'ಹೆಬ್ಬೆಟ್ ರಾಮಕ್ಕ' ವಿಮರ್ಶೆ: ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ

ಮಹಿಳಾ ಮೀಸಲಾತಿಯ ದುರುಪಯೋಗ, ಕಪಟ ರಾಜಕಾರಣಿಯ ಅಧಿಕಾರದ ದಾಹ, ಮಧ್ಯಮ ವರ್ಗದ ಕುಟುಂಬದಲ್ಲಿನ ದುಡ್ಡಿನ ಮೋಹ, ಒಂದು ಹಳ್ಳಿಯಲ್ಲಿ ನಡೆಯಬಹುದಾದ ರಾಜಕೀಯ ಕುತಂತ್ರ, ಒಂದು ಹೆಣ್ಣು ಮನಸ್ಸು ಮಾಡಿದರೆ ಸಮಾಜವನ್ನೇ ಉದ್ಧಾರ ಮಾಡಬಹುದು ಎಂಬ ಸಂದೇಶ... ಈ ಎಲ್ಲವನ್ನೂ ಅಚ್ಚುಕಟ್ಟಾಗಿ ಕಟ್ಟಿಕೊಡುವ ಚಿತ್ರ 'ಹೆಬ್ಬೆಟ್ ರಾಮಕ್ಕ'.

Rating:
4.5/5
Star Cast: ತಾರಾ, ದೇವರಾಜ್
Director: ಎನ್.ಆರ್.ನಂಜುಂಡೇ ಗೌಡ

'ರಾಮಕ್ಕ'ನ ವೃತ್ತಾಂತ

'ರಾಮಕ್ಕ'ನ ವೃತ್ತಾಂತ

ಮದುವೆ ಆಗಿ ಎರಡು ಮಕ್ಕಳಿರುವ ರಾಮಕ್ಕ ಅಕ್ಷರಶಃ ಹೆಬ್ಬೆಟ್ಟು. ಆಕೆಗೆ ರುಜು ಹಾಕುವುದು ಇರಲಿ, ಓದಲು, ಬರೆಯಲೂ ಬರುವುದಿಲ್ಲ. ಮನೆಗೆಲಸ ಮಾಡಿಕೊಂಡು, ಹೊಲ ನೋಡಿಕೊಂಡು ಇರುವ ರಾಮಕ್ಕನಿಗೆ ರಾಜಕೀಯದ ಕುರಿತು ಎಳ್ಳಷ್ಟು ಗೊತ್ತಿಲ್ಲ. ಇಂತಿಪ್ಪ ರಾಮಕ್ಕ ಜಿಲ್ಲಾ ಪಂಚಾಯತಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಳ್ತಾರೆ. ಆ ಬಳಿಕ ನಡೆಯುವ ರಾಜಕೀಯ ಚದುರಂಗದಾಟವೇ 'ಹೆಬ್ಬೆಟ್ ರಾಮಕ್ಕ'.

ಮಹಿಳಾ ಮೀಸಲಾತಿ ದುರುಪಯೋಗ

ಮಹಿಳಾ ಮೀಸಲಾತಿ ದುರುಪಯೋಗ

'ಸಮಪಾಲು, ಸಮಬಾಳು' ಆಧಾರದ ಮೇಲೆ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತಂದರೆ ಆಗಬಹುದಾದ ಅಧಿಕಾರದ ದುರುಪಯೋಗ ಮತ್ತು ಅಕ್ರಮವೇ 'ಹೆಬ್ಬೆಟ್ ರಾಮಕ್ಕ' ಚಿತ್ರದಲ್ಲಿನ ಕಥಾವಸ್ತು.

ಸ್ಫೂರ್ತಿ ತುಂಬುವ ಸಿನಿಮಾ

ಸ್ಫೂರ್ತಿ ತುಂಬುವ ಸಿನಿಮಾ

'ಮಹಿಳೆಯರು ವಿದ್ಯಾವಂತರಾದರೆ, ದೇಶ ಅಭಿವೃದ್ಧಿ ಆಗಲು ಸಾಧ್ಯ' ಎಂಬ ಸಂದೇಶ ಸಾರುವ ಸಿನಿಮಾ 'ಹೆಬ್ಬೆಟ್ ರಾಮಕ್ಕ'. ಓದು-ಬರಹ ಗೊತ್ತಿಲ್ಲದಿದ್ದರೂ, ತನಗೆ ಮತ ಹಾಕಿರುವ ಜನತೆಗೆ ಮೋಸ ಆಗಬಾರದು ಎಂಬ ಕಳಕಳಿ ಹೊಂದಿರುವ ರಾಮಕ್ಕ ಖಂಡಿತ ಎಲ್ಲ ರಾಜಕಾರಣಿಗಳಿಗೂ ಸ್ಫೂರ್ತಿ. 'ಹೆಬ್ಬೆಟ್ಟು ರಾಮಕ್ಕ' ಚಿತ್ರ ಸಮಾಜದ ತೊಂದರೆಗಳ ವಿರುದ್ಧ ಕದನ ಮಾಡುವುದನ್ನು ಪರಿಣಾಮಕಾರಿಯಾಗಿ ತೋರಿಸುತ್ತದೆ. ವಿದ್ಯೆ ಬಗ್ಗೆ ನಿರಾಸಕ್ತಿ ತೋರುವ ಪ್ರತಿ ಹೆಣ್ಣು ನೋಡಲೇಬೇಕಾದ ಸಿನಿಮಾ ಇದು. ಚಿತ್ರದಲ್ಲಿ ಕಮರ್ಶಿಯಲ್ ಅಂಶಗಳು ಕಮ್ಮಿ ಇದ್ದರೂ, ಮನರಂಜನೆಗೆ ಮೋಸ ಮಾಡಲ್ಲ.

ರಾಮಕ್ಕನಿಗೆ ಜೀವ ತುಂಬಿರುವ ತಾರಾ

ರಾಮಕ್ಕನಿಗೆ ಜೀವ ತುಂಬಿರುವ ತಾರಾ

ಅನಕ್ಷರಸ್ಥ ಮಹಿಳೆ ರಾಮಕ್ಕನ ಪಾತ್ರದಲ್ಲಿ ನಟಿ ತಾರಾ ಅಭಿನಯ ನೈಜವಾಗಿದೆ. ವಿದ್ಯಾವಂತೆ ಅಲ್ಲದೇ ಇದ್ದರೂ, ಮತ ಹಾಕಿದ ಜನರಿಗಾಗಿ ಅಕ್ಷರ ಕಲಿತು ಕ್ಷೇತ್ರ ಅಭಿವೃದ್ಧಿ ಮಾಡುವ ರಾಮಕ್ಕ ಪಾತ್ರಕ್ಕೆ ನಟಿ ತಾರಾ ಜೀವ ತುಂಬಿ ಅಭಿನಯಿಸಿದ್ದಾರೆ.

ದುಡ್ಡಿನ ಆಸೆಗೆ ಬೀಳುವ ಪತಿರಾಯ

ದುಡ್ಡಿನ ಆಸೆಗೆ ಬೀಳುವ ಪತಿರಾಯ

ಪತ್ನಿಯ ಹೆಸರಿನಲ್ಲಿ ಆಡಳಿತ ನಡೆಸಲು ಮುಂದಾಗುವ ರಾಮಕ್ಕನ ಪತಿ ಕಲ್ಲೇಶಪ್ಪನ ಪಾತ್ರದಲ್ಲಿ ದೇವರಾಜ್ ಅಭಿನಯ ಚೆನ್ನಾಗಿದೆ.

ಹಳ್ಳಿ ಸೊಗಡಿನ ಚಿತ್ರ

ಹಳ್ಳಿ ಸೊಗಡಿನ ಚಿತ್ರ

'ಹೆಬ್ಬೆಟ್ ರಾಮಕ್ಕ' ಅಪ್ಪಟ ಹಳ್ಳಿ ಸೊಗಡಿನ ಚಿತ್ರ. ಕಥೆಯ ಅಗತ್ಯಕ್ಕೆ ತಕ್ಕಂತೆ ಮೂರು ಹಾಡುಗಳು ಚಿತ್ರದಲ್ಲಿವೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನದ ಹಾಡುಗಳು ಓಕೆ. ಅನವಶ್ಯಕ ಸನ್ನಿವೇಶಗಳಿಗೆ ಆಸ್ಪದ ಕೊಡದೇ, ಚಿತ್ರಕಥೆಯನ್ನ ತೀರಾ ಎಳೆಯದೆ, ಪ್ರೇಕ್ಷಕರನ್ನ ಹಿಡಿದು ಕೂರಿಸುವಲ್ಲಿ ನಿರ್ದೇಶಕ ನಂಜುಂಡೇ ಗೌಡ ಯಶಸ್ವಿ ಆಗಿದ್ದಾರೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿನಿಮಾ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿನಿಮಾ

'ಹೆಬ್ಬೆಟ್ ರಾಮಕ್ಕ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಸಿನಿಮಾದಲ್ಲಿ ಕಮರ್ಶಿಯಲ್ ಅಂಶಗಳು ಇಲ್ಲ ಅಂದ ಮಾತ್ರಕ್ಕೆ ಮಾಸ್ ಆಡಿಯನ್ಸ್ ಮೂಗು ಮುರಿಯುವ ಅವಶ್ಯಕತೆ ಇಲ್ಲ. ಯಾಕಂದ್ರೆ, 'ಹೆಬ್ಬೆಟ್ ರಾಮಕ್ಕ' ಪ್ರತಿಯೊಬ್ಬರೂ ನೋಡಬಹುದಾದ ಸಿನಿಮಾ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ 'ಹೆಬ್ಬೆಟ್ ರಾಮಕ್ಕ' ಚಿತ್ರವನ್ನ ನೋಡಿ ಮುಂಬರುವ ಚುನಾವಣೆಯಲ್ಲಿ ಉತ್ತಮ ಜನಪ್ರತಿನಿಧಿಯನ್ನು ಆರಿಸಿ.

More from Filmibeat

English summary
Read Kannada Actress Tara and Kannada Actor Devaraj starrer Kannada Movie 'Hebbet Ramakka' review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X