ಶಿವಣ್ಣ ನಟನೆಯ ವೇದ ತೆಲುಗು ವರ್ಷನ್ ನೋಡಿದ ಪ್ರೇಕ್ಷಕರು ಹೇಳಿದ್ದೇನು? ಹಿಟ್ಟಾ ಫ್ಲಾಪಾ?

ಕಳೆದ ವರ್ಷದ ಅಂತಿಮ ತಿಂಗಳಿನಲ್ಲಿ ಬಿಡುಗಡೆಗೊಂಡಿದ್ದ ಶಿವ ರಾಜ್‌ಕುಮಾರ್ ಹಾಗೂ ಎ ಹರ್ಷ ಕಾಂಬಿನೇಶನ್‌ನ ವೇದ ಚಿತ್ರ ಸಿನಿ ರಸಿಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಭಜರಂಗಿ, ವಜ್ರಕಾಯ ಹಾಗೂ ಭಜರಂಗಿ 2 ರೀತಿಯ ಚಿತ್ರಗಳನ್ನು ನೀಡಿದ್ದ ಈ ಜೋಡಿ ಆ ಜೋನ್‌ನಿಂದ ಸಂಪೂರ್ಣವಾಗಿ ಹೊರಬಂದು ಒಂದು ವಿಭಿನ್ನ ಚಿತ್ರವನ್ನು ನೀಡಿತ್ತು.

ತಂದೆ ಹಾಗೂ ಮಗಳು ಹೆಣ್ಣು ಮಕ್ಕಳ ಮೇಲೆ ನಡೆಯುವ ಶೋಷಣೆ ವಿರುದ್ಧ ನಡೆಸುವ ರಕ್ತಸಿಕ್ತ ಹೋರಾಟದ ಕಥೆಯನ್ನು ಹೊಂದಿದ್ದ ವೇದ ಫ್ಯಾಮಿಲಿ ಆಡಿಯನ್ಸ್‌ಗಳಿಂದ ಮೆಚ್ಚುಗೆ ಪಡೆದುಕೊಂಡಿತ್ತು ಹಾಗೂ ಇಂತಹ ಕಥೆಗಳಲ್ಲಿ ನಟಿಸುವತ್ತ ಸ್ಟಾರ್ ನಟರು ಆಸಕ್ತಿ ತೋರಿ ಸಮಾಜಕ್ಕೆ ಸಂದೇಶ ರವಾನಿಸಬೇಕು ಎಂದು ಹೊಗಳಿದ್ದರು.

