twitter
    For Quick Alerts
    ALLOW NOTIFICATIONS  
    For Daily Alerts

    ಕೋಟಿಗೊಬ್ಬ-2' ಓದುಗ ವಿಮರ್ಶೆ: ಸುದೀಪ್ ಡಬಲ್ ಶೇಡು, ನಿತ್ಯ ಸೌಂದರ್ಯದ ಬೀಡು

    By ಮಧು
    |

    ''ನಿನ್ನ ಹತ್ರ ಕೋಟಿ ಕೋಟಿ ಹಣ ಇರಬಹುದು ಆದರೆ ಒಂದು ಪ್ರೀತಿಯನ್ನು ಕೊಳ್ಳಲು ಸಾಧ್ಯವಿಲ್ಲ.''

    ''ಪ್ರಪಂಚದ ಜನರಲ್ಲಿ ಎರಡೇ ವಿಧ, ಒಂದು ಸಿಕ್ಕಿಹಾಕಿಕೊಂಡವರು, ಇನ್ನೊಂದು ಸಿಕ್ಕಿಹಾಕಿಕೊಳ್ಳದವರು.''

    - ಈ ಎರಡು ಡೈಲಾಗ್ ಗಳು 'ಕೋಟಿಗೊಬ್ಬ-2' ಚಿತ್ರದ ಅಷ್ಟೂ ಕತೆಯನ್ನು ಹೇಳಿ ಮುಗಿಸುತ್ತವೆ. [ವಿಮರ್ಶೆ: ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'.!]

    ನಾನು ಕಮರ್ಷಿಯಲ್ ಸಿನಿಮಾಗಳನ್ನು ಅಷ್ಟಾಗಿ ನೋಡಲ್ಲ. ಆದರೂ ಅವಳಿದ್ದಾಳೆ ಎಂಬ ಕಾರಣಕ್ಕೆ ಚಿತ್ರಮಂದಿರಕ್ಕೆ ಕಾಲಿಟ್ಟೆ. ಒಳಹೋಗಿದ್ದಕ್ಕೆ ನಷ್ಟವೇನೂ ಆಗಲಿಲ್ಲ. ಮುಂದೆ ಓದಿ.....

    ಪವರ್ ಆಫ್ ಮನಿ!

    ಪವರ್ ಆಫ್ ಮನಿ!

    'That is the power of money'. ಹಣದ ವಾಸನೆಯ ಹಿಂದೆ ಓಡುವ ನಾಯಕನಿಗೆ ನಾಯಕಿಯ ಪ್ರೀತಿ ಎಂಬ ಸುಗಂಧ ಅಮರಿಕೊಂಡಾಗ ಎಲ್ಲಾ ಲೆಕ್ಕ ಉಲ್ಟಾ ಪಲ್ಟಾ. ಅದೇ ಹಳೆಯ ತಂತ್ರ, ಫ್ಲಾಶ್ ಬ್ಯಾಕ್ ಆಟ.[ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 'ಕೋಟಿ ಕಿಚ್ಚ'ನ ಹೊಸ ದಾಖಲೆ]

    ಸುದೀಪ್-ನಿತ್ಯಾ ಆಕ್ಟಿಂಗ್ ಹೇಗಿದೆ?

    ಸುದೀಪ್-ನಿತ್ಯಾ ಆಕ್ಟಿಂಗ್ ಹೇಗಿದೆ?

    ಸುದೀಪ ಇಲ್ಲೂ ಸುದೀಪನೇ. ನಿತ್ಯಾ ಹೇಗಿದ್ದರೂ ಚೆನ್ನ. ಮಧ್ಯಮ ವರ್ಗದ ನಿತ್ಯಾ ಕೈಯಲ್ಲಿ ಆಪಲ್ ಪೋನ್ ಮೊದಲಿಂದಲೂ ಹೇಗೆ ಬಂತು? ನಿರ್ದೇಶಕರನ್ನೇ ಕೇಳಬೇಕು.[ಸುದೀಪ್ ಗೆ ಬಹಿರಂಗ ಕ್ಷಮೆ ಕೇಳಿದ ಸೂರಪ್ಪ ಬಾಬು! ಏನಿದು ವಿವಾದ?]

