ಬೆನ್ನ ಹಿಂದೆ ಬಿದ್ದ ಬೇತಾಳ ; ಹೇಗಿದೆ ಆಯುಷ್ಮಾನ್ ಖುರಾನ, ರಶ್ಮಿಕಾ ಮಂದಣ್ಣ 'ಥಮ್ಮ' ? ಇಲ್ಲಿದೆ ವಿಮರ್ಶೆ

Rating:
3.5/5
Star Cast: ಆಯುಷ್ಮಾನ್ ಖುರಾನ, ರಶ್ಮಿಕಾ ಮಂದಣ್ಣ, ನವಾಜುದ್ದೀನ್ ಸಿದ್ದಿಕಿ, ಪರೇಶ್ ರಾವಲ್, ಗೀತಾ ಅಗರ್ವಾಲ್, ಫೈಸಲ್ ಮಲ್ಲಿಕ್ ಮುಂತಾದವರು
Director: ಆದಿತ್ಯ ಸರ್ಪೋತ್ದಾರ್

ಕನ್ನಡದಿಂದ ಕಣ್ಮರೆಯಾದ ರಶ್ಮಿಕಾ ಮಂದಣ್ಣ ಆ ನಂತರ ತೆಲುಗು ಚಿತ್ರರಂಗದಲ್ಲಿ ಬಿಡಾರ ಹೂಡಿದ್ದರು. ಅಲ್ಲಿ ಹೆಸರು .. ಹಣ .. ಕೀರ್ತಿ ಸಂಪಾದನೆ ಮಾಡಿ ಸದ್ಯ ಬಾಲಿವುಡ್‌ನಲ್ಲಿ ಠಿಕಾಣಿ ಹೂಡಿದ್ದಾರೆ. ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಿದ್ದಾರೆ. ಆದರೆ .. ಆಂಧ್ರದಲ್ಲಿ ಸಿಕ್ಕ ಗೆಲುವು ಮುಂಬೈನಲ್ಲಿ ಇವರಿಗೆ ಸಿಕ್ತಿಲ್ಲ. ರಶ್ಮಿಕಾ ಅಭಿನಯದ ಯಾವ ಹಿಂದಿ ಚಿತ್ರ ಕೂಡ ಗೆದ್ದಿಲ್ಲ.

ನಿಜಾ.. ''ಆನಿಮಲ್'' ಮತ್ತು ''ಛಾವಾ'' ಗೆದ್ದಿವೆ. ಆದರೆ.. ಗೆಲುವಲ್ಲಿ ರಶ್ಮಿಕಾ ಮಂದಣ್ಣಗೆ ಸಿಗಬೇಕಿದ್ದ ಪಾಲು ಸಿಗಲಿಲ್ಲ. ಈ ಹಿನ್ನೆಲೆ.. ಎಲ್ಲರ ಕಣ್ಣೀಗ ಇಂದು ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ''ಥಮ್ಮ'' ಮೇಲೆ ಇದೆ. ''ಥಮ್ಮ'' ರಶ್ಮಿಕಾಗೆ ಬೇಕಿರುವ ಬಹುದೊಡ್ಡ ಗೆಲುವು ನೀಡುತ್ತೆ ಈ ಚಿತ್ರದಲ್ಲಿನ ರಶ್ಮಿಕಾ ಮಂದಣ್ಣ ಅವರ ಅಭಿನಯ ಎಲ್ಲರ ಗಮನ ಸೆಳೆಯುತ್ತೆ ಎನ್ನುವ ವಿಶ್ವಾಸ ಹಲವರಲ್ಲಿದೆ. ಹಾಗಿದ್ದರೆ ಹೇಗಿದೆ ಥಮ್ಮ..? ಚಿತ್ರದ ಕಥಾ ಹಂದರವೇನು..? ಕಾಂತಾರ ಎಂಬ ಅಲೆಯ ಎದುರು ಥಮ್ಮ ಉಳಿಯುತ್ತಾ ..? ಆ ಸಾಮರ್ಥ್ಯ ಚಿತ್ರಕ್ಕಿದೆಯಾ..? ಎಂದು ತಿಳಿಯಲು ಮುಂದೆ ಓದಿ

