»   » ವಿಮರ್ಶೆ; ಖುಷ್-ಖುಷಿಯಾದ 'ಸಿಂಪಲ್' ಲವ್ ಸ್ಟೋರಿ

ವಿಮರ್ಶೆ; ಖುಷ್-ಖುಷಿಯಾದ 'ಸಿಂಪಲ್' ಲವ್ ಸ್ಟೋರಿ

Posted By:
Subscribe to Filmibeat Kannada

ಡೈಲಾಗ್ 1
ಖುಷಿ - ನೀವು ಏನೇ ಹೇಳಿ...ಮಕ್ಕಳು ಮಾಡುವುದೇ ಚಂದ
ಖುಷ್ - ಹೌದೌದು...ಮಕ್ಕಳು ಮಾಡೋದೇ ಚಂದ.!!!!


ಡೈಲಾಗ್ 2
ಖುಷ್ - ನಾನು ನೀವು ಒಂದೇ ಟೈಮ್ ನಲ್ಲಿ ಹುಟ್ಟಿದ್ದೀವಿ ಅಂದ್ರೆ, ನಮ್ ಪೇರೆಂಟ್ಸು, ನಿಮ್ ಪೇರೆಂಟ್ಸು ಒಂದೇ ಟೈಮ್ ನಲ್ಲಿ......
ಖುಷಿ - ಹಾ...???
ಖುಷ್ - ರೀ...ದೇವರಿಗೆ ಹರಕೆ ಹೊತ್ತಿರಬಹುದು ಅಂತ ಹೇಳೋಕೆ ಬಂದೆ ಅಷ್ಟೆ.!!!!

ಡೈಲಾಗ್ 3
ಖುಷಿ - ನೀವ್ಯಾಕೋ ಒಂಥರಾ ಡಬಲ್ ಮೀನಿಂಗ್ ನಲ್ಲೇ ಮಾತಾಡ್ತೀರಾ
ಖುಷ್ - ಹಲೋ...ಹೇಳೋ ಬಾಯಿ, ನಾಲಿಗೆ ಎರಡೂ ಸಿಂಗಲ್ಲೇ. ಮೀನಿಂಗೂ ಸಿಂಗಲ್ ಆಗೇ ಇರುತ್ತೆ. ಕೇಳೋ ಕಿವಿ ಡಬಲ್. ಅದಕ್ಕೆ ಎಲ್ಲಾ ಡಬಲ್ ಮೀನಿಂಗ್ ಆಗಿ ಕೇಳ್ಸುತ್ತೆ. ನಾವೇನೂ ಮಾಡೋಕೆ ಆಗಲ್ಲ.!!


ಇವು ಸ್ಯಾಂಪಲ್ ಅಷ್ಟೆ. ಇಂತಹ ಡೈಲಾಗ್ ಗಳು ಸಿನಿಮಾದುದ್ದಕ್ಕೂ ಇರೋದ್ರಿಂದ ಪಡ್ಡೆ ಹೈಕ್ಳ ಹಲ್ಲುಗಳು ಆಗಾಗ ಮಿರಿ ಮಿರಿ ಮಿಂಚುತ್ತಿರುತ್ತವೆ. ಅವು ಡಬಲ್ ಮೀನಿಂಗ್ ಅಂತ ನಿಮಗೆ ಅನಿಸಿದ್ರೂ, ಅದಕ್ಕೂ ಒಂದು ಸ್ಪಷ್ಟನೆ ಕೊಟ್ಟು 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಚಿತ್ರ ಮಾಡಿದ್ದಾರೆ 'ಸಿಂಪಲ್' ಸುನಿ.


'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....


Rating:
3.0/5

ಚಿತ್ರ - ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ
ನಿರ್ಮಾಣ - ಅಶು ಬೆದ್ರ
ಕಥೆ - ಚಿತ್ರಕಥೆ - ಸಂಭಾಷಣೆ - ಗೀತರಚನೆ - ನಿರ್ದೇಶನ - ಸುನಿ
ಸಂಗೀತ ನಿರ್ದೇಶನ - ಭರತ್ ಬಿ.ಜೆ, ಸಾಯಿ ಕಿರಣ್
ಛಾಯಾಗ್ರಹಣ - ದರ್ಶನ್ ಕನಕ
ಸಂಕಲನ - ಸಚಿನ್
ತಾರಾಗಣ - ಪ್ರವೀಣ್, ಮೇಘನಾ ಗಾಂವ್ಕರ್ ಮತ್ತು ಇತರರು
ಬಿಡುಗಡೆ - ಮಾರ್ಚ್ 11, 2016


'ಸಿಂಪಲ್' ಸ್ಟೋರಿ

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು 'ಸಿಂಪಲ್ ಲವ್ ಸ್ಟೋರಿ'. ಹಾಗಂತ ನಿಮಗೆ ಎಲ್ಲೂ ಬೋರ್ ಹೊಡೆಸುವುದಿಲ್ಲ. ಬೆಂಗಳೂರಿನಿಂದ ಕಾರವಾರಕ್ಕೆ ಹೋಗುವ ದಾರಿಯಂತೆ ಆಗಾಗ ಸ್ಪೀಡ್ ಬ್ರೇಕರ್ ಸಿಕ್ಕರೂ ಚಿತ್ರಕಥೆ ಸಲೀಸಾಗಿ ಸಾಗುತ್ತದೆ.


ಖಾಲಿ ಪೋಲಿ ಹುಡುಗನ ಪರಾರಿ ಕಹಾನಿ

ಬೇಜವಾಬ್ದಾರಿ ಹುಡುಗ ಖುಷ್ (ಪ್ರವೀಣ್) ಮದುವೆ ಮತ್ತು ಹುಡುಗಿ ಎರಡೂ ಬೇಡ ಅಂತ ಕಾರ್ ಕದ್ದು, ಊರು ಬಿಟ್ಟು ಹೊರಡಲು ಸಿದ್ಧನಾಗ್ತಾನೆ. ಅವನಿಗೆ ಸಾಥ್ ನೀಡುವುದು ಪುಟಾಣಿ ಹುಡುಗ. ಅದು ಆ ಹುಡುಗನ ಅಪ್ಪ ಮಾರ್ಕ್ಸ್ ಕಾರ್ಡ್ ಗೆ ಸೈನ್ ಹಾಕ್ಲಿಲ್ಲ ಎಂಬ ಸಿಟ್ಟಿಗೆ. ಮದುವೆ ಮತ್ತು ಮಾರ್ಕ್ಸ್ ಗಿಂತ ಮಕ್ಕಳು ಮುಖ್ಯ ಅಂತ ಪ್ರೂವ್ ಮಾಡುವ ಹಠ ಇಬ್ಬರಿಗೆ.


ಲವ್ ಕಹಾನಿ

ಇತ್ತ ಗಂಡು ನೋಡಲು ಕಾರವಾರಕ್ಕೆ ತೆರಳುವ ಖುಷಿ (ಮೇಘನಾ ಗಾಂವ್ಕರ್) 'ಆಕ್ಸಿಡೆಂಟ್' ಆಗಿ ಖುಷ್ ಜೊತೆ ಸೇರಿಕೊಳ್ಳುತ್ತಾಳೆ. ಇಬ್ಬರ 'ಲವ್ ಜರ್ನಿ' ಶುರುವಾಗುವುದು ಅಲ್ಲಿಂದಲೇ.! ಅದನ್ನ ನೀವು ಚಿತ್ರಮಂದಿರದಲ್ಲೇ ಕಣ್ತುಂಬಿಕೊಳ್ಳಿ...


