»   » ಸೆಂಚುರಿ ಸ್ಟಾರ್ ಶಿವಣ್ಣ 'ಶ್ರೀಕಂಠ' ನಾಗಿ ಮಿಂಚಿಂಗ್

ಸೆಂಚುರಿ ಸ್ಟಾರ್ ಶಿವಣ್ಣ 'ಶ್ರೀಕಂಠ' ನಾಗಿ ಮಿಂಚಿಂಗ್

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಶ್ರೀಕಂಠ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಶುಕ್ರವಾರ ರಾಜ್ಯದೆಲ್ಲೆಡೆ ತೆರೆಕಂಡಿರುವ ಶ್ರೀಕಂಠ ಚಿತ್ರದ ಮೊದಲ ದಿನದ ಮೊದಲ ಶೋ ನೋಡಿದ ಹಲವಾರು ಪ್ರೇಕ್ಷಕರು ಶಿವಣ್ಣನ ನಟನೆ ಸೂಪರ್ ಆದರೆ, ಇನ್ನೂ ಖಡಕ್ ಡೈಲಾಗ್ಸ್ ಬೇಕಿತ್ತು ಎಂದಿದ್ದಾರೆ.

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದ್ದ ಶ್ರೀಕಂಠ ಚಿತ್ರದ ಬಗ್ಗೆ ಬಂದಿರುವ ಟ್ವೀಟ್ ಗಳ ವರದಿ ಇಲ್ಲಿದೆ

ಎಂಎಸ್ ಮನು ಗೌಡ ಅವರ ನಿರ್ಮಾಣದ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರಿಗೆ ನಿರ್ದೇಶನ ಮಾಡುವ ಹೊಣೆಯನ್ನು ಮಂಜು ಸ್ವರಾಜ್ ಹೊತ್ತುಕೊಂಡಿದ್ದಾರೆ.

ಸಾಹಿತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಸಣ್ಣಕಥೆಯೊಂದರ ಆಧಾರಿತ ಈ ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಚಾಂದಿನಿ ಶ್ರೀಧರನ್ ನಟಿಸಿದಾರೆ. ಬಿ ಅಜನೀಶ್ ಲೋಕನಾಥ್ ಅವರ ಸಂಗೀತಕ್ಕೆ ಈಗಾಗಲೇ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೊಸ ವರ್ಷದ ಮೊದಲ ರಿಲೀಸ್

ಹೊಸ ವರ್ಷದ ಮೊದಲ ಚಿತ್ರವಾಗಿ ಶ್ರೀಕಂಠ ರಿಲೀಸ್ ಆಗಿರುವುದು ಶಿವಣ್ಣನ ಅಭಿಮಾನಿಗಳಿಗೆ ಥ್ರಿಲ್ಲಿಂಗ್ ವಿಷಯವಾಗಿದೆ.

ಮೊದಲಾರ್ಧ ಪರ್ವಾಗಿಲ್ಲ

'ಶ್ರೀಕಂಠ' ನಾಗಿ ಶಿವಣ್ಣ ಮಿಂಚಿಂಗ್, ಆದರೆ, ಮೊದಲಾರ್ಧ ನೋಡುವಂತಿದೆ. ಬೋರ್ ಹೊಡೆಸಲ್ಲ, ಡೈಲಾಗ್ಸ್ ಇನ್ನೂ ಸ್ವಲ್ಪ ಚೆನ್ನಾಗಿರಬೇಕಿತ್ತು.

ಎಲ್ಲೆಡೆ ಹೌಸ್ ಫುಲ್

ಶ್ರೀಕಂಠ ಸಿನಿಮಾ ಎಲ್ಲೆಡೆ ತುಂಬಿದ ಗೃಹ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಟ್ವೀಟ್ ಮಾಡಿ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ರಾಜ್ಯದೆಲ್ಲೆಡೆ ಬಿಡುಗಡೆ

ರಾಜ್ಯದೆಲ್ಲೆಡೆ ಬಿಡುಗಡೆಯಾಗಿರುವ ಶಿವಣ್ಣನ ಚಿತ್ರದ ಬಗ್ಗೆ ಪೋಸ್ಟರ್ ಇಲ್ಲಿದೆ. ನಿಮ್ಮ ಊರಿನಲ್ಲಿ ಯಾವ ಚಿತ್ರಮಂದಿರದಲ್ಲಿ ಚಿತ್ರ ಇದೆ ನೋಡಿ

ಸಿನಿಮಾಗೆ ಆರತಿ ಎತ್ತಿ

ಸಿನಿಮಾಗೆ ಆರತಿ ಎತ್ತಿ,ವಿಷಿಲ್ ಮುಖಾಂತರ ಬರಮಾಡಿಕೊಂಡು ದೊರೆ ಜೊತೆ ಡ್ಯಾನ್ಸ್ ಮಾಡೊದೆ.ಎಂದ ಅಭಿಮಾನಿಗಳು

ಶ್ರೀಕಂಠ ಚಿತ್ರ ಟ್ರೆಂಡಿಂಗ್, ಹೌಸ್ ಫುಲ್

ಶ್ರೀಕಂಠ ಚಿತ್ರ ಟ್ವಿಟ್ಟರಲ್ಲಿ ಟ್ರೆಂಡಿಂಗ್, ಥಿಯೇಟರ್ ಹೌಸ್ ಫುಲ್, ಅಭಿಮಾನಿಗಳಿಂದ ಸರಣಿ ಟ್ವೀಟ್

ಸೂಪರ್ ಕ್ಲೈಮ್ಯಾಕ್ಸ್

ಸೂಪರ್ ಕ್ಲೈಮ್ಯಾಕ್ಸ್, ಶಿವಣ್ಣ ನಟನೆ ಎಂದಿನಂತೆ ಅದ್ಭುತ, ಪ್ರೇಕ್ಷಕರ ನಿರೀಕ್ಷೆಗೆ ಮೋಸ ಮಾಡದ ಸಿನಿಮಾ 3.25/5 ಎಂದ ಸಿನಿಲೋಕ

ಸೂಪರ್ ಸ್ಕ್ರಿಪ್ಟ್ ಎಂದ ಶ್ಯಾಮ್

ಸೂಪರ್ ಸ್ಕ್ರಿಪ್ಟ್, ಉತ್ತಮ ಸಿನಿಮಾ ಎಂದ ಪತ್ರಕರ್ತ ಎಸ್ ಶ್ಯಾಮ್ ಪ್ರಸಾದ್

English summary
Shiva Rajkumar and Chandini Sreedharan starrer Srikanta Film got released on Friday(January 06). Here is First Day First Show(FDFS) report and Twitter trend information along with fans reaction. This action thriller movie directed Manju Swaraj.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X