twitter
    For Quick Alerts
    ALLOW NOTIFICATIONS  
    For Daily Alerts

    Rustum Review: ಆಕ್ಷನ್ ಗೆ ದೊಡ್ಡಪ್ಪ ಈ ರುಸ್ತುಂ

    |

    ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನ ಮಾಡಿರುವ ಮೊದಲ ಚಿತ್ರ. ಬಹುಶಃ ಸಿಕ್ಕಾಪಟ್ಟೆ ಆಕ್ಷನ್ ಇರಬಹುದು. ಅದೇನ್ ಮಾಡಿರ್ತಾರೋ ಅಂದುಕೊಂಡು ಹೋದವರಿಗೆ ರುಸ್ತುಂ ಸಿನಿಮಾ ಖಂಡಿತಾ ನಿರಾಸೆ ಮಾಡಲ್ಲ. ಸಖತ್ ಕಿಕ್ ಕೊಡುವುದರ ಜೊತೆಗೆ ಇಷ್ಟವಾಗುತ್ತೆ. ಪೂರ್ತಿ ವಿಮರ್ಶೆ ಓದಿ....

    Rating:
    4.0/5
    Star Cast: ಶಿವರಾಜ್ ಕುಮಾರ್, ಶ್ರದ್ಧಾ ಶ್ರೀನಾಥ್, ಮಯೂರಿ, ಮಹೇಂದ್ರನ್ ಮತ್ತು ಇತರರು
    Director: ರವಿವರ್ಮ

    ಆರಂಭಕ್ಕಿಂತ ಅಂತ್ಯ ಚೆನ್ನಾಗಿದೆ

    ಆರಂಭಕ್ಕಿಂತ ಅಂತ್ಯ ಚೆನ್ನಾಗಿದೆ

    ಆರಂಭದಲ್ಲಿ ಜಿಲ್ಲಾಧಿಕಾರಿ ಕಾಣೆ, ಅದರ ಹಿಂದೆ ಗೃಹಮಂತ್ರಿ ಕೈವಾಡ. ಯಾವುದೋ ಹಗರಣ...ಹೀಗೆ ಶುರುವಾಗುವ ರುಸ್ತುಂ ಕಂಪ್ಲೀಟ್ ಆಕ್ಷನ್ ಚಿತ್ರ. ಹಾಗಂತ ಫ್ಯಾಮಿಲಿ ನೋಡುವಂತಹ ಸಿನಿಮಾ ಅಲ್ಲ ಎಂದುಕೊಳ್ಳಬೇಡಿ. ಕೌಟುಂಬಿಕ ಮಿಶ್ರಿತ ಆಕ್ಷನ್ ಚಿತ್ರ. ಜಿಲ್ಲಾಧಿಕಾರಿ ಯಾಕೆ ಕಾಣೆ ಆಗ್ತಾನೆ, ಯಾರು ಕಿಡ್ನಾಪ್ ಮಾಡಿದ್ದು, ಆ ಕುಟುಂಬಕ್ಕೆ ಜೊತೆಯಾಗುವ ಶಿವಣ್ಣ ಯಾರು, ಆ ಡಿ.ಸಿಗೂ ಶಿವಣ್ಣನಿಗೂ ಏನು ಸಂಬಂಧ ಎಂಬ ಕುತೂಹಲಗಳೊಂದಿಗೆ ಇಂಟ್ರೆಸ್ಟಿಂಗ್ ಆಗಿ ಮೊದಲಾರ್ಧ ಮುಗಿಸಿದ್ದಾರೆ ನಿರ್ದೇಶಕರು. ನಿಧಾನಗತಿಯ ಆರಂಭ ಸ್ವಲ್ಪ ಕಿರಿಕಿರಿ ಉಂಟು ಮಾಡಿದ್ರು ನಂತರ ಪ್ರೇಕ್ಷಕರ ಜೊತೆ ಎಂಗೇಜ್ ಆಗುತ್ತೆ.