ಇನ್ನು ವೇದ ಚಿತ್ರ ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಅದೇ ದಿನ ತಮಿಳಿಗೂ ಸಹ ಡಬ್ ಆಗಿ ಬಿಡುಗಡೆಗೊಂಡಿತ್ತು. ಕನ್ನಡದಲ್ಲಿ ಪ್ರಶಂಸೆ ಗಿಟ್ಟಿಸಿಕೊಂಡಂತೆ ತಮಿಳು ಸಿನಿ ರಸಿಕರಿಂದಲೂ ಸಹ ವೇದ ಚಿತ್ರ ಒಳ್ಳೆಯ ವಿಮರ್ಶೆಗಳನ್ನು ಪಡೆದುಕೊಂಡಿತ್ತು. ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಒಳ್ಳೊಳ್ಳೆ ಚಿತ್ರಗಳು ಬರುತ್ತಿದ್ದು, ಅಂತಹ ಚಿತ್ರಗಳ ಸಾಲಿಗೆ ಇದೀಗ ವೇದ ಸಹ ಸೇರಿಕೊಂಡಿದೆ ಎಂದು ಚಿತ್ರಮಂದಿರದಿಂದ ಹೊರಬಂದಿದ್ದ ತಮಿಳು ಪ್ರೇಕ್ಷಕರು ವೇದ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದರು. ಹೀಗೆ ಕನ್ನಡ ಹಾಗೂ ತಮಿಳು ಸಿನಿ ಪ್ರೇಕ್ಷಕರಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದ ವೇದ ಚಿತ್ರ ಈಗ ತೆಲುಗಿಗೆ ಡಬ್ ಆಗಿ 'ಶಿವ ವೇದ' ಎಂಬ ಶೀರ್ಷಿಕೆಯಲ್ಲಿ ಇಂದು ( ಫೆಬ್ರವರಿ 9 ) ತೆಲುಗು ರಾಜ್ಯಗಳಲ್ಲಿ ಬಿಡುಗಡೆಗೊಂಡಿದ್ದು, ಚಿತ್ರದ ಮೊದಲ ಶೋ ನೋಡಿ ಹೊರಬಂದ ಸಿನಿ ರಸಿಕರು ಚಿತ್ರ ಹೇಗಿದೆ ಎಂಬುದನ್ನು ತೆಲುಗು ಯುಟ್ಯೂಬ್ ಚಾನೆಲ್‌ಗಳ ಕ್ಯಾಮೆರಾ ಮುಂದೆ ತಿಳಿಸಿದ್ದಾರೆ. ಹಾಗಿದ್ದರೆ ವೇದ ನೋಡಿದ ಸಿನಿ ರಸಿಕರು ಹೇಳಿದ್ದೇನು, ತೆಲುಗಿನಲ್ಲಿ ಚಿತ್ರ ಹಿಟ್ಟಾ, ಫ್ಲಾಪಾ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಚಿತ್ರದ ಹೀರೊ ಶಿವಣ್ಣ ಅಲ್ಲ, ಮಹಿಳೆಯರೇ!

ಚಿತ್ರದ ಹೀರೊ ಶಿವಣ್ಣ ಅಲ್ಲ, ಮಹಿಳೆಯರೇ!

ವೇದ ಚಿತ್ರದಲ್ಲಿ ಶಿವಣ್ಣನಷ್ಟೇ ಸ್ಕೋಪ್ ಹಾಗೂ ಪ್ರಾಮುಖ್ಯತೆ ಚಿತ್ರದಲ್ಲಿ ನಟಿಸಿರುವ ನಟಿಯರಿಗೆ ಇದೆ. ಆಕ್ಷನ್ ದೃಶ್ಯಗಳಲ್ಲೂ ಅಬ್ಬರಿಸಿರುವ ಅದಿತಿ ಸಾಗರ್, ಘಾನವಿ ಲಕ್ಷ್ಮಣ್ ಹಾಗೂ ಶ್ವೇತಾ ಚೆಂಗಪ್ಪ ಚಿತ್ರಮಂದಿರಗಳಲ್ಲಿ ಸಿನಿ ರಸಿಕರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಅದೇ ರೀತಿ ತೆಲುಗು ಸಿನಿ ರಸಿಕನೋರ್ವನೂ ಸಹ ಚಿತ್ರವನ್ನು ವೀಕ್ಷಿಸಿದ ಬಳಿಕ ಚಿತ್ರದಲ್ಲಿ ಶಿವಣ್ಣ ಅಲ್ಲ, ಮಹಿಳೆಯರೇ ಹೀರೊಸ್ ಎಂದು ಹೇಳಬಹುದು ಎಂದಿದ್ದಾರೆ. ಚಿತ್ರ ಎಲ್ಲಿಯೂ ಬೋರ್ ಹೊಡೆಸದೇ, ಕೆಜಿಎಫ್ ರೀತಿ ಎಲಿವೇಶನ್ ಸೀನ್ಸ್‌ಗಳೊಂದಿಗೆ ಸಾಗುತ್ತೆ, ಒಳ್ಳೆಯ ಹಿಟ್‌ನೊಂದಿತೆ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟ ಶಿವ ರಾಜ್‌ಕುಮಾರ್ ಅವರಿಗೆ ಟಾಲಿವುಡ್‌ಗೆ ಸ್ವಾಗತ ಎಂದು ಹೇಳಿಕೊಂಡಿದ್ದಾರೆ . ಎಎನ್‌ವಿ ಟಾಕೀಸ್ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಈ ಹೇಳಿಕೆಯನ್ನು ಪ್ರೇಕ್ಷಕರು ನೀಡಿದ್ದಾರೆ.

