Tagaru Palya Review: 'ಟಗರು ಪಲ್ಯ' ಪಕ್ಕಾ ನಾನ್ ವೆಜ್.. ಅದ್ಧೂರಿ ಬಾಡೂಟ ಸಿಗೋದು ಗ್ಯಾರಂಟಿ

By ರಕ್ಷನ್

Rating:
3.0/5

ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ. ಪರಭಾಷೆ ಸಿನಿಮಾಗಳ ಕಾಂಪಿಟೇಷನ್. ಇವುಗಳ ಮಧ್ಯೆ ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ ಮರೀಚಿಕೆಯಂತಾಗಿತ್ತು. ಒಂದೊಳ್ಳೆ ಹಳ್ಳಿ ಕಥೆಗಳು ನೋಡದೆ ಜನರು ಮರೆತೇ ಬಿಡುವಂತಹ ಸ್ಥಿತಿಯಿತ್ತು. ಆದ್ರೀಗ ಪಕ್ಕಾ ಹಳ್ಳಿ ಕಥೆಯೊಂದು ತೆರೆಮೇಲೆ ಮೂಡಿದೆ. ಅದುವೇ 'ಟಗರು ಪಲ್ಯ'.

ಡಾಲಿ ಧನಂಜಯ್ ನಿರ್ಮಿಸಿರುವ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿರೋದು ಹಾಸ್ಯ ನಟ ನಾಗಭೂಷಣ ಹಾಗೂ ಅಮೃತಾ ಪ್ರೇಮ್. ನಾಗಭೂಷಣ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ. ಅದೇ ಅಮೃತಾ ಪ್ರೇಮ್‌ಗೆ ಇದು ಮೊದಲ ಸಿನಿಮಾ. ಹೀಗಾಗಿ ಇಬ್ಬರ ಭವಿಷ್ಯವೂ ಈ ಸಿನಿಮಾ ಮೇಲೆನೇ ನಿಂತಿದೆ.

tagaru-palya-review

ಈಗಾಗಲೇ ರಿಲೀಸ್ ಆಗಿರೋ 'ಟಗರು ಪಲ್ಯ' ಸಿನಿಮಾದ ಟ್ರೈಲರ್ ಹಾಗೂ ಟೀಸರ್ ಸಿನಿಮಾದ ಕಥೆಯನ್ನು ಬಿಟ್ಟುಕೊಟ್ಟಿವೆ. ಹಾಗಂತ ಸಿನಿಮಾ ನೋಡದೇ ಇದ್ದರೆ ನಷ್ಟ ಆಗಬಹುದು. ಸಿನಿಮಾದ ಕಥೆ, ಕಲಾವಿದರ ನಟನೆ, ಡೈರೆಕ್ಷನ್ ಎಲ್ಲವೂ ಸೂಪರ್. ಹಾಗಂತ ಸಿನಿಮಾದಲ್ಲಿ ಬರೀ ಪ್ಲಸ್ ಇದೆ ಅಂತಲ್ಲ. ಹಾಗೇ ಮೈನಸ್‌ ಸಿನಿಮಾ ಮಾರಕ ಅಲ್ಲ.

ಟಗರು ಪಲ್ಯ ಕಥೆ ಏನು?

ಡಾಲಿ ಧನಂಜಯ್ ನಿರ್ಮಿಸಿರುವ 'ಟಗರು ಪಲ್ಯ' ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್. ಜೊತೆ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತೆ. ಮಂಡ್ಯ ಭಾಗದ ಹಳ್ಳಿಯೊಂದರ ದಂಪತಿ ರಂಗಾಯಣ ರಘು ಹಾಗೂ ತಾರಾ. ಅವರ ಮಗಳೇ ಅಮೃತಾ ಪ್ರೇಮ್. ಮಗಳ ಮದುವೆ ಫಿಕ್ಸ್ ಆಯ್ತು ಅಂತ ಹರಕೆ ತೀರಿಸಲು ಕುಟುಂಬ ಮುಂದಾಗುತ್ತೆ. ಟಗರು ತಂದು ಊರ ದೇವರಿಗೆ ಹರಕೆ ನೀಡಲು ಮುಂದಾಗುತ್ತಾರೆ. ಆ ವೇಳೆ ಟಗರು ಒದರುವುದಿಲ್ಲ. ಇಲ್ಲಿಂದ ಮುಂದೆ ನಡೆಯೋದೆಲ್ಲಾ ಡ್ರಾಮಾ.

