»   » ಟ್ವಿಟ್ಟರ್ ವಿಮರ್ಶೆ: 'ಟಗರು' ಮಾರ್ನಿಂಗ್ ಶೋ ನೋಡಿದ ಪ್ರೇಕ್ಷಕರು ಖುಷಿಯೋ ಖುಷಿ

ಟ್ವಿಟ್ಟರ್ ವಿಮರ್ಶೆ: 'ಟಗರು' ಮಾರ್ನಿಂಗ್ ಶೋ ನೋಡಿದ ಪ್ರೇಕ್ಷಕರು ಖುಷಿಯೋ ಖುಷಿ

Posted By:
Subscribe to Filmibeat Kannada
Film Review : Tagaru | ಟಗರು ಮೈ ಎಲ್ಲ ಪೊಗರು | Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ರಿಲೀಸ್ ಆಗಿದೆ. ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಮುಂಜಾನೆಯೇ ಮೊದಲ ಶೋ ಪ್ರದರ್ಶನವಾಗಿದೆ. ಈಗಾಗಲೇ 5 ಗಂಟೆ 6 ಗಂಟೆ ಶೋಗಳು ಮುಗಿದು ಚಿತ್ರ ಹೇಗಿದೆ ಎಂಬುದು ಹೊರಬಿದ್ದಿದೆ.

ಟಗರು ಸಿನಿಮಾವನ್ನ ಮೊದಲ ಶೋನಲ್ಲೇ ಕಣ್ತುಂಬಿಕೊಂಡು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. 'ಟಗರು' ಚಿತ್ರದಲ್ಲಿ ಯಾರಿಗೆ ಪೊಗರು, ಡಾಲಿ, ಚಿಟ್ಟೆ, ಕಾಕ್ರೋಚ್ ಕಥೆ ಏನು? ಸೂರಿಯ ಸುಕ್ಕ ಈ ಚಿತ್ರದಲ್ಲಿ ಎಷ್ಟಿದೆ ಎಂಬುದನ್ನ ಬಿಚ್ಚಿಟ್ಟಿದ್ದಾರೆ.

ಹಾಗಿದ್ರೆ, ಟಗರು ಸಿನಿಮಾ ನೋಡಿ ಮೊದಲ ಪ್ರೇಕ್ಷಕರು ಸಿನಿಮಾ ಬಗ್ಗೆ ಏನಂದ್ರು? ಶಿವಣ್ಣ, ಧನಂಜಯ್, ವಸಿಷ್ಠ ಸಿಂಹ ಅವರ ನಟನೆಗೆ ಎಷ್ಟು ಮಾರ್ಕ್ಸ್ ಕೊಟ್ರು ಎಂದು ತಿಳಿಯಲು ಮುಂದೆ ಓದಿ....

ಚಿಂದಿ ಸ್ಕ್ರೀನ್ ಪ್ಲೇ

''ಟಗರು ಚಿತ್ರದ ಸ್ಕ್ರೀ ಪ್ಲೇ ಚಿಂದಿ ಆಗಿದೆ. ನಿರ್ದೇಶಕ ಸೂರಿಯ ಕಲ್ಪನೆ ಊಹಿಸಲು ಸಾಧ್ಯವಿಲ್ಲ. ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಡಾಲಿ ಧನಂಜಯ್. ಇನ್ನು ಡಾಲಿಯ ಹ್ಯಾಂಗೋವರ್ ನಲ್ಲೇ ಇದ್ದೀನಿ. ಶಿವಣ್ಣನ ಎನರ್ಜಿಗೆ ಮಾತೇ ಇಲ್ಲ''

ವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರು

ಸುಕ್ಕ ಸೂರಿಗೆ ಮಾರ್ಕ್ಸ್

ಟಗರು ಇಂಟರ್ ವಲ್ ಬಂತು. ಮೊದಲಾರ್ಧ ಇಂಟರೆಸ್ಟಿಂಗ್ ಆಗಿದೆ. ಧನಂಜಯ್ ಅದ್ಭುತ ಅಭಿನಯ ಮತ್ತು ಫರ್ಫಾಮೆನ್ಸ್ ಕೊಟ್ಟಿದ್ದಾರೆ. ಸುಕ್ಕ ಸೂರಿಗೆ ಮಾರ್ಕ್ಸ್

