For Quick Alerts
  ALLOW NOTIFICATIONS  
  For Daily Alerts

  Dobaaraa Movie Review: ಅನುರಾಗ್-ತಾಪ್ಸಿ ಮಿಂಚಿನ ಹೊಡೆತ

  By ಮಾಧುರಿ ವಿ
  |

  ''ನಡೆದ ಸಂಗತಿಗಳನ್ನೆಲ್ಲ ಬಿಡಿ ಬಿಡಿಯಾಗಿ ನಿನು ನಿನ್ನ ತಲೆಯಲ್ಲಿ ಒಂದಕ್ಕೊಂದು ಜೋಡಿಸುತ್ತಾ ಹೋಗು'' ಇದು ತಾಪ್ಸಿ ಪನ್ನು ನಟಿಸಿ, ಅನುರಾಗ್ ಕಶ್ಯಪ್ ನಿರ್ದೇಶನ ಮಾಡಿರುವ 'ದೊಬಾರಾ' ಸಿನಿಮಾದಲ್ಲಿ ಬರುವ ಸಂಭಾಷಣೆ. ಸಿನಿಮಾ ನೋಡುವ ಪ್ರೇಕ್ಷಕನೂ ಸಹ ಹೀಗೆಯೇ ಮಾಡಬೇಕಾಗುತ್ತದೆ. ಬಿಡಿ ಬಿಡಿಯಾದ ದೃಶ್ಯಗಳನ್ನು ಜೋಡಿಸುತ್ತಾ ಹೋಗಿ ಕತೆಯನ್ನು ಆಸ್ವಾದಿಸಬೇಕು.

  ಇಂಟರ್ವೆಲ್ ಬರುವವರೆಗೆ ಚಿತ್ರಮಂದಿರದ ಪರದೆಗೆ ನೆಟ್ಟ ದೃಷ್ಟಿಯನ್ನು ಕದಲಿಸಲಾಗದು. ಅತ್ತಿತ್ತ ನೋಡಿದರೆ ಕತೆಯ ಮುಖ್ಯ ಅಂಶವೊಂದನ್ನೆಲ್ಲಿ ಮಿಸ್ ಮಾಡಿಕೊಳ್ಳುತ್ತೀವೋ ಎಂಬ ಆತಂಕ ಪ್ರೇಕ್ಷಕನದ್ದಾಗಿರುತ್ತದೆ.

  ಪ್ರೇಕ್ಷಕ ಸಿನಿಮಾದ ಕತೆಯನ್ನು ಮುಳುಗಿ ಹೋಗುವಂತೆ ಮಾಡುವಲ್ಲಿ ಅನುರಾಗ್ ಕಶ್ಯಪ್ ಮತ್ತು ತಂಡ ಯಶಸ್ವಿಯಾಗಿದೆ. ಸಿನಿಮಾದಲ್ಲಿ ನಟಿಸಿರುವ ನಟರ ನಟನೆ ಹಾಗೂ ಸೀಟಿನಂಚಿನಲ್ಲಿ ಕೂತು ಸಿನಿಮಾ ನೋಡುವಂತೆ ಮಾಡುವುದರಲ್ಲಿ ಅನುರಾಗ್ ಕಶ್ಯಪ್ ಮತ್ತು ಚಿತ್ರಕತೆ ಬರಹಗಾರ ನಿಹಿತ್ ಬಾವೆ ಗೆದ್ದಿದ್ದಾರೆ. ಸಮಯದ ಬಗ್ಗೆ ಹೇಳಲಾಗಿರುವ ಈ ಕತೆಯನ್ನು ಕತೆ ನಡೆಯುವ ಭಿನ್ನ ಭಿನ್ನ ಕಾಲಮಾನದ ಬಗ್ಗೆ ಇನ್ನಷ್ಟು ಡೀಟೇಲ್ ಮಾಹಿತಿ ನೀಡಿದ್ದಿದ್ದರೆ ಇನ್ನೂ ಪರಿಣಾಮಕಾರಿಯಾಗಿರುತ್ತಿತ್ತು.

  ಕತೆ ಏನು?

  ಕತೆ ಏನು?

