»   » 'ಮಾಸ್ ಲೀಡರ್' ಆರ್ಭಟಕ್ಕೆ ಮೆಚ್ಚಿ ಭೇಷ್ ಎಂದ್ರಾ ವಿಮರ್ಶಕರು.?

'ಮಾಸ್ ಲೀಡರ್' ಆರ್ಭಟಕ್ಕೆ ಮೆಚ್ಚಿ ಭೇಷ್ ಎಂದ್ರಾ ವಿಮರ್ಶಕರು.?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಭಾರತೀಯ ಸೇನಾ ಪಡೆಯ 'ಕ್ಯಾಪ್ಟನ್' ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಗ್ ಓಪನ್ನಿಂಗ್ ಪಡೆದುಕೊಂಡ 'ಮಾಸ್ ಲೀಡರ್' ಸಿನಿಮಾ ಎಲ್ಲೆಡೆ ಹೌಸ್ ಫುಲ್ ಆಗಿದೆ.

  'ಮಾಸ್ ಲೀಡರ್' ಸಿನಿಮಾದಲ್ಲಿ ಶಿವಣ್ಣನಿಗೆ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರಿಗೆ ಸೈ ಎನ್ನುವಂತಿರುವ 'ಮಾಸ್ ಲೀಡರ್' ಚಿತ್ರ ವಿಮರ್ಶಕರಿಗೆ ಹೇಗನಿಸ್ತು.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.


  ವಿಮರ್ಶೆ: ಉಗ್ರರನ್ನು ಬೇಟೆ ಆಡುವ ವ್ಯಾಘ್ರ ಈ 'ಮಾಸ್ ಲೀಡರ್'


  ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಮಾಸ್ ಲೀಡರ್' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ನೋಡಿ...


  'ಮಾಸ್ ಲೀಡರ್'ನ ಗನ್ ಸಂಭಾಷಣೆ! - ಪ್ರಜಾವಾಣಿ

  ಭಾರತದೊಳಕ್ಕೆ ಅಕ್ರಮವಾಗಿ ನುಸುಳುತ್ತಿರುವ ಬಾಂಗ್ಲಾ ವಲಸಿಗರು, ಜಮ್ಮು ಮತ್ತು ಕಾಶ್ಮೀರದ ಜಿಹಾದಿಗಳ ಅಟ್ಟಹಾಸವನ್ನು ‘ಮಾಸ್‌ ಲೀಡರ್‌' ಮೂಲಕ ಬಗ್ಗುಬಡಿಯುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ನರಸಿಂಹ. ಆದರೆ, ಪ್ರೇಕ್ಷಕರಿಗೆ ಈ ವಿಷಯ ಹೇಳುವ ದಾಟಿಯಲ್ಲಿ ಎಡವಿದ್ದಾರೆ. ವಸ್ತುವಿನ ಆಯ್ಕೆಯಲ್ಲಿ ಅವರು ತೋರಿರುವ ಸೂಕ್ಷ್ಮತೆಯು ಪರದೆಯ ಮೇಲಿನ ಪ್ರಸ್ತುತಿಯಲ್ಲಿ ಕಾಣಸಿಗುವುದಿಲ್ಲ. ನಿರೀಕ್ಷೆ ಹೊತ್ತು ಚಿತ್ರಮಂದಿರದ ಒಳಹೊಕ್ಕುವ ಪ್ರೇಕ್ಷಕರಿಗೆ ನಿರಾಸೆ ಕಾಡಿದರೆ ಅಚ್ಚರಿಪಡಬೇಕಿಲ್ಲ. ಸಡಿಲವಾದ ಚಿತ್ರಕಥೆ, ದುರ್ಬಲ ನಿರೂಪಣೆಯಿಂದಾಗಿ ಕಥಾ ವಸ್ತುವಿನಲ್ಲಿನ ತಾಜಾತನವು ನೋಡುಗರಿಗೆ ಕುತೂಹಲ ಹುಟ್ಟಿಸುವುದಿಲ್ಲ. ನಾಯಕ ಮತ್ತು ಅವನ ಸ್ನೇಹಿತರ ಕೈಯಲ್ಲಿನ ಗನ್ ಉಗುಳುವ ಬುಲೆಟ್‌ಗಳು, ಅವರ ಬಾಯಿಂದ ಸಿಡಿಯುವ ದೇಶಪ್ರೇಮ ಸಾರುವ ಖಡಕ್ ಡೈಲಾಗ್‌ಗಳು ಒಂದು ಹಂತದಲ್ಲಿ ಪ್ರೇಕ್ಷಕರಿಗೆ ರೇಜಿಗೆ ಹುಟ್ಟಿಸುತ್ತವೆ - ಕೆ.ಎಚ್.ಓಬಳೇಶ್