thamma-review-a-winner-ayushmann-rashmikas-fun-packed-diwali-film

ಕಥಾಹಂದರ

ಅಲೋಕ್ ಗೋಯಲ್ (ಆಯುಷ್ಮಾನ್ ಖುರಾನ ) ವೃತ್ತಿಯಲ್ಲಿ ಪತ್ರಕರ್ತ. ತನ್ನ ಪೋಷಕರಾದ ರಾಮ್ ಬಜಾಜ್ ಗೋಯಲ್ (ಪರೇಶ್ ರಾವಲ್ ) ಮತ್ತು ಸುಧಾ ಗೋಯಲ್ ( ಗೀತಾ ಅಗರ್ವಾಲ್ ) ಜೊತೆ ವಾಸ ಮಾಡುವ ಅಲೋಕ್ ಅದೊಂದು ದಿನ ತನ್ನ ಸ್ನೇಹಿತರ ಜೊತೆ ಟ್ರೆಕ್ಕಿಂಗ್‌ಗೆ ಎಂದು ತೆರಳುತ್ತಾನೆ.

ಇದೇ ಸಮಯದಲ್ಲಿ ಕರಡಿ ಅಲೋಕ್ ಮೇಲೆ ದಾಳಿ ಮಾಡುತ್ತೆ. ಈ ದಾಳಿಯಿಂದ ಅಲೋಕ್‌ನನ್ನು ಪಾರು ಮಾಡಲು ಬರುವ ಮಹಿಳೆಯೇ ತಡಕಾ ( ರಶ್ಮಿಕಾ ಮಂದಣ್ಣ ) ತಡಕಾಳಿಂದ ಬದುಕುಳಿಯುವ ಅಲೋಕ್ ಆ ನಂತರ ಆಕೆಯ ಜೊತೆ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ.. ಇದೇ ಸಮಯದಲ್ಲಿ ಯಕ್ಷಾಸನ್ ( ನವಾಜುದ್ದೀನ್ ಸಿದ್ದಿಕಿ)ಬುಡಕಟ್ಟು ಜನಾಂಗದ ವಿಚಿತ್ರ ವ್ಯಕ್ತಿಯ ಕೈಗೆ ಅಲೋಕ್ ಸಿಕ್ಕಿ ಬೀಳುತ್ತಾನೆ. ತಡಕಾ ಇದೇ ಜನಾಂಗದ ಮಹಿಳೆ. ತನ್ನದೇ ಜನರ ವಿರುದ್ಧ ನಿಂತು ಅಲೋಕ್‌ನ ತಡಕಾ ಮತ್ತೊಮ್ಮೆ ಕಾಪಾಡುತ್ತಾಳಾ..? ಇವರ ಈ ಪ್ರಪಂಚದಲ್ಲಿ ಏನೆಲ್ಲಾ ಆಗುತ್ತೆ ಎನ್ನುವುದಕ್ಕೆ ಉತ್ತರ ನೀವು ಚಿತ್ರಮಂದಿರದಲ್ಲಿಯೇ ನೋಡಿ ಪಡೆಯಬೇಕು.

ಅಭಿನಯ ಹೇಗಿದೆ..?

ಆಯುಷ್ಮಾನ್ ಖುರಾನ.. ರಶ್ಮಿಕಾ ಮಂದಣ್ಣ ಮತ್ತು ನವಾಜುದ್ದೀನ್ ಸಿದ್ದಿಕಿ.. ಈ ಮೂವರ ಹೆಗಲ ಮೇಲೆ ಇಡೀ ಚಿತ್ರದ ಭಾರವನ್ನು ಹಾಕಲಾಗಿದೆ. ತಮಗೆ ನೀಡಲಾದ ಜವಾಬ್ಧಾರಿಯನ್ನು ಮೂವರು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಆಯುಷ್ಮಾನ್ ಖುರಾನ ಅವರ ಅಭಿನಯ ಅದ್ಭುತ. ಇವರ ಹಾಸ್ಯಪ್ರಜ್ಞೆಗೆ ಈ ಚಿತ್ರ ಮತ್ತೊಂದು ಕೈಗನ್ನಡಿ.

