The Judgement Review: ಸಖತ್ ಥ್ರಿಲ್ ಕೊಡುತ್ತೆ 'ದ ಜಡ್ಜ್‌ಮೆಂಟ್'; ಆದರೆ ಕ್ಲೈಮ್ಯಾಕ್ಸ್...

By ಯಶವಂತ್

Rating:
3.0/5
Star Cast: V Ravichandran, Lakshmi Gopalaswamy, Diganth, Dhanya Ramkumar
Director: Gururaj Kulkarni

ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿರುವ ಹೊಸ ಸಿನಿಮಾ 'ದಿ ಜಡ್ಜ್‌ಮೆಂಟ್' ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಂಡಿದೆ. ಬಹಳ ದಿನಗಳ ಬಳಿಕ ರವಿಚಂದ್ರನ್ ಕೋರ್ಟ್ ರೂಮ್ ಡ್ರಾಮದಲ್ಲಿ ಕಾಣಿಸಿಕೊಂಡಿದ್ದಾರೆ. ಕರಿ ಕೋಟ್ ಧರಿಸಿ, ವಕೀಲರಾಗಿ ಕ್ರೇಜಿ ಸ್ಟಾರ್ ಅಖಾಡಕ್ಕಿಳಿದಿದ್ದಾರೆ. ಇವರಿಗೆ ಜೊತೆಯಾಗಿ ಕನ್ನಡ ಚಿತ್ರರಂಗದ ತಾರೆಯರು ನಟಿಸಿದ್ದಾರೆ.

ಕ್ರೇಜಿಸ್ಟಾರ್ ಜೊತೆ ಬಹುಭಾಷಾ ನಟಿ ಲಕ್ಷ್ಮಿ ಗೋಪಾಲಸ್ವಾಮಿ, ಮೇಘನಾ ಗಾಂವ್ಕರ್, ದಿಗಂತ್, ಧನ್ಯ ರಾಮ್‌ಕುಮಾರ್ ಸೇರಿದಂತೆ ಸಾಕಷ್ಟು ಮಂದಿ ತಾರೆಯರು ದಿ ಜಡ್ಜ್‌ಮೆಂಟ್ ಸಿನಿಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದೊಡ್ಡ ತಾರಾಬಳಗವಿರುವ ಈ ಸಿನಿಮಾವನ್ನು ಗುರುರಾಜ್ ಕುಲಕರ್ಣಿ ಆಕ್ಷನ್ ಕಟ್ ಹೇಳಿದ್ದಾರೆ.

The Judgement Movie Review  V Ravichandran  Diganth Impress in Kannada Cinema

ಬಹಳ ದಿನಗಳ ಬಳಿಕ ಲೀಗಲ್-ಥ್ರಿಲ್ಲರ್ ಶೈಲಿಯ ಸಿನಿಮಾ ತೆರೆಕಂಡಿದೆ. ಅದರಲ್ಲೂ ಈ ಕೋರ್ಟ್ ರೂಮ್ ಡ್ರಾಮಾದ ಕಥೆಯೇನು? ಕ್ರೇಜಿಸ್ಟಾರ್ ನಟನೆ, ಸ್ಕ್ರೀನ್ ಪ್ರೆಸೆನ್ಸ್ ಹೇಗಿದೆ? ಸಿನಿಮಾದ ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ..

'ದ ಜಡ್ಜ್‌ಮೆಂಟ್' ಸಿನಿಮಾ ಕಥೆಯೇನು?

