Devil 'X' Review: 'ಡೆವಿಲ್' ದರ್ಶನ್ ದರ್ಬಾರ್ ಚಿಂದಿ.. ಟ್ವಿಸ್ಟ್‌ ಮೇಲೆ ಟ್ವಿಸ್ಟ್; ಆದ್ರೂ..

ಬಹಳ ದಿನಗಳಿಂದ ಕಾಯ್ತಿದ್ದ 'ಡೆವಿಲ್' ಸಿನಿಮಾ ಕೊನೆಗೂ ತೆರೆಗಪ್ಪಳಿಸಿದೆ. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಳ್ತಿದೆ. ಬೆಳ್ಳಂಬೆಳಗ್ಗೆ 6 ಗಂಟೆಗೆ ಕೆಲವೆಡೆ ಸಿನಿಮಾ ಪ್ರದರ್ಶನ ಆರಂಭವಾಗಿದೆ. ದೊಡ್ಡಮಟ್ಟದಲ್ಲಿ ಸಂಭ್ರಮಾಚರಣೆ ಮಾಡಿ ದರ್ಶನ್ ಅಭಿಮಾನಿಗಳು ಚಿತ್ರವನ್ನು ಸ್ವಾಗತಿಸಿದ್ದಾರೆ. ಈಗಾಗಲೇ ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಸಂಕಷ್ಟಕ್ಕೆ ಸಿಲುಕಿರುವ ನಟ ದರ್ಶನ್‌ಗೆ 'ಡೆವಿಲ್' ಸಿನಿಮಾ ಗೆಲುವು ಬಹಳ ಅನಿವಾರ್ಯವಾಗಿದೆ. ಅಭಿಮಾನಿಗಳು ಮೊದಲಿನಿಂದ ಅವರ ಬೆಂಬಲಕ್ಕೆ ನಿಂತಿದ್ದಾರೆ. 'ಡೆವಿಲ್' ಚಿತ್ರವನ್ನು ಭವ್ಯವಾಗಿ ಸ್ವಾಗತಿಸಿದ್ದಾರೆ. ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಬರೀ ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಸಿನಿಮಾ 7 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.

The Devil Twitter Review  Netizens call the Darshan starrer one time watchable

ಪ್ರಕಾಶ್ ನಿರ್ದೇಶನದ 'ಡೆವಿಲ್' ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ. ಡೆವಿಲ್ ಹಾಗೂ ಧನುಷ್ ಅವತಾರಗಳಲ್ಲಿ ದರ್ಶನ್ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸಿನಿಮಾ ನೋಡಿದವರು ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ.

ಟ್ವಿಸ್ಟ್ ಮೇಲೆ ಟ್ವಿಸ್ಟ್

"ನಾನು 'ಡೆವಿಲ್' ಸಿನಿಮಾ ನೋಡಿದೆ. ಫಸ್ಟ್ ಟೈಮ್ ಬಾಸ್ ಮೂವಿಯಲ್ಲಿ ಈ ತರ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೋಡಿದ್ದು. ಬಾಸ್ ಆಕ್ಟಿಂಗ್ ಜಸ್ಟ್ ಲೈಕ್ ವಾಹ್.. ಡೆವಿಲ್ vs ಧನುಷ್ ನೋಡೋಕೆ ಒಂಥರಾ ಥ್ರಿಲ್. ಇಷ್ಟು ದಿನ ನೋಡಿರ ಬಾಸ್ ಸಿನಿಮಾಗಳಲ್ಲಿ ಇದು ಒಂಥರ ಡಿಫ್‌ರೆಂಟ್ ಅನ್ನಿಸಿತು. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಮೂವಿ" ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ಒಂದ್ಸಲ ನೋಡ್ಬೋದು

"ಡಿಬಾಸ್ ಗುಡ್ ಪರ್ಫಾರ್ಮೆನ್ಸ್.. ನಾರ್ಮಲ್ ಸ್ಟೋರಿಲೈನ್.. ಒಂದು ಬೆಸ್ಟ್ ಸಾಂಗ್.. ಆಕ್ಷನ್ ಬ್ಲಾಕ್ ಈಸ್ ಬೆಸ್ಟ್. ಒಟ್ಟಾರೆ ತೃಪ್ತಿಯಾಯಿತು. ಒಂದು ಸಲ ನೋಡಬಹುದು" ಎನ್ನುವುದು ಮತ್ತೊಬ್ಬರ ಅಭಿಪ್ರಾಯ.

