»   » ಕಾಲೇಜು ಸುತ್ತಾ ಗಿರಿಕಿ ಹೊಡೆವ ಹದಿ ಹರೆಯದ ಹುಚ್ಚು ಪ್ರೇಮದ ಕಥಾನಕ, ಪ್ರೇಕ್ಷಕರನ್ನು ನಗಿಸುವಲ್ಲಿ ಗೆದ್ದಿದೆ.

ಕಾಲೇಜು ಸುತ್ತಾ ಗಿರಿಕಿ ಹೊಡೆವ ಹದಿ ಹರೆಯದ ಹುಚ್ಚು ಪ್ರೇಮದ ಕಥಾನಕ, ಪ್ರೇಕ್ಷಕರನ್ನು ನಗಿಸುವಲ್ಲಿ ಗೆದ್ದಿದೆ.

Subscribe to Filmibeat Kannada


ವಿನೋದ ಪ್ರವೃತ್ತಿಯ ನಾಯಕಿ ಸುಜಿತಾ ಕಾಲೇಜಿನಲ್ಲಿ ಆದರ್ಶ ಉಪನ್ಯಾಸಕ ವೆಂಕಟೇಶ್ವರನನ್ನು ಪೇಚಿಗೆ ಸಿಲುಕಿಸುತ್ತಾಳೆ. ನಾಯಕನನ್ನು ಬೆಂಬಿಡದ ಬೇತಾಳನಂತೆ ಹಿಂಬಾಲಿಸುವ ಈ ಚೆಲ್ಲಾಟದ ಹುಡುಗಿ- ಪ್ರೇಮ, ಪ್ರೀತಿ ಎಂದು ಕಾಡುತ್ತಾಳೆ.

ನೀನು ಹತ್ತು ಮದುವೆ ಆದರೂ ಪರವಾಗಿಲ್ಲ ನಾನು, ಹನ್ನೊಂದನೆಯವಳಾಗಿ ನಿನ್ನ ಕೈ ಹಿಡಿಯುತ್ತೇನೆ ಎಂದು ಸವಾಲು ಹಾಕುತ್ತಾಳೆ. ಈ ಘಟನಾವಳಿಗಳ ಮಧ್ಯೆ ನುಸುಳುವ ಲಘು ಹಾಸ್ಯ, ಚಿತ್ರ ನೋಡಿಸಿಕೊಂಡು ಹೋಗುತ್ತದೆ. ಮಧ್ಯಂತರದ ಬಳಿಕ ಚಿತ್ರಕ್ಕೆ ತಿರುವು.

ಪೂರ್ವಾರ್ಧದಲ್ಲಿ ಅತಿರೇಕ ಎನಿಸುವ ಸುಜಿತಾ ಚಿತ್ರ ಮುಗಿದ ಬಳಿಕವೂ ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುತ್ತಾಳೆ. ಪೆದ್ದು ಗೃಹಿಣಿಯ ಪಾತ್ರದಲ್ಲಿ ರೋಜಾ ಚೆನ್ನಾಗಿಯೇ ಅಭಿನಯಿಸಿದ್ದಾರೆ. ಉಪನ್ಯಾಸಕನ ಪಾತ್ರವನ್ನು ಶಿವರಾಜ್‌ಕುಮಾರ್‌ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಪದ್ಮವಾಸಂತಿ, ರಮೇಶ್‌ಭಟ್‌, ಶಿವರಾಂ ತಮ್ಮ ಎಂದಿನ ಸಹಜಾಭಿನಯದಿಂದ ಗಮನ ಸೆಳೆಯುತ್ತಾರೆ. ಚಿತ್ರದ ಒಂದೆರಡು ಹಾಡು ಇಂಪಾಗಿದೆ. ಪ್ರಸಾದ್‌ ಬಾಬು ಛಾಯಾಗ್ರಹಣ ಪರವಾಗಿಲ್ಲ. ಬಿಗಿ ಮನಸ್ಸಿನ ಬೇಸರ ಕಳೆದು ಒಂದೆರೆಡು ಗಂಟೆ ಮನರಂಜನೆ ನೀಡುವಲ್ಲಿ ಚಿತ್ರ ಯಶಸ್ವಿಯಾಗಿದೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada