Singham Again Twitter Review ; ಸೂಪರ್ ಸ್ಟಾರ್‌ಗಳ ಮಹಾಸಂಗಮ, ಹೇಗಿದೆ ಕಲಿಯುಗದ ರಾಮಾಯಣ ?

ತ್ರೇತಾಯುಗದಲ್ಲಿ ನಡೆದ ರಾಮಾಯಣದ ಕುರಿತು ಕಲಿಯುಗದಲ್ಲಿ ಹತ್ತು ಹಲವು ಚಿತ್ರಗಳು ಬಂದಿವೆ. ಧಾರಾವಾಹಿಗಳು ಕೂಡ ನಿರ್ಮಾಣವಾಗಿವೆ. ಅದರಲ್ಲಿಯೂ ರಮಾನಂದ್ ಸಾಗರ್ ಅವರ ರಾಮಾಯಣ ಇವತ್ತು ಕೂಡ ಅನೇಕರ ಮನದಲ್ಲಿದೆ. ಇನ್ನೂ.. ರಾಮಾಯಣದ ಕಥೆಯನ್ನು ಕೆಲವರು ಪೌರಾಣಿಕ ಚಿತ್ರದ ರೂಪದಲ್ಲಿ ತೆರೆಗೆ ತಂದರೆ, ಇನ್ನೂ ಕೆಲವರು ಈ ಕಥೆಯನ್ನಾಧರಿಸಿ ಅದಕ್ಕೆ ಕಮರ್ಷಿಯಲ್ ಸ್ಪರ್ಷವನ್ನು ನೀಡಿದ್ದಾರೆ. ಆ ಕಾಲದ ರಾಮಾಯಣವನ್ನು ಈ ಕಾಲಕ್ಕೆ ಅನುಗುಣವಾಗಿ ಬದಲಿಸಿ ಬೆಳ್ಳಿ ತೆರೆಯ ಮೂಲಕ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಸಿಂಗಂ ಅಗೇನ್ ಸದ್ಯದ ಉದಾಹರಣೆ

ಹೌದು, ಪೊಲೀಸ್‌ ಜಾನರ್‌ನ ಸಿನಿಮಾಗಳಿಂದಲೇ ಜಗದ್ವಿಖ್ಯಾತಿಯನ್ನು ಗಳಿಸಿದ ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಂ ಅಗೇನ್ ಚಿತ್ರ ಇಂದು ವಿಶ್ವದೆಲ್ಲೆಡೆ ಬಿಡುಗಡೆಯಾಗಿದೆ. ಪ್ರೇಕ್ಷಕರ ಪ್ರೀತಿಗೆ ಕೂಡ ಚಿತ್ರ ಪಾತ್ರವಾಗಿದೆ. ಹಾಗಿದ್ದರೆ ಸಿಂಗಂ ಅಗೇನ್ ಚಿತ್ರ ಹೇಗಿದೆ..? ಪ್ರೇಕ್ಷಕರು ಹೇಳಿದ್ದೇನು ಎನ್ನುವುದನ್ನು ತಿಳಿಯಲು ಮುಂದೆ ಓದಿ.

singham-again-twitter-review-netizens-react-to-ajay-devgn-s-action-packed-blockbuster

5ಕ್ಕೆ 4 ಸ್ಟಾರ್ ನೀಡಿದ ತರಣ್ ಆದರ್ಶ್‌

ಬಾಲಿವುಡ್‌ನ ಹೆಸರಾಂತ ಟ್ರೆಡ್ ಪಂಡಿತ ಮತ್ತು ವಿಶ್ಲೇಷಕ ವಿಮರ್ಷಕ ತರಣ್ ಆದರ್ಶ್ ಸಿಂಗಂ ಅಗೇನ್ ಚಿತ್ರವನ್ನು ಬಾಯ್ತುಂಬ ಹೊಗಳಿದ್ದಾರೆ. ಅದ್ಭುತವಾದ ಚಿತ್ರ, ಅದ್ಭುತವಾದ ಪಾತ್ರವರ್ಗ ಚಿತ್ರಕ್ಕೆ ಐದರಲ್ಲಿ ನಾಲ್ಕು ಸ್ಟಾರ್ ಕೊಡಬಹುದು ಎಂದಿರುವ ತರಣ್ ಆದರ್ಶ್ ಚಿತ್ರದಲ್ಲಿನ ಸಾಹಸ ಸನ್ನಿವೇಶಗಳು ಭಯಂಕರವಾಗಿ ಮೂಡಿ ಬಂದಿವೆ ಎಂದಿದ್ದಾರೆ. ಸಿಂಗಂ ಬ್ರ್ಯಾಂಡ್‌ನ್ನು ರೊಹೀತ್ ಶೆಟ್ಟಿ ಇನ್ನೂ ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದಿರುವ ತರಣ್ ಆದರ್ಶ್ ಕೊನೆಯಲ್ಲಿ ಒಂದೊಳ್ಳೆ ಸರ್ಪ್ರೈಸ್ ಇದೆ ಎಂದು ಹೇಳಿದ್ದಾರೆ.

