Mahavatar Narsimha Review: 'ಮಹಾವತಾರ್ ನರಸಿಂಹ' ಪೌರಾಣಿಕ ಕಥೆಯಲ್ಲಿ ಅನಿಮೇಷನ್ ಸೂಪರ್; ಮತ್ತೇನು ಚೆನ್ನಾಗಿದೆ?

By ಯಶವಂತ್

Rating:
3.0/5

ಭಾರತದ ಪೌರಾಣಿಕ ಕಥೆಗಳ ಬಗ್ಗೆ ಬಹುತೇಕ ಮಂದಿಗೆ ಗೊತ್ತಿದೆ. ಆದರೆ, ಇಂದಿನ ಪೀಳಿಗೆಯವರಿಗೂ ಜನಪ್ರಿಯ ಪೌರಾಣಿಕ ಕಥೆಗಳು ಗೊತ್ತಿವೆಯೇ? ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಹುಡುಕುವುದು ಕಷ್ಟ. ಹೀಗಾಗಿ ಇಂದಿನ ಯುವ ಪೀಳಿಗೆ ಬಯಸುವ ತಂತ್ರಜ್ಞಾನವನ್ನು ಇಟ್ಟುಕೊಂಡು ಪೌರಾಣಿಕ ಕಥೆಯನ್ನು ಅನಿಮೇಷನ್ ರೂಪದಲ್ಲಿ ತರಲಾಗಿದೆ. ಅದುವೇ 'ಮಹಾವತಾರ್ ನರಸಿಂಹ'. ಈ ಸಿನಿಮಾದ ಇಂದು (ಜುಲೈ 25) ದೇಶಾದ್ಯಂತ ತೆರೆಕಂಡಿದೆ.

ವಿಷ್ಣುವಿನ ದಶಾವತಾರವನ್ನು ಆಧರಿಸಿ ಈ ಅನಿಮೇಟೆಡ್ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ಪ್ರಸ್ತುತ ಪಡಿಸಿರುವುದು ಸಿನಿಮಾ ತಂಡಕ್ಕೆ ಬಲ ಬಂದಂತೆ ಆಗಿತ್ತು. ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ಮೂವರು ಸೇರಿ ವಿಷ್ಣುವಿನ ಸರಣಿಯನ್ನು ತೆರೆ ತರುವುದಕ್ಕೆ ಮುಂದಾಗಿದ್ದಾರೆ. ಸುಮಾರು ಏಳು ಸರಣಿಗಳು ಮುಂದಿನ ದಿನಗಳಲ್ಲಿ ಬರಲಿವೆ. ಅದರ ಮೊದಲ ಅಧ್ಯಾಯವೇ 'ಮಹಾವತಾರ್ ನರಸಿಂಹ'.

The animated mythological film Mahavatar Narsimha review and rating in Kannada

'ಮಹಾವತಾರ್ ನರಸಿಂಹ' ಸಿನಿಮಾವನ್ನು ಅಶ್ವಿಕ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಬಹಳ ದಿನಗಳ ಬಳಿಕ ಅನಿಮೇಟೆಡ್ ಸಿನಿಮಾವೊಂದು ನಿರ್ಮಾಣ ಆಗಿ ತೆರಮೇಲೆ ಬಂದಿದೆ. ಬಿಗ್ ಬಜೆಟ್ ಹಾಕಿ ಪೌರಾಣಿಕ ಸಿನಿಮಾವನ್ನು ತೆರೆಮೇಲೆ ತರುವ ಕಾಲದಲ್ಲಿ ಅನಿಮೇಟೆಡ್ ಪೌರಾಣಿಕ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತಾ? ಈ ಅನಿಮೇಟೆಡ್ ಸಿನಿಮಾದ ಹೈಲೈಟ್ ಏನು? ತಿಳಿಯುವುದಕ್ಕೆ ಮುಂದೆ ಓದಿ.


'ಮಹಾವತಾರ್ ನರಸಿಂಹ' ಆರಂಭ ಹೇಗೆ?