    ಚಿಕ್ಕಣ್ಣ-ಸಾಧು ಸಪ್ಪೆ

    ಚಿಕ್ಕಣ್ಣ-ಸಾಧು ಸಪ್ಪೆ

    ಊದಿಕೊಂಡಿರುವ ನಿತ್ಯಳಿಗೆ ಉದ್ದ ಸುದೀಪ. ಮೂಗು ಗುದ್ದಿಸಿಕೊಳ್ಳುವ ರವಿಶಂಕರ್ ಖಡಕ್ ಖದರ್, ಚಿಕ್ಕಣ್ಣ, ಸಾಧು, ತಬಲಾ ನಾಣಿ ಮೊದಲಿಗೆ ನಗು ತರಿಸಿದರೂ ಆಮೇಲೆ ಸಪ್ಪೆ. ಸುದೀಪ್ ಅಪ್ಪನ ಪಾತ್ರದ ಪ್ರಕಾಶ್ ರೈ, ಅನಾಥ ಆಶ್ರಮ ನಡೆಸುವ ದೇವರಾಜ್ ನೆನಪಿನಲ್ಲಿ ಉಳಿಯುತ್ತಾರೆ.[ಕಿಚ್ಚನನ್ನು ಹೊಗಳುವ ಭರಾಟೆಯಲ್ಲಿ ಲೆಜೆಂಡ್ ನಟರನ್ನು ಗೇಲಿ ಮಾಡಿದ ವರ್ಮಾ]

    ವಿಷ್ಣುವರ್ಧನ್ ಗೆ ಶಿಳ್ಳೆ-ಚಪ್ಪಾಳೆ

    ವಿಷ್ಣುವರ್ಧನ್ ಗೆ ಶಿಳ್ಳೆ-ಚಪ್ಪಾಳೆ

    ಸಾಹಸಸಿಂಹ ವಿಷ್ಣುವರ್ಧನ್ ಅವರು ಎರಡು ಸಾರಿ ತೆರೆ ಮೇಲೆ ಬಂದಾಗ ಶಿಳ್ಳೆ ಚಪ್ಪಾಳೆ. ಡಬ್ ಸ್ಮಾಶ್ ದೃಶ್ಯಕ್ಕೆ ನಗುವಿನ ಹೊಳೆ.

    ಸುಳ್ಳು-ಸತ್ಯದ ಆಟ

    ಸುಳ್ಳು-ಸತ್ಯದ ಆಟ

    ಕಳ್ಳತನದ ಆರಂಭ, ಸುಳ್ಳುತನ ಅಂತ್ಯ, ಕಾಲ್ಪನಿಕ ಪಾತ್ರವೊಂದಕ್ಕೆ ಜೀವಂತಿಕೆಯ ಸ್ಪರ್ಶ. ಪಾತ್ರ ಸತ್ತರೂ ಸಾಯದ ಹಣದ ಘಾಟು ವಾಸನೆ. ಜಾಣ ನಾಯಕನಿಗೆ ಎಲ್ಲೂ ಹಿನ್ನಡೆ ಇಲ್ಲ. ಬುದ್ಧಿವಂತ ನಾಯಕಿ ತನಗೆ ಬೇಕಾದ ಸತ್ಯನನ್ನು ಪಡೆದುಕೊಳ್ಳುತ್ತಾಳೆ.

    ಹಾಡುಗಳು ಓಕೆ

    ಹಾಡುಗಳು ಓಕೆ

    ಸಾಲುತಿಲ್ಲವೆ, ಸಾಲುತಿಲ್ಲವೆ.., ಹೂನಾ...ಹೂನಾ ..ಹೂನಾ ಹಾಡು ಕೇಳಬಹುದು.