ಬೆಳಗ್ಗೆಯಿಂದ ಸಂಜೆ ನಡೆಯೋ ಕಥೆ

'ಟಗರು ಪಲ್ಯ' ಒಂದೂ ದಿನವೂ ಅಲ್ಲ. ಬೆಳಗ್ಗೆಯಿಂದ ಸಂಜೆವರೆಗೂ ನಡೆಯೋ ಕಥೆ. ಇಷ್ಟರೊಳಗೆ ಏನೆಲ್ಲಾ ಡ್ರಾಮ ನಡೆಯುತ್ತೆ? ಅನ್ನೋದು ಸಿನಿಮಾದ ಹೈಲೈಟ್. ಪಕ್ಕಾ ಹಳ್ಳಿ ಸೊಗಡಿನ ಕಥೆ, ಹಳ್ಳಿ ಭಾಷೆ, ಹಳ್ಳಿ ಸೊಗಡನ್ನು ಈ ಸಿನಿಮಾದಲ್ಲಿ ತಂದಿದ್ದಾರೆ. ಹೀಗಾಗಿ ಪಕ್ಕಾ ಗ್ರಾಮೀಣ ಸಿನಿಮಾ ನೋಡಬೇಕು ಅನ್ನೋ ತುಡಿತ ಇರುವ ಸಿನಿಪ್ರಿಯರಿಗೆ 'ಟಗರು ಪಲ್ಯ' ಪಕ್ಕಾ ಮನರಂಜನೆ ನೀಡೋದು ಗ್ಯಾರಂಟಿ.

ಹೇಗಿದೆ ನಟನೆ?

'ಟಗರು ಪಲ್ಯ'ಗೆ ನಾಗಭೂಷಣ ನಾಯಕ. ಅವರ ಕಾಮಿಡಿ ಟೈಮಿಂಗ್ ಹಾಗೂ ಡೈಲಾಗ್ ಡಿಲಿವರಿ ತುಂಬಾನೇ ಇಷ್ಟ ಆಗುತ್ತೆ. ಅಮೃತಾ ಪ್ರೇಮ್‌ಗೆ ಇದು ಮೊದಲ ಸಿನಿಮಾ ಅಂತ ಅನಿಸೋದಿಲ್ಲ. ಸಿಕ್ಕ ಅವಕಾಶವನ್ನು ತುಂಬಾನೇ ನೀಟ್ ಆಗಿ ಬಳಸಿಕೊಂಡಿದ್ದಾರೆ. ಹೀಗಾಗಿ ನಾಗಭೂಷಣ ಹಾಗೂ ಅಮೃತಾ ಪ್ರೇಮ್ ಕಾಂಬಿನೇಷನ್ ನೋಡುವುದಕ್ಕೇನೆ ಚಂದ.

