GST Review: ಲಕ್ಕಿಯ 'ಅನ್‌ಲಕ್ಕಿ' ಕಥೆ; ಸೃಜನ್‌ಗೆ ಬುದ್ದಿ ಹೇಳೋಕೆ ಎದ್ದು ಬಂದ ದೆವ್ವಗಳು

By ಯಶವಂತ್

Rating:
2.5/5
Star Cast: Srujan Lokesh, Rajini Bharadwaj, Niveditha Gowda,
Director: Srujan Lokesh

ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳಲ್ಲಿ ಸೃಜನ್ ಲೋಕೇಶ್ ಪ್ರಥಮ ಬಾರಿಗೆ ನಿರ್ದೇಶಿಸಿರುವ 'GST' ಕೂಡ ಒಂದು. ಈಗಾಗಲೇ ಸೃಜನ್ ಲೋಕೇಶ್ ಹೇಳಿರುವಂತೆ ಹಾಸ್ಯಕ್ಕೆ ಪ್ರಾಮುಖ್ಯತೆ ನೀಡಿರುವ ಸಿನಿಮಾ. ಸ್ಯಾಂಡಲ್‌ವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆ ಸಂದೇಶ್ ಎನ್ ನಿರ್ಮಿಸಿರುವ ಈ ಸಿನಿಮಾ ನವೆಂಬರ್ 28ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಅದಕ್ಕೂ ಮುನ್ನ ಈ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನ ಆಗಿದೆ.

ಸೃಜನ್ ಲೋಕೇಶ್ ಜೊತೆ ಅವರ ಅಮ್ಮ ಹಾಗೂ ಹಿರಿಯ ನಟಿ ಗಿರಿಜಾ ಲೋಕೇಶ್ ಹಾಗೂ ಪುತ್ರ ಸುಕೃತ್ ನಟಿಸಿದ್ದಾರೆ. ಈ ಮೂಲಕ ಒಂದೇ ಕುಟುಂಬದ ಮೂರು ತಲೆಮಾರು ಒಂದೇ ಸಿನಿಮಾದಲ್ಲಿ ನಟಿಸಿರೋದು ವಿಶೇಷ. ಮನರಂಜನೆಯನ್ನೇ ಪ್ರಧಾನವಾಗಿಟ್ಟುಕೊಂಡಿರುವ 'GST' ಪ್ರೇಕ್ಷಕರನ್ನು ರಂಜಿಸುವುದಕ್ಕೆ ತುದಿಗಾಲಲ್ಲಿ ನಿಂತಿದೆ.

Srujan Lokesh  Niveditha Gowda movie GST review and rating in Kannada

ಇನ್ನು ಸೃಜನ್ ಲೋಕೇಶ್‌ಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸಿದ್ದಾರೆ. ಹಾಗೇ ಇವರೊಂದಿಗೆ ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ, ಶೋಭರಾಜ್, ಶರತ್ ಲೋಹಿತಾಶ್ವ, ತಬಲ ನಾಣಿ, ರವಿಶಂಕರ್ ಗೌಡ, ನಿವೇದಿತಾ ಗೌಡ ಸೇರಿದಂತೆ ಕನ್ನಡ ಚಿತ್ರರಂಗದ ಜನಪ್ರಿಯ ಕಲಾವಿದರು ನಟಿಸಿದ್ದಾರೆ. ಹಾಗಿದ್ದರೆ, 'GST' ಸಿನಿಮಾದ ಕಥೆ ಏನು? ಪ್ಲಸ್ ಏನು? ಮೈನಸ್ ಏನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'GST' ಕಥೆಯೇನು?

