The Raja Saab X Review: ಪ್ರಭಾಸ್ ಆರ್ಭಟ ಸೂಪರ್, ಫಸ್ಟ್ ಹಾಫ್ ಚಿಂದಿ.. ಆದರೆ...
ಸುಗ್ಗಿ ಸಂಭ್ರಮಕ್ಕೆ ಒಂದು ವಾರ ಬಾಕಿ ಇರುವಾಗಲೇ ಚಿತ್ರಮಂದಿರಗಳಲ್ಲಿ ಸಿನಿ ಸಂಕ್ರಾಂತಿ ಶುರುವಾಗಿದೆ. ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಿನಿಮಾ ತೆರೆಗಪ್ಪಳಿಸಿದೆ. ಒಂದು ದಿನ ಮುನ್ನ ಪ್ರೀಮಿಯರ್ ಶೋಗಳು ನಡೆದಿವೆ. ಈಗಾಗಲೇ ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಆಕ್ಷನ್ ಸಿನಿಮಾಗಳಲ್ಲೇ ಹೆಚ್ಚು ನಟಿಸೋ ಪ್ರಭಾಸ್ ಆಗೊಮ್ಮೆ ಈಗೊಮ್ಮೆ ಬೇರೆ ಕಥೆಗಳನ್ನು ಆಯ್ಕೆ ಮಾಡಿಕೊಂಡು ಪ್ರಯೋಗ ಮಾಡುತ್ತಾರೆ. 'ರಾಧೆಶ್ಯಾಮ್' ಚಿತ್ರದಲ್ಲಿ ರೊಮ್ಯಾಂಟಿಕ್ ಫ್ಯಾಂಟಸಿ ಕಥೆ ಹೇಳಿದ್ದ ಪ್ರಭಾಸ್ ಈ ಬಾರಿ ಕಾಮಿಡಿ ಹಾರರ್ ಥ್ರಿಲ್ಲರ್ ಜೊತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಮೊದಲಿನಿಂದಲೂ 'ದಿ ರಾಜಾಸಾಬ್' ಸಿನಿಮಾ ಅಷ್ಟೇನು ನಿರೀಕ್ಷೆ ಹುಟ್ಟಾಕಲಿಲ್ಲ. ಆದರೆ 2ನೇ ಟ್ರೈಲರ್ ಕೊಂಚ ಭರವಸೆ ಮೂಡಿಸಿತ್ತು.

ಮಾರುತಿ ನಿರ್ದೇಶನದ 'ದಿ ರಾಜಾಸಾಬ್' ಚಿತ್ರದಲ್ಲಿ ಸಂಜಯ್ ದತ್, ಬೊಮಾನ್ ಇರಾನಿ, ಜರೀನಾ ವಹಾಬ್, ಸಮುದ್ರಖನಿ ಹೀಗೆ ದೊಡ್ಡ ತಾರಾಗಣವಿದೆ. ಮಾಳವಿಕಾ ಮೋಹನನ್, ನಿಧಿ ಅಗರ್‌ವಾರ್, ರಿದ್ದಿ ಕುಮಾರ್ ನಾಯಕಿಯರಾಗಿ ಮಿಂಚಿದ್ದಾರೆ. ಪ್ರೀಮಿಯರ್ ಶೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಬೆಂಗಳೂರಿನಲ್ಲಿ ಕೂಡ ಸಿನಿರಸಿಕರು ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ರೆಸ್ಪಾನ್ಸ್ ಹೇಗಿದೆ ಎನ್ನುವುದನ್ನು ಮುಂದೆ ಓದಿ.
