twitter
    For Quick Alerts
    ALLOW NOTIFICATIONS  
    For Daily Alerts

    ದೇಸಾಯಿ ಥ್ರಿಲ್ಲರ್ 'ಉದ್ಘರ್ಷ'ಕ್ಕೆ ಊಘೇ ಅಂದ್ರಾ ವಿಮರ್ಶಕರು?

    |

    ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಉದ್ಘರ್ಷ' ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಣ್ಣ ಪುಟ್ಟ ತಪ್ಪುಗಳು ಬಿಟ್ಟರೆ ಸಸ್ಪೆನ್ಸ್ ಥ್ರಿಲ್ಲಿಂಗ್ ಮೂಲಕ ಕೊನೆವರೆಗೂ ಪ್ರೇಕ್ಷಕರನ್ನ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ ಸುನೀಲ್ ಕುಮಾರ್ ದೇಸಾಯಿ.

    ಘಟಾನುಘಟಿ ಖಳನಟರೇ ಅಭಿನಯಿಸಿರುವ ಉದ್ಘರ್ಷ ಚಿತ್ರಕ್ಕೆ ಒಳ್ಳೆಯ ಆರಂಭ ಸಿಕ್ಕಿದೆ. ದೇಸಾಯಿ ಚಿತ್ರಗಳನ್ನ ಮೆಚ್ಚಿಕೊಳ್ಳುವ, ಒಪ್ಪಿಕೊಳ್ಳುವ ಹಾಗೂ ಇಷ್ಟಪಡುವ ಎಲ್ಲರಿಗೂ ಇದು ಖುಷಿ ನೀಡಿದೆ.

    ಜನರ ಮೆಚ್ಚುಗೆ ಗಳಿಸಿದ ಉದ್ಘರ್ಷ ಸಿನಿಮಾ ವಿರ್ಮಶಕರ ಚಪ್ಪಾಳೆ ಗಿಟ್ಟಿಸಿಕೊಂಡಿದೆಯಾ? ದೇಸಾಯಿ ಅವರ ಹೊಸ ಚಿತ್ರಕ್ಕೆ ಸಿಕ್ಕ ಅಂಕಗಳೆಷ್ಟು? ಕರ್ನಾಟಕದ ಜನಪ್ರಿಯ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಉದ್ಘರ್ಷ ಚಿತ್ರದ ವಿಮರ್ಶೆಯ ಕಲೆಕ್ಷನ್ ಇಲ್ಲಿದೆ. ಮುಂದೆ ಓದಿ....

