600ಕ್ಕೂ ಅಧಿಕ ಡ್ಯಾನ್ಸರ್ಸ್, ಬ್ಯಾಂಕಾಕ್‌ನಲ್ಲೆಡೆ ಪ್ರಯಾಣ, ಹೇಗಿದೆ ಅದ್ದೂರಿಯಾಗಿರುವ ಮಾರ್ಟಿನ್ ಚಿತ್ರದ ಆಂಥೆಮ್..!
ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್ ಇನ್ನೇನು ಈ ಅಕ್ಟೋಬರ್ ಹನ್ನೊಂದಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ಮೇಲೆ ನಿರೀಕ್ಷೆಗಳಿವೆ. ಚಿತ್ರ ಗೆಲ್ಲುತ್ತೆ ಎನ್ನುವ ಭರವಸೆ ಕೂಡ ಗಾಂಧಿನಗರಕ್ಕಿದೆ. ಇದಕ್ಕೆ ಪೂರಕವಾಗಿ ಜನ ಈಗಾಗಲೇ ತಿಂಗಳ ಹಿಂದೆ ಬಿಡುಗಡೆಯಾದ ಚಿತ್ರದ ಟ್ರೇಲರ್ ಜನ ಮನ ಗೆದ್ದಿದೆ. ಆ ಪ್ರಭೆಯಲ್ಲಿಯೇ ಚಿತ್ರತಂಡ ಈಗ ಹಾಡೊಂದನ್ನು ಬಿಡುಗಡೆ ಮಾಡಿದೆ. ಧ್ರುವಾ ಸರ್ಜಾ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಕುಂತಲ್ಲಿಯೇ ಕುಣಿಸುತ್ತಿದೆ.
ಹೌದು, ಧ್ರುವ ಸರ್ಜಾ ಹುಟ್ಟುಹಬ್ಬದ ಮುನ್ನ ಮಾರ್ಟಿನ್ ಚಿತ್ರತಂಡ ಚಿತ್ರತಂಡ ಆಂಥೆಮ್ ಆಫ್ ಮಾರ್ಟಿನ್ ಹಾಡನ್ನು ಅನಾವರಣ ಮಾಡಿದೆ. ಈ ಮೂಲಕ ಎಲ್ಲರ ಚಿತ್ತವನ್ನು ಕದಿಯುವ ಪ್ರಯತ್ನ ಮಾಡಿದೆ. ತಮ್ಮ ಈ ಪ್ರಯತ್ನದಲ್ಲಿ ಬಹುತೇಕ ಯಶಸ್ವಿಯೂ ಆಗಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಯೂಟ್ಯೂಬ್ ಅಂಗಳದಲ್ಲಿ ಹಾಡು ಬಿಡುಗಡೆಯಾದ ಕೆಲವೇ ಘಂಟೆಯಲ್ಲಿ ಲಕ್ಷ ಲಕ್ಷ ಜನ ಹೃದಯ ಗೆಲ್ಲುತ್ತಿದೆ. ಬಿಡುಗಡೆಯಾದ ಕೆಲವೇ ಘಂಟೆಯಲ್ಲಿ ಮೂವತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಈ ಹಾಡು ಪಡೆದಿದೆ.

ಇನ್ನೂ ಈ ಹಾಡಿಗೆ ಮಣಿಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಪ್ರಚಾರದಿಂದ ಹೊರಗುಳಿದಿರುವ ನಿರ್ದೇಶಕ ಎಪಿ ಅರ್ಜುನ್ ಅವರೇ ಈ ಹಾಡಿಗೆ ಸಾಳು ಗೀಚಿದ್ದಾರೆ. ಪೃದ್ವಿ ಚಂದ್ರಾ ಈ ಹಾಡಿಗೆ ಕಂಠ ಕುಣಿಸಿದ್ದಾರೆ.
ಅಂದ್ಹಾಗೇ ಖ್ಯಾತ ಕೊರಿಯೋಗ್ರಾಫರ್ ಮುರಳಿ ಅವರ ಅಣತಿಯಂತೆ ಇಲ್ಲಿ ಧ್ರುವಾ ಸರ್ಜಾ ಹೆಜ್ಜೆ ಹಾಕಿದ್ದಾರೆ. ಈ ಹಾಡಿನಲ್ಲಿ ಧ್ರುವಾ ಸರ್ಜಾ ಜೊತೆ 600ಕ್ಕೂ ಹೆಚ್ಚಿನ ನೃತ್ಯಗಾರರು ಕುಣಿದಿರುವುದು ವಿಶೇಷ. ಇನ್ನೂ ಕೇವಲ ಈ ಹಾಡಿಗೋಸ್ಕರ ಚಿತ್ರದ ನಿರ್ಮಾಪಕ ಉದಯ್ ಮೆಹ್ತಾ ಹತ್ ಹತ್ರ ಆರು ಕೋಟಿ ಹಣವನ್ನು ನೀರಿನಂತೆ ಸುರಿದಿದ್ದಾರೆ. 07 ದಿನ ಬ್ಯಾಂಕಾಕ್, ಪುಕೆಟ್‌ಗೆ ಚಿತ್ರತಂಡವನ್ನು ಕಳುಹಿಸಿದ್ದಾರೆ. ರಷ್ಯಾದ ಡ್ಯಾನ್ಸರ್‌ಗಳನ್ನು ಬಳಸಿಕೊಳ್ಳಲು ಅನುಮತಿ ನೀಡುವುದಲ್ಲದೇ ಚಿತ್ರತಂಡಕ್ಕೆ, ನೃತ್ಯ ನಿರ್ದೇಶಕ ಮುರಳಿ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಈ ಹಾಡಿಗೋಸ್ಕರ ನೀಡಿದ್ದಾರೆ. ಪರಿಣಾಮ ಹಾಡು ಅದ್ಧೂರಿಯಾಗಿ ಮೂಡಿ ಬಂದಿದೆ. ಎಲ್ಲರ ಕಣ್ಮನ ಸೆಳೆಯುತ್ತಿದೆ.