ಬ್ಲಾಕ್‌ಬಸ್ಟರ್

ಓ ಮೈ ಗಾಡ್.. ಡೆವಿಲ್ ಚಿಂದಿ.. ಪವರ್‌ಫುಲ್ ಆಕ್ಟಿಂಗ್.. ಗ್ರಿಪ್ಪಿಂಗ್ ಸೀನ್ಸ್.. ಪಕ್ಕಾ ಸಿನಿಮ್ಯಾಟಿಕ್ ಜಾದೂ.. 4.5/5 ಕೊಡಬಹುದು.. ಬ್ಲಾಕ್‌ಬಸ್ಟರ್ ಗ್ಯಾರಂಟಿ ಎನ್ನುವುದು ಮತ್ತೊಬ್ಬರ ಅಭಿಪ್ರಾಯ..

ಅಭಿಮಾನಿಗಳಿಗೆ ಮಾಡಿದ ಸಿನಿಮಾ

ಡೆವಿಲ್ 100% ಬ್ಲಾಕ್‌ಬಸ್ಟರ್.. ಫಸ್ಟ್ ಹಾಫ್ 'ಡೆವಿಲ್' ದಿ ಹೀರೊ.. ಸೆಕೆಂಡ್ ಹಾಫ್ ದಿ ವಿಲನ್‌.. ಡೈಲಾಗ್ಸ್ ಚೆನ್ನಾಗಿದೆ. ಅಭಿಮಾನಿಗಳಿಗಂತ ಹೇಳಿಮಾಡಿಸಿದ ಸಿನಿಮಾ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

ಪ್ರತಿ ಫ್ರೇಮ್ ಬಾಸ್ ಬೆಂಕಿ

ಫಸ್ಟ್ ಹಾಫ್ ಬೆಂಕಿ.. ಇಂಟರ್‌ವಲ್‌ವರೆಗೆ ನೆಕ್ಟ್ಸ್ ಲೆವಲ್ ಸಿನಿಮಾ.. ಮಾನವೀಯತೆ, ಹಾಸ್ಯ, ವಿಭಿನ್ನ ಶೇಡ್ಸ್ ಎಲ್ಲವೂ ಇಷ್ಟವಾಯಿತು.. ಡಿಬಾಸ್ ಪ್ರತಿ ಫ್ರೇಮ್‌ನಲ್ಲಿ ವಿಜೃಂಭಿಸಿದ್ದಾರೆ ಎಂದು ಪ್ರತಿಭಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ಪಕ್ಕಾ ಪೈಸಾ ವಸೂಲ್

ಇದು ಪಕ್ಕಾ ಕಮರ್ಷಿಯಲ್ ಹಿಟ್.. ಮಾಸ್, ಎಮೋಷನ್, ಕಾಮಿಡಿ, ತಿರುವುಗಳು ಎಲ್ಲವನ್ನೂ ಸಂಪೂರ್ಣವಾಗಿ ಮಿಶ್ರಣವಾಗಿರುವುದು ಸೆಳೆಯಿತು. ಪ್ರಕಾಶ್ ವೀರ್ ವಿಷನ್, ತಂಡದ ಕಠಿಣ ಪರಿಶ್ರಮ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತದೆ.. ಪಕ್ಕಾ ಪೈಸಾ ವಸೂಲ್ ಸಿನಿಮಾ ಮಿಸ್‌ಮಾಡಬೇಡಿ" ಎಂದು ನಿಧಿ ಎಂಬುವವರು ಬರೆದುಕೊಂಡಿದ್ದಾರೆ.

ಥಿಯೇಟರ್‌ನಲ್ಲೇ ನೋಡಿ

'ಡೆವಿಲ್' ಸಿನಿಮಾ ಡಿಬಾಸ್ ಅದ್ಭುತ ಪರ್ಫಾರ್ಮೆನ್ಸ್.. ಆರಂಭದಿಂದ ಕೊನೆವರೆಗೂ ಪಕ್ಕಾ ಮನರಂಜನೆ. ಬಾಸ್ ಸ್ವ್ಯಾಗ್, ಡೈಲಾಗ್ ಡೆಲಿವರಿ, ಫೈಟ್ಸ್ ಕಾಮಿಡಿ, ಎಲ್ಲಾ ಕ್ರೇಜಿ ಆಗಿದೆ, ಅಚ್ಯುತ್ ಸರ್ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ, ರಚನಾ ಹಾಗೂ ಎಲ್ಲರ ನಟನೆ ಸೂಪರ್, ಡಿಒಪಿ ಸುಧಾಕರ್, ಅಜನೀಶ್
ಬಿಜಿಎಂ ಬೆಂಕಿ. ಥಿಯೇಟರ್ ಅಲ್ಲೇ ನೋಡಿ ಎನ್ನುವುದು ಮತ್ತೊಬ್ಬರ ಅಭಿಪ್ರಾಯ.

More from Filmibeat

Read more about: devil darshan review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X