    ಅಬ್ಬರಿಸಿರುವ ಬಿಹಾರ್ ಕಾ ಶೇರ್

    ಅಬ್ಬರಿಸಿರುವ ಬಿಹಾರ್ ಕಾ ಶೇರ್

    ವ್ಯವಸ್ಥೆಯ ಮುಂದೆ ಅಸಹಾಯಕನಾಗಿ ನಿಲ್ಲುವ ಕಾಮನ್ ಮ್ಯಾನ್ (ಶಿವಣ್ಣ) ಸೆಕೆಂಡ್ ಹಾಫ್ ನಲ್ಲಿ ಸಿಂಹದ ಪ್ರತಿರೂಪ ತಾಳುತ್ತಾರೆ. ಬಿಹಾರ್ ರಾಜ್ಯದ ಪೊಲೀಸ್ ಆಗಿ ಮಿಂಚಿರುವ ಹ್ಯಾಟ್ರಿಕ್ ಹೀರೋ, ದುಷ್ಟರ ಪಾಲಿಗೆ ರಾಕ್ಷಸನಂತೆ ಕಾಡುತ್ತಾರೆ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕಥೆ ಬಿಹಾರ್ ಗೆ ಯಾಕೆ ಹೋಯ್ತು ಎಂಬುದು ಸಿನಿಮಾ ನೋಡಿದ್ರೆನೇ ಮಜಾ. ಶಿವಣ್ಣನ ಎನರ್ಜಿಗೆ ತಕ್ಕಂತೆ ಕ್ಯಾರೆಕ್ಟರ್ ಮಾಡಿರುವ ರವಿವರ್ಮ, ತೆಲುಗು, ತಮಿಳು, ಹಿಂದಿ ಸಿನಿಮಾಗಳಿಗೆ ಸೆಡ್ಡು ಹೊಡೆಯುವ ರೀತಿ ಆಕ್ಷನ್ ಇಟ್ಟಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನ ಮುಖ್ಯ ಕಥಾವಸ್ತುನ್ನಾಗಿಸಿಕೊಂಡು ಇಡೀ ಸಿನಿಮಾ ಮಾಡಿರುವುದು ಗಮನಾರ್ಹ.

    ಶಿವಣ್ಣನ ಎನರ್ಜಿಗೆ ಜೈಕಾರ

    ಶಿವಣ್ಣನ ಎನರ್ಜಿಗೆ ಜೈಕಾರ

    ಶಿವಣ್ಣ ಎರಡು ಶೇಡ್ ನಲ್ಲಿ ಅಭಿನಯಿಸಿದ್ದಾರೆ. ಕಾಮನ್ ಮ್ಯಾನ್ ಆಗಿ ಮತ್ತು ಪೊಲೀಸ್ ಇಲಾಖೆಯ ಸಿಂಹವಾಗಿ. ಅದರಲ್ಲೂ ಬಿಹಾರ್ ಪೊಲೀಸ್ ಆಗಿ ಘರ್ಜಿಸುವ ಶಿವಣ್ಣ ಅವರ ಎನರ್ಜಿ ಇಡೀ ಚಿತ್ರದ ಹೈಲೈಟ್. ಬಿಹಾರ್ ಪೊಲೀಸ್, ಫಟಾಫಟ್ ಹಿಂದಿ ಭಾಷೆ ಕೇಳುತ್ತಿದ್ದರೇ ಹಿಂದಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಇದ್ದರೇ ಹೇಗಿರುತ್ತೆ ಎಂಬ ಖುಷಿ ಕೊಡುತ್ತೆ. ಸಿನಿಮಾದ ಬಗ್ಗೆ ಇನ್ನೊಂದು ಸುಳಿವು ನೀಡುವುದಾದರೇ ಟಗರು ಚಿತ್ರದ ಶಿವನಿಗಿಂತ ಈ ಪೊಲೀಸ್ ಭಯಂಕರ ಕ್ರೂರಿ.

    ವಿವೇಕ್ ಒಬೆರಾಯ್ ಸೂಪರ್

    ವಿವೇಕ್ ಒಬೆರಾಯ್ ಸೂಪರ್

    ಪೊಲೀಸ್ ಇಲಾಖೆಯಲ್ಲಿ ಶಿವಣ್ಣನ ಸ್ನೇಹಿತನಾಗಿ ನಟಿಸಿರುವ ವಿವೇಕ್ ಒಬೇರಾಯ್ ಹ್ಯಾಟ್ರಿಕ್ ಹೀರೋಗೆ ವಿರುದ್ಧದ ವ್ಯಕ್ತಿತ್ವ. ಚಿತ್ರಕ್ಕೆ ಮೇಜರ್ ಟ್ವಿಸ್ಟ್ ಕೊಡುವ ಪಾತ್ರ. ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಶಿವಣ್ಣನ ಪತ್ನಿ ಪಾತ್ರಧಾರಿ ಶ್ರದ್ಧಾ ಶ್ರೀನಾಥ್ ಗೆ ಇದು ಇನ್ನೊಂದು ಕ್ಲಾಸಿಕ್ ಪಾತ್ರ. ಶಿವಣ್ಣನ ತಂಗಿ ಪಾತ್ರದಲ್ಲಿ ನಟಿಸಿರುವ ಮಯೂರಿಗೂ ಫುಲ್ ಮಾರ್ಕ್ಸ್. ಶಿವರಾಜ್ ಕೆಆರ್ ಪೇಟೆ ಹಾಸ್ಯ ಇದ್ದರೂ ಇಲ್ಲಿ ಹಾಸ್ಯಕ್ಕೆ ಜಾಗವಿಲ್ಲ. ವಿಲನ್ ಪಾತ್ರದಲ್ಲಿ ಮಹೇಂದ್ರನ್ ಕಿಲ್ಲಿಂಗ್ ನಟನೆ. ಒಟ್ಟಾರೆ ಪಾತ್ರಗಳು ಎಲ್ಲವೂ ಸೂಕ್ತವಾಗಿದೆ. ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ.

