twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತೇ 'ಕೆಲವು ದಿನಗಳ ನಂತರ'.?

    By Harshitha
    |

    ಪ್ರೇಕ್ಷಕರ ಎದೆ ನಡುಗಿಸುವ ಜೊತೆಗೆ ಸಮಾಜಕ್ಕೆ ಒಂದೊಳ್ಳೆ ಸಂದೇಶ ಕೊಟ್ಟಿರುವ ಸಿನಿಮಾ 'ಕೆಲವು ದಿನಗಳ ನಂತರ'. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ 6 ತಿಂಗಳ ಮಗುವನ್ನು 3D ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ಸೃಷ್ಟಿಸಿರುವ ಸಿನಿಮಾ ಇದು.

    ಹಲವು ವಿಶೇಷತೆಗಳಿಂದ ಕೂಡಿರುವ 'ಕೆಲವು ದಿನಗಳ ನಂತರ' ಚಿತ್ರವನ್ನ ನೋಡಿ ಪ್ರೇಕ್ಷಕರಂತೂ ಗಡಗಡ ನಡುಗಿದ್ದಾರೆ. ಆದ್ರೆ, ವಿಮರ್ಶಕರು ಏನಂತಾರೆ.? ವಿಮರ್ಶಕರಿಗೆ 'ಕೆಲವು ದಿನಗಳ ನಂತರ' ಇಷ್ಟ ಆಯ್ತಾ.?

    ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಕೆಲವು ದಿನಗಳ ನಂತರ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

    ಕೆಲವು ದಿನಗಳ ನಂತರ ಮೆಚ್ಚಬಹುದು: ಕನ್ನಡಪ್ರಭ

    ಕೆಲವು ದಿನಗಳ ನಂತರ ಮೆಚ್ಚಬಹುದು: ಕನ್ನಡಪ್ರಭ

    ಕತೆಯನ್ನು ತೀರಾ ಎಳೆದಿಲ್ಲ. ಕೆಲವು ಸನ್ನಿವೇಶಗಳನ್ನು ಹಿನ್ನಲೆ ಸಂಗೀತದೊಂದಿಗೆ ಹೇಳುವುದನ್ನು ನೋಡಿದಾಗ ಪ್ರೇಕ್ಷಕ ಖಂಡಿತ ಹೆದರಿಕೊಳ್ಳುತ್ತಾನೆ. ಆ ಮೂಲಕ ಸಂಕಲನ ಹಾಗೂ ಕ್ಯಾಮರಾ ತಾಂತ್ರಿಕವಾಗಿ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಸಾಥ್ ನೀಡುತ್ತದೆ. ನಟನೆಯಲ್ಲಿ ಶುಭಾ ಪೂಂಜಾ, ಪವನ್, ಸೋನು ಪಾಟೀಲ್ ಗಮನ ಸೆಳೆಯುತ್ತಾರೆ - ಆರ್ ಕೇಶವಮೂರ್ತಿ

    'ಕೆಲವು ದಿನಗಳ ನಂತರ' ವಿಮರ್ಶೆ: ಉತ್ತಮ ಸಂದೇಶ ಸಾರುವ ಸಿನಿಮಾ'ಕೆಲವು ದಿನಗಳ ನಂತರ' ವಿಮರ್ಶೆ: ಉತ್ತಮ ಸಂದೇಶ ಸಾರುವ ಸಿನಿಮಾ

