Love Reddy Review: ದುನಿಯಾ ವಿಜಯ್ ಬೆಂಬಲಿಸಿದ 'ಲವ್ ರೆಡ್ಡಿ' ಸಿನಿಮಾ ಹೇಗಿದೆ? ಕನ್ನಡಿಗರಿಗೆ ಇಷ್ಟ ಆಗುತ್ತಾ?

By ಯಶವಂತ್

Rating:
3.5/5
Star Cast: Ganesh Ds,Shravani Krishnaveni, Vani Channanraryaptan
Director: Smaran Reddy

ತೆಲುಗಿನಲ್ಲಿ ರಿಲೀಸ್ ಆಗಿ ಈಗಾಗಲೇ ಸದ್ದು ಮಾಡುತ್ತಿರುವ ಸಿನಿಮಾ 'ಲವ್ ರೆಡ್ಡಿ' ಕರ್ನಾಟಕದಲ್ಲೂ ರಿಲೀಸ್ ಆಗಿದೆ. ಈ ಸಿನಿಮಾಗೆ ತೆಲುಗು ತಾರೆಯರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲಿನ ಪ್ರೇಕ್ಷಕರು ಕೂಡ ಸಿನಿಮಾವನ್ನು ಇಷ್ಟ ಪಟ್ಟು ಹಾಕಿ ಹೊಗಳಿದ್ದರು. ಇದೇ ಸಿನಿಮಾ ನೋಡಿಯೇ ಕನ್ನಡದ ನಟ ಎನ್.ಟಿ ರಾಮಸ್ವಾಮಿಯವರಿಗೆ ಮಹಿಳೆಯೊಬ್ಬರು ಕಪಾಳಮೋಕ್ಷ ಮಾಡಿದ್ದರು.

ತೆಲುಗು ರಾಜ್ಯಗಳಲ್ಲಿ ಇಷ್ಟೊಂದು ಸದ್ದು ಮಾಡಿದ್ದ ಸಿನಿಮಾ 'ಲವ್ ರೆಡ್ಡಿ' ಇಂದು (ನವೆಂಬರ್ 22) ಕನ್ನಡದಲ್ಲಿ ರಿಲೀಸ್ ಆಗಿದೆ. ಈ ಸಿನಿಮಾಗೆ ಕನ್ನಡ ಚಿತ್ರರಂಗದ 'ಭೀಮ' ಬೆಂಬಲಕ್ಕೆ ನಿಂತಿದ್ದರು. ಅವರೇ ಸಿನಿಮಾವನ್ನು ಪ್ರಚಾರ ಮಾಡುವುದಕ್ಕೆ ಮುಂದೆ ಬಂದಿದ್ದರು. ದುನಿಯಾ ವಿಜಯ್ ಅವರೇ ಸಿನಿಮಾವನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

Telugu movie Love Reddy Kannada dubbed version Review and Rating

'ಲವ್ ರೆಡ್ಡಿ' ಕರ್ನಾಟಕ ಹಾಗೂ ಆಂಧ್ರ ಬಾರ್ಡರ್‌ನಲ್ಲಿ ನಡೆಯುವ ಕಥೆ. ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಪ್ರಮುಖ ಪಾತ್ರದಲ್ಲಿ ಬಹುತೇಕ ಹೊಸಬರು ನಟಿಸಿರುವ 'ಲವ್ ರೆಡ್ಡಿ' ತೆಲುಗಿನಲ್ಲಿ ಗೆಲ್ಲುತ್ತಿದ್ದಂತೆ ಕನ್ನಡದಲ್ಲಿ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿತ್ತು. ಹಾಗಿದ್ದರೆ ಈ ಸಿನಿಮಾ ಹೇಗಿದೆ? ತೆಲುಗಿನಲ್ಲಿ ಗೆದ್ದ ಸಿನಿಮಾ ಕನ್ನಡದಲ್ಲೂ ಗೆಲ್ಲುತ್ತಾ? ಎಷ್ಟು ರೇಟಿಂಗ್ ಕೊಡಬಹುದು? ತಿಳಿಯಲು ಮುಂದೆ ಓದಿ.

'ಲವ್ ರೆಡ್ಡಿ' ಕಥೆಯೇನು?

