For Quick Alerts
  ALLOW NOTIFICATIONS  
  For Daily Alerts

  Review: ಭರಪೂರ ಮನರಂಜನೆ ಕೊಡ್ತಾರೆ ಭರತ, ಬಾಹುಬಲಿ

  |

  ಚಿತ್ರ:ಶ್ರೀ ಭರತ ಬಾಹುಬಲಿ

  ನಿರ್ದೇಶನ: ಮಂಜು ಮಾಂಡವ್ಯ

  ನಟನೆ: ಮಂಜು ಮಾಂಡವ್ಯ, ಚಿಕ್ಕಣ್ಣ, ಸರಾ ಹರೀಶ್

  ನಾಳೆ (ಶುಕ್ರವಾರ) ಕನ್ನಡದ 3 ಸಿನಿಮಾಗಳು ಬಿಡುಗಡೆನಾಳೆ (ಶುಕ್ರವಾರ) ಕನ್ನಡದ 3 ಸಿನಿಮಾಗಳು ಬಿಡುಗಡೆ

  Rating:
  3.5/5

  ನಿರ್ದೇಶಕ ಮಂಜು ಮಾಂಡವ್ಯ ಒಳ್ಳೆಯ ರೈಟರ್. ಡೈಲಾಗ್ ಹಾಗೂ ಕಾಮಿಡಿಯಲ್ಲಿ ಅವರು ಎತ್ತಿದ ಕೈ. 'ಶ್ರೀ ಭರತ ಬಾಹುಬಲಿ'ಯಲ್ಲಿಯೂ ಇದು ಮತ್ತೆ ಸಾಬೀತಾಗಿದೆ. ಒಂದು ಹಳ್ಳಿಯಲ್ಲಿ ನಡೆಯುವ, ಸಾಕಷ್ಟು ಕಾಮಿಡಿ ಅಂಶಗಳನ್ನು ಹೊಂದಿರುವ ಚಿತ್ರ ಇದಾಗಿದೆ. ಮನರಂಜನೆ ನೀಡುವಲ್ಲಿ ಸಿನಿಮಾ ಯಶಸ್ವಿಯಾಗಿದೆ.

  ತುಂಡ್ ಹೈಕ್ಳು ಸಹವಾಸ

  ತುಂಡ್ ಹೈಕ್ಳು ಸಹವಾಸ

  ಒಂದು ಹಳ್ಳಿ. ಆ ಹಳ್ಳಿಯಲ್ಲಿ ಇಬ್ಬರು ತುಂಡ್ ಹೈಕ್ಳು. ಅವರೇ ಭರತ (ಮಂಜು ಮಾಂಡವ್ಯ) ಮತ್ತು ಬಾಹುಬಲಿ (ಚಿಕ್ಕಣ್ಣ). ಊರಿನ ಜನಕ್ಕೆ ಇಬ್ಬರ ಕಾಟ ತಡೆಯಲು ಆಗುವುದಿಲ್ಲ. ಹೀಗೆ ತರ್ಲೆ, ತಮಾಷೆಯ ನಡುವೆ ಇದ್ದ ಹುಡುಗರ ಕಥೆ ಜೈಲು ಪಾಲಾಗಬೇಕಾಗುತ್ತದೆ. ಇಷ್ಟು ಅಂಶಗಳು ಪ್ರಾರಂಭದಲ್ಲಿಯೇ ಬರುತ್ತದೆ.

  ಪೂರ್ವ ಜನ್ಮ ಹುಡುಕಿಕೊಂಡು ಬರುವ ನಾಯಕಿ

  ಪೂರ್ವ ಜನ್ಮ ಹುಡುಕಿಕೊಂಡು ಬರುವ ನಾಯಕಿ

  ಈ ವೇಳೆಗೆ ವಿದೇಶದಿಂದ ತನ್ನ ಪೂರ್ವ ಜನ್ಮವನ್ನು ಹುಡುಕಿಕೊಂಡು ನಾಯಕಿ ಶ್ರೀ (ಸರಾ ಹರೀಶ್) ಬರುತ್ತಾಳೆ. ಅಲ್ಲಿಂದ ಸಿನಿಮಾದ ಮುಖ್ಯ ಕಥೆ ತೆರೆದುಕೊಳ್ಳುತ್ತದೆ. ಭರತ ಹಾಗೂ ಬಾಹುಬಲಿ ವಿದೇಶದಿಂದ ಬಂದ ಶ್ರೀಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ಎನ್ನುವುದೇ ಸಿನಿಮಾದ ನಿರೂಪಣೆಯಾಗಿದೆ. ಸಿನಿಮಾದ ಸ್ಟೋರಿ ಲೈನ್ ಇದಾಗಿದ್ದರೂ, ಅದರ ಒಳಗೆ ಅನೇಕ ಅಂಶಗಳನ್ನು ಸೇರಿಸಿದ್ದಾರೆ.

  ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ

  ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ

  ಮೊದಲ ಬಾರಿಗೆ ನಾಯಕನಾಗಿ ಮಂಜು ಮಾಂಡವ್ಯ ನಟಿಸಿದ್ದು, ಅವರ ನಟನೆ ಹೇಗಿದೆ ಎನ್ನುವ ಕುತೂಹಲ ಎಲ್ಲರಿಗೂ ಇತ್ತು. ಮಂಜು ಮಾಂಡವ್ಯ ಹಳ್ಳಿ ಹುಡುಗನಾಗಿ ಕಾಮಿಡಿ ದೃಶ್ಯಗಳಲ್ಲಿ ತುಂಬ ಚೆನ್ನಾಗಿ ನಟಿಸಿದ್ದಾರೆ. ಚಿಕ್ಕಣ್ಣ ಎಂದಿನಂತೆ ಮಿಂಚಿದ್ದಾರೆ, ಇಬ್ಬರ ಕಾಂಬಿನೇಶನ್ ಚೆನ್ನಾಗಿದೆ. ನಾಯಕಿ ಗ್ಲಾಮರ್ ಹಾಗೂ ಆಕ್ಟಿಂಗ್ ಎರಡರ ಮಿಶ್ರಣ. ಒಂದು ದೃಶ್ಯದಲ್ಲಿ ರಿಷಿ ಒಂದು ಹೋಗುತ್ತಾರೆ. ಉಳಿದ ಎಲ್ಲ ಕಲಾವಿದರು, ಪಾತ್ರಕ್ಕೆ ತಕ್ಕ ಹಾಗೆ ನಟಿಸಿದ್ದಾರೆ.

  ಸಂಭಾಷಣೆಗಳು ಹಾಗೂ ಹಾಸ್ಯ

  ಸಂಭಾಷಣೆಗಳು ಹಾಗೂ ಹಾಸ್ಯ

  ಮಂಜು ಮಾಂಡವ್ಯ ಡೈಲಾಗ್ ಗಳಿಗೆ ಹೆಸರುವಾಸಿ. ಇಲ್ಲಿಯೂ ಅವರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಸಂಭಾಷಣೆಗಳು ಮಜಾ ನೀಡುತ್ತವೆ. ಕಾಮಿಡಿ ದೃಶ್ಯಗಳು, ಪಂಚಿಂಗ್ ಡೈಲಾಗ್ ಗಳು ಸಿನಿಮಾದ ಪ್ಲೆಸ್ ಪಾಯಿಂಟ್ ಗಳು. ಆದರೆ, ಕೆಲವು ದೃಶ್ಯಗಳನ್ನು ಕಾಮಿಡಿಗಾಗಿಯೇ ಸೇರಿಸಿದ ಹಾಗಿದೆ.

  ಮೂರು ಹಾಡುಗಳು ಇಷ್ಟ ಆಗುತ್ತೆ

  ಮೂರು ಹಾಡುಗಳು ಇಷ್ಟ ಆಗುತ್ತೆ

  ಮಣಿಕಾಂತ್ ಕದ್ರಿ ಹಿನ್ನಲೆ ಸಂಗೀತ ಹಾಗೂ ಹಾಡುಗಳು ಚೆನ್ನಾಗಿದೆ. ಮೂರು ಹಾಡುಗಳು ಇಷ್ಟ ಆಗುತ್ತವೆ. ಸಿನಿಮಾದ ಕೆಲವು ದೃಶ್ಯಗಳನ್ನು ಹಾಡಿನ ಮೂಲಕವೇ ಹೇಳಿದ್ದಾರೆ. ಸಿನಿಮಾಟೋಗ್ರಾಫಿ ಚೆನ್ನಾಗಿದೆ. ಹಳ್ಳಿಯ ನೆಟಿವಿಟಿಯನ್ನು ಚೆನ್ನಾಗಿ ತೋರಿಸಿದ್ದಾರೆ. ಭಾಷೆ ಮಜಾ ನೀಡುತ್ತದೆ.

  ಕೆಲವೊಂದು ದೃಶ್ಯಗಳಿಗೆ ಕಡಿವಾಣ ಹಾಕಬೇಕಿತ್ತು

  ಕೆಲವೊಂದು ದೃಶ್ಯಗಳಿಗೆ ಕಡಿವಾಣ ಹಾಕಬೇಕಿತ್ತು

  ಸಿನಿಮಾದ ಚಿತ್ರಕಥೆಯ ಮೂಲಕ ಪ್ರೇಕ್ಷಕರಿಗೆ ಆಟ ಆಡಿಸಿದ್ದಾರೆ. ಮೊದಲು ಮುಂದೆ ಬಂದು, ಆಮೇಲೆ ಹಿಂದಿನ ದೃಶ್ಯ ಬಂತು, ಕನಸು ತೋರಿಸಿ, ಭ್ರಮೆ ನಿಜ ಹೀಗೆ ಇವುಗಳ ಮೂಲಕ ಪ್ರೇಕ್ಷಕರಿಗೆ ಥ್ರಿಲ್ ನೀಡಿದ್ದಾರೆ. ಸಿನಿಮಾ ಅವಧಿ ಕೊಂಚ ಹೆಚ್ಚಾಯ್ತು ಅನಿಸುತ್ತದೆ. ಫಸ್ಟ್ ಹಾಫ್ ನಲ್ಲಿ ಬರುವ ಕೆಲವೊಂದು ದೃಶ್ಯಗಳು ಅಗತ್ಯ ಇರಲಿಲ್ಲ ಎನ್ನಿಸುತ್ತದೆ.

  ಮನರಂಜನೆ ಸಿಗುತ್ತೆ

  ಮನರಂಜನೆ ಸಿಗುತ್ತೆ

  ಸಿನಿಮಾ ಇರುವುದೇ ಮನರಂಜನೆಗೆ ಎನ್ನುವವರು ಈ ಚಿತ್ರವನ್ನು ಆರಾಮಾಗಿ ನೋಡಬಹುದು. ಚಿತ್ರಮಂದಿರಕ್ಕೆ ಹೋಗಿ ನಕ್ಕು ಬರಬಹುದು.

  English summary
  Sri Bharatha Baahubali kannada movie review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X