»   » ಪೊಗರು ತುಂಬಿದ ಟಗರಿಗೆ ವಿಮರ್ಶಕರು ಕ್ಲೀನ್ ಬೌಲ್ಡ್

ಪೊಗರು ತುಂಬಿದ ಟಗರಿಗೆ ವಿಮರ್ಶಕರು ಕ್ಲೀನ್ ಬೌಲ್ಡ್

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಅಭಿನಯದ ಟಗರು ಸಿನಿಮಾ ತೆರೆಕಂಡಿದ್ದು, ಎಲ್ಲೆಡೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ನೋಡಿದ ವೀಕ್ಷಕರು ಚಿತ್ರದ ಬಗ್ಗೆ ಫುಲ್ ಫಿದಾ ಆಗಿದ್ದು, ಸೂರಿಯ ಮೇಕಿಂಗ್ ಗೆ ಫುಲ್ ಮಾರ್ಕ್ಸ್ ನೀಡುತ್ತಿದ್ದಾರೆ.

ಶಿವರಾಜ್ ಕುಮಾರ್ ಅಬ್ಬರ, ಡಾಲಿ ಧನಂಜಯ್ ಅವರ ಹಾವಳಿ, ಜೊತೆಗೆ ವಸಿಷ್ಠ ಸಿಂಹ ಮತ್ತು ಕಾಕ್ರೋಚ್ ಸುಧೀರ್ ಅವರ ನಟನೆ ನೋಡುಗರನ್ನ ಮೋಡಿ ಮಾಡಿದೆ.


ಹಾಗಿದ್ರೆ, ಜನರು ಮೆಚ್ಚಿದ ಟಗರು ಚಿತ್ರವನ್ನ ವಿಮರ್ಶಕರು ಮೆಚ್ಚಿಕೊಂಡರಾ? ಟಗರು ಶಿವನ ಕಳ್ಳ-ಪೊಲೀಸ್ ಆಟ ವಿಮರ್ಶಕರಿಗೆ ಇಷ್ಟವಾಯ್ತಾ? ಅದಕ್ಕೆ ಉತ್ತರ ಸಿಕ್ಕಿದ್ದು, ಕರ್ನಾಟಕ ಜನಪ್ರಿಯ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಟಗರು ಚಿತ್ರದ ರಿವ್ಯೂ ಇಲ್ಲಿದೆ ನೋಡಿ. ಮುಂದೆ ಓದಿ.....


ಟಗರಿನ ಖಡಕ್ ಪೊಗರು

''ಸೂರಿ ಮೇಕಿಂಗ್ ನಲ್ಲಿ ಕಿಂಗ್‌ ಎನ್ನುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಚಿತ್ರದಲ್ಲಿ ಅವರು ಕಂಪೋಸ್‌ ಮಾಡಿರುವ ಒಂದೊಂದು ಶಾಟ್ ಗಳೂ ತೆರೆ ಮೇಲೆ ಸೊಗಸಾಗಿ ಕಾಣುತ್ತವೆ. ಟಗರು ಶಿವ, ಡಾಲಿ, ಕಾಕ್ರೋಚ್, ಚಿಟ್ಟೆ, ಬೇಬಿ ಕೃಷ್ಣ, ಅಂಕಲ್ ಎಂದು ಪಾತ್ರಗಳಿಗೆ ಚಿತ್ರ ವಿಚಿತ್ರ ಹೆಸರಿಟ್ಟಿರುವ ಸೂರಿ, ಪಂಚಮಿ, ಪುನರ್ವಸು ಎಂಬ ಸುಂದರ ಹೆಸರುಗಳನ್ನು ನಾಯಕಿಯರಿಗಿಟ್ಟು ಇಷ್ಟವಾಗುತ್ತಾರೆ. ಮೇಕಿಂಗ್ ನ್ನು ಅದ್ಭುತವಾಗಿ ಮಾಡುವ ಸೂರಿ ಪಾತ್ರಗಳನ್ನು ಕ್ರಿಯೇಟ್ ಮಾಡುತ್ತಾರೆ. ಜತೆಗೆ ಅವುಗಳ ಪೋಷಣೆ ಸಹ ಚೆನ್ನಾಗಿ ಮಾಡುತ್ತಾರೆ ಎಂಬುದಕ್ಕೆ ಟಗರು ಮತ್ತೊಮ್ಮೆ ಸಾಕ್ಷೀಭೂತವಾಗಿದೆ. ಚಿತ್ರದ ಪಂಚಿಂಗ್ ಸಂಭಾಷಣೆ, ಸಂಗೀತ, ಸಿನಿಮಾಟೋಗ್ರಪಿ ಚಿತ್ರದ ಪ್ರಮುಖ ಹೈಲೈಟ್‌ಗಳಲ್ಲಿ ಒಂದು'' - ವಿಜಯ ಕರ್ನಾಟಕ