ಈ ಸಿನಿಮಾ ಶುರುವಾಗುವುದೇ ಚಿಕ್ಕ ಬಳ್ಳಾಪುರದ ಬಾರ್ಡರ್‌ನಲ್ಲಿ. ಹೀಗಾಗಿ ಸಂಪೂರ್ಣವಾಗಿ ಅಲ್ಲಿ ಭಾಷೆಯ ಶೈಲಿಯನ್ನು ಬಳಸಿಕೊಳ್ಳಲಾಗಿದೆ. ಈ ಚಿತ್ರದ ಹೀರೋಗೆ 30 ವರ್ಷ ಆಗಿರುತ್ತೆ. ಅವನಿಗೆ ಒಬ್ಬ ತಮ್ಮ ಕೂಡ ಇರುತ್ತಾನೆ. ಅವನು ಪ್ರೀತಿಯಲ್ಲಿ ಬಿದ್ದಿರುತ್ತಾನೆ. ಹೀಗಾಗಿ ಅಣ್ಣನಿಗೆ ಮದುವೆ ಮಾಡಬೇಕು ಅಂತ ಹುಡುಗಿ ಹುಡುಕಲು ಶುರು ಮಾಡುತ್ತಾನೆ. ಎಲ್ಲೂ ಅವನಿಗೆ ಇಷ್ಟ ಆಗುವಂತಹ ಹುಡುಗಿ ಸಿಕ್ಕಿರಲ್ಲ. ಒಮ್ಮೆ ಬಸ್ಸಿನಲ್ಲಿ ಒಬ್ಬ ಹುಡುಗಿಯನ್ನು ನೋಡಿ ಇಷ್ಟ ಆಗುತ್ತೆ. ಆಕೆಯನ್ನು ಪರಿಚಯ ಮಾಡಿಕೊಳ್ಳುವುದಕ್ಕೆ ಒಂದಿಷ್ಟು ಒದ್ದಾಟ ನೆಡೆಸುತ್ತಾನೆ . ಈ ಮಧ್ಯೆ ಇಬ್ಬರಿಗೂ ಪರಿಚಯ ಆಗಿರುತ್ತೆ. ಬಸ್ಸಿನಲ್ಲಿ ದಿನ ಪ್ರಯಾಣ. ಮಾತುಕಥೆ ನಡೆಯುತ್ತಿರುತ್ತೆ. ಇದನ್ನೇ ಹುಡುಗಿ ಇಷ್ಟ ಪಟ್ಟಿದ್ದಾಳೆ ಅಂತ ಅಂದುಕೊಳ್ಳುತ್ತಾನೆ. ಇಲ್ಲಿಂದ ಈ ಲವ್ ಸ್ಟೋರಿಯಲ್ಲಿ ಟ್ವಿಸ್ಟ್ ಅಂಡ್ ಟರ್ನ್ ಸಿಗುತ್ತಾ ಹೋಗುತ್ತೆ. ಕೊನೆಗೆ ಹುಡುಗನಿಗೆ ಹುಡುಗಿ ಸಿಗುತ್ತಾಳಾ? ಅವಳಿಗೆ ಇವನ ಮೇಲೆ ಇಷ್ಟ ಇರುತ್ತಾ ಇಲ್ವಾ? ಅಪ್ಪನೇ ವಿಲನ್ ಆಗಿದ್ದೇಕೆ? ಅನ್ನೋದು ಈ ಚಿತ್ರದ ಕಥೆ.

ನಟನೆ ಹೇಗಿದೆ?

ಸ್ಮರಣ್ ರೆಡ್ಡಿ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಹೀರೋ ಹೀರೋಯಿನ್ ಯುವ ಪ್ರತಿಭೆಗಳು. ಅಂಜನ್ ರಾಮಚಂದ್ರ ಹೀರೋ ಆಗಿದ್ದರೆ, ಶ್ರಾವಣಿ ಹೀರೋಯಿನ್. ಈ ಜೋಡಿ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ಇವರ ಲವ್ ಸ್ಟೋರಿ ಕೂಡ ಅಷ್ಟೇ ಕಿಕ್ ಕೊಡುತ್ತೆ. ಇವರ ಜೊತೆ ಬಂದು ಹೋಗುವ ಬೇರೆ ಬೇರೆ ಪಾತ್ರಗಳು ಕೂಡ ಅಷ್ಟೇ ಗಮನ ಸೆಳೆಯುತ್ತವೆ. ಆದರೆ, ಫಸ್ಟ್ ಹಾಫ್‌ನಲ್ಲಿ ಸೈಲೆಂಟ್ ಆಗಿದ್ದ ಕನ್ನಡದ ನಟ ಎನ್‌.ಟಿ.ರಾಮಸ್ವಾಮಿ ಸೆಕೆಂಡ್ ಹಾಫ್‌ನಲ್ಲಿ ಸಿಕ್ಕಾಪಟ್ಟೆ ಇಷ್ಟ ಆಗುತ್ತಾರೆ.

