For Quick Alerts
  ALLOW NOTIFICATIONS  
  For Daily Alerts

  ಸುನಿಯ 'ಇನ್ನೊಂದ್ ಲವ್ ಸ್ಟೋರಿ' ಬಗ್ಗೆ ವಿಮರ್ಶಕರ ಕಾಮೆಂಟ್ಸ್

  By Harshitha
  |

  'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸೆನ್ಸೇಷನ್ ಹುಟ್ಟುಹಾಕಿದ ನಿರ್ದೇಶಕ 'ಸಿಂಪಲ್' ಸುನಿ, ಇದೀಗ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಹೇಳೋಕೆ ನಿಮ್ಮೆಲ್ಲರ ಮುಂದೆ ಬಂದಿದ್ದಾರೆ.

  'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಸಿನಿಮಾ ಪಡ್ಡೆ ಹೈಕ್ಳಿಗೆ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. 'ಸಿಂಗಲ್ ಮೀನಿಂಗು', 'ಡಬ್ಕಿಡಬಲ್ ಮೀನಿಂಗು' ಹೊಂದಿರುವ ಈ ಸಿನಿಮಾ ಹರೆಯದ ಹುಡುಗರಿಗೆ ಹಾಟ್ ಫೇವರಿಟ್ ಆಗಿದೆ. ಆದ್ರೆ, ಚಿತ್ರದ ಬಗ್ಗೆ ವಿಮರ್ಶಕರಿಗಿರುವ ಅಭಿಪ್ರಾಯವೇ ಬೇರೆ. [ವಿಮರ್ಶೆ; ಖುಷ್-ಖುಷಿಯಾದ 'ಸಿಂಪಲ್' ಲವ್ ಸ್ಟೋರಿ]

  ಕನ್ನಡ ಸಿನಿ ವಿಮರ್ಶಕರು 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಸಿನಿಮಾ ಬಗ್ಗೆ ನೀಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

  ಕತೆ ಸಿಂಪಲ್ಲು, ಮೀನಿಂಗು ಡಬ್ಬಲ್ಲು, ಮನರಂಜನೆ ಡಬ್ಕುಡಬಲ್! - ಉದಯವಾಣಿ

  ಕತೆ ಸಿಂಪಲ್ಲು, ಮೀನಿಂಗು ಡಬ್ಬಲ್ಲು, ಮನರಂಜನೆ ಡಬ್ಕುಡಬಲ್! - ಉದಯವಾಣಿ

  ಹೆಸರೇ ಹೇಳುವಂತೆ ಇದು ಸರಳವಾದ ಇನ್ನೊಂದು ಪ್ರೇಮಕ"ಥೆ. ಅನಾಮಿಕರಾಗಿದ್ದ ಹುಡುಗ-ಹುಡುಗಿ ಒಂದು ಪ್ರಯಾಣ ಮುಗಿಸುವ ಹೊತ್ತಿಗೆ ಹೇಗೆ ಮತ್ತು ಎಷ್ಟು ಹತ್ತಿರವಾಗುತ್ತಾರೆ ಎಂಬುದನ್ನು ಈ ಚಿತ್ರ ಮತ್ತೊಮ್ಮೆ ಹೇಳುತ್ತದೆ. ಇಲ್ಲಿ ಸುನಿ ಅವರ ಉದ್ದೇಶ ಸ್ಪಷ್ಟ. ಹುಕ್ ಆರ್ ಕ್ರುಕ್, ದುಡ್ಡು ಕೊಟ್ಟು ಬಂದ ಪ್ರೇಕ್ಷಕರನ್ನು ಹೊಟ್ಟೆ ತುಂಬಾ ನಗಿಸಬೇಕು ಎಂದು. ಅದಕ್ಕೆ ಏನೇನು ಮಾಡಬೇಕೋ ಅವೆಲ್ಲವನ್ನೂ ಮಾಡಿದ್ದಾರೆ ಸುನಿ - ಚೇತನ್ ನಾಡಿಗೇರ್