ಟಗರು ಪೊಗರನ್ನು ಹೊಂದಿಸಿ ಬರೆಯಿರಿ

'' ಸೂರಿ ಚಿತ್ರಗಳೆಂದರೆ ಮಬ್ಬುಗತ್ತಲು, ಸ್ಲಮ್, ರೌಡಿಸಂ, ವಿಚಿತ್ರ ಹೆಸರುಗಳು ಇವೆಲ್ಲಾ ಮಾಮೂಲಿ. ಇದನ್ನೆಲ್ಲಾ ಬಿಟ್ಟು ಚಿತ್ರ ಮಾಡುವುದು ಸೂರಿಗೆ ಕಷ್ಟ ಎನ್ನುವಲ್ಲಿಗೆ ಅವರಿ ಮುಂದೆ ಸಾಗಿದ್ದಾರೆ. ಆದರೆ, ಈ ಹಿಂದಿನ ಚಿತ್ರಗಳಲ್ಲಿ ಇದೆಲ್ಲವನ್ನೂ ಸೂರಿ ಬಹಳ ಸೂಕ್ಷ್ಮವಾಗಿ ಮತ್ತು ವಿಭಿನ್ನವಾಗಿ ಬಳಸಿಕೊಂಡಿದ್ದರು. ಸಮಸ್ಯೆಗಳನ್ನು ಪಕ್ಕಕ್ಕಿಟ್ಟು ನೋಡಿದರೆ, ಈ ಚಿತ್ರ ಖುಷಿಯಾಗುವುದು ಶಿವರಾಜಕುಮಾರ್‌ ಅವರಿಂದಾಗಿ. ಇಲ್ಲಿ ಶಿವರಾಜಕುಮಾರ್‌ ಪಾತ್ರ ಅಬ್ಬರವೇನಿಲ್ಲ. ಆರಂಭದಲ್ಲಿ "ಟಗರು ಟಗರು' ಎಂಬ ಅಬ್ಬರದ ಬಿಲ್ಡಪ್ ಸಾಂಗ್ ಒಂದು ಬಿಟ್ಟರೆ, ಇಡೀ ಚಿತ್ರದುದ್ದಕ್ಕೂ ಅವರ ಪಾತ್ರ ತಣ್ಣಗಿದೆ ಮತ್ತು ಶಿವರಾಜಕುಮಾರ್‌ ಅಷ್ಟೇ ಚೆನ್ನಾಗಿ ಮೈಯೆಲ್ಲಾ ಪೊಗರಿರುವ ಟಗರು ಪಾತ್ರವನ್ನು ಹಿಡಿದಿಟ್ಟಿದ್ದಾರೆ. ನೆಗೆಟಿವ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಧನಂಜಯ್ ಮತ್ತು ವಸಿಷ್ಠ ಸಿಂಹ, ತಮಗೆ ಸಿಕ್ಕ ಅವಕಾಶದಲ್ಲಿ ಮಿಂಚಿದ್ದಾರೆ. '' - ಉದಯವಾಣಿ


ಪೊಗರು ತುಂಬಿದ ಟಗರು

'' ಮೈಯೆಲ್ಲ ಪೊಗರು ತುಂಬಿರುವ ಖಡಕ್ ಪೊಲೀಸ್ ಅಧಿಕಾರಿಯನ್ನು ಎದುರು ಹಾಕಿಕೊಂಡರೆ ಏನೆಲ್ಲ ಘಟಿಸಬಹುದು ಎಂಬುದು ‘ಟಗರು' ಚಿತ್ರದ ಹೂರಣ. ಪೊಲೀಸ್ ಆಫೀಸರ್ ಶಿವನಾಗಿ ಶಿವರಾಜ್​ಕುಮಾರ್ ಅಬ್ಬರಿಸಿದ್ದರೆ, ವಿಕೃತ ರೌಡಿ ಡಾಲಿಯಾಗಿ ನಟ ಧನಂಜಯ ಪಾತ್ರವನ್ನೇ ಜೀವಿಸಿದ್ದಾರೆ. ಇವರಿಬ್ಬರ ಮಧ್ಯೆ ಕದನ ಕುತೂಹಲಕ್ಕೆ ಅನೇಕ ಪಾತ್ರಗಳು ಸಾಕ್ಷಿಯಾಗಿವೆ. ನಿರ್ದೇಶಕ ಸೂರಿ ಈ ಬಾರಿ ನಿರೂಪಣೆ ವಿಚಾರದಲ್ಲಿ ಸಿಕ್ಕಾಪಟ್ಟೆ ಶ್ರಮವಹಿಸಿದ್ದಾರೆ. ಕಥೆ ಹೇಳುವ ಪ್ರಕ್ರಿಯೆಗೆ ಹೊಸ ರೀತಿಯ ತಂತ್ರವನ್ನು ಅನುಸರಿಸಿದ್ದಾರೆ. ಅದು ಕೆಲವೆಡೆ ಚಿತ್ರಕ್ಕೆ ಪ್ಲಸ್ ಎನಿಸಿದರೆ, ಮತ್ತೆ ಕೆಲವೆಡೆ ಮೈನಸ್ಸು ಆಗುವ ಸಾಧ್ಯತೆಗಳು ಇವೆ. ಕಥೆ ವಿಚಾರದಲ್ಲಿ ಅಷ್ಟೇನೂ ಕಾಡದ ‘ಟಗರು' ಚಿತ್ರಕಥೆಯಲ್ಲಿ ಗಮನಸೆಳೆಯುತ್ತದೆ. '' - ವಿಜಯವಾಣಿ


BLOOD PUDDING - TAGARU

''If presentation is all that matters, Tagaru will remain entrenched at the top for a long time to come. When a dazzling screenplay is given a higher pedestal than an engaging plot, and shock value replaces perspective, what you get is Tagaru in all its resplendent glory. Tagaru is a bull in a china shop and a tiger in a chicken soup. It is mayhem. Tagaru is a spicy blood pudding. There are few people who have a taste for it and this film is not the best advertisement for those who have not tried the dish so far. '' - Bangalore mirror


English summary
Hatric hero shiva rajkumar starrer tagaru movie has released on february 23rd. the movie get good response from critics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada