twitter
    For Quick Alerts
    ALLOW NOTIFICATIONS  
    For Daily Alerts

    ನಾ ನೋಡಿದ ಪೈಲ್ವಾನ್: ತಪ್ಪು ಒಪ್ಪಿನ ನಡುವೆ 'ಒಪ್ಪಿ, ಅಪ್ಪಿಕೊಳ್ಳಬಹುದಾದ' ಚಿತ್ರ

    By ಬಾಲರಾಜ್ ತಂತ್ರಿ
    |

    Recommended Video

    Pailwaan : ಅಭಿನಯ ಚಕ್ರವರ್ತಿ ಸುದೀಪ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಗೆಲ್ಲುತ್ತಾ..? | Sudeep

    ಗಾಂಧಿನಗರದಲ್ಲಿ ಸದ್ಯ ಪೈಲ್ವಾನ್ ಚಿತ್ರದ್ದೇ ಮಾತು. ಒಂದು ಕಡೆ ಪೈಲ್ವಾನ್ ಚಿತ್ರದ ಪಾಸಿಟಿವ್, ನೆಗೆಟೀವ್ ಅಂಶದ ಬಗ್ಗೆ, ಇನ್ನೊಂದು ಕಡೆ, ಸಾಮಾಜಿಕ ತಾಣದಲ್ಲಿ ಕನ್ನಡದ ಎರಡು ಸ್ಟಾರ್ ನಟರ ಅಭಿಮಾನಿಗಳ ಅನಾವಶ್ಯಕ ವಾಕ್ಸಮರ.

    ಹಿಂದೊಮ್ಮೆ, ಚಿತ್ರ ವಿಮರ್ಶಕರು ಒಂದು ಮಾತನ್ನು ಹೇಳಿದ್ದರು. ಚಿತ್ರ ನೋಡಿ ಹೊರಬರುವಾಗ ಪ್ರೇಕ್ಷಕ ಚಿತ್ರದ ಕೆಲವೊಂದು ಸನ್ನಿವೇಶ, ಪಾತ್ರದ ಬಗ್ಗೆ ಮಾತನಾಡುತ್ತಿದ್ದಾನೆಂದರೆ, ಚಿತ್ರ ಬಹುತೇಕ ಗೆದ್ದಂತೆ. ಅದರಂತೇ, ಪೈಲ್ವಾನ್ ಚಿತ್ರ ಒಂದು ಹಂತಕ್ಕೆ ರೀಚ್ ಆಗಿದೆ.

    Pailwan Review : ಕ್ರೀಡಾ ಹಿನ್ನೆಲೆಯ ಭಾವನಾತ್ಮಕ ಸಿನಿಮಾPailwan Review : ಕ್ರೀಡಾ ಹಿನ್ನೆಲೆಯ ಭಾವನಾತ್ಮಕ ಸಿನಿಮಾ

    ದೊಡ್ಡ ಬಜೆಟಿನ, ಬಹುನಿರೀಕ್ಷಿತ ಚಿತ್ರ ಎಂದ ಮೇಲೆ, ನಿರೀಕ್ಷೆಯೂ ಬೆಟ್ಟದಷ್ಟು ಇರುವುದು ಸಾಮಾನ್ಯ. ಆದರೆ, ಪೈಲ್ವಾನ್ ಚಿತ್ರದ ನಿರ್ದೇಶಕರಾದ ಕೃಷ್ಣ ಅವರ ಹಿಂದಿನ ಎರಡು ಸಿನಿಮಾಗಳಾದ ಗಜಕೇಸರಿ ಮತ್ತು ಹೆಬ್ಬುಲಿ ನಿರೀಕ್ಷಿತ ಮಟ್ಟದಲ್ಲಿ ದಡ ಸೇರದೇ ಇದ್ದಿದ್ದರಿಂದ, ಪೈಲ್ವಾನ್ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇತ್ತೂ ಎನ್ನಬಹುದು, ಇರಲಿಲ್ಲ ಎಂದರೂ ನಿರ್ದೇಶಕರು ಬೇಸರಿಸಿಕೊಳ್ಳಬಾರದು.

    'ಪೈಲ್ವಾನ್' ನೋಡಿ ವಿಮರ್ಶಕರು ಏನ್ ಹೇಳಿದ್ರು?, ಎಷ್ಟು ಸ್ಟಾರ್ ಕೊಟ್ರು?'ಪೈಲ್ವಾನ್' ನೋಡಿ ವಿಮರ್ಶಕರು ಏನ್ ಹೇಳಿದ್ರು?, ಎಷ್ಟು ಸ್ಟಾರ್ ಕೊಟ್ರು?

    ಪೈಲ್ವಾನ್ ಚಿತ್ರದಲ್ಲಿ ಒಪ್ಪುವಂತಹ ಸಾಕಷ್ಟು ಸನ್ನಿವೇಶಗಳಿವೆ, ಅದೇ ರೀತಿ ಕತ್ತರಿ ಹಾಕಬಹುದಾಗಿದ್ದ ಸೀನ್ ಗಳೂ ಇವೆ. ಆದರೆ, ಅವೆಲ್ಲವನ್ನೂ ಮೀರಿ ಎರಡೂವರೆ ಗಂಟೆ ಚಿತ್ರ ನೋಡಿ ಹೊರಬರುವ ಪ್ರೇಕ್ಷಕನಿಗೆ ಸಿನಿಮಾ ಖುಷಿ ಕೊಟ್ಟಿದೆಯೋ ಎನ್ನುವುದು ಮುಖ್ಯವಾಗುತ್ತದೆ. ಮತ್ತು, ಅದರ ಮೇಲೆಯೇ ಬಾಕ್ಸಾಫೀಸ್ ಕಲೆಕ್ಷನ್ ಕೂಡಾ ನಿಲ್ಲುವುದು. ಹಾಗಾಗಿ, ಒಟ್ಟಾರೆ ಮನೋರಂಜನೆಯ ವಿಚಾರಕ್ಕೆ ಬಂದಾಗ, ಪೈಲ್ವಾನ್, ಇದರಲ್ಲಿ ಬಹುತೇಕ ಯಶಸ್ವಿಯಾಗಿದೆ.

    ಪೈಲ್ವಾನ್ ಚಿತ್ರ ಐದು ಭಾಷೆಯಲ್ಲಿ ರಿಲೀಸ್ ಆಗಿರುವ ಸಿನಿಮಾ

    ಪೈಲ್ವಾನ್ ಚಿತ್ರ ಐದು ಭಾಷೆಯಲ್ಲಿ ರಿಲೀಸ್ ಆಗಿರುವ ಸಿನಿಮಾ

    ಪೈಲ್ವಾನ್ ಚಿತ್ರ ಐದು ಭಾಷೆಯಲ್ಲಿ ರಿಲೀಸ್ ಆಗಿರುವ ಸಿನಿಮಾ. ದಕ್ಷಿಣದ ಚಿತ್ರಗಳೆಂದರೆ, ಅದು ಹೀರೋ ಓರಿಯೆಂಟೆಡ್ ಸಿನಿಮಾ, ಪೈಲ್ವಾನ್ ಸಿನಿಮಾ ಕೂಡಾ ಅದೇ ರೀತಿಯಲ್ಲಿ ಸಾಗುವ ಚಿತ್ರ. ಚಿತ್ರದಲ್ಲಿ ಬರುವ ಮೊದಲ ಹಾಡಿಗೆ ಬಳಸಿದ ಸೆಟ್, ನೂರಾರು ಕಲಾವಿದರಿಗೆ ಇದರಿಂದ ಸಿಕ್ಕ ದುಡಿಮೆ ಕಣ್ಣು ಕೋರೈಸುತ್ತದೆ. ಆದರೆ, ಹಾಡಿನಲ್ಲಿ ಹೀರೋ ಮತ್ತು ನಾಯಕನ ತಂದೆ ಹಾಕುವ ನಾಲ್ಕು ಸ್ಟೆಪ್ಪಿಗೆ, ಮುಂಬೈನಿಂದ ಡ್ಯಾನ್ಸ್ ಮಾಸ್ಟರ್ ಅವರನ್ನು ಕರೆಸಬೇಕಾಗಿತ್ತಾ ಎನ್ನುವ ಪ್ರಶ್ನೆ ಕಾಡುವುದು ಸಹಜ.

    ಚಿತ್ರದ ಪ್ಲಸ್ ಪಾಯಿಂಟ್

    ಚಿತ್ರದ ಪ್ಲಸ್ ಪಾಯಿಂಟ್

    ಇನ್ನು, ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ಅದ್ದೂರಿ ಮೇಕಿಂಗ್. ಕುಸ್ತಿ ಪಂದ್ಯಕ್ಕೆ ಬಳಸಿರುವ ಸೆಟ್ಟುಗಳು, ಗರಡಿಯಲ್ಲಿ ಬಳಸಿರುವ ಕುಸ್ತಿಯ ಪರಿಕರಗಳು. ನಾಯಕ ಮತ್ತು ನಾಯಕಿಯ ರೋಮ್ಯಾನ್ಸ್. ನಾಯಕಿಯನ್ನು ಮದುವೆಯಾಗಲು ನಾಯಕ ಕಲ್ಯಾಣಮಂಟಪಕ್ಕೆ ಬರುವ ದೃಶ್ಯ. ಮಗಳು, ಕಾಣೆಯಾದಾಗ, ನಾಯಕಿಯ ತಂದೆಯ ಬಳಿ, ನಾಯಕ ಬಂದು ಮಾತನಾಡುವ ಭಾವನಾತ್ಮಕ ದೃಶ್ಯಗಳು, ಚಿತ್ರದ ತೂಕವನ್ನು ಹೆಚ್ಚಿಸಿದೆ.

    'ಪೈಲ್ವಾನ್' ಬಗ್ಗೆ ನೆಗೆಟಿವ್ ಪ್ರಚಾರ : ನಿರ್ಮಾಪಕಿ ಸ್ವಪ್ನ ಪ್ರತಿಕ್ರಿಯೆ'ಪೈಲ್ವಾನ್' ಬಗ್ಗೆ ನೆಗೆಟಿವ್ ಪ್ರಚಾರ : ನಿರ್ಮಾಪಕಿ ಸ್ವಪ್ನ ಪ್ರತಿಕ್ರಿಯೆ

    ರಾಣಾ ಪ್ರತಾಪ್ ಪಾತ್ರಧಾರಿಯ ನಟನೆಯಂತೂ ದಿ ಬೆಸ್ಟ್.

    ರಾಣಾ ಪ್ರತಾಪ್ ಪಾತ್ರಧಾರಿಯ ನಟನೆಯಂತೂ ದಿ ಬೆಸ್ಟ್.

    ಮಗಳನ್ನು, ರಾಜಾ ರಾಣಾ ಪ್ರತಾಪ್ ಸಿಂಗ್ ಕಡೆಯವರು ಅಪಹರಿಸಿದಾಗ, ನಾಯಕ ಅಲ್ಲಿಗೆ ಬರುವ ದೃಶ್ಯ. ಸಾಹಸ ಸನ್ನಿವೇಶಗಳು ಅಲ್ಟಿಮೇಟ್ ಆಗಿ ಮೂಡಿಬಂದಿದೆ. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಚಿತ್ರಕ್ಕೆ ಪೂರಕವಾಗಿದೆ. ಒಟ್ಟಾರೆಯಾಗಿ, ಕುಸ್ತಿ ಮತ್ತು ಬಾಕ್ಸಿಂಗ್ ಸಾಹಸ ದೃಶ್ಯಗಳು ಚೆನ್ನಾಗಿ ಮೂಡಿಬಂದಿವೆ. ಹಿಂದಿ ಧಾರವಾಹಿಗಳಲ್ಲೂ ವಿಲನ್ ಆಗಿ ಮಿಂಚಿದ್ದ, ಚಿತ್ರದಲ್ಲಿನ ರಾಣಾ ಪ್ರತಾಪ್ ಪಾತ್ರಧಾರಿಯ ನಟನೆಯಂತೂ ದಿ ಬೆಸ್ಟ್..

    ಪೈಲ್ವಾನ್ ಸಿನಿಮಾ ಕುಸ್ತಿ, ಬಾಕ್ಸಿಂಗ್ ಪಟುವಿನ ಚಿತ್ರ

    ಪೈಲ್ವಾನ್ ಸಿನಿಮಾ ಕುಸ್ತಿ, ಬಾಕ್ಸಿಂಗ್ ಪಟುವಿನ ಚಿತ್ರ

    ಪೈಲ್ವಾನ್ ಸಿನಿಮಾ ಕುಸ್ತಿ, ಬಾಕ್ಸಿಂಗ್ ಪಟುವಿನ ಚಿತ್ರವಾಗಿರುವುದರಿಂದ, ಕ್ಲೈಮ್ಯಾಕ್ಸಿನಲ್ಲಿ, ನಾಯಕನ ಒಂದೇ ಹೊಡೆತಕ್ಕೆ ಎದುರಾಳಿ ಎಗರಿಬೀಳದೇ, ಸುಮಾರು ಹತ್ತು ನಿಮಿಷಗಳ ಕಾಲ ಈ ಸನ್ನಿವೇಶವನ್ನು ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಪ್ರಮುಖವಾಗಿ, ಮಹಿಳಾವರ್ಗದ ಪ್ರೇಕ್ಷಕರಿಗೆ, ಇದು ತುಸು ಬೋರ್, ಹಿಂಸೆ ಎನಿಸಿದರೂ, ಚಿತ್ರಕಥೆಗೆ ಪೂರಕವಾಗಿಯೇ ಈ ಸನ್ನಿವೇಶಗಳು ಮೂಡಿಬಂದಿವೆ.

    ಮೈ ಕೊಡವಿ ನಿಂತ ಕಿಚ್ಚ : 'ಪೈಲ್ವಾನ್' 3ನೇ ದಿನ ಗಳಿಸಿದ್ದೆಷ್ಟು?ಮೈ ಕೊಡವಿ ನಿಂತ ಕಿಚ್ಚ : 'ಪೈಲ್ವಾನ್' 3ನೇ ದಿನ ಗಳಿಸಿದ್ದೆಷ್ಟು?

    ಚಿತ್ರದ ಮೈನಸ್ ಪಾಯಿಂಟ್

    ಚಿತ್ರದ ಮೈನಸ್ ಪಾಯಿಂಟ್

    ಇನ್ನು ಚಿತ್ರದ ಮೈನಸ್ ಪಾಯಿಂಟ್ ಗಳೆಂದರೆ, ನಾಯಕನ ಗೆಳೆಯನ ಪಾತ್ರಧಾರಿ, ಹಗ್ಗ ಕಟ್ಟಿರುವ ಬ್ಯಾನ್ ಆಗಿರುವ ಹಳೆಯ ಐನೂರು ರೂಪಾಯಿ ನೋಟಿನ ಹಿಂದೆ ಹೋಗುವುದು, ನಿರ್ದೇಶಕರು ಇನ್ನೂ ಅಪ್ಡೇಟ್ ಆಗಿಲ್ಲವೇ ಎನ್ನುವಂತಿತ್ತು. ನಾಯಕ ಯಾವ ಕಾರಣಕ್ಕಾಗಿ ಕುಸ್ತಿಯಿಂದ, ಬಾಕ್ಸಿಂಗ್ ಫೀಲ್ಡಿಗೆ ಹೋಗುತ್ತಾನೆ ಎನ್ನುವುದಕ್ಕಾಗಿ ತೋರಿಸುವ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಇದು ಭಾವನಾತ್ಮಕ ಸನ್ನಿವೇಶಗಳಾದರೂ, ಚಿತ್ರದ ಓಟಕ್ಕೆ ಬ್ರೇಕ್ ಹಾಕುತ್ತೆ.

    ಪೈಲ್ವಾನ್ ಚಿತ್ರ, ತಪ್ಪು ಒಪ್ಪಿನ ನಡುವೆ ಒಪ್ಪಿ 'ಅಪ್ಪಿಕೊಳ್ಳಬಹುದಾದ' ಚಿತ್ರ

    ಪೈಲ್ವಾನ್ ಚಿತ್ರ, ತಪ್ಪು ಒಪ್ಪಿನ ನಡುವೆ ಒಪ್ಪಿ 'ಅಪ್ಪಿಕೊಳ್ಳಬಹುದಾದ' ಚಿತ್ರ

    ಇನ್ನು ನಾಯಕಿ, ನಾಯಕನ ತಂದೆ, ಬಾಕ್ಸಿಂಗ್ ವಿಲನ್ ಪಾತ್ರಧಾರಿ, ರಾಣಾ ಪ್ರತಾಪ್, ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ಇನ್ನು, ಸ್ಟಂಟ್ ಸೀನ್ ಆಗಿರಲಿ, ಭಾವನಾತ್ಮಕ ಸನ್ನಿವೇಶಗಳಿರಲಿ, ಹೀರೋ ನಟನೆಯ ಬಗ್ಗೆ ಮಾತನಾಡುವ ಹಾಗಿಲ್ಲ. ಕೆಲವೊಂದು, ಸನ್ನಿವೇಶಗಳಲ್ಲಂತೂ, ನಾಯಕ ಪರಕಾಯ ಪ್ರವೇಶ ಮಾಡಿದ್ದಾರೆ. ಒಟ್ಟಿನಲ್ಲಿ, ಪೈಲ್ವಾನ್ ಚಿತ್ರ, ತಪ್ಪು ಒಪ್ಪಿನ ನಡುವೆ ಒಪ್ಪಿ 'ಅಪ್ಪಿಕೊಳ್ಳಬಹುದಾದ' ಚಿತ್ರ.

    English summary
    Kiccha Sudeep Starrer Pailwaan movie released in five languages. here is the Reader review of this movie.
    Monday, September 16, 2019, 12:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X