Tatsama Tadbava Review: ಪ್ರಜ್ವಲ್ 'ತತ್ಸಮ'.. ಮೇಘನಾ 'ತದ್ಭವ'.. ತಲೆಗೆ ಹುಳ ಬಿಡುವ ಕ್ಲೈಮ್ಯಾಕ್ಸ್

By ಯಶವಂತ್

Rating:
3.5/5
Star Cast: Prajwal Devaraj, Meghana Raj, Shruti,
Director: Vishal Atreya

'ತತ್ಸಮ ತದ್ಬವ' ಇಂದು (ಸೆಪ್ಟೆಂಬರ್ 15) ತೆರೆಕಂಡಿರೋ ಕನ್ನಡದ ನಿರೀಕ್ಷಿತ ಸಿನಿಮಾ. ಇಷ್ಟೊಂದು ನಿರೀಕ್ಷೆ ಯಾಕೆ ಅಂದರೆ, ಇದು ಮೇಘನಾ ರಾಜ್ ಕಮ್‌ಬ್ಯಾಕ್ ಮಾಡಿದ ಸಿನಿಮಾ. ಚಿರು ಅಗಲಿದ ಬಳಿಕ ಮತ್ತೆ ಬದುಕು ಕಟ್ಟಿಕೊಳ್ಳುತ್ತಿರುವ ಮೇಘನಾ ಕರಿಯರ್‌ಗೂ ಈ ಸಿನಿಮಾ ತುಂಬಾ ಮುಖ್ಯ.

ಮೇಘನಾ ರಾಜ್ ಸರ್ಜಾಗೆ ಚಿತ್ರರಂಗದ ಗಣ್ಯರು ಹಾಗೂ ತಾರೆಯರು ಜೊತೆಯಾಗಿದ್ದಾರೆ. ಮೇಘನಾ ರಾಜ್ ಜೊತೆಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ನಡುವಿನ ಸನ್ನಿವೇಶಗಳು ಸಿನಿಮಾದ ಹೈಲೈಟ್.

Tatsama Tadbava Review in Kannada: Prajwal Devaraj, Sruthi Starrer Crime Thriller Movie Review

ಕನ್ನಡ ಚಿತ್ರರಂಗಕ್ಕೆ ಇಂತಹ ಸಿನಿಮಾ ಬೇಕು. ಇತ್ತೀಚೆಗೆ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ಬರೋದೇ ಅಪರೂಪ. ಈಗ 'ತತ್ಸಮ ತದ್ಬವ' ರಿಲೀಸ್ ಆಗಿದ್ದು, ಸಿನಿಮಾ ಪ್ರೇಕ್ಷಕರಿಗೆ ಹಿಡಿಸುತ್ತಾ? ಸಿನಿಮಾ ಪ್ಲಸ್ ಏನು? ಮೈನಸ್ ಏನು? ಎಲ್ಲವನ್ನು ತಿಳಿಯಲು ಮುಂದೆ ಓದಿ..

'ತತ್ಸಮ ತದ್ಬವ' ಹಿನ್ನೆಲೆ ಏನು?

ಮೇಘನಾ ರಾಜ್ ಪಾತ್ರದಿಂದಲೇ ಈ ಸಿನಿಮಾ ಶುರುವಾಗುತ್ತೆ. ಮೇಘನಾ ಪೊಲೀಸ್ ಠಾಣೆಗೆ ಹೋಗಿ "ನನ್ನ ಗಂಡ ಮಿಸ್ಸಿಂಗ್" ಅಂತ ದೂರನ್ನು ನೀಡುತ್ತಾರೆ. ಇಲ್ಲಿಂದ ದೂರಿನ ತನಿಖೆ ಆರಂಭ. ಪ್ರಜ್ವಲ್ ದೇವರಾಜ್ ಪೊಲೀಸ್ ಅಧಿಕಾರಿಯಾಗಿ ಈ ಕೇಸ್ ಅನ್ನು ಹ್ಯಾಂಡಲ್ ಮಾಡುತ್ತಾರೆ. ಗಂಡ ಮಿಸ್ಸಿಂಗ್ ಅಂತ ಶುರುವಾದ ಕಥೆ ಮರ್ಡರ್‌ವರೆಗೂ ಬಂದು ನಿಲ್ಲುತ್ತೆ. ಮರ್ಡರ್ ಮಾಡಿದ್ದು ಯಾರು? ಹೇಗಾಯ್ತು? ಮಿಸ್ಸಿಂಗ್ ಆಗಿದ್ದು ಹೇಗೆ? ಹೀಗೆ ತನಿಖೆ ನಡೆಯುತ್ತಾ ಮುಂದೆ ಸಾಗುತ್ತೆ.

ಥ್ರಿಲ್ಲಿಂಗ್.. ಎಮೋಷನ್..ಕನ್ಪ್ಯೂಷನ್

'ತತ್ಸಮ ತದ್ಬವ' ಎರಡು ಪ್ರಮುಖ ಪಾತ್ರಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಸಿನಿಮಾ. ಇದರಲ್ಲಿ ಥ್ರಿಲ್ಲಿಂಗ್ ಎಲಿಮೆಂಟ್ಸ್ ಇವೆ. ಎಮೋಷನಲ್ ಎಲಿಮೆಂಟ್ಸ್‌ ಇವೆ. ಪ್ರೇಕ್ಷಕರನ್ನು ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡುವಂತಹ ಗೊಂದಲದ ಸನ್ನಿವೇಶಗಳು ಇವೆ. ಯಾವುದೇ ಕ್ಯಾರೆಕ್ಟರ್‌ಗಳು ಅನಾವಶ್ಯಕವಾಗಿ ಬಂದು ಹೋಗುತ್ತಿವೆ ಅಂತ ಅನಿಸೋದೇ ಇಲ್ಲ.

