twitter
    For Quick Alerts
    ALLOW NOTIFICATIONS  
    For Daily Alerts

    Ponmagal Vanthal Review: ಗಂಭೀರ ವಿಷಯಕ್ಕೆ ಕುತೂಹಲಕಾರಿ ಕತೆಯ ಚೌಕಟ್ಟು

    |

    'ನಿಮ್ಮ ಮನೆಯಲ್ಲಿನ ಹೆಣ್ಣು ಮಕ್ಕಳನ್ನು ಕೇಳಿ ನೋಡಿ, ನಿಮ್ಮ ಪರಿಚಯದವರಿಂದಲೋ, ಸಂಬಂಧಿಗಳಿಂದಲೋ ಒಂದು ಬಾರಿಯಾದರೂ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿರುತ್ತಾರೆ...' ಕಣ್ಣಲ್ಲಿ ಸಿಟ್ಟು ಪ್ರದರ್ಶಿಸುತ್ತಾ ನಡುಗುವ ದನಿಯಲ್ಲಿ ಜ್ಯೋತಿಕ ಡೈಲಾಗ್ ಹೇಳುತ್ತಿದ್ದರೆ ಸಿನಿಮಾ ನೋಡುತ್ತಿದ್ದವರಿಗೂ ಕ್ಷಣ ಎದೆ ನಡುಗಿದ ಅನುಭವವಾಗುತ್ತದೆ.

    Recommended Video

    ಜಗ್ಗೇಶ್ ಸಂಭಾವನೆ ಹೆಚ್ಚಾಗಲು ಅಂಬರೀಷ್ ಹೇಗೆ ಕಾರಣ ಗೊತ್ತಾ? | Jaggesh | Ambareesh

    ಜ್ಯೋತಿಕಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಪೊನ್‌ಮಗಳ್ ವಂದಾಳ್' ತಮಿಳು ಸಿನಿಮಾ ಒಟಿಟಿ ಯಲ್ಲಿ ಬಿಡುಗಡೆ ಆಗಿದೆ. ಪತಿ ಸೂರ್ಯ ನಿರ್ಮಾಣದ ಈ ಸಿನಿಮಾವನ್ನು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ನೇರವಾಗಿ ಅಮೆಜಾನ್‌ ಪ್ರೈಂ ಗೆ ಮಾರಾಟ ಮಾಡಿ ಬಿಡುಗಡೆ ಮಾಡಲಾಗಿದೆ.

    ಅಂಗ್ರೇಜಿ ಮೀಡಿಯಂ: ಇರ್ಫಾನ್ ಅಭಿನಯ, ಮನಮುಟ್ಟುವ ''ಸ್ಪೀಚ್''ಅಂಗ್ರೇಜಿ ಮೀಡಿಯಂ: ಇರ್ಫಾನ್ ಅಭಿನಯ, ಮನಮುಟ್ಟುವ ''ಸ್ಪೀಚ್''

    'ಪೊನ್‌ಮಗಳ್ ವಂದಾಳ್' ಅನ್ನು ಕನ್ನಡೀಕರಿಸಿದರೆ 'ಅಮೂಲ್ಯ ರಾಜಕುಮಾರಿ ಆಗಮಿಸಿದಳು' ಎಂದಾಗುತ್ತದೆ. 'ಪೊನ್‌ಮಗಳ್ ವಂದಾಳ್' ಎಂದು ಯುವತಿಯರನ್ನು ಕಿಚಾಯಿಸಲು ಅಥವಾ ಪ್ರಿಯತಮೆಯನ್ನು ಓಲೈಸಿ ಬಳಸಲಾಗುತ್ತಿತ್ತು, ಆದರೆ ಈ ಸಿನಿಮಾದಲ್ಲಿ ಅದರ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿ ಇಡೀಯ ಹೆಣ್ಣು ಮಕ್ಕಳನ್ನು ರಾಜಕುಮಾರಿ ಎನ್ನಲಾಗಿದೆ, ಆ ರಾಜಕುಮಾರಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಮಾತನಾಡಲಾಗಿದೆ.

    Rating:
    3.5/5

    ಹೆಣ್ಣು ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಕತೆ

    ಹೆಣ್ಣು ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಕತೆ

    ಪುಟ್ಟ ಹೆಣ್ಣು ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಸಿನಿಮಾ ಚರ್ಚೆ ಮಾಡುತ್ತದೆ. ಆದರೆ ಈ ಗಂಭೀರ ವಿಷಯವನ್ನು ವಾಚ್ಯವಾಗಿಸುವ ಬದಲಿಗೆ ಅದಕ್ಕೊಂದು ಕುತೂಹಲದ ಸಿನಿಮ್ಯಾಟಿಕ್ ಕೋನ ನೀಡಲೆಂದು ಕೊಲೆ ಅದರ ತನಿಖೆ, ನ್ಯಾಯಾಲಯದಲ್ಲಿ ವಾದ ಹೀಗೆ ಆಕಾರವನ್ನು ನೀಡಲಾಗಿದೆ. ಇದು ನಿರ್ದೇಶಕ-ಕತೆಗಾರನ ಜಾಣ್ಮೆ.