ಡೆಡ್ಲಿ ನಿರೂಪಣೆ

ಟಗರು ನಿರೂಪಣೆ ಸಖತ್ ಡೆಡ್ಲಿ ಆಗಿದೆ. ಧನಂಜಯ್ ಅವರ ಅಭಿನಯದ ಚಿತ್ರದ ಹೈಲೈಟ್. ಯಾರೂ ಮಿಸ್ ಮಾಡ್ಕೋಬೇಡಿ ಹಾಗೂ ತಡ ಮಾಡಬೇಡಿ. ಈಗಲೆ ನೋಡಿ

ಶಿವಣ್ಣನ ಪೊಗರು ಸೂಪರ್

ಟಗರು ಔಟ್ ಅಂಡ್ ಔಟ್ ಶಿವಣ್ಣನ ಸಿನಿಮಾ. ಪೂರ್ತಿ ಸಿನಿಮಾ ಚೆನ್ನಾಗಿದೆ. ಧನಂಜಯ್ ಅಂತೂ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ವಸಿಷ್ಠ ಸಿಂಹ ಕೂಡ ಸಾಥ್ ನೀಡಿದ್ದಾರೆ. ನಿರ್ದೇಶಕ ಸೂರಿ ಹೊಸ ಸ್ಟೈಲ್ ಸಿನಿಮಾ, ಹೊಸ ಚಿತ್ರಕಥೆ ಹೊಸ ರೀತಿ ನಿರೂಪಣೆ ಮಾಡಿದ್ದಾರೆ. ಸಂಗೀತ ಮತ್ತು ಕ್ಯಾಮೆರಾ ವರ್ಕ್ ಅದ್ಭುತವಾಗಿದೆ. ಶಿವಣ್ಣನ ಪೊಗರು ಸೂಪರ್.

ಡಾಲಿ ಪಾತ್ರಕ್ಕೆ ಜೈಕಾರ

ಟಗರು ಸಿನಿಮಾ ಸೂಪರ್. ಡಾಲಿ ಪಾತ್ರವಂತೂ ಮನಸ್ಸಿನಲ್ಲಿ ಅಚ್ಚಳಿಯದಾಗೆ ಕೂರುತ್ತೆ. ನಿಜಕ್ಕೂ ಧನಂಜಯ್ ಗೆ ಹ್ಯಾಟ್ಸಾಪ್.

ಮಚ್ಚು-ರೊಚ್ಚು-ಕೊಚ್ಚು

ಟಗರು ಚಿತ್ರದಲ್ಲಿ ಯಾವ ಮಟ್ಟಿಗೆ ಮಾಸ್ ಎಲಿಮೆಂಟ್ಸ್ ಇದೆ ಎಂಬುದನ್ನ ಬಹಳ ಚೆನ್ನಾಗಿ ಕಾಮೆಂಟ್ ಮಾಡಿದ್ದಾರೆ ಪ್ರೇಕ್ಷಕ.

ಉಪ್ಪಿಯಂತೆ ಮೇಕಿಂಗ್

ಟಗರು ವರ್ಸಸ್ ಡಾಲಿ. ಧನಂಜಯ್ ಮತ್ತು ವಸಿಷ್ಠ ಸಿಂಹ ಫರ್ಫಾಮೆನ್ಸ್ ಅದ್ಭುತ. ಸ್ಕ್ರೀನ್ ಪ್ಲೇ ಉಪೇಂದ್ರ ಶೈಲಿಯಲ್ಲಿದೆ. ಕ್ಯಾಮೆರಾ ವರ್ಕ್, ಹಿನ್ನೆಲೆ ಸಂಗೀತ ಸೂಪರ್. ಟೈಟಲ್ ಸಾಂಗ್ ಅಂತೂ ಚಿಂದಿ.

English summary
Kannada Actor Shivarajkumar starrer Tagaru movie has released on today (february 23rd). movie get positive response in twitter. the movie directed by duniya soori.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada