Aachar & Co Review: 'ಆಚಾರ್ & ಕೋ' ಸಿನಿಮಾ ಸಂಪೂರ್ಣ ವಿಮರ್ಶೆ & ರೇಟಿಂಗ್

By ಫಿಲ್ಮಿಬೀಟ್ ಡೆಸ್ಕ್

Rating:
3.0/5
Star Cast: ಅಶೋಕ್, ಸುಧಾ ಬೆಳವಾಡಿ, ಸಿಂಧು ಶ್ರೀನಿವಾಸ್ ಮೂರ್ತಿ, ಅನಿರುದ್ಧ್​ ಆಚಾರ್ಯ ಮುಂತಾದವರು
Director: ಸಿಂಧು ಶ್ರೀನಿವಾಸ್ ಮೂರ್ತಿ

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳ ಅಲೆ ಎದ್ದಿದೆ. ದೊಡ್ಡ ದೊಡ್ಡ ನಟರು ತಮ್ಮದೇ ಬ್ಯಾನರ್‌ಗಳಲ್ಲಿ ಹೊಸ ಕಲಾವಿದರು, ತಂತ್ರಜ್ಞರಿಗೆ ಅವಕಾಶ ನೀಡುತ್ತಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಅಪ್ಪು ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಹೊಸಬರಿಗೆ ಅವಕಾಶ ಕೊಡುತ್ತಾ ಬಂದರು. ಅದನ್ನು ಅಶ್ವಿನಿ ಮುಂದುವರೆಸಿದ್ದಾರೆ. ಆ ಸಂಸ್ಥೆಯ 'ಆಚಾರ್ & ಕೋ' ಚಿತ್ರ ಶುಕ್ರವಾರ ತೆರೆಗಪ್ಪಳಿಸುತ್ತಿದೆ.

ಬಹಳ ಮುಂದಕ್ಕೆ ಓಡುತ್ತಿರುವ ನಮ್ಮನ್ನು ಒಮ್ಮೆ ಹಿಂದಕ್ಕೆ ಕೊರೆದೊಯ್ಯುವ ಸಿನಿಮಾ 'ಆಚಾರ್ & ಕೋ'. ಅಂದರೆ 60, 70ರ ದಶಕದ ಕಥೆ ಈ ಚಿತ್ರದಲ್ಲಿದೆ. ಅಂದಿಕ ಕಾಲಘಟ್ಟವನ್ನು ಸೊಗಸಾಗಿ ತೆರೆಮೇಲೆ ತರುವಲ್ಲಿ ಚಿತ್ರತಂಡ ಸಕ್ಸಸ್ ಕಂಡಿದೆ. ಸಿಂಪಲ್ ಕಥೆಯನ್ನು ಪರಿಣಾಮಕಾರಿಯಾಗಿ ತೆರೆಗೆ ತಂದು ಸಿಂಧು ಶ್ರೀನಿವಾಸ್ ಮೂರ್ತಿ ಮೊದಲ ಪ್ರಯತ್ನದಲ್ಲೇ ಸಕ್ಸಸ್ ಕಂಡಿದ್ದಾರೆ. ಆಕೆಯ ಕಲ್ಪನೆಯನ್ನು ದೃಶ್ಯರೂಪಕ್ಕಿಳಿಸುವಲ್ಲಿ ಕಲಾವಿದರು, ತಂತ್ರಜ್ಞರು ಸಾಥ್ ನೀಡಿದ್ದಾರೆ. ಚಿತ್ರಕ್ಕಾಗಿ ಕೆಲಸ ಮಾಡಿರುವ ಮಹಿಳಾ ತಂತ್ರಜ್ಞರ ಶ್ರಮವನ್ನು ಮೆಚ್ಚಲೇಬೇಕು.

