twitter
    For Quick Alerts
    ALLOW NOTIFICATIONS  
    For Daily Alerts

    Lakshmis ntr review: ಸಾಮಾನ್ಯ ಜನ ಕಾಣದ ಎನ್.ಟಿ.ಆರ್ ಜೀವನ ದರ್ಶನ

    |

    1989ರಲ್ಲಿ ಅಧಿಕಾರ ಕಳೆದುಕೊಂಡ ಎನ್.ಟಿ.ಆರ್, ಕುಟುಂಬ, ರಾಜಕೀಯ ನಾಯಕರು, ಸ್ನೇಹಿತರಿಂದ ದೂರ ಉಳಿದು ಒಬ್ಬಂಟಿಯಾಗಿ ಮಾನಸಿಕ ವೇದನೆ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಆತನ ಮನೆ ಪ್ರವೇಶಿಸುತ್ತಾಳೆ ಲಕ್ಷ್ಮೀ ಪಾರ್ವತಿ. ಆಕೆಯ ಮಾತು, ವ್ಯಕ್ತಿತ್ವದಿಂದ ಎನ್.ಟಿ.ಆರ್ ಹತ್ತಿರವಾಗ್ತಾರೆ. ಇದನ್ನ ಚಂದ್ರಬಾಬು ನಾಯ್ಡು, ಕುಟುಂಬ ಸದಸ್ಯರು, ಪಕ್ಷದ ನಾಯಕರು ಸಹಿಸುವುದಿಲ್ಲ.

    ಹೇಗಾದರೂ ಆಕೆಯನ್ನ ದೂರ ಮಾಡಬೇಕು ಎಂದು ಪ್ರಯತ್ನಿಸುತ್ತಾರೆ. ಆದ್ರೆ, ಆಕೆಯ ಮೇಲಿನ ಅಭಿಮಾನ ಮತ್ತು ಆಕೆ ತೋರುತ್ತಿದ್ದ ಪ್ರೀತಿಯಿಂದ ಮತ್ತಷ್ಟು ಆತ್ಮೀಯತೆ ಬೆಳೆಯುತ್ತೆ. ಬಾಬು ಮತ್ತು ಕುಟುಂಬ ಸದಸ್ಯರಿಂದ ಆಕೆಯನ್ನ ರಕ್ಷಿಸಲು ನಿರ್ಧರಿಸಿದ ಎನ್.ಟಿ.ಆರ್ ಮದುವೆಯಾಗುವುದಾಗಿ ಘೋಷಿಸುತ್ತಾರೆ. ನಂತರ ಏನಾಗುತ್ತೆ, ಅವರಿಬ್ಬರ ನಡುವಿನ ಸಂಬಂಧ ಹೇಗೆ ಮುಂದುವರಿಯುತ್ತೆ ಎನ್ನುವುದೇ ಲಕ್ಷ್ಮೀಸ್ ಎನ್.ಟಿ.ಆರ್. ಪೂರ್ತಿ ವಿಮರ್ಶೆ ಮುಂದೆ ಓದಿ....

