Petta twitter review: ರಜನಿ ಸಾರ್ ಈಸ್ ಬ್ಯಾಕ್, ಅಭಿಮಾನಿಗಳು ಫುಲ್ ಖುಷ್.!

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಪೇಟಾ' ಸಿನಿಮಾ ಇಂದು ದೇಶದಾದ್ಯಂತ ಬಿಡುಗಡೆ ಆಗಿದೆ. ಸಂಕ್ರಾಂತಿ ಹಬ್ಬದ ಹೊಸ್ತಿಲಲ್ಲಿ ಬಿಡುಗಡೆ ಆಗಿರುವ 'ಪೇಟಾ' ಚಿತ್ರ 'ತಲೈವಾ' ಅಭಿಮಾನಿಗಳಿಗೆ ಭರ್ಜರಿ ರಸದೌತಣ ನೀಡಿದೆ.

ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಇರುವ ರಜನಿಕಾಂತ್, ಸಿಮ್ರನ್, ವಿಜಯ್ ಸೇತುಪತಿ, ತ್ರಿಷಾ, ನವಾಝುದ್ದೀನ್ ಸಿದ್ದಿಖಿ ಮುಖ್ಯಭೂಮಿಕೆಯಲ್ಲಿರುವ 'ಪೇಟಾ' ಚಿತ್ರದ ಫಸ್ಟ್ ಡೇ ಫಸ್ಟ್ ಶೋ ಅದಾಗಲೇ ಮುಗಿದಿದ್ದು, ಟ್ವಿಟ್ಟರ್ ನಲ್ಲಿ ತಮ್ಮ ತಮ್ಮ ಅಭಿಪ್ರಾಯ, ವಿಮರ್ಶೆಗಳನ್ನು ಸಿನಿ ಪ್ರಿಯರು ಹಂಚಿಕೊಳ್ಳುತ್ತಿದ್ದಾರೆ.

'ಲಿಂಗಾ', 'ಕಬಾಲಿ', 'ಕಾಲಾ', '2.0' ಸೇರಿದಂತೆ ಇತ್ತೀಚೆಗೆ ಬಿಡುಗಡೆಯಾದ ರಜನಿ ಅಭಿನಯದ ಚಿತ್ರಗಳಿಗೆ ಹೋಲಿಸಿದರೆ 'ಪೇಟಾ'ಗೆ ಪಾಸಿಟೀವ್ ಓಪನ್ನಿಂಗ್ ಸಿಕ್ಕಿದೆ. ಮಾಸ್ ಅಭಿಮಾನಿಗಳಿಗೆ 'ಪೇಟಾ' ಹೇಳಿ ಮಾಡಿಸಿದ ಚಿತ್ರವಾಗಿದೆ. 'ಪೇಟಾ' ಚಿತ್ರವನ್ನು ಕಣ್ತುಂಬಿಕೊಂಡವರು ಶಿಳ್ಳೆ ಹೊಡೆಯುವುದರಲ್ಲಿ ಬಿಜಿಯಾಗಿದ್ದಾರೆ.

'ಪೇಟಾ' ಚಿತ್ರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಕೆಲ ಟ್ವೀಟ್ ಗಳು ಇಲ್ಲಿವೆ, ನೋಡಿರಿ...

'ತಲೈವಾ' ಈಸ್ ಬ್ಯಾಕ್

'ತಲೈವಾ' ಈಸ್ ಬ್ಯಾಕ್

''ಪೇಟಾ ಫಸ್ಟ್ ಹಾಫ್ - ತಲೈವಾ ಈಸ್ ಬ್ಯಾಕ್. ಕಾರ್ತಿಕ್ ಸುಬ್ಬರಾಜ್ ಗೆ ಧನ್ಯವಾದ. ಪ್ರತಿಯೊಂದು ಫ್ರೇಮ್ ಕೂಡ ಚೆನ್ನಾಗಿದೆ. ನಟನೆಯಲ್ಲಿ ತಲೈವಾ ಬೆಂಕಿ. ಮೊದಲಾರ್ಧ ಮೈನವಿರೇಳಿಸುತ್ತದೆ'' ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಬ್ಲಾಕ್ ಬಸ್ಟರ್ ಪಕ್ಕಾ.!

ಬ್ಲಾಕ್ ಬಸ್ಟರ್ ಪಕ್ಕಾ.!

''ಈಗಷ್ಟೇ ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ಶೋ ಮುಗಿಯಿತು. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಚಿತ್ರ ಬ್ಲಾಕ್ ಬಸ್ಟರ್. ಮಾಸ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಚಿತ್ರ. ತಲೈವಾ ಆಕ್ಟಿಂಗ್ ಪಡೆಯಪ್ಪ ಲೆವೆಲ್ ಗಿದೆ. ರಜನಿ ಸಾರ್ ಈಸ್ ಬ್ಯಾಕ್'' - ಕ್ರಿಷ್.