'ಲವ್'ಲವಿಕೆ ಇಂದ ಸಾಗುವ ಚಿತ್ರ

'ಲವ್' ಸ್ಟೋರಿ ಅಂದ ಮಾತ್ರಕ್ಕೆ ಇಲ್ಲಿ ಡ್ಯುಯೆಟ್ ಮತ್ತು ರೋಮ್ಯಾಂಟಿಕ್ ಡೈಲಾಗ್ಸ್ ಇಲ್ಲ. ಕಾಮಿಡಿ ಮಾಡಲು ಎಕ್ಸ್ ಟ್ರಾ ಪ್ಲೇಯರ್ಸ್ ಕೂಡ ಇಲ್ಲ. ಖುಷ್ ಮತ್ತು ಖುಷಿಯ ಮಾತಿನ ಸುಸುರ್ಬತ್ತಿಯಲ್ಲೇ 'ಲವ್'ಲವಿಕೆಯಿಂದ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಹೆಣೆದಿದ್ದಾರೆ ನಿರ್ದೇಶಕ ಸುನಿ.


ಹೀರೋ-ಹೀರೋಯಿನ್ ನಟನೆ ಹೇಗಿದೆ?

ಖಾಲಿ ಪೋಲಿ ಹುಡುಗನ ಪಾತ್ರದಲ್ಲಿ ನಾಯಕ ಪ್ರವೀಣ್ ಅಭಿನಯ ಚೆನ್ನಾಗಿದೆ. ಮೇಘನಾ ಗಾಂವ್ಕರ್ ಕೂಡ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪುಟಾಣಿ ಹೇಮಂತ್ ಕಾಮಿಡಿ ಟೈಮಿಂಗ್ ಸೂಪರ್.


ಮಾತೇ ಬಂಡವಾಳ

ಇಡೀ ಚಿತ್ರದಲ್ಲಿ 'ಮಾತೇ' ಬಂಡವಾಳ. ಪ್ರೇಕ್ಷಕರನ್ನ ಆಗಾಗ ರಿಫ್ರೆಶ್ ಮಾಡುವುದು 'ಸಿಂಪಲ್' ಸುನಿ ರಚಿಸಿರುವ 'ಹೊಸ ಹೊಸ' ಡೈಲಾಗ್ ಗಳು ಮಾತ್ರ.


ಟೆಕ್ನಿಕಲಿ ಸಿನಿಮಾ ಹೇಗಿದೆ?

ಬಹುತೇಕ ಪ್ರಯಾಣದಲ್ಲೇ ಸಾಗುವ ಚಿತ್ರಕಥೆಯಲ್ಲಿ ದರ್ಶನ್ ಕನಕ ರವರ ಕ್ಯಾಮರಾ ಕೈಚಳಕ ಉತ್ತಮ. ಭರತ್.ಬಿ.ಜೆ ಹಾಗೂ ಸಾಯಿ ಕಿರಣ್ ಸಂಗೀತ ಓಕೆ. ಸಚಿನ್ ಕತ್ರಿ ಕೆಲಸ ಕೊಂಚ ಚುರುಕಾಗಿರಬೇಕಿತ್ತು.


ಫೈನಲ್ ಸ್ಟೇಟ್ ಮೆಂಟ್

ಯಾವುದೇ ನಿರೀಕ್ಷೆ ಇಲ್ಲದೆ, 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರವನ್ನ ನೆನಪಿಸಿಕೊಳ್ಳದೇ ಚಿತ್ರಮಂದಿರಕ್ಕೆ ಹೋದರೆ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಮನರಂಜನೆ ನೀಡುತ್ತೆ. ವೀಕೆಂಡ್ ನಲ್ಲಿ ಟೈಮ್ ಪಾಸ್ ಹೇಗೆ ಮಾಡುವುದು ಅಂತ ಯೋಚಿಸುತ್ತಿದ್ದರೆ, ಈ ಚಿತ್ರವನ್ನ ಆರಾಮಾಗಿ ನೋಡಬಹುದು.


English summary
Kannada Actor Praveen and Kannada Actress Meghana Gaonkar starrer 'Simple Agi Innond Love Story' movie has hit the screens today (March 11th). Review of Simple Suni directorial 'Simple Agi Innond Love Story' is here.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X