'GST' ಸಿನಿಮಾ ಶುರುವಾಗುವುದೇ ಸೃಜನ್ ಲೋಕೇಶ್ ಆತ್ಮಹತ್ಯೆಗೆ ಯತ್ನಿಸುವ ದೃಶ್ಯದಿಂದ. ಆತ್ಮ*ಹತ್ಯೆ ಮಾಡಿಕೊಳ್ಳುವುದಕ್ಕೆಂದು ಸೃಜನ್ ಸ್ಮಶಾನಕ್ಕೆ ಹೋಗುತ್ತಾರೆ. ಆದರೆ, ಅಲ್ಲಿಗೆ ಹೋದಾಗ ದೆವ್ವಗಳು ಮಾತಾಡುವುದು ಸೃಜನ್‌ಗೆ ಕೇಳುತ್ತೆ. ನಮ್ಮ ಮಾತು ಸೃಜನ್ ಕೇಳುತ್ತಿದೆ ಅಂತ ಅರಿತ ದೆವ್ವಗಳು ಸೂಸೈ*ಡ್ ಮಾಡಿಕೊಳ್ಳುವುದಕ್ಕೆ ಬಿಡುವುದಿಲ್ಲ.
ಹೀಗಾಗಿ ಎರಡನೇ ಬಾರಿ ಬಂದಾಗ ಆ ದೆವ್ವಗಳೆಲ್ಲ ಕಾಣಿಸಿಕೊಳ್ಳುತ್ತೆ. ದೆವ್ವಗಳು ಯಾಕೆ ಸೂಸೈ*ಡ್‌ ಮಾಡಿಕೊಳ್ಳುತ್ತಿದ್ದೀಯಾ ಅಂತ ಕೇಳಿದಾಗ, ಸೃಜನ್ ಸ್ಟೋರಿ ಓಪನ್ ಆಗುತ್ತೆ. ಲಕ್ಕಿ (ಸೃಜನ್ ಲೋಕೇಶ್) ಈತ ಹೆಸರಿಗಷ್ಟೇ ಲಕ್ಕಿ. ಆದರೆ, ಹುಟ್ಟಿದ ದಿನದಿಂದಲೂ ಅನ್‌ಲಕ್ಕಿ. ಲಕ್ಕಿಯ ತಂದೆ ಅಶೋಕ್, ತಾಯಿ ವಿನಯ ಪ್ರಸಾದ್. ಈತ ಯಾವ ಮಟ್ಟಿಗೆ ಅನ್‌ಲಕ್ಕಿ ಅಂದರೆ, ಹುಟ್ಟಿದ ದಿನದಿಂದಲೇ ಅಪ್ಪನಿಗೆ ಬ್ಯುಸಿನೆಸ್‌ನಲ್ಲಿ ಲಾಸ್ ಆಗುತ್ತೆ. ಮನೆಯವರೆಲ್ಲ ಸೇರಿ ಲಕ್ಕಿ ಬ್ಯುಸಿನೆಸ್ ಹಾಕಿಕೊಡುತ್ತಾರೆ. ಲಾಕ್‌ಡೌನ್ ಆಗುತ್ತೆ. ಹೀಗಾಗಿ ಲಕ್ಕಿ ಅಂತ ಮನೆಯಿಂದ ಓಡಿಸುತ್ತಾರೆ. ಈ ದುರಂತ ಕಥೆಯನ್ನು ದೆವ್ವಗಳ ಹತ್ತಿರ ಲಕ್ಕಿ ಹೇಳಿಕೊಳ್ಳುತ್ತಾನೆ. ಇಲ್ಲಿಂದ ಕಥೆ ಬೇರೆ ಹಾದಿಯನ್ನು ಹಿಡಿಯುತ್ತೆ. ಅದೇನು ಅಂತ ಸಿನಿಮಾದಲ್ಲಿಯೇ ನೋಡಬೇಕು.

ಪರ್ಫಾಮೆನ್ಸ್ ಹೇಗಿದೆ?

'ಲಕ್ಕಿ' ಪಾತ್ರದಲ್ಲಿ ಸೃಜನ್ ಲೋಕೇಶ್ ಅಭಿನಯ ಇಷ್ಟ ಆಗುತ್ತೆ. ದೆವ್ವದ ಅವತಾರದಲ್ಲಿ ತಬಲ ನಾಣಿ, ಸೃಜನ್ ಮಗ, ಗಿರಿಜಾ ಲೋಕೇಶ್, ವಿನೋದ್ ಗೊಬ್ಬರಗಾಲ ನಟಿಸಿದ್ದು, ಅವರೂ ಇಷ್ಟ ಆಗುತ್ತಾರೆ. ಸೆಕೆಂಡ್ ಹಾಫ್‌ನಲ್ಲಿ ಬರುವ ಶೋಭರಾಜ್, ರವಿಶಂಕರ್ ಗೌಡ ಹಾಗೇ ಸೃಜನ್ ಲೋಕೇಶ್ ಸ್ನೇಹಿತನ ಪಾತ್ರದಲ್ಲಿ ನಟಿಸಿರುವ ಗಿರಿ ಪ್ರೇಕ್ಷಕರನ್ನು ತಮ್ಮ ಹಾಸ್ಯ ಪ್ರಜ್ಞೆಯಿಂದ ನಗಿಸುತ್ತಾರೆ.