Sindhu Sreenivasa Starring Aachar & Co Movie Review in Kannada and Rating

'ಆಚಾರ್ & ಕೋ' ಕಥೆ

ಬೆಂಗಳೂರಿನ ಜಯನಗರ ನಿವಾಸಿ ಸಿವಿಲ್ ಇಂಜಿನಿಯರ್ ಮಧುಸೂದನ್ ಆಚಾರ್(ಅಶೋಕ್). ಆತನ ಧರ್ಮಪತ್ನಿ ಸಾವಿತ್ರಿ ಆಚಾರ್(ಸುಧಾ ಬೆಳವಾಡಿ). ದಂಪತಿಗೆ ಒಬ್ಬರಲ್ಲ ಇಬ್ಬರಲ್ಲ 10 ಮಕ್ಕಳು.(ಮದುವೆ ಆಗಿ ಹೋಗಿರುವ ಮಗಳನ್ನು ಸೇರಿ ಮೂವರು ಗಂಡು ಮಕ್ಕಳು, 7 ಜನ ಹೆಣ್ಣುಮಕ್ಕಳು) ಮೂವರು ಗಂಡು ಮಕ್ಕಳು ಕೂಡ ಇಂಜಿನಿಯರ್ ಅನ್ನೋದು ಮಧುಸೂದನ್ ಆಚಾರ್ ಆಸೆ. ಬಹಳ ಸುಸಂಸ್ಕೃತರನ್ನಾಗಿ ಮಕ್ಕಳನ್ನು ಬೆಳೆಸುವ ಹಠ ಅಪ್ಪನದ್ದು. ಆದರೆ ಅದರಿಂದ ಹೊರ ಬಂದು ತಮ್ಮಗಿಷ್ಟ ಬಂದಿದ್ದು ಮಾಡಬೇಕು, ತಮ್ಮಿಷ್ಟದಂತೆ ಇರಬೇಕು ಅನ್ನೋದು ಮಕ್ಕಳ ಹಠ. ಆದರೆ ಇದ್ದಕ್ಕಿದಂತೆ ಒಂದು ದಿನ ಮಧುಸೂದನ್ ಆಚಾರ್ ಕೊನೆಯುಸಿರೆಳೆಯುತ್ತಾರೆ.

ಪತಿ ಅಗಲಿಕೆ ಬಳಿಕ ಸಾವಿತ್ರಿ ದೇವರ ಧ್ಯಾನದಲ್ಲಿ ಮುಳುಗಿ ಬಿಡುತ್ತಾಳೆ. ಮನೆಯ ಆಧಾರ ಸ್ತಂಭವೇ ಕುಸಿದ ಮೇಲೆ ಮಕ್ಕಳೇ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿ ಬರುತ್ತದೆ. ಕೆಲಸ ಹುಡುಕಿ ಮನೆಯನ್ನು ನಡೆಸಬೇಕಾಗುತ್ತದೆ. ತಮ್ಮ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕಾಗುತ್ತದೆ. ತಮ್ಮ ಕನಸುಗಳನ್ನು ಬದಿಗಿಟ್ಟು ಮನೆಗಾಗಿ ಬದುಕಬೇಕಾದ ಅನಿವಾರ್ಯತೆ ಎದುರಾಗುತ್ತದೆ. ನಡೆಸಲು ಆ ಹಾದಿಯಲ್ಲಿ ಏನೆಲ್ಲಾ ಆಗುತ್ತದೆ? ಅನ್ನೋದನ್ನು ಹಾಸ್ಯಲೇಪನದೊಂದಿಗೆ ಕಟ್ಟಿಕೊಡಲಾಗಿದೆ.