    ಜ್ಯೋತಿಕ ಭಾವಪೂರ್ಣ ಅಭಿನಯ

    ಜ್ಯೋತಿಕ ಭಾವಪೂರ್ಣ ಅಭಿನಯ

    ತಾಯಿಯಾಗಿ, ನೊಂದ ಹೆಣ್ಣು ಮಗಳಾಗಿ, ನ್ಯಾಯಕ್ಕಾಗಿ ಪರಿತಪಿಸುವ ವಕೀಲೆಯಾಗಿ ಹೀಗೆ ಹಲವು ಆಯಾಮಗಳ ಎರಡು ಪಾತ್ರಗಳಲ್ಲಿ ಜ್ಯೋತಿಕ ಕಾಣಿಸಿಕೊಂಡಿದ್ದಾರೆ. ನಗುವಾಗಲು, ಅಳುವಾಗಲು, ಸೋತಾಗಲೂ, ಗೆದ್ದಾಗಲೂ ಅವರ ಅಭಿನಯ ಸಮಚಿತ್ತವಾಗಿದೆ. ಸಿನಿಮಾದಿಂದ ಕೆಲಕಾಲ ದೂರವುಳಿದಿದ್ದರೂ ನಟನೆ ಅವರಿಂದ ದೂರಾಗಿಲ್ಲ.

    'ಕಾಣದಂತೆ ಮಾಯವಾದನು' Review: ಫ್ಯಾಂಟಸಿಯೊಳಗೆ ಹಲವು ಮುಖ'ಕಾಣದಂತೆ ಮಾಯವಾದನು' Review: ಫ್ಯಾಂಟಸಿಯೊಳಗೆ ಹಲವು ಮುಖ

    ಅಂತ್ಯದ ವರೆಗೆ ಕುತೂಹಲ ಉಳಿಸಿಕೊಳ್ಳುವ ಕತೆ

    ಅಂತ್ಯದ ವರೆಗೆ ಕುತೂಹಲ ಉಳಿಸಿಕೊಳ್ಳುವ ಕತೆ

    ಆರಂಭದಿಂದ ಅಂತ್ಯದ ವರೆಗೆ ಕುತೂಹಲ ಉಳಿಸಿಕೊಳ್ಳುವ ಕತೆ, ಕೊನೆಯಲ್ಲಿ ತುಸುವೇ ಪಟ್ಟು ಸಡಿಲಿಸಿದಂತೆ ಭಾಸವಾಗುತ್ತದೆ. ಆರಂಭದಿಂದ ಬಿಗಿಯಾಗಿದ್ದ ಕೊಲೆ ಪ್ರಕರಣದ ಪಟ್ಟು ಕೊನೆಯಲ್ಲಿ ಒಮ್ಮೆಲೆ ಜಾಳಾಗಿ, ಕೊಲೆ ಆರೋಪಿ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುವುದು ಒಟ್ಟಾರೆ ಕತೆಗೆ ಹೋಲಿಸಿದರೆ ಪೇಲವ ಎನಿಸುತ್ತದೆ. ಕೆಲವು ಪಾತ್ರಗಳನ್ನಂತು ಸುಮ್ಮನೆ ಸೃಷ್ಟಿಸಲಾಗಿದೆ. ಜಡ್ಜ್ ಜೊತೆಗೆ ಕುಡಿಯುವ ವ್ಯಕ್ತಿ, ಜ್ಯೋತಿಕ ಅಪ್ಪನ ವಕೀಲೆ ಗೆಳತಿ ಇವರೆಲ್ಲಾ ಸಿನಿಮಾದುದ್ದಕ್ಕೂ ಇದ್ದರು ಸಹ ಅವರ ಪಾತ್ರಗಳಿಗೆ ಪ್ರಾಮುಖ್ಯತೆ ಇಲ್ಲ.

    ಗಮನ ಸೆಳೆದಿದ್ದಾರೆ ಜೆಜೆ ಫೆಡ್ರಿಕ್

    ಗಮನ ಸೆಳೆದಿದ್ದಾರೆ ಜೆಜೆ ಫೆಡ್ರಿಕ್

    ಸುಂದರ ದೃಶ್ಯಗಳು ಸಿನಿಮಾದ ಪ್ರಮುಖ ಅಂಶ, ಹಿನ್ನೆಲೆ ಸಂಗೀತ ಕತೆಗೆ ಪೂರಕ. ಜ್ಯೋತಿಕ ಅಭಿನಯದ ಮುಂದೆ ಇತರ ಪಾತ್ರಧಾರಿಗಳ ಅಭಿನಯ ಮಸುಕೆನಿಸುತ್ತದೆ. ಮೊದಲ ಪ್ರಯತ್ನದಲ್ಲಿ ನಿರ್ದೇಶಕ ಜೆಜೆ ಫೆಡ್ರಿಕ್ ಗಮನ ಸೆಳೆದಿದ್ದಾರೆ. ಗೋವಿಂದ ವಸಂತ ಸಂಗೀತ ಚೆನ್ನಾಗಿದೆ. ಸಿನಿಮಾಟೊಗ್ರಾಫರ್ ರಾಮ್ಜಿ ಗೆ ಹೆಚ್ಚಿನ ಅಂಕ ದೊರೆಯುತ್ತದೆ.

    English summary
    Jothika's Ponmagal Vanthal movie released in Amazon Prime. Its a watchable movie.
    Wednesday, June 10, 2020, 0:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X