ಎಂಟರ್ ಟೈನ್ಮೆಂಟ್ ಡ್ರಾಮಾ

ಎಂಟರ್ ಟೈನ್ಮೆಂಟ್ ಡ್ರಾಮಾ

''ಹನ್ನೆರಡು ವರ್ಷಗಳ ಬಳಿಕ ಬಂದಿರುವ ರಜನಿ ಅಭಿನಯದ ಅತಿ ಹೆಚ್ಚು ಮನರಂಜನೆ ನೀಡುವ ಚಿತ್ರ ಇದು. ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಸೂಪರ್. ಪರ್ಫೆಕ್ಟ್ ಸ್ಟೈಲಿಶ್ ವಿಲನ್ ಆಗಿ ಕಾಣಿಸಿಕೊಂಡಿರುವ ವಿಜಯ್ ಸೇತುಪತಿ ಅಭಿನಯ ಚೆನ್ನಾಗಿದೆ'' ಎಂದು ಟ್ವೀಟ್ ಮಾಡಿದ್ದಾರೆ ಸಿನಿ ಪ್ರಿಯರೊಬ್ಬರು.

ಕಿಂಗ್ ಈಸ್ ಬ್ಯಾಕ್

ಕಿಂಗ್ ಈಸ್ ಬ್ಯಾಕ್

''ಪೇಟಾ.. ದಿ ಕಿಂಗ್ ಈಸ್ ಬ್ಯಾಕ್. ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಗೆ ಹ್ಯಾಟ್ಸ್ ಆಫ್'' - ಅಕ್ಷಯಾ

ಎಲ್ಲದರ ಮಿಶ್ರಣ

ಎಲ್ಲದರ ಮಿಶ್ರಣ

''ಒಂದೇ ಮಾತಲ್ಲಿ ವಿಮರ್ಶೆ ಕೊಡಬೇಕು ಅಂದ್ರೆ ಬ್ಲಾಕ್ ಬಸ್ಟರ್. ಸ್ವಾಗ್, ಸ್ಟೈಲ್, ಡೈಲಾಗ್ಸ್, ಆಕ್ಷನ್, ಲೈಟ್ ಕಾಮಿಡಿ... ಎಲ್ಲದರ ಹದವಾದ ಮಿಶ್ರಣದಿಂದ ಚಿತ್ರ ಬ್ಲಾಕ್ ಬಸ್ಟರ್ ಆಗಿದೆ. ನವಾಝುದ್ದೀನ್ ಪರ್ಫಾಮೆನ್ಸ್ ಚೆನ್ನಾಗಿದೆ'' ಅಂತ ಹೊಗಳುತ್ತಿದ್ದಾರೆ ಅಭಿಮಾನಿಗಳು.

ನಾನ್ ಸ್ಟಾಪ್ ತಲೈವಾ ಶೋ

ನಾನ್ ಸ್ಟಾಪ್ ತಲೈವಾ ಶೋ

''ಪೇಟಾ - ನಾನ್ ಸ್ಟಾಪ್ ತಲೈವಾ ಶೋ. ಇದು ಸೂಪರ್ ಸ್ಟಾರ್ ರಜನಿಕಾಂತ್ ಗೆ ಬೆಸ್ಟ್ ಕಮ್ ಬ್ಯಾಕ್. ಅಭಿಮಾನಿಗಳ ನಿರೀಕ್ಷೆಯನ್ನು ಕಾರ್ತಿಕ್ ಸುಬ್ಬರಾಜ್ ಹುಸಿ ಮಾಡಿಲ್ಲ'' - ಫೋರಮ್ ರೀಲ್ಸ್

ಹಬ್ಬಕ್ಕೆ ರಸದೌತಣ

ಹಬ್ಬಕ್ಕೆ ರಸದೌತಣ

''ಹಬ್ಬಕ್ಕೆ ರಸದೌತಣ ನೀಡಿರುವ ಕಾರ್ತಿಕ್ ಸುಬ್ಬರಾಜ್ ಗೆ ಧನ್ಯವಾದಗಳು. ಪ್ರತಿಯೊಂದು ಫ್ರೇಮ್ ಕೂಡ ಇಷ್ಟ ಆಗುತ್ತದೆ'' - ರಾಹುಲ್ ಬಾಲಸುಬ್ರಹ್ಮಣ್ಯಂ

More from Filmibeat

English summary
Super Star Rajinikanth starrer 'Petta' is getting good response in Twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X