  ಪಯಣದ ಪ್ರೇಮಕಥೆ - ಪ್ರಜಾವಾಣಿ

  ಪಯಣದ ಪ್ರೇಮಕಥೆ - ಪ್ರಜಾವಾಣಿ

  ಖುಷ್ ಮತ್ತು ಪುಷ್ ಗೆಳೆಯರು. ಮದುವೆಯಾಗಲು ಪುಷ್‌ಗೆ ಹುಡುಗಿ ನೋಡಿದ್ದಾರೆ. ಆ ಹುಡುಗಿ ಹೆಸರು ಖುಷಿ. ಆದರೆ ಅವನಿಗೆ ಮದುವೆ ಇಷ್ಟವಿಲ್ಲ. ಆ ಮದುವೆಯ ಅವಕಾಶ ಖುಷ್‌ಗೆ ವರ್ಗವಾಗುತ್ತದೆ. ಆದರೆ ಖುಷ್ ಹುಡುಗಿಯ ಫೋಟೊ ನೋಡಿಲ್ಲ! ಈ ನಡುವೆ ಪುಷ್‌ಗೆ ಖುಷಿ ಇಷ್ಟವಾಗುತ್ತಾಳೆ. ಆಕೆಯನ್ನು ಮದುವೆಯಾಗಲು ಒಪ್ಪುತ್ತಾನೆ. ಉಡಾಫೆ, ತರ್ಲೆಯ ಖುಷ್‌ಗೆ ಖುಷಿ ಅಚಾನಕ್ಕಾಗಿ ಸಿಕ್ಕುತ್ತಾಳೆ. ಬೆಂಗಳೂರಿನಿಂದ ಕಾರವಾರಕ್ಕೆ ಕಾರಿನಲ್ಲಿ ಹೋಗುವುದರಲ್ಲಿ ಖುಷ್ ಮತ್ತು ಖುಷಿ ನಡುವೆ ಪ್ರೇಮ ಅರಳುತ್ತದೆ.

  ಖುಷ್-ಖುಷಿ ಭೇಟಿಯಾಗಿದ್ದು ಹೇಗೆ? ಅವರ ಇಬ್ಬರ ನಡುವೆ ಪ್ರೇಮ ಅರಳಿದ್ದು ಯಾವ ರೀತಿ? ಪುಷ್-ಖುಷಿಯನ್ನು ಮದುವೆಯಾಗುವನೇ, ಇಲ್ಲ ಖುಷ್-ಖುಷಿ ಮದುವೆ ಆಗುವರೇ ಎನ್ನುವುದು ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಚಿತ್ರದ ಸ್ವಾರಸ್ಯ.

  ಸಿಂಪಲ್ ಗೆ ಮಾತೇ ಬಂಡವಾಳ - ವಿಜಯ ಕರ್ನಾಟಕ

  ಸಿಂಪಲ್ ಗೆ ಮಾತೇ ಬಂಡವಾಳ - ವಿಜಯ ಕರ್ನಾಟಕ

  ಚಿತ್ರದಲ್ಲಿ ಹೇಳಿಕೊಳ್ಳುವಂತಹ ಕತೆಯಿಲ್ಲ. ತುಂಬಾ ಸಿಂಪಲ್ ಸ್ಟೋರಿಯನ್ನು ಮಾತಿನ ಮೂಲಕವೇ ಹೇಳುತ್ತಾ ಸಾಗುತ್ತಾರೆ ನಿರ್ದೇಶಕರು. ಹೀಗಾಗಿ ಇದೇ ನಿರ್ದೇಶಕರ ಈ ಹಿಂದಿನ ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಚಿತ್ರದ ಫಾರ್ಮುಲಾನೇ ಇಲ್ಲಿಯೂ ಬಳಕೆಯಾಗಿದೆ. ಇಡೀ ಚಿತ್ರದ ಕತೆಯು ಪ್ರಯಾಣದಲ್ಲೇ ಸಾಗುವುದರಿಂದ ದೃಶ್ಯಕ್ಕಿಂತ ಮಾತಿಗೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ ನಿರ್ದೇಶಕರು. ಎಂದಿನಂತೆ ಸುನಿ ಪಡ್ಡೆಗಳ ಮೆಚ್ಚಿಸಲು ಅಲ್ಲಲ್ಲಿ ಡಬಲ್ ಮೀನಿಂಗ್ ಡೈಲಾಗ್‌ಗೆ ಮೊರೆ ಹೋಗಿದ್ದಾರೆ. ಬೆಂಗಳೂರಿನಿಂದ ಕಾರವಾರಕ್ಕೆ ಹೊರಡುವ ಕತೆಯಲ್ಲಿ ಅಲ್ಲಲ್ಲಿ ಸ್ಪೀಡ್ ಬ್ರೇಕರ್‌ನಂತೆ ಸಿಗುವ ಸ್ಮಗ್ಲರ್‌ಗಳು ಕತೆಯ ಓಟಕ್ಕೆ ಸಖತ್ ಬ್ರೇಕ್ ನೀಡುತ್ತಾರೆ. ಕಾಡಿನ ಮಧ್ಯೆ ನಡೆಯುವ ಸ್ಮಗ್ಲರ್ ಜತೆಗಿನ ಫೈಟ್ ತೀರಾ ಬಾಲಿಶವಾಗಿದೆ - ಶರಣು ಹುಲ್ಲೂರು