    ಆಧುನಿಕ ಬಳಕೆ, ಬಿಟ್ಟಿ ಪ್ರಚಾರ

    ಆಧುನಿಕ ಬಳಕೆ, ಬಿಟ್ಟಿ ಪ್ರಚಾರ

    ಲೇಸರ್ ಬಳಕೆ, ಸ್ಕೈಪ್ ಚಾಟ್, ಸಿಸಿ ಕ್ಯಾಮರಾ ಇನ್ನುಳಿದ ಆಧುನಿಕ ತಂತ್ರಜ್ಞಾನ ಗಳಿಗೂ ಒಂದು ಪಾತ್ರದಷ್ಟೆ ಪ್ರಾಮುಖ್ಯ ನೀಡಲಾಗಿದೆ. ಆಪಲ್ ಫೋನ್, ಪಲ್ಸರ್ ಬೈಕ್, ಆಡಿ ಕಾರಿಗೆ ಬಿಟ್ಟಿ ಪ್ರಚಾರ.

    ಯಾರು ಸಿನಿಮಾ ನೋಡಬಹುದು?

    ಯಾರು ಸಿನಿಮಾ ನೋಡಬಹುದು?

    ರಿಯಲ್ ಎಸ್ಟೇಟ್ ಉದ್ಯಮಿಗಳು, ಹೊಸದಾಗಿ ಸೈಟ್ ತಗೋಬೇಕು ಅಂದ್ಕಂಡಿರುವವರು 'ಕೋಟಿಗೊಬ್ಬ-2' ಸಿನಿಮಾ ನೋಡಬಹುದು.

    ಕನ್ ಫ್ಯೂಶನ್ ಇಲ್ಲ

    ಕನ್ ಫ್ಯೂಶನ್ ಇಲ್ಲ

    ಅದೇ ಹಳೆಯ ಬ್ಲ್ಯಾಕ್ ಮನಿ ಕತೆಗೆ ಹೊಸ ಬಣ್ಣ, ಓಡುತ್ತಿದ್ದ ಕತೆಗೆ ದ್ವಿತೀಯಾರ್ಧ ಆರಂಭದಲ್ಲಿ ಬ್ರೇಕ್, ಪ್ರೇಕ್ಷಕನಿಗೆ ಕನ್ ಪ್ಯುಶನ್ ಇಲ್ಲ. ಪಾತ್ರಗಳಿಗೆ ಗೊಂದಲ.

    ಕೊನೆ ಮಾತು

    ಕೊನೆ ಮಾತು

    ಒಟ್ಟಿನಲ್ಲಿ 'ಕೋಟಿಗೊಬ್ಬ-2' ಸುದೀಪ್ ಡಬಲ್ ಶೇಡು, ನಿತ್ಯಾ ಮೆನನ್ ಸಹಜ ಸೌಂದರ್ಯದ ಬೀಡು, ರವಿಶಂಕರ್ ಡೈಲಾಗ್ ಜಾಡು, ಪ್ರಕಾಶ್ ರೈ ಅಭಿನಯದ ಕೋಡು, ಊಟಿಯ ಕಾಡು, ನೋಟಿನ ಪ್ಯಾಡು, ನೆನಪಲ್ಲಿ ಉಳಿಯುವ ಎರಡು ಹಾಡು.

     'ಕೋಟಿಗೊಬ್ಬ-2' ವಿಮರ್ಶೆ ನೀವೂ ಬರೆಯಿರಿ

    'ಕೋಟಿಗೊಬ್ಬ-2' ವಿಮರ್ಶೆ ನೀವೂ ಬರೆಯಿರಿ

    'ಕೋಟಿಗೊಬ್ಬ-2' ಚಿತ್ರದ ವಿಮರ್ಶೆಯನ್ನ ನೀವೂ ಬರೆಯಿರಿ. [email protected] ಗೆ ನಿಮ್ಮ ವಿಮರ್ಶೆ ಈ-ಮೇಲ್ ಮಾಡಿ.

    English summary
    Kiccha Sudeep starrer 'Kotigobba-2' is an out and out commercial entertainer. Nithya Menon looks pleasant on screen. Over all the movie is engaging.
    Friday, August 19, 2016, 11:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X