'ದ ಜಡ್ಜ್‌ಮೆಂಟ್' ಇದು ಪಕ್ಕಾ ಕೋರ್ಟ್ ಡ್ರಾಮ ಸಿನಿಮಾ. ಇಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ವಾದದ ಮೂಲಕವೇ ಹೀರೊ ಆಗುವ ಕಥೆ. ಈ ಸಿನಿಮಾ ದಿಗಂತ್‌ ಪಾತ್ರದಿಂದಲೇ ಆರಂಭ ಆಗುತ್ತೆ. ಲೈಫ್‌ನಲ್ಲಿ ತುಂಬಾ ಬೇಗ ಮುಂದೆ ಬರಬೇಕು. ಬಾಲ್ಯದಿಂದಲೂ ಪ್ರೀತಿಸುತ್ತಿದ್ದ ಹುಡುಗಿಯನ್ನು 35 ವರ್ಷದ ಒಳಗೆ ಮದುವೆ ಆಗಬೇಕು. ತಂದೆ-ತಾಯಿ, ಹೆಂಡ್ತಿ ಅನ್ನುವ ಮೈಂಡ್ ಸೆಟ್‌ನಲ್ಲಿ ಇರುವ ಪಾತ್ರ. ಒಂದು ದಿನ ಪಾರ್ಟಿ ಮುಗಿಸಿ ಕೆಲಸದ ನಿಮಿತ್ತ ಹೊರ ಹೋದಾಗ ನಡೆಯುವ ಘಟನೆ ಕೋರ್ಟ್‌ಗೆ ತೆಗೆದುಕೊಂಡು ಹೋಗುತ್ತೆ. ಇದು ಸಿನಿಮಾ ಕಥೆ.

ಕೋರ್ಟ್‌ನಲ್ಲಿ ನಡೆಯುವುದೇನು?

ಪ್ರಾಪರ್ಟಿಗಳನ್ನು ಕೊಡಿಸುವಂತಹ ಕೆಲಸವನ್ನು ದಿಗಂತ್ ಮಾಡುತ್ತಿರುತ್ತಾರೆ. ಇಲ್ಲಿ ಒಬ್ಬ ಮಹಿಳೆ ಪ್ರಾಪರ್ಟಿ ಹುಡುಕುತ್ತಿರುತ್ತಾರೆ. ಅವರಿಗಾಗಿ ದಿಗಂತ್ ಪ್ರಾಪರ್ಟಿ ಹುಡುಕುತ್ತಿರುತ್ತಾರೆ. ಈ ವೇಳೆ ಪಾರ್ಟಿ ಮುಗಿಸಿ ಆ ಮಹಿಳೆಯ ಮನೆಗೆ ಪ್ರಾಪರ್ಟಿ ಬಗ್ಗೆ ಮಾತಾಡುವುದಕ್ಕೆ ಹೋಗುತ್ತಾರೆ. ಆ ವೇಳೆ ಫೋನ್ ಬರುತ್ತೆ. ಮಾತು ಮುಗಿಸಿ ಹಿಂತಿರುಗುವಾಗ ಆ ಮಹಿಳೆಯ ಕೊಲೆ ಆಗಿರುತ್ತೆ. ಇದು ಕೋರ್ಟ್‌ನಲ್ಲಿ ವಾದ ಪ್ರತಿವಾದದವರೆಗೂ ಬಂದು ನಿಲ್ಲುತ್ತೆ.

The Judgement Movie Review  V Ravichandran  Diganth Impress in Kannada Cinema

ಇಂಟರ್‌ವೆಲ್‌ಗೆ ಕಥೆ ಮುಗಿದು ಹೋಯ್ತಾ?

ದಿಗಂತ್ ವಿರುದ್ಧವಾಗಿ ಕೋರ್ಟ್‌ನಲ್ಲಿ ರವಿಚಂದ್ರನ್ ವಾದ ಮಾಡುತ್ತಾರೆ. ಹಾಗೇ ಪರವಾಗಿ ಲಕ್ಷ್ಮಿ ಗೋಪಾಲಸ್ವಾಮಿ ಪರವಾಗಿ ವಾದ ಮಾಡುತ್ತಾರೆ. ಇವರಿಬ್ಬರ ನಡುವಿನ ವಾದ ಫಸ್ಟ್ ಹಾಫ್‌ ಉದ್ದಕ್ಕೂ ನಡೆಯುತ್ತೆ. ದಿಗಂತ್ ಪಾತ್ರವೇ ಕೊಲೆ ಮಾಡಿರುವುದೆಂದು ವಾದ ಮಾಡಿ ರವಿಚಂದ್ರನ್ ಮಾಡಿ ಜೈಲಿಗೆ ಕಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಇಲ್ಲಿಗೆ ಇಂಟರ್‌ವಲ್‌ ಮುಗಿದು ಹೋಯ್ತಾ? ಅಂದುಕೊಳ್ಳುತ್ತಾರೆ. ಆದರೆ, ಸೆಕೆಂಡ್ ಹಾಫ್‌ನಿಂದ ಅಸಲಿ ಕಥೆ ಶುರುವಾಗುತ್ತೆ.