Telugu movie Love Reddy Kannada dubbed version Review and Rating

ಸಿನಿಮಾದ ಪ್ಲಸ್ ಪಾಯಿಂಟ್ ಏನು?

'ಲವ್ ರೆಡ್ಡಿ' ಸಿನಿಮಾ ಈಗಾಗಲೇ ತೆಲುಗು ಭಾಷೆಯಲ್ಲಿ ಹಿಟ್ ಆಗಿರುವ ಸಿನಿಮಾ. ಈಗ ಅದೇ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ಕಥೆ ಆರಂಭದಲ್ಲಿ ಸಿಂಪಲ್ ಅನಿಸಿದರೂ ಬರಬರುತ್ತಾ ಸಖತ್ ಇಷ್ಟ ಆಗುತ್ತೆ. ಎಲ್ಲಾ ಲವ್ ಸ್ಟೋರಿಗಳಂತೆ ಇದೂ ಅದೇ ಲವ್ ಸ್ಟೋರಿ ಅಂದುಕೊಳ್ಳುವಾಗಲೇ ಸಖತ್ ಕಿಕ್ ಕೊಡುತ್ತೆ. ಕ್ಲೈಮ್ಯಾಕ್ಸ್ ಸೀನ್ ಸಿನಿಮಾದ ಹೈಲೈಟ್. ಪ್ರೇಮಿಗಳಿಗೆ ಈ ಸಿನಿಮಾ ಹೇಳಿ ಮಾಡಿಸಿದ ಸಿನಿಮಾ. ಪ್ರೇಕ್ಷಕರು ಇದು ಇದು ತೆಲುಗು ಸಿನಿಮಾ ಅಂದುಕೊಳ್ಳುತ್ತಾರೆ. ಆದರೆ, ಇಡೀ ಸಿನಿಮಾದಲ್ಲಿ ವಾಹಬಗಳ ಮೇಲೆ, ಅಂಗಡಿಯ ಗೋಡೆಯ ಮೇಲೆ ಕರ್ನಾಟಕದ ನಂಬರ್ ಪ್ಲೇಟ್‌ ಕಾಣಸಿಗುತ್ತೆ.

ಮೈನಸ್ ಪಾಯಿಂಟ್ ಏನು?

ಸಿನಿಮಾದ ಆರಂಭದಿಂದ ಇದು ನಾರ್ಮಲ್ ಲವ್ ಸ್ಟೋರಿ ಇರಬೇಕು ಅಂತಾನೇ ಅನಿಸುತ್ತೆ. ಸಿನಿಮಾ ಕೊನೆ ಕೊನೆಯಲ್ಲಿಯೇ ಟ್ವಿಸ್ ಸಿಗೋದು. ಹಾಗೇ ಕರ್ನಾಟಕ ಹಾಗೂ ಆಂಧ್ರ ಬಾರ್ಡರ್‌ನಲ್ಲಿ ಬಳಸುವ ಭಾಷೆ ಎಲ್ಲಾ ಭಾಗದ ಜನರಿಗೂ ಇಷ್ಟ ಆಗದೇ ಹೋಗಬಹುದು. ಅದು ಬಿಟ್ಟರೆ ಸಿನಿಮಾ ಅದ್ಭುತವಾಗಿದೆ. ಇಡೀ ಕುಟುಂಬದ ಜೊತೆ ಕೂತು ಸಿನಿಮಾ ನೋಡಬಹುದು

More from Filmibeat

English summary
Telugu movie Love Reddy Kannada dubbed version Review and Rating;
Read more about: sandalwood review filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X