ತಮ್ಮ ಪಾತ್ರವನ್ನು ರಶ್ಮಿಕಾ ಮಂದಣ್ಣ ಸಲೀಸಾಗಿ ನಿರ್ವಹಿಸಿದ್ದಾರೆ. ಇತ್ತೀಚೆನ ದಿನಗಳಲ್ಲಿ ಹಿಂದಿಯಲ್ಲಿ ನಾಯಕಿಯರಿಗೆ ಇಷ್ಟೊಂದು ಪ್ರಾಮುಖ್ಯತೆ ಇರುವ ಪಾತ್ರ ಸಿಕ್ಕಿರಲಿಲ್ಲ. ಸಿಕ್ಕ ಅವಕಾಶವನ್ನು ಎರಡು ಕೈಯಿಂದ ಬಾಚಿಕೊಂಡಿದ್ದಾರೆ ರಶ್ಮಿಕಾ. ಇನ್ನೂ ನವಾಜುದ್ದೀನ್ ಸಿದ್ದಿಕಿ ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ನಕ್ಕು ನಗಿಸುತ್ತಾರೆ. ಇವರ ಬಾಯಿಂದ ಉದರುವ ಇಂಗ್ಲೀಷ್‌ ಸಂಭಾಷಣೆ ತುಂಬಾ ಸೊಗಸಾಗಿವೆ. ''ಕಿಕ್'' ಚಿತ್ರದಲ್ಲಿನ ಇವರ ಅಭಿನಯ ಕೂಡ ಅಲ್ಲಲ್ಲಿ ನೆನಪಾಗುತ್ತೆ. ಪರೇಶ್ ರಾವಲ್ ಮತ್ತು ಗೀತಾ ಅಗರ್ವಾಲ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಫೈಸಲ್ ಮಲ್ಲಿಕ್ ಅವರ ಪಾತ್ರ ಪ್ರಭಾವ ಬೀರುತ್ತೆ.

thamma-review-a-winner-ayushmann-rashmikas-fun-packed-diwali-film

ಪ್ಲಸ್ ಪಾಯಿಂಟ್ ಏನು ?

ನಿರೆನ್ ಭಟ್, ಸುರೇಶ್ ಮ್ಯಾಥ್ಯೂ ಮತ್ತು ಅರುಣ್ ಫುಲಾರ ಬರೆದಿರುವ ಕಥೆ ಚೆನ್ನಾಗಿದೆ. ಚಿತ್ರದಲ್ಲಿನ ಒನ್ ಲೈನರ್ ಡೈಲಾಗ್‌ಗಳು ನಗೆ ಮೂಡಿಸುತ್ತವೆ. ಸಚಿನ್-ಜಿಗರ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ತೂಕ ಹೆಚ್ಚಿಸಿವೆ. ಇವರ ಸಂಗೀತ ನಿರ್ದೇಶನದಲ್ಲಿ ಇರುವ ಹಾಡುಗಳಲ್ಲಿ ಒಂದು ಹಾಡು ಗುನುಗುವಂತೆ ಇದೆ. ಸೌರಭ್ ಗೋಸ್ವಾಮಿ ಛಾಯಾಗ್ರಹಣ ಚಿತ್ರದ ಮತ್ತೊಂದು ಆಕರ್ಷಣೆ. VFX ಕೆಲಸ ಕೂಡ ಅದ್ಭುತವಾಗಿದೆ. ಮ್ಯಾಡಾಕ್ ಸಂಸ್ಥೆ ನಿರ್ಮಾಣದಲ್ಲಿ ಎಲ್ಲಿಯೂ ರಾಜಿ ಆಗಿಲ್ಲ. ಇನ್ನೂ ಇದು ಮ್ಯಾಡಾಕ್ ಸಂಸ್ಥೆಯ ಹಾರರ್ ಯುನಿವರ್ಸ್. ''ಸ್ತ್ರೀ''.. ''ಸ್ತ್ರೀ 2''.. ''ಮುಂಜ್ಯಾ''.. ''ಭೇಡಿಯಾ''.. ಕಥೆಗಳನ್ನು ''ಥಮ್ಮ'' ಚಿತ್ರಕ್ಕೆ ಚೆನ್ನಾಗಿ ಲಿಂಕ್ ಮಾಡಲಾಗಿದೆ.

ಮೈನಸ್ ಪಾಯಿಂಟ್ ಏನು ?

ಮುಂಜ್ಯಾ ಮೂಲಕ ನಿರ್ದೇಶಕನಾಗಿ ಎಲ್ಲರ ಮನಸ್ಸನ್ನು ಗೆದ್ದಿದ್ದ ನಿರ್ದೇಶಕ ಆದಿತ್ಯ ಸರ್ಪೋತ್ದಾರ್ ಇಲ್ಲಿ ಚಿತ್ರಕಥೆಯಲ್ಲಿ ಚೂರು ಎಡವಿದ್ದಾರೆ. ಮೊದಲಾರ್ಧ ಕೇವಲ ಪಾತ್ರಗಳ ಪರಿಚಯ ಮತ್ತು ರಶ್ಮಿಕಾ-ಆಯುಷ್ಮಾನ್ ನಡುವೆ ಅರಳುವ ಲವ್ ಸ್ಟೋರಿಗೆ ಹೆಚ್ಚಿನ ಆದ್ಯತೆ ನೀಡಿದ ಹಿನ್ನೆಲೆ ಅಲ್ಲಲ್ಲಿ ಬೋರ್ ಆಗುತ್ತೆ. ಆದರೆ ಇವರು ಆಯ್ದುಕೊಂಡ ಕಥೆ ಮತ್ತು ಅದನ್ನು ಹೇಳಿರುವ ಶೈಲಿ ಶ್ಲಾಘನೀಯ.

ಕೊನೆ ಮಾತು

ಒಟ್ನಲ್ಲಿ ''ಥಮ್ಮ'' ಸಂಪೂರ್ಣ ಮನರಂಜನಾತ್ಮಕ ಚಿತ್ರ. ಹಾಸ್ಯದ ಜೊತೆ ಬೆರೆತ ಹಾರರ್ ಚಿತ್ರಗಳನ್ನು ನೋಡಲು ಬಯಸುವರು ಒಮ್ಮೆ ಆರಾಮಾಗಿ ಕುಳಿತು ಈ ಚಿತ್ರವನ್ನು ನೋಡಬಹುದು. ಚಿತ್ರದಲ್ಲಿ ಒಂದು ಬಹುಮುಖ್ಯವಾದ ಅತಿಥಿ ಪಾತ್ರ ಕೂಡ ಇದ್ದು ಆ ಪಾತ್ರ ನಿಮಗೆ ಆಶ್ಚರ್ಯಕ್ಕೆ ದೂಡಬಹುದು. ಹೊಡಿ ಬಡಿ ಕಡಿ ಮತ್ತು ಅದೇ ಹಳೆಯ ಲವ್ ಸ್ಟೋರಿ ಚಿತ್ರಗಳನ್ನು ನೋಡಿ ನೀವು ಬೇಸತ್ತಿದ್ದರೆ ಈ ವೀಕೆಂಡ್‌ಗೆ ''ಥಮ್ಮ'' ನೀವು ನೋಡಲು ಅಡ್ಡಿ ಇಲ್ಲ. ದೀಪಾವಳಿ ಹಬ್ಬದ ಪ್ರಯುಕ್ತ ತೆರೆಗೆ ಬಂದ ಈ ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವ ಲಕ್ಷಣಗಳಿವೆ.

More from Filmibeat

English summary
The verdict is in for THAMMA! Get the full review and ratings for the Ayushmann Khurrana and Rashmika Mandanna horror-comedy. Is it a winner?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X