ಪಾತ್ರಗಳು ಹೇಗಿವೆ?

ಸಿನಿಮಾದುದ್ದಕ್ಕೂ ರವಿಚಂದ್ರನ್ ಪಾತ್ರ ಇಷ್ಟ ಆಗುತ್ತೆ. ರವಿಚಂದ್ರನ್ ಹಾಗೂ ಲಕ್ಷ್ಮಿ ಗೋಪಾಲಸ್ವಾಮಿ ವಾದ ಪ್ರತಿವಾದದ ದೃಶ್ಯಗಳು ಇಷ್ಟ ಆಗುತ್ತೆ. ರಂಗಾಯಣ ರಘು, ದಿಗಂತ್ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಇಬ್ಬರ ನಡುವಿನ ಎಮೋಷನಲ್ ಸೀನ್ ಸಖತ್ ಆಗಿದೆ. ಕೋರ್ಟ್ ಡ್ರಾಮ ಸೀನ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು ರವಿಚಂದ್ರನ್. ಧನ್ಯಾ ರಾಮ್‌ ಕುಮಾರ್ ಸೆಕೆಂಡ್ ಹಾಫ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ರವಿಚಂದ್ರನ್ ಪತ್ನಿಯಾಗಿ ಮೇಘನಾ ಗಾಂವ್ಕರ್ ಪಾತ್ರ ಅಷ್ಟಕ್ಕಷ್ಟೇ.

ಪ್ಲಸ್ ಪಾಯಿಂಟ್ ಏನು?

ಇತ್ತೀಚೆಗೆ ಕೋರ್ಟ್ ರೂಮ್ ಡ್ರಾಮದಂತಹ ಸಿನಿಮಾಗಳು ಕನ್ನಡದಲ್ಲಿ ಬಂದಿಲ್ಲ. ಹೀಗಾಗಿ ಪ್ರೇಕ್ಷಕರಿಗೆ ಇದೊಂದು ಥ್ರಿಲ್ಲಿಂಗ್ ಅನುಭವ ನೀಡಲಿದೆ. ರವಿಚಂದ್ರನ್ ಇಷ್ಟ ಆಗುತ್ತಾರೆ. ದಿಗಂತ್, ರಂಗಾಯಣ ರಘು ಸೀನ್‌ಗಳು ಗಮನ ಸೆಳೆಯುತ್ತವೆ. ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಲವ್‌ಸ್ಟೋರಿ, ಆಕ್ಷನ್ ಸಿನಿಮಾವನ್ನೇ ನೋಡಿ ಬೇಜಾರಾಗಿರುವವರಿಗೆ ಇದೊಂದು ವಿಶಿಷ್ಟ ಅನುಭವ ನೀಡಲಿದೆ.

ಮೈನಸ್ ಪಾಯಿಂಟ್ ಏನು?

'ದ ಜಡ್ಜ್‌ಮೆಂಟ್' ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಆದರೆ, ಕೆಲವು ಪಾತ್ರಗಳು ದಿಡೀರನೇ ನಾಪತ್ತೆ ಆಗುತ್ತವೆ. ರಾಜಕೀಯ ನಾಯಕರ ಜೊತೆಗೆ ಕಾಣಿಸಿಕೊಳ್ಳುವ ಪ್ರಕಾಶ್ ಬೆಳವಾಡಿ ಪಾತ್ರ ಕೊನೆಯಲ್ಲಿ ಏನಾಗುತ್ತೆ ಅನ್ನೋದೆ ಗೊತ್ತಾಗಲ್ಲ. ಹಾಗೇ ಕ್ಲೈಮ್ಯಾಕ್ಸ್ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅಂತ ಅನಿಸುತ್ತೆ.

More from Filmibeat

English summary
Discover the captivating performance of V Ravichandran and Diganth in the Kannada movie The Judgement. A must-read review for cinema enthusiasts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X