    ರವಿವರ್ಮ ಸ್ಟೈಲ್ ಸಿನಿಮಾ

    ರವಿವರ್ಮ ಸ್ಟೈಲ್ ಸಿನಿಮಾ

    ಶಿವಣ್ಣನ ಪೊಲೀಸ್ ಪಾತ್ರದಲ್ಲಿ ನೋಡೋದು ಏನು ವಿಶೇಷವಿಲ್ಲ. ಆದ್ರೆ, ಕನ್ನಡ ಆಡಿಯೆನ್ಸ್ ಪಾಲಿಗೆ ರುಸ್ತುಂ ಪೊಲೀಸ್ ಸಿಕ್ಕಾಪಟ್ಟೆ ಸರ್ಪ್ರೈಸ್. ಹಾಗಾಗಿ, ಶಿವಣ್ಣನ ಆ ಫೋರ್ಸ್ ಸಿಕ್ಕಾಪಟ್ಟೆ ಇಷ್ಟ ಆಗುತ್ತೆ. ಜೊತೆಗೆ ಒಂದೊಳ್ಳೆ ಕಥೆನೂ ಹೊಂದಿದೆ. ಫ್ಯಾಮಿಲಿ ಆಡಿಯೆನ್ಸ್, ಯೂತ್, ಆಕ್ಷನ್ ಪ್ರಿಯರನ್ನ ರಂಜಿಸುವಂತಹ ಚಿತ್ರಕಥೆ ಮಾಡಿ ರವಿವರ್ಮ ಕೂಡ ಗಮನ ಸೆಳೆದಿದ್ದಾರೆ. ಹಾಡುಗಳು ಚಿತ್ರಮಂದಿರದಲ್ಲಿ ನೋಡಬಹುದು. ಹಿನ್ನೆಲೆ ಸಂಗೀತ ಪ್ರೇಕ್ಷಕರ ಜೋಶ್ ಹೆಚ್ಚಿಸುವಲ್ಲಿ ಸಕ್ಸಸ್ ಎನ್ನಬಹುದು. ಒಂದೇ ಒಂದು ನೆಗಿಟೀವ್ ಅಂದ್ರೆ, ಹಿಂದಿ, ತಮಿಳು, ತೆಲುಗು ಸಿನಿಮಾದ ಅನೇಕ ದೃಶ್ಯಗಳನ್ನ ಯಥಾವತ್ತಾಗಿ ಇಲ್ಲಿ ಬಳಸಲಾಗಿದೆ.

    ನಿರಾಸೆ ಇಲ್ಲದೇ ರುಸ್ತುಂ ನೋಡಬಹುದು

    ನಿರಾಸೆ ಇಲ್ಲದೇ ರುಸ್ತುಂ ನೋಡಬಹುದು

    ಆರಂಭದಲ್ಲಿ ಸ್ವಲ್ಪ ತಾಳ್ಮೆಯಿಂದ ಕುಳಿತುಕೊಂಡರೇ ಮುಂದೆ ಸಾಗುತ್ತಿದ್ದಂತೆ ರುಸ್ತುಂ ಚಿತ್ರವನ್ನ ಎಂಜಾಯ್ ಮಾಡಬಹುದು. ಸೆಕೆಂಡ್ ಹಾಫ್, ಕ್ಲೈಮ್ಯಾಕ್ಸ್ ಬರೋವತ್ತಿಗೆ ಆರಂಭವೇ ನೆನಪಲ್ಲಿ ಇರಲ್ಲ. ಬಿಹಾರ್ ಕಾ ಶೇರ್ ಜೊತೆಗೆ ಹೊರಬರಬಹುದು. ಸೋ, ಶಿವಣ್ಣ ಎನರ್ಜಿಟಿಕ್ ಪೊಲೀಸ್ ಅವತಾರ ನೋಡಲು ರುಸ್ತುಂ ಮಿಸ್ ಮಾಡಿಕೊಳ್ಳಬೇಡಿ.

    English summary
    Kannada actor Shiva rajkumar starrer Rustum movie released today all over karnataka. Shivanna energy is unbelievable. Nice performance by Shraddha Srinath. Overall Rustum is good movie
    Friday, June 28, 2019, 16:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X