Tatsama Tadbava Review in Kannada: Prajwal Devaraj, Sruthi Starrer Crime Thriller Movie Review

ಇಂಟರ್‌ವಲ್ ಸಿನಿಮಾ ಸಖತ್ ಥ್ರಿಲ್ಲಿಂಗ್

'ತತ್ಸಮ ತದ್ಬವ' ಸಿನಿಮಾ ಇಂಟರ್‌ವಲ್ ವೇಳೆಗೆ ಕುತೂಹಲ ಘಟ್ಟಕ್ಕೆ ಬಂದು ತಲುಪುತ್ತೆ. ತನಿಖೆ ಸಾಗುತ್ತಾ ಮೇಘನಾ ರಾಜ್ ಮೇಲೆ ಅನುಮಾನ ಬರುವಂತಹ ಘಟ್ಟಕ್ಕೆ ಬಂದು ನಿಲ್ಲುತ್ತೆ. ಹಾಗಂತ ಇಲ್ಲಿ ಸಿನಿಮಾ ದೊಡ್ಡ ಸೀಕ್ರೆಟ್ ರಿವೀಲ್ ಆಗಿದೆ ಅಂತಲ್ಲ. ಅಸಲಿ ಸಿನಿಮಾ ಇಲ್ಲಿಂದ ಆರಂಭ ಅಂತ ಅರ್ಥ. ಅದಕ್ಕೆ ಇಂಟರ್‌ವಲ್ ಪ್ರೇಕ್ಷಕರನ್ನು ಕುತೂಹಲ ಹಂತಕ್ಕೆ ನಿಮ್ಮನ್ನು ನಿಲ್ಲಿಸುತ್ತೆ.

ಮೊದಲ ಬಾರಿಗೆ ಗೆದ್ದ ನಿರ್ದೇಶಕ

'ತತ್ಸಮ ತದ್ಬವ' ಸಿನಿಮಾವನ್ನು ವಿಶಾಲ್ ಆತ್ರೇಯ ನಿರ್ದೇಶನ ಮಾಡಿದ್ದಾರೆ. ಇದು ನಿರ್ದೇಶಕರ ಚೊಚ್ಚಲ ಸಿನಿಮಾ. ಹಾಗಂತ ದೊಡ್ಡ ದೊಡ್ಡ ತಪ್ಪುಗಳನ್ನು ಹುಡುಕಲು ಅಸಾಧ್ಯವೆನಿಸುವಂತೆ ಸಿನಿಮಾವನ್ನು ಮಾಡಿದ್ದಾರೆ. ಸಿನಿಮಾ ಎಲ್ಲೂ ಬೋರ್ ಹೊಡೆಸಿದ್ದಾರೆ ಅಂತ ಅನಿಸುವುದಿಲ್ಲ. ಅಲ್ಲಲ್ಲಿ ಎಕ್ಸ್‌ಪೆರಿಮೆಂಟ್ ಮಾಡಿದ್ದಾರೆ. ಹೀಗಾಗಿ ಇಡೀ ಸಿನಿಮಾ ಥ್ರಿಲ್ಲಿಂಗ್ ಫೀಲ್ ಕೊಡುತ್ತಲೇ ಮುಂದಕ್ಕೆ ಸಾಗುತ್ತೆ.

ಪಸ್ಲ್ ಏನು? ಮೈನಸ್ ಏನು?

ಸಿನಿಮಾದ ಪ್ಲಸ್ ಪಾಯಿಂಟ್ ಏನಂದ್ರೆ, ಇಡೀ ಸಿನಿಮಾವನ್ನು ಪ್ರಜ್ವಲ್ ದೇವರಾಜ್ ಹಾಗೂ ಮೇಘನಾ ರಾಜ್ ಆವರಿಸಿಕೊಂಡಿದ್ದಾರೆ. ಶ್ರುತಿ ಪಾತ್ರ ತುಂಬಾನೇ ಮುಖ್ಯ. ಥ್ರಿಲ್ಲಿಂಗ್, ಎಮೋಷನ್ಸ್ ಸೀನ್‌ಗಳಿವೆ. ತಾಯಿ ಮಗಳ ಬಾಂಧವ್ಯ ಚೆನ್ನಾಗಿದೆ. ಹಾಗೇ ಶ್ರುತಿ ಪಾತ್ರ ಕಥೆಗೆ ಟ್ವಿಸ್ಟ್ ನೀಡಲಿದೆ. ವಾಸುಕಿ ವೈಭವ್ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾ ಕ್ಲೈಮ್ಯಾಕ್ಸ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಪಾಸಿಟಿವ್ ಹೊರತಾಗಿಯೂ ಕೆಲವು ಮೈನಸ್ ಇದೆ. ಸಿನಿಮಾ ಸೈಕಾಲಜಿಕಲ್ ಥ್ರಿಲ್ಲರ್ ಆಗಿದ್ದರೂ, ಹಾಸ್ಯ ಸನ್ನಿವೇಶಗಳು ಇಡಬೇಕಿತ್ತು ಅಂತ ಅನಿಸುತ್ತೆ. ಸಂಗೀತ ಪ್ರಿಯರಿಗೆ ಹಾಡುಗಳ ಕೊರತೆ ಎದ್ದು ಕಾಣಬಹುದು.

More from Filmibeat

English summary
Prajwal Devaraj, Sruthi Hariharan, Meghana Raj Starring Tatsama Tadbava Movie Review in Kannada:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X