tagaru-palya-review

ರಂಗಾಯಣ ರಘು ರಿಯಲ್ ಹೀರೊ

ಈ ಸಿನಿಮಾದ ಅಸಲಿ ಹೀರೊ ರಂಗಾಯಣ ರಘು. ಇಡೀ ಸಿನಿಮಾವನ್ನು ರಂಗಾಯಣ ರಘು ಒಬ್ಬರೇ ಕ್ಯಾರಿ ಮಾಡಿದ್ದಾರೆ. ಮಂಡ್ಯ ಶೈಲಿಯ ಡೈಲಾಗ್ ಡಿಲೇವರಿ ನೋಡುಗರಿಗೆ ಕಿಕ್ ಕೊಡುತ್ತೆ. ಊರ ಹಿರಿಯನಾಗಿ ಬಿರಾದರ್ ನಟಿಸಿದ್ದಾರೆ. ಕುಡುಕನಾಗಿ ಕಾರ್ತಿಕ್, ಮದುವೆ ಗಂಡಿನ ಪಾತ್ರದಲ್ಲಿ ವಾಸುಕಿ ವೈಭವ್ ಕಾಮಿಡಿ ಕೂಡ ನೋಡುಗರಿಗೆ ಇಷ್ಟ ಆಗುತ್ತೆ.

ಸಿನಿಮಾದ ಪ್ಲಸ್ ಏನು?

ಟಗರು ಪಲ್ಯ ಸಿನಿಮಾ ಪ್ಲಸ್ ಪಾಯಿಂಟ್ ಪಾತ್ರವರ್ಗ. ನಾಗಭೂಷಣ, ಅಮೃತಾ ಪ್ರೇಮ್, ರಂಗಾಯಣ ರಘು, ತಾರಾ, ಬಿರಾದರ್ ಸೇರಿದಂತೆ ಎಲ್ಲರೂ ಅಭಿನಯದ ಸೂಪರ್ ಆಗಿದೆ. ಹಾಗೇ ಕಾಮಿಡಿ ಸೀನ್‌ಗಳು ಸಖತ್ ಮನರಂಜನೆ ನೀಡುತ್ತವೆ. ಉಮೇಶ್ ಕೆ ಕೃಪಾ ಅವರ ನಿರ್ದೇಶನ ನೀಟ್ ಆಗಿದೆ. ಇನ್ನು ಸಿನಿಮಾದ ಕೊನೆಯಲ್ಲಿ ಕೊಡುವ ಕ್ರೆಡಿಟ್ಸ್ ವೇಳೆ ಎಲ್ಲಾ ನಟರ ಫ್ಯಾಮಿಲಿ ಫೋಟೊಗಳನ್ನು ಹಾಕುತ್ತಾರೆ. ಅದು ಪಕ್ಕಾ ನಮ್ಮ ಕುಟುಂಬದ ನೆನಪಾಗುತ್ತೆ. ಬೇಡದೇ ಇರೋ ಕಮರ್ಷಿಯಲ್ ಎಲಿಮೆಂಟ್ಸ್ ಇಲ್ಲ. ಸ್ಲೋ ಮೋಷನ್ ಶಾಟ್ಸ್ ಇಲ್ಲ.

ಸಿನಿಮಾದ ಮೈನಸ್ ಏನು?

'ಟಗರು ಪಲ್ಯ' ಸಿನಿಮಾದ ಹಾಡುಗಳು ಆವರೇಜ್. ಒಮ್ಮೊಮ್ಮೆ ಈ ಹಾಡುಗಳನ್ನು ಇಲ್ಲಿ ಬೇಕಿತ್ತಾ ಅಂತ ಅನಿಸುತ್ತೆ. ಹಳ್ಳಿ ಶೈಲಿ ಬೈಗುಳಗಳು, ಪೋಲಿ ಗಾದೆಗಳು ಕೆಲವರಿಗೆ ಇರಿಸು ಮುರಿಸು ಅನಿಸಬಹುದು. ಇಲ್ಲವೇ ಅರ್ಧ ಆಗದೇ ಇರಬಹುದು. ಇವೆಲ್ಲಾ ಏನೇ ಇದ್ದರೂ ಸಂಬಂಜ ಅನ್ನೋದು ದೊಡ್ಡದು. ಅನ್ನೋದೇ ಸಿನಿಮಾದ ಜೀವಾಳ.

More from Filmibeat

English summary
Nagabhushan, Amrutha Prem, Dhananjay Movie Tagaru Palya Review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X