    ಚಿತ್ರ: ಲಕ್ಷ್ಮೀಸ್ ಎನ್.ಟಿ.ಆರ್

    ನಿರ್ದೇಶಕ: ರಾಮ್ ಗೋಪಾಲ್ ವರ್ಮಾ

    ಕಲಾವಿದರು: ವಿಜಯ್ ಕುಮಾರ್ಮ ಯಜ್ಞಾ ಶೆಟ್ಟಿ, ಶ್ರೀ ತೇಜ ಮತ್ತು ಇತರರು

    ಬಿಡುಗಡೆ: ಮಾರ್ಚ್ 29, 2019

    ಹಲವು ಪ್ರಶ್ನೆಗಳಿಗೆ ಉತ್ತರ ಎನ್.ಟಿ.ಆರ್

    ಹಲವು ಪ್ರಶ್ನೆಗಳಿಗೆ ಉತ್ತರ ಎನ್.ಟಿ.ಆರ್

    ಲಕ್ಷ್ಮೀ ಪಾರ್ವತಿ ಅವರನ್ನ ಎನ್.ಟಿ.ಆರ್ ಮದುವೆ ಆದ್ಮೇಲೆ ಬಾಬು ಮಾಡಿದ ಕೆಲಸವೇನು? ಲಕ್ಷ್ಮೀ ಮೇಲೆ ಬಾಬು ಯಾವ ಆರೋಪ ಮಾಡಿದ್ರು? ಲಕ್ಷ್ಮೀ ಪಾರ್ವತಿ ಮೇಲಿನ ಕೋಪಕ್ಕೆ ಮಾಡಿದ ಅನ್ಯಾಯವೇನು? ಎನ್.ಟಿ.ಆರ್ ಸಾವಿಗೆ ಬಾಬು ಹೇಗೆ ಕಾರಣವಾದರು? ಎಂಬ ಪ್ರಶ್ನೆಗಳಿಗೆ ಉತ್ತರ ಈ ಲಕ್ಷ್ಮೀಸ್ ಎನ್.ಟಿ.ಆರ್ ಸಿನಿಮಾ.

    ಟಿಡಿಪಿಗೆ ಟಾಂಗ್, ತೆಲಂಗಾಣ ಸೇರಿ ಎಲ್ಲೆಡೆ ಚಿತ್ರ ರಿಲೀಸ್ : ವರ್ಮಾ ಸವಾಲುಟಿಡಿಪಿಗೆ ಟಾಂಗ್, ತೆಲಂಗಾಣ ಸೇರಿ ಎಲ್ಲೆಡೆ ಚಿತ್ರ ರಿಲೀಸ್ : ವರ್ಮಾ ಸವಾಲು

    ಮೊದಲಾರ್ಧ ಹೇಗಿದೆ?

    ಮೊದಲಾರ್ಧ ಹೇಗಿದೆ?

    1989ರಲ್ಲಿ ಅಧಿಕಾರ ಕಳೆದುಕೊಂಡ ನಂತರ ಎನ್.ಟಿ.ಆರ್ ಜೀವನ, ಆ ಜೀವನಕ್ಕೆ ಲಕ್ಷ್ಮೀ ಪಾರ್ವತಿ ಪ್ರವೇಶವಾಗುವ ಸನ್ನಿವೇಶದಿಂದ ಸಿನಿಮಾ ಆರಂಭವಾಗುತ್ತೆ. ಲಕ್ಷ್ಮೀ ಪಾರ್ವತಿ ಮತ್ತು ಎನ್.ಟಿ.ಆರ್ ನಡುವಿನ ಬಂಧ ಮತ್ತು 'ಭರ್ತವೀರಗ್ರಂಥಂ' ಹಾಗೂ ಸುಬ್ಬರಾವ್ ಜೊತೆಗಿನ ಲಕ್ಷ್ಮೀ ಪಾರ್ವತಿ ಅನುಬಂಧವನ್ನ ಬಹಳ ನೈಜವಾಗಿ ತೋರಿಸಿದ್ದಾರೆ. ಯಾವುದೇ ಅಸಭ್ಯ ದೃಶ್ಯ, ಸಂಭಾಷಣೆ ಇಲ್ಲದೇ ತೆರೆಮೇಲೆ ತರಲಾಗಿದೆ. ಮೊದಲಾರ್ಧದಲ್ಲಿ ಎನ್.ಟಿ.ಆರ್ ಮತ್ತು ಲಕ್ಷ್ಮೀ ಪಾರ್ವತಿ ನಡುವಿನ ಭಾವನಾತ್ಮಕ ಅಂಶದ ಬಗ್ಗೆ ಹೆಚ್ಚು ಗಮನ ನೀಡಲಾಗಿದೆ. ಇದು ಇಂಟರೆಸ್ಟಿಂಗ್ ಆಗಿದೆ.

    ಸೆಕೆಂಡ್ ಹಾಫ್ ಹೇಗಿದೆ?

    ಸೆಕೆಂಡ್ ಹಾಫ್ ಹೇಗಿದೆ?

    ಎನ್.ಟಿ.ಆರ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಶ್ರಮಿಸಿದವರಲ್ಲಿ ಲಕ್ಷ್ಮೀ ಪಾರ್ವತಿಯ ಪಾತ್ರವೂ ಇದೆ ಎಂದು ಹೇಳುವ ಪ್ರಯತ್ನ ಆಗಿದೆ. ಎನ್.ಟಿ.ಆರ್ ಕುಟುಂಬವನ್ನ ಬಾಬು ಹೇಗೆ ಕೈಗೊಂಬೆಯಾಗಿ ಮಾಡಿಕೊಂಡರು? ವೈಸರಾಯ್ ನಾಟಕವನ್ನ ಹೇಗೆ ಆಡಿಸಿದ್ರು? ವಿಜಯವಾಡದಲ್ಲಿ ನಡೆಯಬೇಕಿದ್ದ ಸಭೆಯನ್ನ ತಪ್ಪಿಸಲು ಅನುಸರಿಸಿದ ವಿಧಾನ ಬಹಳ ಭಾವನಾತ್ಮಕವಾಗಿ ತೋರಿಸಲಾಗಿದೆ.