    ದೆವ್ವಗಳ ಫ್ಯಾಮಿಲಿ ಪ್ಯಾಕೇಜ್: ಪ್ರಜಾವಾಣಿ

    ದೆವ್ವಗಳ ಫ್ಯಾಮಿಲಿ ಪ್ಯಾಕೇಜ್: ಪ್ರಜಾವಾಣಿ

    ‘ಯಾರಾದರೂ ಆಕ್ಸಿಡೆಂಟ್ ಆಗಿ ಗಾಯಗೊಂಡಿದ್ದರೆ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿ' ಎಂದು ಜಾಗೃತಿ ಮೂಡಿಸುವ ಸರ್ಕಾರಿ ಜಾಹೀರಾತನ್ನು ಎಲ್ಲರೂ ಗಮನಿಸಿರುತ್ತಾರೆ. ತಾಂತ್ರಿಕವಾಗಿ ಕಳಪೆ ಗುಣಮಟ್ಟದ ಜಾಹೀರಾತು ಅದು. ಅದೇ ಜಾಹೀರಾತಿಗೆ ಒಂದಿಷ್ಟು ದ್ವಂದ್ವಾರ್ಥದ ಸಂಭಾಷಣೆ, ಇನ್ನೊಂದಿಷ್ಟು ಗ್ಲ್ಯಾಮರ್, ಮತ್ತಿಷ್ಟು ಹಾರರ್ ಅಂಶಗಳನ್ನು ಸೇರಿಸಿ ಒಂದು ಸಿನಿಮಾ ಹೆಣೆದರೆ ಹೇಗಿರುತ್ತದೆ? ‘ಕೆಲವು ದಿನಗಳ ನಂತರ' ಸಿನಿಮಾದ ಹಾಗಿರುತ್ತದೆ. ಹಾರರ್ ಕಥೆಯೊಂದನ್ನು ಒಳ್ಳೆಯ ಮೆಸೇಜ್ ಜತೆಗೆ ಹೇಳಬೇಕು ಎಂದುಕೊಂಡ ನಿರ್ದೇಶಕರ ಕಳಕಳಿ ಪ್ರಶಂಸನಾರ್ಹವೇ. ಅವರು ಹೇಳಹೊರಟಿರುವ ಸಂದೇಶ ಕೂಡ ಒಳ್ಳೆಯದೇ. ಆದರೆ ಆ ಸಂದೇಶದ ಗುರಿಯನ್ನು ತಲುಪಲು ಆಯ್ದುಕೊಂಡಿರುವ ದಾರಿ ಹೊಸದಲ್ಲ. ಈ ದಾರಿಯಲ್ಲಿ ಅವರ ನಿರೂಪಣೆಯ ಬಂಡಿ ಕೆಲವು ಕಡೆ ರಸ್ತೆ ಪಕ್ಕದ ಚರಂಡಿಗೂ ಇಳಿಯುತ್ತದೆ. ಮತ್ತಿಷ್ಟು ದೂರ ಸುಗಮವಾಗಿ ಸಾಗುತ್ತದೆ - ಪದ್ಮನಾಭ ಭಟ್

    Kelavu Dinagala Nanthara review - Times of India

    Kelavu Dinagala Nanthara review - Times of India

    Kelavu Dinagala Nanthara, touted as a horror thriller fails to keep one on the edge-of-the-seat. Director Srini has tried to blend horror with comedy, and the movie falls flat without having enough meat in the story. The message in the climax is the only solace. The CGI created baby truly instills fear.The background score and the songs fail to lift the story. The comic sequences, much of which are double entendres don't evoke laughter. Shubha Poonja excels in her role as a bubbly girl. Newbies Khiladi Lokesh, Dravya and Sonu make their presence felt. Majaa Talkies Pavan has done a commendable job for his character, which has grey shades - Vinay Lokesh

    A Family horror show - Deccan Chronicle

    A Family horror show - Deccan Chronicle

    For a horror movie, the only agenda is to scare the audience. In order to do so, the devils/evil spirits or the ghosts, as they are known, have to be innovatively scary, failing which there would be no fun in watching them for the first time. While working on a set template, Srini, the director, has put up a 'family' horror show - Shashiprasad SM

    English summary
    Read Kannada Actress Shubha Poonja starrer Kannada Movie 'Kelavu Dinagala Nantara' critics review. Here is the collection of 'Kelavu Dinagala Nantara' reviews by Top News Papers of Karnataka.
    Sunday, June 24, 2018, 13:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X