  ಮಾಸ್ ಗೂ, ಕ್ಲಾಸ್ ಗೂ ಸೈ - ಉದಯವಾಣಿ

  'ಮಾಸ್ ಲೀಡರ್' ಒಂದು ದೇಶಪ್ರೇಮ ಮತ್ತು ದೇಶಪ್ರೇಮಿಯ ಕುರಿತಾದ ಚಿತ್ರ. ಈ ಚಿತ್ರದಲ್ಲಿ ಮೇಜರ್ ಶಿವರಾಜ್ ದು ಪ್ರಮುಖವಾದ ಪಾತ್ರ. ಬರೀ ಅಕ್ರಮ ವಲಸಿಗರಷ್ಟೇ ಅಲ್ಲ, ಭಯೋತ್ಪಾದಕರಿಗೂ ಸಿಂಹಸ್ವಪ್ನವಾಗಿರುವ ಈ ಶಿವರಾಜ್ ಜೀವನದಲ್ಲಿ ಏನಾಗುತ್ತದೆ ಎಂಬುದರ ಜೊತೆಗೆ ಒಬ್ಬ ದೇಶಪ್ರೇಮಿಯು ತನ್ನ ತಾಯ್ನಾಡನ್ನು ಉಳಿಸಿಕೊಳ್ಳುವುದಕ್ಕೆ ಏನೆಲ್ಲ ಸಾಹಸಗಳನ್ನು ಮಾಡುತ್ತಾನೆ ಎನ್ನುವುದು ಈ ಚಿತ್ರದ ಕಥೆ. ಈ ಕಥೆಗೆ ಸಾಕಷ್ಟು ರೋಚಕತೆ, ಟ್ವಿಸ್ಟ್ ಗಳನ್ನು ಸೇರಿಸಿ ಒಂದು ಫ್ಯಾಮಿಲಿ ಚಿತ್ರ ಮಾಡಿದ್ದಾರೆ ನಿರ್ದೇಶಕ ನರಸಿಂಹ - ಚೇತನ್ ನಾಡಿಗೇರ್