ಪುರಾಣಗಳಲ್ಲಿ ಹಿರಣ್ಯಕಶ್ಯಪನ ಕಥೆ ಬಹುತೇಕ ಮಂದಿ ಕೇಳಿರುತ್ತಾರೆ. ಹಿರಣ್ಯಕಶ್ಯಪನ ಕಥೆಯನ್ನು ಹೇಳುವ ಮೂಲಕ ಹಿಂದೂ ಧರ್ಮದಲ್ಲಿ ವಿಷ್ಣುವಿನ ಶ್ರೇಷ್ಠತೆಯನ್ನು ಸಾರಲಾಗಿದೆ. 'ಮಹಾವತಾರ್ ನರಸಿಂಹ' ಸಿನಿಮಾ ಆರಂಭ ಹಿರಣ್ಯಕಶ್ಯಪ ಜನನದಿಂದ ಆರಂಭ ಆಗುತ್ತೆ. ಋಷಿ ಮುನಿ ಕಶ್ಯಪ ಹಾಗೂ ಪತ್ನಿ ದಿತಿಗೆ ಜನಿಸುವ ಇಬ್ಬರು ಮಕ್ಕಳು ಹಿರಣ್ಯಾಕ್ಷ ಮತ್ತು ಹಿರಣ್ಯ ಕಶ್ಯಪ. ಕಶ್ಯಪ ಹೆಂಡ್ತಿ ಮೋಹಗೊಂಡು ಕೆಟ್ಟ ಸಮಯದಲ್ಲಿ ಇಬ್ಬರೂ ಸೇರಿದಾಗ ಹುಟ್ಟುವವರೇ ಹಿರಣ್ಯಾಕ್ಷ ಮತ್ತು ಹಿರಣ್ಯ ಕಶ್ಯಪ. ಹಿರಣ್ಯಕಶ್ಯಪ ಭಕ್ತಪ್ರಹ್ಲಾದನ ತಂದೆ. ಇವರಿಬ್ಬರ ಕಥೆಯನ್ನು ಈಗಾಗಲೇ ಸಿನಿಮಾದಲ್ಲೂ ನೋಡಿದ್ದೇವೆ. ಡಾ.ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಭಕ್ತಪ್ರಹ್ಲಾದ ಸಿನಿಮಾದಲ್ಲೂ ಈ ಕಥೆಯನ್ನೇ ಹೇಳಲಾಗಿದೆ. ಹೀಗಾಗಿ ಎಲ್ಲರಿಗೂ ಗೊತ್ತಿರುವ ಕಥೆಯನ್ನು ಅನಿಮೇಷನ್‌ ಮೂಲಕ ತಿಳಿಸುವುದಕ್ಕೆ ಹೊರಟಿದ್ದಾರೆ.

'ಮಹಾವತಾರ್ ನರಸಿಂಹ' ಪ್ಲಸ್ ಪಾಯಿಂಟ್ ಏನು?

'ಮಹಾವತಾರ್ ನರಸಿಂಹ' ಅನಿಮೇಷನ್ ಸೀರಿಸ್ ಎಲ್ಲರಿಗೂ ಗೊತ್ತಿರುವ ಕಥೆಯನ್ನೇ ಹೇಳಿದರೂ, ಪ್ರೇಕ್ಷಕನಿಗೆ ವಿಜ್ಯೂವಲ್ ಟ್ರೀಟ್ ಕೊಟ್ಟಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಅನಿಮೇಷನ್ ಮೂಲಕ ಪೌರಾಣಿಕ ಕಥೆಯನ್ನು ಹೇಳುವುದಕ್ಕೆ ಹೊರಟಿದೆ. ಇದು ಅನಿಮೇಷನ್ ಸಿನಿಮಾ ಅಂತ ಅನಿಸಿದರೂ ನೋಡುತ್ತಾ ಹೋದಂತೆ ಇದೊಂದು ರಿಯಲ್ ಸಿನಿಮಾವನ್ನೇ ನೋಡುತ್ತಿದ್ದೇವಾ? ಅಂತ ಅನಿಸದೆ ಇರುವುದಿಲ್ಲ. ಪೌರಾಣಿಕ ಡೈಲಾಗ್‌ಗಳು ಪ್ರೇಕ್ಷಕರಿಗೆ ಹಿಡಿಸುತ್ತವೆ. ಅದರಲ್ಲೂ ಪ್ರಹ್ಲಾದ ಹೇಳುವ ಡೈಲಾಗ್ ವಾಹ್ಹ್ ಅನಿಸುತ್ತೆ. ಕೆಲವೊಂದು ಸನ್ನಿವೇಶಗಳಲ್ಲಿ ಶಿಳ್ಳೆ ಹಾಕಬೇಕು ಅಂತ ಅನಿಸುತ್ತೆ. ನೀಟ್ ಆದ ಶುದ್ಧ ಕನ್ನಡದ ಡೈಲಾಗ್ ಕೇಳುವುದಕ್ಕೆ ಸಿಗುತ್ತೆ.