    ಎಲ್ಲರ ನಟನೆಯೂ ಪ್ರಶಂಸನೀಯ

    ಎಲ್ಲರ ನಟನೆಯೂ ಪ್ರಶಂಸನೀಯ

    ಎನ್.ಟಿ.ಆರ್ ಪಾತ್ರದಲ್ಲಿ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಅಮೋಘವಾಗಿ ನಟಿಸಿದ್ದಾರೆ. ಪ್ರತಿಯೊಂದು ದೃಶ್ಯದಲ್ಲೂ ಎನ್.ಟಿ.ಆರ್ ಅವರಂತೆ ನಟಿಸುವ ಪ್ರಯತ್ನ ಮಾಡಿದ್ದಾರೆ. ಕೆಲವು ದೃಶ್ಯಗಳಂತೂ ಎನ್.ಟಿ.ಆರ್ ಅವರೇ ಬಂದ್ರಾ ಎನ್ನುವಷ್ಟು ಖುಷಿ ಕೊಡುತ್ತೆ. ಲಕ್ಷ್ಮೀ ಪಾರ್ವತಿ ಪಾತ್ರದಲ್ಲಿ ಯಜ್ಞಾ ಶೆಟ್ಟಿ ಬಹಳ ಚೆನ್ನಾಗಿ ನಟಿಸಿದ್ದಾರೆ. ಇನ್ನು ಚಂದ್ರಬಾಬು ನಾಯ್ಡು ಪಾತ್ರದಲ್ಲೂ ಶ್ರೀತೇಜ ಅತ್ಯುತ್ತಮ ನಟನೆ ಎನ್ನಬಹುದು. ಉಳಿದಂತೆ ಎಲ್ಲರೂ ಪಾತ್ರವೂ ನಿಜ ಜೀವನಕ್ಕೆ ಹತ್ತಿರವಿದ್ದಂತಿದೆ.

    ವರ್ಮಾ ನಿಜಕ್ಕೂ ಇಷ್ಟ ಆಗ್ತಾರೆ

    ವರ್ಮಾ ನಿಜಕ್ಕೂ ಇಷ್ಟ ಆಗ್ತಾರೆ

    ಆಂಧ್ರ ಪ್ರದೇಶ ರಾಜಕೀಯದಲ್ಲಿ ಇದು ಸಂಚಲನ. ಚಂದ್ರಬಾಬು ನಾಯ್ಡು ಅವರನ್ನ ಗುರಿಯಾಗಿಸಿಕೊಂಡು ಮಾಡಿರುವ ಸಿನಿಮಾ. ತೆಲುಗು ಜನರು ಕಂಡ ಅತ್ಯುನ್ನತ ನಟ ಮತ್ತು ರಾಜಕಾರಣಿಯ ಜೀವನವನ್ನ ಮುಗಿಸಲು ಹೇಗೆ ವಂಚನೆ ಮಾಡಲಾಗಿದೆ ಎಂಬುದು ಕಥೆ. ವಾಸ್ತವ ವಿಷ್ಯಗಳನ್ನ ಪಕ್ಕಕ್ಕಿಟ್ಟು ಸಿನಿಮಾ ದೃಷ್ಟಿಯಲ್ಲಿ ನೋಡಿದ್ರೆ ರಾಮ್ ಗೋಪಾಲ್ ವರ್ಮಾ ಅವರ ಕೆಲಸ ನಿಜಕ್ಕೂ ಇಷ್ಟ ಆಗುತ್ತೆ. ವರ್ಮಾ ಸಿನಿಮಾಗಳನ್ನ ಇಷ್ಟು ಪಡುವ ಪ್ರೇಕ್ಷಕರಿಗೆ ಇದು ಥ್ರಿಲ್ ನೀಡುತ್ತೆ.

    English summary
    Ram gopal varma directional lakshmi's ntr movie has released on today. the movie get positive response from audience. the film starring vijay kumar, yagna shetty and sriteja in the lead role.
    Friday, March 29, 2019, 14:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X