The Girlfriend ‍‍‍‍X Review: ರಶ್ಮಿಕಾ ನಟನೆಗೋಸ್ಕರ ನೋಡ್ಲೇಬೇಕು, ಹುಡುಗೀರು ಮಿಸ್ ಮಾಡ್ಕೋಬೇಡಿ

ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ ನಟಿಸಿರುವ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ. ಕನ್ನಡ ನಟ ದೀಕ್ಷಿತ್ ಶೆಟ್ಟಿ ಹೀರೊ ಆಗಿ ನಟಿಸಿರುವುದು ವಿಶೇಷ. ರಾಹುಲ್ ರವೀಂದ್ರನ್ ಈ ಲವ್‌ಸ್ಟೋರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಗೀತಾ ಆರ್ಟ್ಸ್ ಹಾಗೂ ಧೀರಜ್ ಮೊಗಿಲಿನೇನಿ ಎಂಟರ್ಟೈನ್ಮೆಂಟ್ ಸಂಸ್ಥೆಗಳು ಜಂಟಿಯಾಗಿ 'ದಿ ಗರ್ಲ್‌ಫ್ರೆಂಡ್' ಸಿನಿಮಾ ನಿರ್ಮಿಸಿವೆ. ಅನು ಇಮಾನ್ಯುಯೆಲ್, ರೋಹಿಣಿ ಹಾಗೂ ರಾವು ರಮೇಶ್ ಚಿತ್ರದ ತಾರಾಗಣದಲ್ಲಿದ್ದಾರೆ. ಟ್ರೈಲರ್, ಸಾಂಗ್ಸ್ ಮೂಲಕ ಗಮನ ಸೆಳೆದಿದ್ದ ಇಂಟೆನ್ಸ್ ಲವ್ ಸ್ಟೋರಿ ಪ್ರೇಕ್ಷಕರಿಗೆ ಇಷ್ಟವಾಯ್ತು? ಸಿನಿಮಾ ನೋಡಿದವರು 'X' ವೇದಿಕೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆ ಬಗ್ಗೆ ರಶ್ಮಿಕಾ ಕೂಡ ಪ್ರತಿಕ್ರಿಯಿಸುತ್ತಿದ್ದಾರೆ.

The Girlfriend X Review  Fans Hail Rashmika Mandanna s Acting

ಸೆಕೆಂಡ್ ಹಾಫ್ ಸೂಪರ್

ಲವ್ ಸೀನ್ಸ್ ಚೆನ್ನಾಗಿ ವರ್ಕೌಟ್ ಆಯ್ತು. ಫಸ್ಟ್ ಹಾಫ್, ಇಂಟರ್‌ವಲ್ ಬ್ಲಾಕ್ ಅದ್ಭುತ. ಹೀರೊ - ಹೀರೊಯಿನ್ ನಡುವೆ ಎಮೋಷನ್ ವರ್ಕ್ ಆಯ್ತು. ರಶ್ಮಿಕಾ ಬಹಳ ಚೆನ್ನಾಗಿ ನಟಿಸಿದ್ದಾರೆ. ಸೆಕೆಂಡ್ ಹಾಫ್ ಅಂತೂ ಸೂಪರ್ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ರಶ್ಮಿಕಾ ನಟನೆ ಬೊಂಬಾಟ್

ಈಗಷ್ಟೆ 'ದಿ ಗರ್ಲ್‌ಫ್ರೆಂಡ್' ಸಿನಿಮಾ ನೋಡ್ದೆ. ಬಹಳ ಭಾವುಕನಾದೆ. ರಶ್ಮಿಕಾ ನಿಮ್ಮ ನಟನೆ ಸೂಪರ್, ನೀವು ಬಿಟ್ಟು ಬೇರೆ ಯಾರು ಈ ರೀತಿ ನಟನೆ ಮಾಡಲು ಸಾಧ್ಯವಿಲ್ಲ. ಹೀರೋ ಚೆನ್ನಾಗಿ ನಟಿಸಿದ್ದಾರೆ. ಕ್ಲೈಮ್ಯಾಕ್ಸ್ ಎಮೋಷನಲ್ ಸೀನ್ಸ್ ಅಂತೂ ಚೆನ್ನಾಗಿದೆ. ಎಲ್ಲರೂ ಚಿತ್ರಕ್ಕೆ ಕನೆಕ್ಟ್ ಆಗುತ್ತಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ಮಿಸ್ ಮಾಡದೇ ನೋಡಿ, ಮುಖ್ಯವಾಗಿ ಯುವತಿಯರು ನೋಡಲೇಬೇಕು ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯ ಬರೆದುಕೊಂಡಿದ್ದಾರೆ.

ಪ್ರೀ ಇಂಟರ್‌ವಲ್ ಸೀನ್ ಚಿಂದಿ

ರಶ್ಮಿಕಾಗೋಸ್ಕರ ಈ ಸಿನಿಮಾ ನೋಡಿ. ತನ್ನ ವೃತ್ತಿಜೀವನದಲ್ಲಿ ಬಹಳ ಚೆನ್ನಾಗಿ ನಟಿಸಿರುವ ಸಿನಿಮಾ ಇದು. ಹೃದಯಸ್ಪರ್ಶಿ ಅಭಿನಯ. ರಾಹುಲ್ ರವೀಂದ್ರನ್ ಅವರ ಸೂಕ್ಷ್ಮ ನಿರ್ದೇಶನ. ಪ್ರೀ ಇಂಟರ್‌ವಲ್ ಸೀನ್ ಬರವಣಿಗೆ ಸಂಗೀತ ಮತ್ತು ದೃಶ್ಯಗಳು ಭಾವನಾತ್ಮಕ ಧಾಟಿಯನ್ನು ಹೆಚ್ಚಿಸುತ್ತವೆ ಎಂದು ಮಗದೊಬ್ಬರು ಟ್ವೀಟ್ ಮಾಡಿದ್ದಾರೆ.

ಕ್ಲೈಮ್ಯಾಕ್ಸ್‌ನಲ್ಲಿ ರಶ್ಮಿಕಾ ಮೋಡಿ

ದೀಕ್ಷಿತ್ ಎಂತಹ ಅಭಿನಯ ಸಹೋದರ, ನೀವು ಪರದೆಯ ಮೇಲೆ ಇರುವಾಗಲೆಲ್ಲಾ ನಾನು ನಿಮ್ಮನ್ನು ದ್ವೇಷಿಸುತ್ತೇನೆ. ಅದೇ ಸಮಯದಲ್ಲಿ ನಿಮ್ಮನ್ನು ಪ್ರೀತಿಸುತ್ತೇನೆ. ಪವರ್‌ಫುಲ್ ಜೊತೆಗೆ ಪರಿಣಾಮಕಾರಿ ಅಭಿನಯ. ಶುಭವಾಗಲಿ. ರಶ್ಮಿಕಾ ಬಗ್ಗೆ ಹೇಳಲೇಬೇಕು. ಆಕೆ ಅದ್ಭುತ ನಟಿ ಯಾಕೆ ಎನ್ನುವುದು ಕ್ಲೈಮ್ಯಾಕ್ಸ್ ನೋಡಿದರೆ ಗೊತ್ತಾಗುತ್ತದೆ.

ಮಿಸ್‌ ಮಾಡಬೇಡಿ

ಸುಂದರ ಪ್ರೇಮಕಥೆ ದಿ ಗರ್ಲ್ ಫ್ರೆಂಡ್. ಸಂಪೂರ್ಣವಾಗಿ ಆನಂದಿಸಿದೆ. ರಶ್ಮಿಕಾ ಮಂದಣ್ಣ ಅವರಿಗೆ ಎಲ್ಲಾ ಕ್ರೆಡಿಟ್‌ ಸಿಗಬೇಕು. ಇತರ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ತಪ್ಪದೇ ಹೋಗಿ ಸಿನಿಮಾ ನೋಡಿ ಎಂದು ಸಾಯಿ ಅರ್ಜುನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ರಶ್ಮಿಕಾಗೆ ಹ್ಯಾಟ್ಸಪ್

'ದಿ ಗರ್ಲ್‌ಫ್ರೆಂಡ್' ನಾವು ಹೆಚ್ಚಾಗಿ ಕಡೆಗಣಿಸುವ ಸತ್ಯಗಳನ್ನು ಮಾತನಾಡುವ ಸಿನಿಮಾ. ಭೂಮಾ/ವಿಕ್ರಮ್ ನಾವು ನೋಡಿರುವ ಪ್ರತಿಯೊಬ್ಬ ಹುಡುಗಿ ಮತ್ತು ಹುಡುಗನನ್ನು, ಪ್ರತಿಯೊಂದು ಕ್ಷಣಿಕ ನೋವು ಮತ್ತು ಮೌನ ಕಥೆಯನ್ನು ಸಾಕಾರಗೊಳಿಸುತ್ತಾರೆ. ನಾನು ಸಿನಿಮಾದಲ್ಲಿ ಬೆರೆತು ಹೋದೆ. ಆದ್ದರಿಂದ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅದನ್ನು ಅನುಭವಿಸಿದ್ದೇವೆ.ದಿ ಗರ್ಲ್‌ಫ್ರೆಂಡ್ ಪ್ರೀತಿ, ದುರ್ಬಲತೆ ಮತ್ತು ಸ್ವಯಂ ಅನ್ವೇಷಣೆಯ ಅದ್ಭುತ ಅನ್ವೇಷಣೆ. ರಾಹುಲ್ ಪ್ರೀತಿ/ಒಂಟಿತನವನ್ನು ಪ್ರಾಮಾಣಿಕತೆಯಿಂದ ಚಿತ್ರಿಸಿದ್ದಾರೆ. ರಶ್ಮಿಕಾ ನಟಿಸಿರುವುದು ಮಾತ್ರವಲ್ಲ ಭೂಮಾ ಪಾತ್ರದಲ್ಲಿ ಜೀವಿಸಿದ್ದಾಳೆ. ಅವಳ ಮೌನ ಪದಗಳಿಗಿಂತ ಜೋರಾಗಿ ಮಾತನಾಡುತ್ತವೆ. ಇದು ನೋಡಿದ ಬಳಿಕ ಕೂಡ ನಿಮ್ಮೊಂದಿಗೆ ಉಳಿಯುವ ಚಿತ್ರ" ಎಂದು ಮತ್ತೊಬ್ಬರೂ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X