Just In
Don't Miss!
- News
ಒಂದೇ ಒಂದು ಚಾಟ್, ಖೋತಾ ಆಯ್ತು ಲಕ್ಷಗಟ್ಟಲೆ ದುಡ್ಡು
- Technology
2020ಕ್ಕೆ ಚೀನಾದಲ್ಲಿ ಶುರುವಾಗಲಿದೆ ರಿಯಲ್ಮಿ ಯ 5G ದರ್ಬಾರ್!
- Sports
ಐಎಸ್ಎಲ್: ಒಂದೇ ಗೋಲು, ಒಂದು ಜಯ, ಒಂದನೇ ಸ್ಥಾನಕ್ಕೆ ಬೆಂಗಳೂರು
- Lifestyle
ಗುರುವಾರದ ದಿನ ಭವಿಷ್ಯ 5-12-2019
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜೀಪ್ ನಿರ್ಮಾಣದ ಹೊಸ 7 ಸೀಟರ್ ಎಸ್ಯುವಿ
- Finance
RBIನಿಂದ ಬಡ್ಡಿ ದರ ಮತ್ತಷ್ಟು ಇಳಿಕೆ ನಿರೀಕ್ಷೆ; ಡಿಸೆಂಬರ್ 5ರ ಸಭೆಯಲ್ಲಿ ನಿರ್ಧಾರ
- Education
IOCL Admit Card 2019: ಅಪ್ರೆಂಟಿಸ್ ಮತ್ತು ಡಿಇಓ ಹುದ್ದೆಗಳ ಲಿಖಿತ ಪರೀಕ್ಷಾ ಪ್ರವೇಶ ಪತ್ರ ರಿಲೀಸ್
- Travel
ಗುಜರಾತ್ ನಲ್ಲಿರುವ ಈ ಏಳು ಸ್ಥಳಗಳು - ಪ್ರತಿ ಛಾಯಾಗ್ರಾಹಕನ ಕನಸಿಗ ತಾಣಗಳು
'ಸೈರಾ' ಟ್ವಿಟ್ಟರ್ ವಿಮರ್ಶೆ: ಮೊದಲ ಶೋ ನೋಡಿದ ಪ್ರೇಕ್ಷಕರು ಹೇಳಿದ್ದನು?
ಮೆಗಾಸ್ಟಾರ್ ಚಿರಂಜೀವಿ, ಬಿಗ್ ಬಿ ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಅಭಿನಯಿಸಿರುವ ಸೈರಾ ನರಸಿಂಹ ರೆಡ್ಡಿ ಸಿನಿಮಾ ಇಂದು ದೇಶ ವಿದೇಶದಲ್ಲಿ ಗ್ರ್ಯಾಂಡ್ ಆಗಿ ತೆರೆಗೆ ಬಂದಿದೆ. ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿಯ ಜೀವನಾಧಾರಿತ ಸಿನಿಮಾ ಇದಾಗಿದ್ದು ಅಭಿಮಾನಿಗಳಲ್ಲಿ ಬಾರಿ ನಿರೀಕ್ಷೆ ಮೂಡಿಸಿತ್ತು.
ನಿಯಮ ಮೀರಿ ರಿಲೀಸ್ ಆಗುತ್ತಿದೆ 'ಸೈರಾ': ತೆಲುಗಿನಲ್ಲಿರೊ ರೂಲ್ಸ್ ಇಲ್ಲಿ ಯಾಕೆ ಇಲ್ಲ
ನಿರ್ದೇಶಕ ಸುರೇಂದರ್ ರೆಡ್ಡಿ ಸಾರಥ್ಯದಲ್ಲಿ ಮೂಡಿ ಬಂದ ಸೈರಾ ನರಸಿಂಹ ರೆಡ್ಡಿ ಸಿನಿಮಾ ಬೆಳ್ಳಂಬೆಳಗ್ಗೆ ಪ್ರದರ್ಶನವಾಗುತ್ತಿದೆ. ಬೆಂಗಳೂರಿನಲ್ಲಿ 3 ಗಂಟೆಗೆ ಸೈರಾ ಶೋ ಪ್ರಾರಂಭವಾಗಿದೆ. ನಿರೀಕ್ಷೆ, ಕುತೂಹಲದೊಂದಿಗೆ ತೆರೆಗೆ ಬಂದ ಸೈರಾ ಫಸ್ಟ್ ಡೇ ಫಸ್ಟ್ ಶೋ ನೋಡಿದ ಅಭಿಮಾನಿಗಳು ಹೇಳಿದ್ದೇನು? ಸೈರಾ ಸಿನಿಮಾ ಬಗ್ಗೆ ಪ್ರೇಕ್ಷಕರು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದೇನು? ಮುಂದೆ ಓದಿ..