    ಕ್ಷಣಕ್ಷಣಕ್ಕೂ ಕುತೂಹಲ ಹುಟ್ಟಿಸುವ ಸಿನಿಮಾ

    ಕ್ಷಣಕ್ಷಣಕ್ಕೂ ಕುತೂಹಲ ಹುಟ್ಟಿಸುವ ಸಿನಿಮಾ

    ‘ಉದ್ಘರ್ಷ' ಚಿತ್ರದಲ್ಲಿ ಮರ್ಡರ್ ಮಿಸ್ಟರಿಯಿದೆ. ಕೊಲೆಗಾರನ ಬೆನ್ನತ್ತಿ ಹೊರಡುವ ಖಾಕಿ ಪಡೆ ಸಿಗುತ್ತದೆ. ಕೊಲೆಗಾರ ತಪ್ಪಿಸಿಕೊಳ್ಳಲು ಕೊಡುವ ಹಿಂಸೆ ತುಸು ಹೆಚ್ಚೇಯಿದೆ. ಕಾಮ ಮತ್ತು ಕ್ರೋಧ ಎರಡನ್ನೂ ಪ್ರತಿನಿಧಿಸುವ ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಈ ಎಲ್ಲವನ್ನೂ ಬೆಸೆಗೊಳ್ಳುವ ತಿರುವುಗಳು ಧುತ್ತೆಂದು ಎದ್ದು ನಿಲ್ಲುತ್ತವೆ. ಈ ಎಲ್ಲ ಅಂಶಗಳ ಒಟ್ಟು ಸಾರವೇ ಉದ್ಘರ್ಷ. ಪ್ರತಿ ಪಾತ್ರಗಳು ತಮ್ಮದೇ ಆದ ಕಾರಣದಿಂದಾಗಿ ಗಮನ ಸೆಳೆಯುತ್ತವೆ. ರಶ್ಮಿ (ಧನ್ಸಿಕಾ), ಆದಿ (ಠಾಕೂರ್‌ ಸಿಂಗ್‌ ಅನೂಪ್‌), ಕರಿಶ್ಮಾ (ತಾನ ಹೋಪ್‌), ಕೃತಿಕಾ (ಶ್ರದ್ಧಾ), ಮೆನನ್ (ಕಿಶೋರ್) ಹೀಗೆ ಪ್ರತಿ ಪಾತ್ರಗಳೂ ದೃಶ ಗಳನ್ನು ಜೀವಂತವಾಗಿಸುತ್ತವೆ. ಇದು ಪಕ್ಕಾ ಸಸ್ಪೆನ್ಸ್ ಮತ್ತು ಥ್ರಿಲ್ಲರ್‌ ನೋಡುಗರಿಗಾಗಿ ಮಾಡಿರುವಂಥ ಚಿತ್ರ. ಗಟ್ಟಿಗುಂಡಿಗೆಯವರು ಮಾತ್ರ ಈ ಸಿನಿಮಾ ನೋಡಬಹುದು'' - ವಿಜಯ ಕರ್ನಾಟಕ

    ದೇಸಾಯಿ ಸೂತ್ರ ಸಾಕಾರ

    ದೇಸಾಯಿ ಸೂತ್ರ ಸಾಕಾರ

    ''ಕೊಲೆಯೊಂದರ ರಹಸ್ಯ ಹುಡುಕುವ ಕಥೆ ತಾಂತ್ರಿಕ ಕುಶಲತೆೆಯಿಂದ ರಂಜನೀಯವಾಗಿದೆ. ಇಲ್ಲಿ ಯಾವುದೇ ಪಾತ್ರಗಳ ಪ್ರಭಾವಳಿ ಇಲ್ಲ. ಇದೇ ಚಿತ್ರದ ಧನಾತ್ಮಕ ಅಂಶ. ಎಲ್ಲಾ ಪಾತ್ರಗಳ ಪೋಷಣೆಯಲ್ಲೂ ನಿರ್ದೇಶಕರು ಜಾಣ್ಮೆ ಮೆರೆದಿದ್ದಾರೆ. ಹಾಗಾಗಿಯೇ ಚಿತ್ರಕಂಥೆ ಕೊನೆಯವರೆಗೂ ಪ್ರೇಕ್ಷಕರನ್ನು ಕರ್ಚಿಯ ತುದಿಯಲ್ಲಿ ಕೂರಿಸುತ್ತೆ. ಕೆಲವೆಡೆ ಸಾಹಸ ದೃಶ್ಯಗಳು ಅತಿಯಾಯಿತ ಎನಿಸಿತ್ತವೆ. ಎಲ್ಲವನ್ನೂ ಸಸ್ಪೆನ್ಸ್ ಮಾಡುತ್ತಾ ಪ್ರೇಕ್ಷಕರು ಅಂದಾಜಿಸಲು ಸಾಧ್ಯವಾಗದಂತಹ ಮತ್ತೆ ಏನನ್ನೋ ಕೊಡುತ್ತೇನೆ ಎನ್ನುವ ನಿರ್ದೇಶಕರ ಚಾಕಚಕ್ಯತೆಯು ಇದನ್ನು ಮರೆಸುತ್ತದೆ'' - ಪ್ರಜಾವಾಣಿ

    ವಿಮರ್ಶೆ: ಸಸ್ಪೆನ್ಸ್ ಬಿಡದ ದೇಸಾಯಿ 'ಉದ್ಘರ್ಷ'ದಲ್ಲಿ ಆಕ್ಷನ್ ಅಬ್ಬರ ವಿಮರ್ಶೆ: ಸಸ್ಪೆನ್ಸ್ ಬಿಡದ ದೇಸಾಯಿ 'ಉದ್ಘರ್ಷ'ದಲ್ಲಿ ಆಕ್ಷನ್ ಅಬ್ಬರ

