»   » 'ಖೈದಿ ನಂ-150' ಟ್ವಿಟ್ಟರ್ ವಿಮರ್ಶೆ: ಬಾಸ್ ಈಸ್ ಬ್ಯಾಕ್ !

'ಖೈದಿ ನಂ-150' ಟ್ವಿಟ್ಟರ್ ವಿಮರ್ಶೆ: ಬಾಸ್ ಈಸ್ ಬ್ಯಾಕ್ !

Posted By:
Subscribe to Filmibeat Kannada

ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಖೈದಿ ನಂ-150' ಚಿತ್ರ ಇಂದು ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಮೊದಲ ದಿನ ಭರ್ಜರಿ ಒಪನಿಂಗ್ ಮಾಡಿದೆ.

ಸುಮಾರು 10 ವರ್ಷಗಳ ನಂತರ ಮತ್ತೆ ಬಿಗ್ ಸ್ಕ್ರೀನ್ ಗೆ ಮರಳಿರುವ ಮೆಗಾಸ್ಟಾರ್, 'ಖೈದಿ ನಂ 150' ಚಿತ್ರದ ಮೂಲಕ ಬೊಂಬಾಟ್ ಕಮ್ ಬ್ಯಾಕ್ ಮಾಡಿದ್ದಾರಂತೆ.['ಸಂಕ್ರಾಂತಿ' ಎಫೆಕ್ಟ್: ಕನ್ನಡ ಚಿತ್ರಗಳಿಗೆ ಕೋಕ್, ಪರಭಾಷಾ ಚಿತ್ರಗಳಿಗೆ ಜೈ!]

ಚಿತ್ರದಲ್ಲಿ ಚಿರಂಜೀವಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದು, ಕಾಜಲ್ ಅಗರ್ ವಾಲ್ ಜೊತೆಯಾಗಿದ್ದಾರೆ. ತಮಿಳಿನ 'ಕತ್ತಿ' ಚಿತ್ರದ ರೀಮೇಕ್ ಆಗಿರುವ 'ಖೈದಿ ನಂ 150' ಚಿತ್ರವನ್ನ ವಿವಿ ವಿನಾಯಕ್ ನಿರ್ದೇಶನ ಮಾಡಿದ್ದು, ರಾಮ ಚರಣ್ ನಿರ್ಮಾಣ ಮಾಡಿದ್ದರು. ಇನ್ನೂ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.

ಹಾಗಾದ್ರೆ, 'ಖೈದಿ ನಂ 150' ಚಿತ್ರವನ್ನ ಮೊದಲ ದಿನ ನೋಡಿದ ಪ್ರೇಕ್ಷಕರು ಟ್ವಿಟ್ಟರ್ ನಲ್ಲಿ ಹೇಳಿದ್ದೇನು ಅಂತ ನೋಡೋಣ ಬನ್ನಿ....

ಬಾಸ್ ಈಸ್ ಬ್ಯಾಕ್!

''ಅದ್ಭುತ ಡ್ಯಾನ್ಸ್, ಮಸ್ತ್ ಕಾಮಿಡಿ, ಜಬರ್ ದಸ್ತ್ ಫೈಟ್, ಸೂಪರ್ ಸಂಗೀತ, ಒಳ್ಳೆ ಸಾಮಾಜಿಕ ಸಂದೇಶ. ಚಿರು@60 ಅಲ್ಲ, ಚಿರು@25''

ಆಲ್ ರೌಂಡ್ ಫರ್ಫಾಮೆನ್ಸ್!

''ಡ್ಯಾನ್ಸ್, ಫೈಟ್, ಆಕ್ಟಿಂಗ್ ಎಲ್ಲದರಲ್ಲೂ ಎಲ್ಲರನ್ನ ಹಿಂದಿಕ್ಕಿದ ಚಿರಂಜೀವಿ, ಕ್ಲೈಮ್ಯಾಕ್ಸ್ ಉತ್ತಮ'

ಮೆಗಾ ಫ್ಯಾನ್ಸ್ ಫುಲ್ ಫಿದಾ!

ಚಿರಂಜೀವಿ ಅವರನ್ನ ಬೆಳ್ಳಿತೆರೆ ಮೇಲೆ ಮತ್ತೆ ನೋಡಿದ ಪ್ರೇಕ್ಷಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

ಫಸ್ಟ್ ಹಾಫ್ ಗುಡ್, ಸೆಕೆಂಡ್ ಹಾಫ್?

''ಮೊದಲಾರ್ಧ ಡಿಸೆಂಟ್, ದ್ವಿತೀಯಾರ್ಧ ಗುಡ್. ಜೊತೆಗೆ ಚಿರಂಜೀವಿ, ಡ್ಯಾನ್ಸ್, ಸಾಂಗ್ಸ್, ಕ್ಯಾಮೆರಾ ವರ್ಕ್ ಸೂಪರ್''

ಅಲ್ಲಿ ವಿಜಯ್, ಇಲ್ಲಿ ಬಾಸ್!

ತಮಿಳಿನಲ್ಲಿ ವಿಜಯ್ ಸಖತ್ ಸ್ಟೈಲ್ ಆಗಿ ಮಾಡಿದ್ರು. ಇಲ್ಲಿ ಚಿರು ಪವರ್ ಫುಲ್ ಆಗಿ ಮಾಡಿದ್ದಾರೆ.

ಸಾಧರಣ ಚಿತ್ರ!

''ಮೊದಲಾರ್ಧ ಹೇಳಿಕೊಳ್ಳುವಾಗಿಲ್ಲ, ದ್ವಿತೀಯಾರ್ಧ ಪರವಾಗಿಲ್ಲ. ಕ್ಲೈಮ್ಯಾಕ್ಸ್ ಲಾಂಗ್ ಆಗಿದೆ''

English summary
Telugu Movie 'Khaidi No. 150' has hit the screens today (January 11th). 'Khaidi No. 150' is receiving Good response in Twitter. The movie features Chiranjeevi, kajal agarwal and others. Directed by VV Vinayak, here is the twitter review of 'Khaidi No. 150'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada