ಟ್ವಿಟ್ಟರ್ ವಿಮರ್ಶೆ: ಶಿವಣ್ಣ-ಸುದೀಪ್ ಅಭಿಮಾನಿಗಳಿಗೆ ನಿರಾಸೆ ಆಗಲ್ಲ.!

ಸ್ಯಾಂಡಲ್ ವುಡ್ ನ ಅತ್ಯಂತ ನಿರೀಕ್ಷಿತ ಚಿತ್ರ 'ದಿ ವಿಲನ್' ತೆರೆಗೆ ಬಂದಿದೆ. ನಿನ್ನೆ ಮಧ್ಯರಾತ್ರಿಯಿಂದಲೇ 'ದಿ ವಿಲನ್' ಪ್ರದರ್ಶನ ಆರಂಭಗೊಂಡಿದ್ದು, ಎಲ್ಲೆಡೆ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಫ್ಯಾನ್ಸ್ ಗೆ 'ದಿ ವಿಲನ್' ಅಕ್ಷರಶಃ ಹಬ್ಬವಾಗಿದೆ. ತೆರೆ ಮೇಲೆ ಶಿವಣ್ಣ ಹಾಗೂ ಸುದೀಪ್ ಜುಗಲ್ಬಂದಿಯನ್ನು ನೋಡಿ ಅಭಿಮಾನಿಗಳು ಕ್ಲೀನ್ ಬೌಲ್ಡ್ ಆಗಿದ್ದಾರೆ.

'ದಿ ವಿಲನ್' ಚಿತ್ರವನ್ನ ಈಗಾಗಲೇ ಕಣ್ತುಂಬಿಕೊಂಡಿರುವ ಸಿನಿ ಪ್ರಿಯರು, ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಟ್ವೀಟಿಗರ ಪ್ರಕಾರ, 'ದಿ ವಿಲನ್' ಹೇಗಿದೆ.? ನೀವೇ ನೋಡಿ...

ಕಥೆ ಅದ್ಭುತ

ಕಥೆ ಅದ್ಭುತ

''ಕಥೆ ನಿಜಕ್ಕೂ ಅದ್ಭುತವಾಗಿ ಹೆಣೆದಿದ್ದಾರೆ. ಮೊದಲಾರ್ಧದಲ್ಲಿ ಅರ್ಥವಾಗುವುದು ಕಷ್ಟ. ದ್ವಿತೀಯಾರ್ಧದಲ್ಲೊಂದು ಭಾವನೆಗಳ ಸಾಗರವಿದೆ. ಪ್ರೇಮ್ ಸರ್ ಅವರ ಎಲ್ಲಾ ಸಿನಿಮಾದಂತೆ ಇಲ್ಲೊಂದು ತಾಯಿ ಕರುಳಿದೆ. ಅದಕ್ಕೆ ಸುದೀಪ್ ಸರ್ ಹಾಗೂ ಶಿವಣ್ಣರನ್ನು ಉಪಯೋಗಿಸಿಕೊಂಡ ಬಗೆ ಉತ್ತಮವಾಗಿದೆ'' - ನವೀನ್ ಕುಮಾರ್.ಬಿ.ವಿ

ನಿಜವಾದ ವಿಲನ್ ಯಾರು.?

ನಿಜವಾದ ವಿಲನ್ ಯಾರು.?

''ಫುಲ್ ಬಿಲ್ಡಪ್ ಮತ್ತು ಪ್ಯೂರ್ ಗಿಮಿಕ್. ಶಿವಣ್ಣ ಹಾಗೂ ಸುದೀಪ್ ಅಭಿಮಾನಿಗಳಿಗೆ ಪ್ರೇಮ್ ನಿಜವಾದ ವಿಲನ್'' - ತೇಜಸ್ವಿ ಕನ್ನಡಿಗ

