಗೆ ಲೀಡ್ ಕೊಡುವ ಉತ್ಸಾಹದಲ್ಲಿ ಹೀಗಾಯ್ತಾ ಗೊತ್ತಿಲ್ಲ. ಒಟ್ನಲ್ಲಿ ಹಾರರ್ ಪ್ರಿಯರಿಗೆ ಈ ಸಿನಿಮಾ ಕಂಡಿತಾ ಇಷ್ಟ ಆಗುತ್ತೆ. ಅದೇ ಕ್ಲಾಸ್, ಮಾಸ್, ಲವ್ ಸ್ಟೋರಿ ನೋಡಿ ಬೋರ್ ಆಗಿದ್ದರೆ, ಈ ಹಾರರ್- ಕಾಮಿಡಿ ರೀ ಪ್ರೆಶ್ ಅನಿಸಬಹುದು.

More from Filmibeat

English summary
Sharan, Chikkanna, Aditi Prabhudeva film Choo Mantar Kannada review and rating;
Read more about: sharan chikkanna review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X