The animated mythological film Mahavatar Narsimha review and rating in Kannada

ತಂತ್ರಜ್ಞಾನದ ಬಳಕೆ ಹೇಗಿದೆ?

ಈ ಅನಿಮೇಷನ್ ಸಿನಿಮಾ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಿದೆ. 'ಮಹಾವತಾರ್ ನರಸಿಂಹ' ಸಿನಿಮಾದಲ್ಲಿ ಬರುವ ಪ್ರಕೃತಿ, ಕಾಡು, ಅರಮನೆಯ ಸನ್ನಿವೇಶಗಳು ಅದ್ಭುತವಾಗಿವೆ. ತೆರೆಮೇಲೆ ಇವೆಲ್ಲವೂ ಅಚ್ಚು ಕಟ್ಟಾಗಿವೆ ಎಂದು ಅನಿಸುತ್ತವೆ. ಸಿನಿಮಾದ ನರೇಷನ್ ಎಲ್ಲೂ ಬೋರಿಂಗ್ ಅಂತ ಎಲ್ಲೂ ಅನಿಸುವುದಿಲ್ಲ. ಹಿನ್ನೆಲೆ ಸಂಗೀತ ಕೂಡ ಪೂರಕವಾಗಿದೆ. ವಿಎಫ್‌ಎಕ್ಸ್ ಅನ್ನು ಬೆರಗಾಗುವಂತೆ ಬಳಕೆ ಮಾಡಿದ್ದಾರೆ.

ಬೆರಗುಗೊಳಿಸುತ್ತೆ ಕ್ಲೈಮ್ಯಾಕ್ಸ್!

'ಮಹಾವತಾರ್ ನರಸಿಂಹ' ಸಿನಿಮಾದ ಕ್ಲೈಮ್ಯಾಕ್ಸ್ ಬೆರಗುಗೊಳಿಸುತ್ತೆ. ಯಾವುದೋ ಒಂದು ಕಮರ್ಷಿಯಲ್ ಸಿನಿಮಾವನ್ನೇ ನೋಡುತ್ತಿದ್ದೇನೆ ಎನ್ನುವಷ್ಟು ಭಾಸವಾಗುತ್ತೆ. ಕೊನೆಯ 20 ನಿಮಿಷ ಸಿನಿಮಾದ ಹೈಲೈಟ್. ನರಸಿಂಹನ ಅವತಾರ ನೋಡುಗರಿಗೆ ಥ್ರಿಲ್ ಎನಿಸುತ್ತೆ. ಹಾಗೇ ಸಿನಿಮಾದ ಆರಂಭದ ಮೊದಲ 20 ನಿಮಿಷ ಕೂಡ ಅಷ್ಟೇ ಗಮನ ಸೆಳೆಯುತ್ತೆ.

ಮೈನಸ್ ಏನು?

ಅನಿಮೇಷನ್ ಸಿನಿಮಾ ನಿರ್ಮಾಣ ಮಾಡುವುದು ಅಷ್ಟು ಸುಲಭವಲ್ಲ. ಆದರೂ ಇಂತಹದೊಂದು ಪ್ರಯತ್ನ ಆಗಿದೆ. ಹೀಗಾಗಿ ಕೆಲವು ತಾಂತ್ರಿಕ ಸಮಸ್ಯೆ ಕಣ್ಣಿಗೆ ಕಾಣಿಸಿಕೊಂಡರೂ ಅವು ಹೀಗೆ ಬಂದು ಹಾಗೆ ಹೋಗುತ್ತವೆ. ಮೊದಲ 20 ನಿಮಿಷ ಹಾಗೂ ಕೊನೆಯ 20 ನಿಮಿಷಕ್ಕೆ ಕೊಟ್ಟ ಪ್ರಾಮುಖ್ಯತೆ ಮಧ್ಯದಲ್ಲಿ ಬರುವ ಸೀನ್‌ಗಳಿಗೂ ಕೊಟ್ಟಿದ್ದರೆ, ಇನ್ನೂ ಅದ್ಭುತ ಅಂತ ಎನಿಸುತ್ತಿತ್ತು. ಆದರೆ, ಕೊನೆಯಲ್ಲಿ 'ಮಹಾವತಾರ್ ಪರಶುರಾಮ'ನಿಗೆ ಲೀಡ್ ಕೊಟ್ಟಿದ್ದು ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ.

More from Filmibeat

English summary
The animated mythological film Mahavatar Narsimha review and rating in Kannada.
Read more about: review mythology animation movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X