ಅಭಿಮಾನಿಗಳಿಗೆ ನಿರಾಸೆ ಆಗಲ್ಲ

ಅಭಿಮಾನಿಗಳಿಗೆ ನಿರಾಸೆ ಆಗಲ್ಲ

''ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಶಿವಣ್ಣ ಹಾಗೂ ಸುದೀಪ್ ಆಕ್ಟಿಂಗ್ ಚೆನ್ನಾಗಿದೆ. ತಾಯಿಯ ಭಾವನೆಗಳನ್ನ ಪ್ರೇಮ್ ಗಿಂತ ಚೆನ್ನಾಗಿ ಯಾರೂ ಪ್ರೆಸೆಂಟ್ ಮಾಡಲು ಸಾಧ್ಯವಿಲ್ಲ. ಇಬ್ಬರೂ ನಟರ ಅಭಿಮಾನಿಗಳಿಗೆ ನಿರಾಸೆ ಆಗಲ್ಲ. ನಿರೀಕ್ಷೆಯ ಅಂಶಗಳು ಚಿತ್ರಗಳಲ್ಲಿವೆ'' - ರಾಜವರ್ಧನ್ ನಾಯಕ್ ಜಾಗಿರ್ದಾರ್

ಕೌಂಟರ್ ಡೈಲಾಗ್ ಇಷ್ಟ ಆಯ್ತು

ಕೌಂಟರ್ ಡೈಲಾಗ್ ಇಷ್ಟ ಆಯ್ತು

''ಇದಕ್ಕಿಂತ 'ಜೋಗಯ್ಯ' ಚೆನ್ನಾಗಿತ್ತು. ಫಸ್ಟ್ ಹಾಫ್ ನಲ್ಲಿ ಶಿವಣ್ಣ ಎಂಟ್ರಿ ಸೀನ್, ಹಾಗೂ ಸುದೀಪ್ ಉತ್ತಮ ಅಭಿನಯ. ಸೆಕೆಂಡ್ ಹಾಫ್ ನಲ್ಲಿ ಇಬ್ಬರ ಕೌಂಟರ್ ಡೈಲಾಗ್ ಇಷ್ಟ ಆಯ್ತು. ಕ್ಲೈಮ್ಯಾಕ್ಸ್ ನಲ್ಲಿ ಶಿವಣ್ಣ ಆಕ್ಟಿಂಗ್ ಚೆನ್ನಾಗಿದೆ'' - ವಿಶ್ವಾಸ್

ಸೆಕೆಂಡ್ ಹಾಫ್ ನಲ್ಲಿ ತಿರುವುಗಳು

ಸೆಕೆಂಡ್ ಹಾಫ್ ನಲ್ಲಿ ತಿರುವುಗಳು

''ಸೆಕೆಂಡ್ ಹಾಫ್ ನಲ್ಲಿ ತುಂಬಾ ತಿರುವುಗಳಿವೆ. ತಾಯಿಯ ಸೆಂಟಿಮೆಂಟ್ ನ ಪ್ರೇಮ್ ಪರ್ಫೆಕ್ಟ್ ಆಗಿ ಸೇರಿಸಿದ್ದಾರೆ. ದಿ ವಿಲನ್ ಸಿನಿಮಾ ಗೆದ್ದಿದೆ'' - ಸ್ಯಾಂಡಲ್ ವುಡ್ ಸೆಲ್ಯುಲಾಯ್ಡ್

ಪ್ರೇಮ್ ಶ್ರಮ ಮೆಚ್ಚಬೇಕು

ಪ್ರೇಮ್ ಶ್ರಮ ಮೆಚ್ಚಬೇಕು

''ಶಿವಣ್ಣ ಮತ್ತು ಕಿಚ್ಚ ಸುದೀಪ್ ರನ್ನ ಬ್ಯಾಲೆನ್ಸ್ ಮಾಡಿರುವ ಪ್ರೇಮ್ ಶ್ರಮವನ್ನು ಮೆಚ್ಚಬೇಕು. ತುಂಬಾ ನೀಟಾಗಿ ಕೆಲಸ ಮಾಡಿದ್ದಾರೆ. ಇದೊಂದು ಅದ್ಭುತ ಸಿನಿಮಾ. ಖಂಡಿತ ನೋಡಬಹುದು'' - ಫಿಲ್ಮಿಬೀ

More from Filmibeat

English summary
Shiva Rajkumar and Sudeep starrer Prem Directorial 'The Villain' is getting mixed response in Twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X