  ಸಿಂಪಲ್ಲಾಗ್ ಒಂದು ಪ್ರಯಾಸದ ಲವ್ ಸ್ಟೋರಿ - ಕನ್ನಡ ಪ್ರಭ

  ಸಿಂಪಲ್ಲಾಗ್ ಒಂದು ಪ್ರಯಾಸದ ಲವ್ ಸ್ಟೋರಿ - ಕನ್ನಡ ಪ್ರಭ

  ಬಂದ ದಾರಿಯನ್ನು ಮರೆಯಬಾರದು ಎನ್ನುವ ಮಾತಿಗೆ ಕಟ್ಟುಬಿದ್ದ ಸುನಿ ಇನ್ನೊಂದು ಸಿಂಪಲ್ ಸ್ಟೋರಿಯನ್ನು ಹಿಂದಿನ ದಾರಿಯಲ್ಲೇ ಸೃಷ್ಟಿಸಿದ್ದಾರೆ. ಮನರಂಜನೆಯ ಮನೆ ಕಟ್ಟಿ ಪ್ರೇಕ್ಷಕನ ಕಾಸಿಗೆ ಮೋಸ ಮಾಡದಂತೆ ನೋಡಿಕೊಂಡವರಿಗೆ ಈ ಬಾರಿ ಮುತ್ತಿನಂಥ ಮಾತುಗಳ ಕೊರತೆ ಕಾಡಿದ್ದು, ಆ ಕೊರತೆಯಿಂದಲೇ ಅಲ್ಲಲ್ಲಿ ಹಾದಿ ತಪ್ಪಿದಂತೆ, ಮತ್ತೆ ಸರಿದಾರಿಗೆ ಬಂದಂತೆ, ಇನ್ನೊಮ್ಮೆ ಪ್ರೇಕ್ಷಕನನ್ನು ಎಚ್ಚರಿಸಿದಂತೆ ಚಿತ್ರ ಸಾಗುತ್ತದೆ - ಆರ್ ಕೇಶವಮೂರ್ತಿ

  Simpallag Innondh Love Story Movie Review - Times of India

  Simpallag Innondh Love Story Movie Review - Times of India

  The film is fun, breezy and colourful and strikes the right chord with Gen X, sans any unnecessary mass elements. While Sandalwood has its share of romantic films, the breezy romcoms are not as many. Most of the films masked as romcoms end up compromising the genre with mass elements that play distraction. Suni, in Simpallag Innondh Love Story, has weaved a love story that keeps you entertained through the 142 minutes in the cinema hall, which pretty much is what good cinema is meant to do. There isn't any over-the-top acting, nor is there any message that is preached in the end. Instead, Suni's dialogues are a treat to the younger generation, proving to be more original lines rather than a barrage of SMS forwards strung together as dialogues. The fun fight sequence towards the end, with an allusion to John Cena and WWE is something that is both novel and hilarious. Praveen, who makes his comeback, is a treat to watch, with his natural style of acting and comic timing. Meghana Gaonkar looks her best till date on screen and delivers a memorable performance. Master Hemanth as Tube is fun- - Sunayana Suresh

  MOVIE REVIEW: SIMPLEAG INNOND LOVE STORY- Bangalore MIRROR

  MOVIE REVIEW: SIMPLEAG INNOND LOVE STORY- Bangalore MIRROR

  Evidently, the story was the last thing written in this script. Most likely, a lot of dialogues were first put together and incidents and scenes created out of them. The story was an afterthought, to string together these incidents. They may work sometimes, but not in this film. It is a very predictable journey. Boy meets girl and circumstances force them to travel together. At the end of it (overnight), they are in love but a film story demands a twist. It is one more road story that depends excessively on dialogues to keep the audience engaged. But very soon, it becomes an overdose and the film drags itself forward painfully slowly. - Shyam Prasad S

  Simplag Innondu Love Story 'Simply' Engaging - The New Indian Express

  Simplag Innondu Love Story 'Simply' Engaging - The New Indian Express

  Like in his first film, Suni focuses on the lead actors while including a sidekick, Tube.

  The film travels through one-liners and quirky dialogues along with a few double-meaning ones, but they do not irritate. Meghana Gaonkar has justified her role while Praveen has put in his best effort as an urbane lover. He is spontaneous but has room for improvement. Little boy Hemanth comes as a lively inclusion.

  BJ Bharath and Sai Kiran's music is pleasant with a couple of lovely songs, but the cinematographer could have done a better job. - A Sharadhaa

  English summary
  Kannada Actor Praveen and Kannada Actress Meghana Gaonkar starrer 'Simple Agi Innond Love Story' movie has received mixed response from the critics. Here is the collection of reviews by Top News Papers of Karnataka.
  Monday, March 14, 2016, 12:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X