ಪ್ರತಿಯೊಬ್ಬರು ನೋಡಲೆ ಬೇಕಾದ ಸಿನಿಮಾ
"ಪ್ರತಿಯೊಬ್ಬ ಮೆಗಾ ಫ್ಯಾನ್ಸ್, ಪ್ರತಿಯೊಬ್ಬ ಸಿನಿಮಾ ಅಭಿಮಾನಿಯೂ ಸೈರಾ ನರಸಿಂಹ ನೋಡಿದವರು ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಎಂದು ನಿಂತು ಸೆಲ್ಯೂಟ್ ಮಾಡಬೇಕು. ಅವರ ಅಭಿನಯ ಅದ್ಭುತವಾಗಿದೆ. ಚಿರಂಜೀವಿ ಅವರ ಈ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಚಿರಂಜೀವಿ ಆಗಲಿದೆ" ಎಂದು ಬರೆದುಕೊಂಡಿದ್ದಾರೆ.
'ಸೈರಾ' ಸಿನಿಮಾದ ಟಿಕೆಟ್ ರೇಟ್ ಕೇಳಿ ಬೆಚ್ಚಿಬಿದ್ದ ಕನ್ನಡ ಪ್ರೇಕ್ಷಕರು

ಮಗನಿಂದ ತಂದೆಗೆ ಅದ್ಭುತ ಗಿಫ್ಟ್
"ತಾಂತ್ರಿಕವಾಗಿ ಸಿನಿಮಾ ಅದ್ಭುತವಾಗಿದೆ. ಅಸಾಧಾರಣವಾದ ಛಾಯಗ್ರಾಹಣ, ಭಾವನೆ ಮತ್ತು ಬ್ಯಾಗ್ರೌಂಡ್ ಸ್ಕೋರ್, ಆಕ್ಷನ್ ದೃಶ್ಯಗಳು ಅತ್ಯುತ್ತಮವಾದ ಚಲನಚಿತ್ರವನ್ನು ನೋಡುವ ಭಾವನೆ ನೀಡುತ್ತೆ. ಮೊದಲಾರ್ಧ ಮಂದಗತಿಯಲ್ಲಿ ಇದೆ. ಉಳಿದಂತೆ ಸಿನಿಮಾ ಉತ್ತಮವಾಗಿದೆ. ರಾಮ್ ಚರಣ್ ತಂದೆಗೆ ಉತ್ತಮವಾದ ಗಿಫ್ಟ್ ನೀಡಿದ್ದಾರೆ. ದ್ವಿತೀಯಾರ್ಧದಲ್ಲಿ ಸ್ಕ್ರೀನ್ ಪ್ಲೇ ಅದ್ಭುತವಾಗಿದೆ. ಹಾಲಿವುಡ್ ಸಿನಿಮಾದ ವಾರ್ ದೃಶ್ಯ ನೋಡಿದ ಹಾಗೆ ಆಗುತ್ತೆ" ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.
'ಸೈರಾ' ಚಿತ್ರತಂಡಕ್ಕೆ ವಿಶೇಷ ಅಡುಗೆ ಮಾಡಿ ಬಡಿಸಿದ ಕಿಚ್ಚ ಸುದೀಪ್

ಸೈರಾ ಚಿತ್ರದ ದೃಶ್ಯಗಳು ಬೆರಗುಗೊಳಿಸುತ್ತೆ
"ಸೈರಾ ಚಿತ್ರದ ದೃಶ್ಯಗಳು ಬೆರಗುಗೊಳಿಸುತ್ತೆ. ಡಿಸೈನ್, ಆಕ್ಷನ್, ವಿ ಎಫ್ ಎಕ್ಸ್ ಕೆಲಸ, ಸಂಗೀತ, ಅದ್ಭುತವಾಗಿದೆ. ಪ್ರತಿಯೊಬ್ಬರ ಶ್ರಮ ಚಿತ್ರದಲ್ಲಿ ಕಾಣುತ್ತಿದೆ. ತನ್ನ ತಂದೆಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಯನ್ನು ನೀಡಿದ್ದಕ್ಕಾಗಿ ರಾಮ್ ಚರಣ್ ಗೆ ಹ್ಯಾಟ್ಸಾಫ್" ಎಂದು ಹೇಳಿದ್ದಾರೆ.

ಕ್ಲೈಮ್ಯಾಕ್ಸ್ ಅತ್ಯದ್ಭುತ
"ಸೈರಾ ಎಪಿಕ್ ಸಿನಿಮಾದಲ್ಲಿ ಸಾಕಷ್ಟು ದೃಶ್ಯಗಳು ರೋಮಾಂಚನ ಗೊಳಿಸುತ್ತೆ. ಚಿತ್ರದ ಪ್ರತಿಯೊಂದು ದೃಶ್ಯವು ಅದ್ಭುತ. ಮಧ್ಯದಲ್ಲಿ ಕೊಂಚ ಬೋರಿಂಗ್ ಆಗಿದೆ. ಆದ್ರೆ ಕ್ಲೈಮ್ಯಾಕ್ಸ್ ಅತ್ಯದ್ಭುತವಾಗಿದೆ. ಚಿರಂಜೀವಿ ಅವರ ಅಸಾಧಾರಣ ಅಭಿನಯ" ಎಂದು ಹೇಳಿದ್ದಾರೆ.