'GST' ಪ್ಲಸ್‌ ಏನು?

'GST' ಸಿನಿಮಾದ ಮೊದಲಾರ್ಧದಲ್ಲಿ ಏನೂ ವಿಶೇಷತೆ ಇಲ್ಲ. ಆದರೆ, ಸೆಕೆಂಡ್ ಹಾಫ್‌ನಲ್ಲಿರುವ ಕಾಮಿಡಿ ಪ್ರೇಕ್ಷಕರನ್ನು ನಗೆಗಡಲ್ಲಿ ನಗಿಸುತ್ತೆ. ಅದರಲ್ಲೂ ಗ್ಯಾಂಗ್‌ ಒಂದರ ಲೀಡರ್ ಆಗಿರುವ ಶೋಭರಾಜ್, ಬ್ಯಾಂಕ್ ಮ್ಯಾನೇಜರ್ ಪಾತ್ರದಲ್ಲಿ ಮಿಂಚಿರುವ ರವಿಶಂಕರ್ ಗೌಡ ಇಷ್ಟ ಆಗುತ್ತಾರೆ. ಇವರೊಂದಿಗೆ ಸೃಜನ್ ಲೋಕೇಶ್ ಸ್ನೇಹಿತನ ಪಾತ್ರದಲ್ಲಿ ನಟಿಸಿರುವ ಗಿರಿ ಕಾಮಿಡಿ ಹೈಲೈಟ್ ಆಗುತ್ತೆ. ಹೀಗಾಗಿ ಸೆಕೆಂಡ್ ಹಾಫ್ ಸಿನಿಮಾದ ಪ್ಲಸ್ ಪಾಯಿಂಟ್.

Srujan Lokesh  Niveditha Gowda movie GST review and rating in Kannada

'GST' ಮೈನಸ್ ಏನು?

ಸೃಜನ್ ಲೋಕೇಶ್ ನಿರ್ದೇಶಿಸಿರುವ 'GST' ಫಸ್ಟ್‌ ಹಾಫ್ ಲ್ಯಾಗ್ ಇದೆ ಅಂತ ಅನಿಸುತ್ತೆ. ಕಥೆಯಲ್ಲಿ ಹೊಸತನ ಇಲ್ಲ ಅಂತ ಅನಿಸುತ್ತೆ. ಕೆಲವು ಕಡೆ ಕಥೆಯನ್ನು ಎಳೆದಿದ್ದಾರೆ ಅಂತ ಅನಿಸುತ್ತೆ. ಈ ಸಿನಿಮಾದ ನಾಯಕಿ ರಜನಿ ಭಾರದ್ವಾಜ್ ನಟನೆಯಲ್ಲಿ ಇನ್ನೂ ಪಳಗಬೇಕು. ಒಂದು ಐಟಂ ಸಾಂಗ್ ಬಿಟ್ಟರೆ, ಉಳಿದ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಇನ್ನು ಹಿನ್ನೆಲೆ ಸಂಗೀತ ಕೂಡ ಸಿನಿಮಾವನ್ನು ಮತ್ತಷ್ಟು ಕುಗ್ಗಿಸುತ್ತೆ.

ಕೊನೆಯಲ್ಲಿ ಏನು?

ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸೃಜನ್ ಲೋಕೇಶ್ ಕೆಲವು ಕಡೆ ಎಡವಿದ್ದಾರೆ. 'GST' ಅದ್ಬುತ ಸಿನಿಮಾ ಅಲ್ಲದೇ ಹೋದರೂ, ಕಾಮಿಡಿಯನ್ನು ಇಷ್ಟ ಪಡುವವರಿಗೆ ಇಷ್ಟ ಆಗುತ್ತೆ. ಕಂಟೆಂಟ್ ಬೇಕು ಅನ್ನೋರಿಗೆ ನಿರಾಸೆ ಆಗಬಹುದು.

More from Filmibeat

English summary
Srujan Lokesh, Niveditha Gowda movie GST review and rating in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X