ಇನ್ನೂ ಮಾರ್ಟಿನ್ ಕೇವಲ ಕನ್ನಡ ಚಿತ್ರವಲ್ಲ. ಪ್ಯಾನ್ ಇಂಡಿಯಾ ಚಿತ್ರ. ಈ ಹಿನ್ನೆಲೆ ಈ ಹಾಡನ್ನು ಎಲ್ಲ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದರೆ ಅಕ್ಕ ಪಕ್ಕದ ರಾಜ್ಯದವರು ಕೂಡ ಈ ಹಾಡು ಕಣ್ತುಂಬಿಕೊಂಡು ಧ್ರುವಾ ಸರ್ಜಾ ಮತ್ತು ಚಿತ್ರತಂಡದ ಶ್ರಮಕ್ಕೆ ಸೆಲ್ಯೂಟ್ ಹೊಡೆಯುತ್ತಿದ್ದಾರೆ. ಹಾಡನ್ನು ಬಾಯ್ತುಂಬ ಹೊಗಳುತ್ತಿದ್ದಾರೆ. ಇದಕ್ಕೆ ವ್ಯಕ್ತವಾದ ಅಭಿಪ್ರಾಯ ಮತ್ತು ವೀವ್ಸ್ ಸಾಕ್ಷಿ.
ಉಳಿದಂತೆ ಹಾಡು ನೋಡುತ್ತಿದ್ದರೆ ಚಿತ್ರದ ಕ್ವಾಲಿಟಿಯಲ್ಲಿ ನಿರ್ಮಾಪಕ ಉದಯ್ ಮೆಹ್ತಾ ಎಲ್ಲಿಯೂ ರಾಜಿಯಾಗಿಲ್ಲ ಅನ್ನುವುದು ಸ್ಪಷ್ಟವಾಗುತ್ತೆ. ಧ್ರುವಾ ಸರ್ಜಾ ಅವರ ಪರಿಶ್ರಮ ಕೂಡ ಕಾಣಿಸುತ್ತೆ.ಇದಕ್ಕೆ ತಕ್ಕಂತೆ ಈ ಹಾಡು ಸದ್ಯ ಧ್ರುವಾ ಸರ್ಜಾ ಅಭಿಮಾನಿಗಳ ಹೃದಯವನ್ನಷ್ಟೇ ಅಲ್ಲ ಅನೇಕ ಸಿನಿಮಾ ಪ್ರಿಯರ ಕಣ್ಮನ ಸೆಳೆಯುತ್ತಿದೆ. ಮಾರ್ಟಿನ್ ಚಿತ್ರದ ಅದ್ದೂರಿತನದ ಕುರಿತು ಚರ್ಚೆಯೂ ನಡೆಯುತ್ತಿದೆ. ಚಿತ್ರಮಂದಿರದಲ್ಲಿ ಈ ಹಾಡು ಪ್ರದರ್ಶನವಾದಾಗ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಇನ್ನೇನು ಕೆಲವೇ ದಿನ ಮಾರ್ಟಿನ್ ಕಥೆ ಬೆಳ್ಳಿ ತೆರೆಯ ಮೇಲೆ ಅನಾವರಣವಾಗಲಿದೆ. ಕನ್ನಡದ ಜೊತೆ ಜೊತೆಯಲ್ಲಿ ಬೇರೆ ಬೇರೆ ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ಪ್ರೇಕ್ಷಕರು ಹೇಗೆ ಬರ ಮಾಡಿಕೊಳ್ಳುತ್ತಾರೆ ಅನ್ನುವುದನ್ನು ಈಗ ಕಾದು ನೋಡಬೇಕಿದೆ. ಈ ಹಾಡು ಚಿತ್ರದ ಪ್ರಚಾರಕ್ಕೆ ಎಷ್ಟು ಸಹಕಾರಿಯಾಲಿದೆ ಎನ್ನುವುದಕ್ಕೂ ಉತ್ತರ ಸದ್ಯದಲ್ಲಿ ಸಿಗಲಿದೆ.


Click it and Unblock the Notifications