  ಮಾಸ್ ಲೀಡರ್ ದೇಶಭಕ್ತಿಯ ಪವರ್ - ವಿಜಯ ಕರ್ನಾಟಕ

  ಎದೆ ಗೂಡಿನಲ್ಲಿ ಪ್ರಖರ ದೇಶಭಕ್ತಿ, ಗಡಿ ಕಾಯುವ ಯೋಧರ ಮೇಲೆ ಅಗಾಧ ಪ್ರೀತಿ, ಉಗ್ರಗಾಮಿಗಳನ್ನು ಚಿಂದಿ ಉಡಾಯಿಸುವ ರೋಷ, ಕುತಂತ್ರಿ ರಾಜಕಾರಣಿಗಳ ಮೇಲೆ ಆಕ್ರೋಶ.. ಪ್ರಚಲಿತ ಭಾರತದ ಭಾವನಾತ್ಮಕ ಅಂಶಗಳಿವು. ಜನರ ಭಾವನೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಸ್ವಾತಂತ್ರ್ಯೋತ್ಸವಕ್ಕೆ ಕೊಡುಗೆಯಾಗಿ ಬಂದಿರುವ ಸಿನಿಮಾ ಮಾಸ್‌ ಲೀಡರ್‌. ಸಿನಿಮಾದ ನಡುನಡುವೆ ಪ್ರೇಕ್ಷಕರು ಮೊಳಗಿಸುವ ಬೋಲೋ ಭಾರತ್‌ ಮಾತಾ ಕೀ ಜೈ ಎಂಬ ಘೋಷಣೆ ಇದಕ್ಕೆ ಸಾಕ್ಷಿ. ಯಾವುದೇ ಪಾತ್ರವನ್ನೂ ಲೀಲಾಜಾಲವಾಗಿ ನಿರ್ವಹಿಸುವ ಶಿವರಾಜ್ ಕುಮಾರ್‌ಗೆ ಇಲ್ಲಿ ಡಾನ್ ಮತ್ತು ಸೈನಿಕನ ಅವಳಿ ಛಾಯೆಯ ಪಾತ್ರ. ಎಂದಿನಂತೆ ಎಕ್ಸ್‌ಪ್ರೆಶನ್, ಭಾವನಾತ್ಮಕ ಸನ್ನಿವೇಶ, ರೋಷ, ತಂತ್ರ, ಪ್ರೀತಿ ಎಲ್ಲವನ್ನೂ ಅತ್ಯದ್ಭುತವಾಗಿ ತೆರೆ ಮೇಲೆ ಮೂಡಿಸಿದ್ದಾರೆ. ಇಡೀ ಚಿತ್ರ ನಿಂತಿರುವುದು ಕ್ಯಾಪ್ಟನ್‌ ಶಿವರಾಜ್ ಮೇಲೆ. ಗೆಳೆಯರಾಗಿರುವ ವಿಜಯ ರಾಘವೇಂದ್ರ ಮತ್ತು ಗುರು ಜಗ್ಗೇಶ್ ಗೆ ಚಿತ್ರದುದ್ದಕ್ಕೂ ಪಾತ್ರವಿದ್ದರೂ ಸ್ಕೋಪ್ ಇಲ್ಲ. ನಾಯಕಿಯಾಗಿ ಪ್ರಣೀತಾ, ವಿಲನ್ ಆಗಿ ಯೋಗಿಗೆ ಹೆಚ್ಚು ಅವಕಾಶಗಳಿಲ್ಲ. ನಾಯಕನ ತಂಗಿಯಾಗಿ ಆಶಿಕಾ ರಂಗನಾಥ್‌, ಆಕೆಯನ್ನು ಪ್ರೇಮಪಾಶದಲ್ಲಿ ಸಿಲುಕಿಸುವ ಉಗ್ರ ಅರ್ಷದ್ ಪಾತ್ರದಲ್ಲಿ ತಮಿಳು ನಟ ವಂಶಿಕೃಷ್ಣ ಬೆಸ್ಟ್‌. ಕುತಂತ್ರಿ ರಾಜಕಾರಣಿಯಾಗಿ ಪ್ರಕಾಶ್‌ ಬೆಳವಾಡಿ, ಪತ್ರಕರ್ತೆಯಾಗಿ ಶರ್ಮಿಳಾ ಮಾಂಡ್ರೆ, ನಾಯಕನ ಮಗಳಾಗಿ ಶ್ರೀನಗರ ಕಿಟ್ಟಿ ಪುತ್ರಿ ಪರಿಣಿತಾ ನಟನೆ ಪವರ್‌ಫುಲ್‌ - ಕೃಷ್ಣ ಭಟ್ ಅಳದಂಗಡಿ


  Shivarajkumar's Mass Appeal makes this watchable - The New Indian Express

  Sandalwood is not yet creatively and technically carved enough to make a believable film on the army life. That is one aspect that clearly comes out of director Narasimha's Mass Leader. But, over the years, in all its triviality, the audience has developed ingrained capabilities to applaud a protagonist who can become an ex-army personnel and deliver a mission, which can make the society livable. And when it is played by Shivarajkumar, there is mass appeal - A Sharadhaa


  Mass Leader Movie Review - Times of India

  The film, in parts, has a lot working for it. Though, collectively it doesn't manage to make that mark that one would have expected from it. The hero ends up being larger than life and everyone else around him are mere caricatures that are either meant to evoke sympathy or hatred. The film could have easily cut out a lot of the emotional drama and ensured it would rise beyond the average star outing. But it fails to do so - Sunayana Suresh


  Islamophobia in all its glory - Bangalore Mirror

  Ideology aside, Mass Leader is not a well-crafted film and suffers from serious defects of a insipid screenplay and a halting narration. It turns out to be a tedious watch even for a Shiva Rajkumar fan. After the xenophobia comes Islamophobia. The film does not forget to pay lip service to the ‘good' things in Quran. But it does not forget to question the patriotism of Muslims in India. The Hindutva majoritarian discourse is the mainstay of the film's dialogues and theme - Shyam Prasad S


  Cine'mass'tic disaster: Deccan Chronicle

  This one has got almost everything, right from corrupt politics to cross border infiltration, terrorism in the valley, armed forces, investigative journalism, court martial, family sentiments and what not even as the list keeps on adding while the mass leader fights them all, right till the end. Also, with a battery of actors lined up to play various support roles, it is the Shivarajkumar as Shivaraj, who leads them all as a mass leader. In fact, he is in an undercover operation, revealed only in the end! The rest are the just support cast with unconditional loyalty towards him - Shashi Prasad SM


  English summary
  Shiva Rajkumar starrer Kannada Movie 'Mass Leader' has received mixed response from the critics. Here is the collection of 'Mass Leader' reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more