  ಕತೆ ಸ್ಥಿತವಾಗಿರುವುದು ಪುಣೆಯಲ್ಲಿ. ಕತೆಯ ಮುಖ್ಯ ಪಾತ್ರ ಅಂತರಾ (ತಾಪ್ಸಿ ಪನ್ನು) ಇಲ್ಲಿ ನರ್ಸ್. ತನ್ನ ಪತಿ ಹಾಗೂ ಮಗನೊಟ್ಟಿಗೆ ಹೊಸ ಮನೆಯೊಂದಕ್ಕೆ ಬರುತ್ತಾರೆ. ಆಕೆಗೆ ಗೊತ್ತಾಗುತ್ತದೆ ತಾನು ವಾಸವಿರು ಮನೆಯಲ್ಲಿ ಮುಂಚೆ 12 ವರ್ಷದ ಅನಯ್ ಹೆಸರಿನ ಹುಡುಗನೊಬ್ಬ ಇದ್ದ ಎಂದು. 26 ವರ್ಷದ ಹಿಂದೆ ಭಾರಿ ಗುಡುಗು ಮಳೆ ತುಂಬಿದ ದಿನವೊಂದರಲ್ಲಿ ದೊಡ್ಡ ವಾಹನದ ಅಡಿಗೆ ಸಿಲುಕಿ ಆತ ಮರಣ ಹೊಂದಿದ್ದಾನೆ.

  ಕೊನೆಗೆ ಏನಾಗುತ್ತದೆ?

  ಕೊನೆಗೆ ಏನಾಗುತ್ತದೆ?

  ಪ್ರಸ್ತುತ, ತಾಪ್ಸಿ ಪನ್ನು ತನ್ನ ಮನೆಯಲ್ಲಿ ಹಳೆಯ ಟಿವಿ ಒಂದನ್ನು ನೋಡುತ್ತಾಳೆ ಆ ದಿನವೂ ಭಾರಿ ಗುಡುಗು ಸಹಿತ ಮಳೆ ಬರುತ್ತಿದೆ. ಆಕೆ ಆ ಹಳೆಯ ಟಿವಿ ಆನ್ ಮಾಡಿದಾಗ ಆ ಟಿವಿಯಲ್ಲಿ 26 ವರ್ಷದ ಹಿಂದೆ ಮರಣ ಹೊಂದಿರುವ ಆ ಹುಡುಗ ಅನಯ್ ಕಾಣಿಸುತ್ತಾನೆ. ಅಂತರ ಆ ಹುಡುಗನೊಟ್ಟಿಗೆ ಮಾತನಾಡಲು ಆರಂಭಿಸುತ್ತಾಳೆ. ಆತನ ಗೆಳೆಯನೊಬ್ಬನಿಂದ ಅವನ ದುರಂತ ಅಂತ್ಯದ ಬಗ್ಗೆ ತಿಳಿದುಕೊಳ್ಳುತ್ತಾಳೆ. ಸಮಯದಲ್ಲಿ ಹಿಂದೆ ಹೋಗಿ ಆ ಹುಡುಗನಿಗೆ ಆಗಬೇಕಾಗಿದ್ದ ದುರಂತ ಅಂತ್ಯ ತಪ್ಪಿಸುವ ಯತ್ನ ಮಾಡುತ್ತಾಳೆ. ಆದರೆ ತಾಪ್ಸಿ ಸಮಯದಲ್ಲಿ ಹಿಂದಕ್ಕೆ ಹೋದ ಕಾರಣದಿಂದ ವರ್ತಮಾನದಲ್ಲಿ ವ್ಯತ್ಯಾಸವಾಗುತ್ತದೆ. ಸಮಯದಲ್ಲಿ ಹಿಂದೆ ಹೋಗಿ ಬದಲಾಯಿಸಿದ ಕಾರಣ ಆ ನಂತರ ನಡೆದ ಘಟನೆಗಳು ಓರೆ-ಕೋರೆ ಆಗಿಬಿಡುತ್ತವೆ. ಕೊನೆಗೆ ಅಂತರಾ, ತನ್ನ ವಿವೇಕದ ಬಗ್ಗೆಯೂ ಅನುಮಾನ ಪಡುತ್ತಾಳೆ. ಸಮಾಜವೂ ಅನುಮಾನ ಪಡುವಂತೆ ಆಗುತ್ತಾಳೆ.