Sindhu Sreenivasa Starring Aachar & Co Movie Review in Kannada and Rating

ಸಿನಿಮಾ ವಿಶ್ಲೇಷಣೆ

ಇವತ್ತಿನ ಕಾಲದ ಕಮರ್ಷಿಯಲ್ ಸಿನಿಮಾಗಳನ್ನು ಮಾಡಿಬಿಡುವುದು ಬಹಳ ಸುಲಭ. ಆದರೆ 60ರ ದಶಕದ ಕಥೆಯನ್ನು ಹೇಳುವುದು ನಿಜಕ್ಕೂ ಚಾಲೆಂಜಿಂಗ್. ಸಿಂಧು ಆ ಪ್ರಯತ್ನದಲ್ಲಿ ಫಸ್ಟ್‌ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾರೆ. ಔಟ್ ಆಫ್ ದಿ ಬಾಕ್ಸ್ ಯೋಚಿಸಿ ಬಹಳ ನೀಟ್ ಹಾಗೂ ಫೀಲ್ ಗುಡ್ ಸಿನಿಮಾ ಕಟ್ಟಿಕೊಟ್ಟು ಗಮನ ಸೆಳೆದಿದ್ದಾರೆ. ಪ್ರತಿಯೊಂದು ವಿಚಾರದ ಬಗ್ಗೆ ಬಹಳ ರೀಸರ್ಚ್ ಮಾಡಿ ಎಲ್ಲೂ ಮಿಸ್ ಆಗದಂತೆ ಪ್ರೇಕ್ಷಕರನ್ನು 65 ವರ್ಷ ಹಿಂದಕ್ಕೆ ಕರೆದುಕೊಂಡು ಹೋಗುತ್ತಾರೆ. ಅದಕ್ಕೆ ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಸಾಥ್ ಸಿಕ್ಕಿದೆ.

60 ದಶಕದ ಕಥೆ ಚಿತ್ರದಲ್ಲಿ ಇದ್ದರೂ ಎಲ್ಲಾ ಕಾಲಕ್ಕೂ 'ಆಚಾರ್ & ಕೋ' ಸಿನಿಮಾ ಸಲ್ಲುವಂತದ್ದು. ಅಂದಿಗೂ ಇಂದಿಗೂ ಎಂದಿಗೂ ಇರುವಂತಹ ಕೆಲ ಸಮಸ್ಯೆಗಳ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆ. ಎಲ್ಲೂ ಬೋರ್ ಹೊಡೆಸದಂತೆ, ಭಾಷಣದಂತೆಯೂ ಭಾಸವಾಗದಂತೆ ಮನರಂಜನೆ ಜೊತೆ ಜೊತೆಗೆ ಚರ್ಚಿಸುವಂತ, ಥಿಯೇಟರ್‌ನಿಂದ ಹೊತ್ತು ತರುವಂತಹ ಅಂಶಗಳು ಕೂಡ ಚಿತ್ರದಲ್ಲಿದೆ. ಇನ್ನು ಸ್ತ್ರೀಶಕ್ತಿಯ ಸಬಲೀಕರಣದ ವಿಚಾರವೂ ಚಿತ್ರವನ್ನು ಚಿತ್ರದಲ್ಲಿ ಚರ್ಚಿಸಲಾಗಿದೆ. 60 ವರ್ಷ ಹಿಂದೆ ಹೋಗಿ ಅಂದಿನ ಸಮಾಜ, ಜನ, ರೀತಿ ರಿವಾಜು, ಕಟ್ಟುಪಾಡು ಎಲ್ಲವನ್ನು ಕೆದಕಿ ನೋಡುವ ಪ್ರಯತ್ನ ಮಾಡಲಾಗಿದೆ.