     ಸಣ್ಣ ಕಥೆಯಲ್ಲಿ ಸಿಕ್ಕಾಪಟ್ಟೆ ಸಾಹಸ

    ಸಣ್ಣ ಕಥೆಯಲ್ಲಿ ಸಿಕ್ಕಾಪಟ್ಟೆ ಸಾಹಸ

    ''ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಂದಲೇ ಖ್ಯಾತರಾದ ದೇಸಾಯಿ, ಈ ಬಾರಿ ಅದರ ಜತೆಗೆ ಆಕ್ಷನ್ ಗೂ ಹೆಚ್ಚು ಮಹತ್ವ ನೀಡಿದ್ದಾರೆ. ಹಾಗೆ ನೋಡಿದರೆ ಈ ಚಿತ್ರದಲ್ಲಿ ಗಟ್ಟಿ ಕಥೆ ಇರುವುದು ಆರಂಭ ಮತ್ತು ಕ್ಲೈಮ್ಯಾಕ್ಸ್​ನಲ್ಲಿ ಮಾತ್ರ. ಉಳಿದಂತೆ ಹೊಡಿಬಡಿ ದೃಶ್ಯಗಳೇ ಹೆಚ್ಚು ರಾರಾಜಿಸಿವೆ. ಆ ಕಾರಣಕ್ಕಾಗಿಯೇ ನಿರ್ದೇಶಕರು ದೈತ್ಯದೇಹಿಗಳನ್ನೇ ಪಾತ್ರವರ್ಗದಲ್ಲಿ ಆಯ್ದುಕೊಂಡಂತಿದೆ. ಠಾಕೂರ್ ಅನೂಪ್, ಕಬೀರ್ ದುಹಾನ್, ಜಿಮ್ ರವಿ, ದಾನಿಶ್ ಅಖ್ತರ್, ಶ್ರವಣ್ ರಾಘವೇಂದ್ರ ನಡುವಿನ ಸಾಹಸ ಸನ್ನಿವೇಶಗಳು ಆಕ್ಷನ್ ಪ್ರಿಯರನ್ನು ರಂಜಿಸುತ್ತವೆ'' - ವಿಜಯವಾಣಿ

    An engrossing whodunnit

    An engrossing whodunnit

    ''With films like Tarka, Uthkarsha, Sangarsha and Nishkarsha to his credit, director Sunil Kumar Desai is known be a master of the mystery genre. the director has experimented with fresh faces for this film, and his gamble has largely paid off. With a measured level of suspense, he establishes the plot and develops the characters. However, the action sequences seem to have gone out of control and become a bit tiring at times. With competent performances from almost all the actors, Udgharsha is an engrossing whodunnit that surely qualifies for a one-time watch'' - indian express

    ಸಂದರ್ಶನ: 'ದೇಸಾಯಿ ಈಸ್ ಬ್ಯಾಕ್' ಎನ್ನುತ್ತಿದೆ 'ಉದ್ಘರ್ಷ' ಸಂದರ್ಶನ: 'ದೇಸಾಯಿ ಈಸ್ ಬ್ಯಾಕ್' ಎನ್ನುತ್ತಿದೆ 'ಉದ್ಘರ್ಷ'

    udgharsha movie review

    udgharsha movie review

    ''The film has all the ingredients that are associated with his films, and keeps audiences on the edge with enough twists, but it is not without flaws. There is action galore in Udgharsha, but it would seem that it is a tad too much. The narrative also lags at times and could have been maintained tight to keep audiences intrigued. If suspense thrillers are just up your alley, Udgharsha is worth a weekend watch'' - times of india

    English summary
    Sunil kumar desai directional Udgarsha movie has released all over india in four language yesterday (march 22nd). here is the critics review of the udgarsha.
    Saturday, March 23, 2019, 12:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X