  ನಿರ್ದೇಶನ ಹೇಗಿದೆ?

  ನಿರ್ದೇಶನ ಹೇಗಿದೆ?

  ಸ್ಪ್ಯಾನಿಷ್ ಸಿನಿಮಾ 'ಮಿರಾಜ್'ನ ಅಧಿಕೃತ ರೀಮೇಕ್ ಹಿಂದಿಯ ಈ 'ದೊಬಾರಾ'. ಚಿತ್ರಕತೆ ಬರಹಗಾರ ನಿಹಿತ್ ಭಾವೆ ಹಾಗೂ ಅನುರಾಗ್ ಕಶ್ಯಪ್ ಈ ಸಿನಿಮಾವನ್ನು ಭಾರತದ ಜಾಯಮಾನಕ್ಕೆ ಒಗ್ಗಿಸಿ ಕಟ್ಟಿಕೊಟ್ಟಿದ್ದಾರೆ. ಪ್ರೇಕ್ಷಕನನ್ನು ಈ ಸಿನಿಮಾ ಎಂಗೇಜ್ ಆಗಿಡುತ್ತದೆ ಈ ಸಿನಿಮಾದ ಟ್ವಿಸ್ಟ್‌ ಹಾಗೂ ಟರ್ನ್‌ಗಳಿಂದ. ಪ್ರೇಕ್ಷಕ ಕತೆಯಲ್ಲಿ ಮುಳುಗಿ ಹೋಗುವಂತೆ ಮಾಡುವಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ಯಶಸ್ವಿಯಾಗಿದ್ದಾರೆ.

  ಕೆಲವೊಮ್ಮೆ ಗೊಂದಲ ಆಗುತ್ತದೆ

  ಕೆಲವೊಮ್ಮೆ ಗೊಂದಲ ಆಗುತ್ತದೆ

  ಅದೆಷ್ಟು ಬಿಗಿಯಾಗಿ ಚಿತ್ರಕತೆ ಹೆಣೆಯಲಾಗಿದೆ ಎಂದರೆ ಕೆಲವೊಂದು ದೃಶ್ಯಗಳಲ್ಲಿ ವಿವರಣೆಯ ಅಗತ್ಯತೆ ಇತ್ತೇನೋ ಎನ್ನಿಸುವಷ್ಟು ಬಿಗಿಯಾಗಿದೆ. ಟೈಮ್ ಟ್ರಾವೆಲರ್ ಕತೆಯಾಗಿರುವ ಕಾರಣ ಯಾವ ಸಮಯದಲ್ಲಿ ಯಾವ ಸೀನ್ ನಡೆಯುತ್ತಿದೆ ಎಂಬುದು ಕೆಲವೆಡೆ ಗೊತ್ತಾಗುವುದಿಲ್ಲ, ಆ ಬಗ್ಗೆ ಇನ್ನಷ್ಟು ಗಮನವಹಿಸಿದ್ದಿದ್ದರೆ ಸಿನಿಮಾ ನೋಡುವಾಗ ಪ್ರೇಕ್ಷಕನಿಗೆ ಅಲ್ಲಲ್ಲಿ ಆಗುವ ಗೊಂದಲವನ್ನು ತೊಲಗಿಸಬಹುದಿತ್ತು. ಟೈಮ್ ಟ್ರಾವೆಲ್, ಮಿಸ್ಟರಿ, ಕೊಲೆ ಎಲ್ಲ ವಿಷಯಗಳನ್ನು ಚೆನ್ನಾಗಿ ಹ್ಯಾಂಡಲ್ ಮಾಡಿರುವ ನಿರ್ದೇಶಕರು, ಭಾವುಕ ಸನ್ನಿವೇಶಕ್ಕೆ ಇನ್ನಷ್ಟು ಆಳ ನೀಡಬೇಕಿತ್ತು.

  ನಟನೆ ಹೇಗಿದೆ?

  ನಟನೆ ಹೇಗಿದೆ?

  ಅಮಿತಾಬ್ ಬಚ್ಚನ್ ಜೊತೆಗೆ 'ಬದ್ಲಾ' ಸಿನಿಮಾದಲ್ಲಿ ನಟಿಸಿದ ಬಳಿಕ ತಾಪ್ಸಿ ಪನ್ನು ಇದೀಗ ಮತ್ತೆ ಒರಿಯೊ ಪಾಲೊ ಸೃಷ್ಟಿಸಿರುವ ಅದ್ಭುತ ಥ್ರಿಲ್ಲರ್ ಮಿಸ್ಟರಿ ಕತೆಯ ಭಾಗವಾಗುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ತಾಪ್ಸಿ ನಟಿಸಿದ್ದ 'ಬದ್ಲಾ' ಸಹ ಒರಿಯೊ ಪಾಲೊ ನಿರ್ದೇಶಿಸಿದ್ದ ಸ್ಪ್ಯಾನಿಶ್ ಸಿನಿಮಾದ ರೀಮೇಕ್ ಆಗಿತ್ತು. 'ದೊಬಾರಾ' ಸಿನಿಮಾದ ಮೂಲಕ ಮತ್ತೊಮ್ಮೆ ತಮ್ಮ ನಟನಾ ಶಕ್ತಿ, ಕೌಶಲ ಪ್ರದರ್ಶಿಸಿದ್ದಾರೆ. ತಾಪ್ಸಿ ಪನ್ನು ಹೊರತಾಗಿ ಪವೈಲ್ ಗುಲಾಟಿ ಸಹ ಅದ್ಭುತವಾಗಿ ನಟಿಸಿದ್ದಾರೆ. ಕಡಿಮೆ ಅವಕಾಶವಿದ್ದರೂ ಶ್ವೇತಾ ಚಟರ್ಜಿ ನಟನೆ ರೋಮಾಂಚನ ಗೊಳಿಸುವುದು ಗ್ಯಾರೆಂಟಿ. ಪತ್ನಿಗೆ ಮೋಸ ಮಾಡುವ ಪತಿಯಾಗಿ ರಾಹುಲ್ ಭಟ್ ನಟನೆಯೂ ಚೆನ್ನಾಗಿದೆ.

  ತಾಂತ್ರಿಕ ಅಂಶಗಳು

  ತಾಂತ್ರಿಕ ಅಂಶಗಳು

  ಸಿನಿಮಾಟೊಗ್ರಾಫರ್ ಸಿಲ್ವೆಸ್ಟರ್ ಫೋನ್ಸೆಕಾ ನೆರಳು ಬೆಳಕಿನ ಆಟದೊಟ್ಟಿಗೆ ದೃಶ್ಯಗಳು ಮನಸ್ಸಿಗೆ ಇಳಿಯುವಂತೆ ಚಿತ್ರಿಸಿದ್ದಾರೆ. ಆರ್ತಿ ಬಾಲಾಜಿಯ ಎಡಿಟಿಂಗ್ ಸಹ ಗುಣಮಟ್ಟದ್ದು. ಸಂಗೀತ ಕೂಡ ದೃಶ್ಯಗಳಿಗೆ ಪೂರಕವಾಗಿ ಒದಗಿಬಂದಿದೆ. ಆದರೆ ಹಾಡುಗಳಿಗೆ ಮತ್ತೆ ಕೇಳುವ ಒದಗಿಬಂದಿಲ್ಲ. ಅನುರಾಗ್ ಹಾಗೂ ತಾಪ್ಸಿ ಪನ್ನು ಒಲಿಯೋಲ್ ಪಾಲೊನ 'ಮಿರಾಜ್' ಸಿನಿಮಾದಿಂದ ಪಕ್ಕಾ ಥ್ರಿಲ್ಲರ್ ಸಿನಿಮಾವನ್ನು ಹೊರಗೆಳೆದಿದ್ದಾರೆ. ಈ ಸಿನಿಮಾಕ್ಕೆ ಐದರಲ್ಲಿ ಮೂರು ಸ್ಟಾರ್‌ಗಳನ್ನು ಕೊಡಬಹುದು.

  English summary
  Taapsee Pannu starrer Dobara Hindi movie review in Kannada. Movie directed by Anurag Kashyap.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X