ಅಜಯ್ ದೇವಗನ್ ಚಿತ್ರದ ಬಹುದೊಡ್ಡ ಶಕ್ತಿ

ಚಿತ್ರದ ಕುರಿತು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸಂದೀಪ್ ಯಾದವ್ ಎಂಬ ಚಿತ್ರ ಪ್ರೇಮಿ, ಸಿಂಗಂ ಅಗೇನ್ ಚಿತ್ರದ ಬಹುದೊಡ್ಡ ಶಕ್ತಿ ಅಜಯ್ ದೇವಗನ್ ಎಂದು ಹೇಳಿದ್ದಾರೆ. ಅನಾಯಾಸವಾಗಿ ಚಿತ್ರ 500 ಕೋಟಿಯನ್ನು ಕೊಳ್ಳೆ ಹೊಡೆಯುತ್ತೆ ಎಂದು ಬರೆದುಕೊಂಡಿದ್ಧಾರೆ.

ದೀಪಿಕಾ ಸೂಪರ್ ರಣ್ವೀರ್ ಸಿಂಗ್ ಜೋಕರ್.

ಆಪ್ಕೀ ರಾಣಿ ಎಂಬ ಖಾತೆಯಿಂದ ವಿಮರ್ಷೆಯನ್ನು ಒಬ್ಬರು ಮಾಡಿದ್ದು ದೀಪಿಕಾ ಪಡುಕೋಣೆಯ ಪಾತ್ರ ಅಚ್ಚರಿಗೆ ದೂಡುತ್ತೆ ಎಂದು ಹೇಳಿದ್ದಾರೆ. ಆದರೆ ರಣ್ವೀರ್ ಸಿಂಗ್ ಪಾತ್ರ ನಿರಾಸೆ ಮಾಡಿತು ಎಂದಿರುವ ಇವರು ಅಕ್ಷಯ್ ಕುಮಾರ್ ಅವರ ಆಕ್ಷನ್ ಸಿಕ್ವೆನ್ಸ್‌ಗಳಿಗೆ ಪೂರ್ತಿ ಅಂಕ ನೀಡಿದ್ದಾರೆ. ಅಕ್ಷಯ್ ಕುಮಾರ್ ಅವರನ್ನು ತೆರೆ ಮೇಲೆ ನೋಡುವುದೇ ಚೆಂದದ ಅನುಭವ ಎಂದಿದ್ದಾರೆ. ಇನ್ನೂ ಅರ್ಜುನ್ ಕಪೂರ್ ಪಾತ್ರಕ್ಕೆ ಸೂಕ್ತವಲ್ಲ ಆದರೂ ತಮ್ಮ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿದ್ದಾರೆ ಎನ್ನುವ ಅಭಿಪ್ರಾಯವನ್ನು ಇವರು ವ್ಯಕ್ತಪಡಿಸಿದ್ದಾರೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತ ವಿಎಫ್‌ಎಕ್ಸ್ ಕೆಲಸ ಚೆನ್ನಾಗಿ ಮೂಡಿಬಂದಿದೆ ಎಂದಿದ್ದಾರೆ.

ಇಡೀ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತೆ.

ಬಾಲಿವುಡ್‌ನ ಮತ್ತೊಬ್ಬ ಜನಪ್ರಿಯ ವಿಮರ್ಷಕ ಕೋಮಲ್ ನೆಹ್ತಾ ಈ ಚಿತ್ರದಲ್ಲಿ ರಾಮಾಯಣವನ್ನು ಈ ಕಾಲಕ್ಕೆ ಕನೆಕ್ಟ್ ಮಾಡಿರುವ ರೀತಿ ಅತ್ಯದ್ಭುತವಾಗಿದೆ. ಆಕ್ಷನ್, ಸೆಂಟಿಮೆಂಟ್, ಮೆಲೊಡ್ರಾಮಾಗೆ ಚಿತ್ರದಲ್ಲಿ ಕೊರತೆ ಇಲ್ಲ ಎಂದಿದ್ದಾರೆ. ನಕ್ಕು ನಗಿಸುವ ಹಲವು ಸನ್ನಿವೇಶಗಳು ಚಿತ್ರದಲ್ಲಿವೆ ಎಂದಿದ್ದಾರೆ. ಫ್ಯಾಮಿಲಿ ಆಡಿಯನ್ಸ್‌ಗೆ ಹೇಳಿ ಮಾಡಿಸಿದ ಕಮರ್ಷಿಯಲ್ ಸಿನಿಮಾ ಇದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹೀಗೆ ಹಲವಾರು ಪ್ರೇಕ್ಷಕರು ಸಿಂಗಂ ಅಗೇನ್ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಕೆಲವು ಪ್ರೇಕ್ಷಕರು ಚಿತ್ರದ ಕುರಿತು ಅಪಸ್ವರ ತೆಗೆಯುತ್ತಿದ್ದಾರೆ. ನಿರೀಕ್ಷೆಯ ಮಟ್ಟಕ್ಕೆ ಚಿತ್ರ ಮೂಡಿ ಬಂದಿಲ್ಲ ಎನ್ನುತ್ತಿದ್ದಾರೆ. ಇನ್ನೂ ಮೊದಲ ದಿನ ಚಿತ್ರಕ್ಕೆ ಅದ್ಭುತವಾದ ಓಪನಿಂಗ್ ಸಿಕ್ಕಿದ್ದು ಗಲ್ಲಾಪೆಟ್ಟಿಗೆಯಲ್ಲಿ ಹಣದ ಹೊಳೆ ಹರಿಯುವ ನಿರೀಕ್ಷೆ ಇದೆ.

More from Filmibeat

Read more about: ajay devgn bollywood review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X