ಕಲಾವಿದರ ಅಭಿನಯ

ಗಂಭೀರ ಪಾತ್ರದಲ್ಲಿ ಹಿರಿಯ ನಟ ಅಶೋಕ್ ಮಾಗಿದ ಅಭಿನಯ ಚಿತ್ರಕ್ಕೆ ಪೂರಕವಾಗಿದೆ. ಕೆಲವೇ ಹೊತ್ತು ಅವರು ತೆರೆಮೇಲೆ ಕಾಣಿಸಿಕೊಂಡರೂ ಅವರ ಅಭಿನಯ ಇಷ್ಟವಾಗುತ್ತದೆ. ಇನ್ನು ನಿರ್ದೇಶಕಿ ಸಿಂಧು ಕೂಡ ಸುಮಾ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಮದುವೆ ಆಗಿ ಲಂಡನ್‌ಗೆ ಹೋಗುವ ಕನಸು ಕಾಣುವ ಮಧ್ಯಮ ವರ್ಗದ ಕುಟುಂಬದ ಹುಡುಗಿಯಾಗಿ ಆಕೆ ಇಷ್ಟವಾಗುತ್ತಾರೆ. ಇನ್ನುಳಿದಂತೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ತಾಂತ್ರಿಕವಾಗಿ ಸಿನಿಮಾ ಹೇಗಿದೆ?

ರೆಟ್ರೋ ಸ್ಟೈಲ್ ಸಿನಿಮಾ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಪ್ರತಿಯೊಂದು ಡಿಟೈಲ್ಡ್ ಆಗಿ ಇರಬೇಕು. ಬೆಂಗಳೂರಿನಲ್ಲಿ ನಡೆಯುವ ಕಥೆ ಆಗಿದ್ದರೂ ಬಹುತೇಕ ಸಿನಿಮಾ ಮೈಸೂರಿನಲ್ಲಿ ಚಿತ್ರೀಕರಿಸಲಾಗಿದೆ. ಆ ಪ್ರಯತ್ನ ಸಕ್ಸಸ್ ಆಗಿದೆ. ಕತೆ ಬೇಕಾಗಿದ್ದನ್ನೆಲ್ಲಾ ಕೊಟ್ಟು ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಂದು ಸದಭಿರುಚಿ ಸಿನಿಮಾ ನಿರ್ಮಿಸಿದ್ದಾರೆ. ಕಾಸ್ಟ್ಯೂಮ್ಸ್ ಹಾಗೂ ಲುಕ್ಸ್ ವಿಚಾರದಲ್ಲೂ ಚಿತ್ರತಂಡ ಬಹಳ ಹೋಂವರ್ಕ್ ಮಾಡಿಕೊಂಡಿರುವುದು ಗೊತ್ತಾಗುತ್ತದೆ. ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಮತ್ತು ಬಿಂದು‌ಮಾಲಿನಿ ಸಂಗೀತ, ತ್ರಿಲೋಕ್ ತ್ರಿವಿಕ್ರಮ ಸಂಭಾಷಣೆ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿದೆ.

ಕೊನೆ ಮಾತು

ಒಂದು ಕೂಡು ಕುಟುಂಬದ ಕಥೆ ಈ ಚಿತ್ರದಲ್ಲಿದೆ. ಯಾವುದೇ ರಕ್ತಪಾತ, ಐಟಂ ಸಾಂಗ್, ಆಕ್ಷನ್ ಸನ್ನಿವೇಶ, ಬಿಲ್ಡಪ್ ಸೀನ್‌ಗಳು ಚಿತ್ರದಲ್ಲಿಲ್ಲ. ಒಂದೊಳ್ಳೆ ಕಥೆ, ಸೊಗಸಾದ ನಿರೂಪಣೆ, ಒಂದಷ್ಟು ಭಾವನಾತ್ಮಕ ಸನ್ನಿವೇಶಗಳು, ಇನ್ನುಳಿದಂತೆ ಫ್ಯಾಮಿಲಿ ಡ್ರಾಮಾ, ಹಾಸ್ಯ 'ಆಚಾರ್ & ಕೋ' ಸಿನಿಮಾದಲ್ಲಿದೆ. ಸಕುಟುಂಬ ಸಮೇತರಾಗಿ ಸಿನಿಮಾ ನೋಡಿ ಎಂಜಾಯ್ ಮಾಡಿ.

More from Filmibeat

English summary
Aachar & Co Movie Ratings and Review in Kannada. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X