ಚಿತ್ರಕ್ಕೆ ಮಹಿಳಾ ಸಿನಿ ರಸಿಕರು ಫಿದಾ

ಚಿತ್ರಕ್ಕೆ ಮಹಿಳಾ ಸಿನಿ ರಸಿಕರು ಫಿದಾ

ಇನ್ನು ಕನ್ನಡ ಹಾಗೂ ತಮಿಳಿನಲ್ಲಿ ಮಹಿಳೆಯರಿಗೆ ಹೆಚ್ಚು ಇಷ್ಟವಾಗಿದ್ದ ವೇದ ಚಿತ್ರ ತೆಲುಗಿನಲ್ಲೂ ಸಹ ಮಹಿಳಾ ಸಿನಿ ರಸಿಕರಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿದೆ. ಚಿತ್ರ ನೋಡಿದ ಬಳಿಕ ಕ್ಯಾಮೆರಾ ಮುಂದೆ ಬಂದ ತೆಲುಗು ಮಹಿಳಾ ಸಿನಿ ಪ್ರೇಕ್ಷಕರು ಇಂತಹ ಚಿತ್ರಗಳು ಹೆಚ್ಚೆಚ್ಚು ಬರಬೇಕು, ಇಂತಹ ಕಥೆಗಳಿಂದ ಮಹಿಳೆಯರು ಮತ್ತಷ್ಟು ಬಲಿಷ್ಠರಾಗ್ತಾರೆ, ಶೋಷಣೆಯ ವಿರುದ್ಧ ತಿರುಗಿ ಬೀಳ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ತುಸು ಬೇಗನೇ ಬಿಡುಗಡೆ ಮಾಡಬೇಕಿತ್ತು

ತುಸು ಬೇಗನೇ ಬಿಡುಗಡೆ ಮಾಡಬೇಕಿತ್ತು

ಸದ್ಯ ತೆಲುಗಿನಲ್ಲಿ ಬಿಡುಗಡೆಯಾಗಿರುವ ಶಿವ ವೇದ ಚಿತ್ರವನ್ನು ವೀಕ್ಷಿಸಿರುವ ತೆಲುಗು ಸಿನಿ ಪ್ರೇಕ್ಷಕರು ಚಿತ್ರಕ್ಕೆ ನೀಡುತ್ತಿರುವ ಒಳ್ಳೆಯ ಪ್ರತಿಕ್ರಿಯೆಯನ್ನು ನೋಡಿದರೆ, ಚಿತ್ರವನ್ನು ಇನ್ನೂ ತುಸು ಮುಂಚಿತವಾಗಿಯೇ ಬಿಡುಗಡೆ ಮಾಡಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗುವುದು ಸಹಜ. ಕನ್ನಡ ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಿ ಒಂದು ತಿಂಗಳು ಕಳೆದ ಬಳಿಕ ತೆಲುಗಿನಲ್ಲಿ ಬಿಡುಗಡೆಯಾಗಿರುವುದು ತೀರಾ ತಡವಾಗಿದ್ದು, ಮೊದಲೇ ಬಿಡುಗಡೆಯಾಗಿದ್ದರೆ ಇನ್ನೂ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಬಹುದಿತ್ತು. ಅಲ್ಲದೇ ಚಿತ್ರ ನಾಳೆ ( ಫೆಬ್ರವರಿ 10 ) ಓಟಿಟಿಯಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಇದರಲ್ಲಿ ತೆಲುಗು ವರ್ಷನ್ ಸಹ ಸೇರಿರುವುದು ಸದ್ಯ ಹಿನ್ನಡೆಯ ಅಂಶವಾಗಿದೆ

More from Filmibeat

English summary
Telugu audience compared Shiva Vedha movie with KGF and praised it. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X