ಮಜಾ ಕೊಡಲ್ಲ
'ದಿ ರಾಜಸಾಬ್' ಕಾನ್ಸೆಪ್ಟ್, ಎನರ್ಜಿಟಿಕ್ ಪ್ರಭಾಸ್ ಇರುವ ಹಾರರ್ ಫ್ಯಾಂಟಸಿ ಡ್ರಾಮಾ. ಅಸ್ತವ್ಯಸ್ತ, ಒಂದಕ್ಕೊಂದು ಲಿಂಕ್ ಇಲ್ಲದಂತ ಚಿತ್ರಕಥೆ ಬೇಸರ ಮೂಡಿಸುತ್ತದೆ. ಮೇನ್ ಕಾನ್ಸೆಪ್ಟ್ ಕುತೂಹಲಕಾರಿಯಾಗಿದೆ. ಅದರ ಸುತ್ತಲೂ ಕಟ್ಟಿಕೊಟ್ಟ ಕೆಲವು ಸನ್ನಿವೇಶಗಳು, ಪ್ರೀ-ಕ್ಲೈಮಾಕ್ಸ್ ಚೆನ್ನಾಗಿದೆ. ಆದರೂ ಕಮರ್ಷಿಯಲ್ ಅಂಶಗಳು ರೊಟೀನ್ ಅನ್ನಿಸುತ್ತೆ. ನಿರ್ದೇಶಕ ಮಾರುತಿ ಚಿತ್ರಕಥೆ, ಎಡಿಟಿಂಗ್ ಚಿತ್ರದ ವೇಗಕ್ಕೆ ಅಡ್ಡಿಪಡಿಸುತ್ತದೆ. ಬಹಳ ದಿನಗಳ ನಂತರ ತೆರೆಮೇಲೆ ಪ್ರಭಾಸ್ ಎನರ್ಜಿ ಚೆನ್ನಾಗಿದೆ. ಕೆಲವೆಡೆ ವಿಎಫ್‌ಎಕ್ಸ್ ಸೂಪರ್, ಮತ್ತೆ ಕೆಲವು ದೃಶ್ಯಗಳಲ್ಲಿ ಬೇಸರ ಮೂಡಿಸುತ್ತದೆ. ಸಿನಿಮಾ ಪರಿಣಾಮ ಬೀರುವಲ್ಲಿ ವಿಫಲವಾಗಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ರೇಟಿಂಗ್ 2.25/5.
ಆವರೇಜ್ ಸಿನಿಮಾ
'ಬಾಹುಬಲಿ- 2' ನಂತರ ಪ್ರಭಾಸ್ ಕಮಾಲ್ ಮಾಡಿದ್ದಾರೆ. ತಮ್ಮ ಅತ್ಯುತ್ತಮ ಅಭಿನಯವನ್ನು ನೀಡಿದ್ದಾರೆ. ಆದರೂ ದುರ್ಬಲ ಚಿತ್ರಕಥೆ ಮತ್ತು ಕಥೆ ಹೇಳುವಿಕೆ ಚಿತ್ರಕ್ಕೆ ಹಿನ್ನಡೆಯಾಗಿದೆ. ಒಟ್ಟಾರೆಯಾಗಿ, ಆವರೇಜ್ ಸಿನಿಮಾ ಎನ್ನುವುದು ಮತ್ತೊಬ್ಬರ ಅಭಿಪ್ರಾಯ.
ಮಿಸ್ ಮಾಡಬೇಡಿ
ಆಸ್ಪತ್ರೆ ಸೀಕ್ವೆನ್ಸ್.. ಮೊಸಳೆ ಜೊತೆ ಫೈಟ್ ಹಾಗೂ ಕ್ಲೈಮ್ಯಾಕ್ಸ್ ಬೆಂಕಿ. ಕೊನೆ 30 ನಿಮಿಷ ಚಿತ್ರದ ಜೀವಾಳ.. ಪ್ರಭಾಸ್ ಪರ್ಫಾರ್ಮನ್ಸ್ ಸಖತ್ತಾಗಿದೆ.. ಡಿಫ್‌ರೆಂಟ್ ಆಗಿ ಪ್ರಯತ್ನಿಸಿ ಗೆದ್ದಿದ್ದಾರೆ. ಮಾರುತಿ ಬರವಣಿಗೆ ಅದ್ಭುತ.. ತಮನ್ ಸಂಗೀತ ಚಿತ್ರದ ಹೈಲೆಟ್.. ಮಿಸ್ ಮಾಡದೇ ನೋಡಿ ಎಂದು ಮತ್ತೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬ್ಲಾಕ್‌ಬಸ್ಟರ್
ಕೊನೆಯ 40 ನಿಮಿಷ ಚಿಂದಿ. ಆಸ್ಪತ್ರೆ ಎಪಿಸೋಡ್, ಮೊಸಳೆ ಫೈಟ್ ಬಳಿಕ ಬ್ಯಾಕ್ ಟು ಬ್ಯಾಕ್ ಸನ್ನಿವೇಶಗಳಲ್ಲಿ ಪ್ರಭಾಸ್ ಮಜಾ ಕೊಡ್ತಾರೆ. ಸಖತ್ ಕಿಕ್ ಕೊಡುತ್ತೆ. ನನ್ನ ಫೋನ್ ನೋಡಲೂ ಸಾಧ್ಯವಾಗಲಿಲ್ಲ. ಬ್ಲಾಕ್‌ಬಸ್ಟರ್ ಸಿನಿಮಾ ಅಂತ ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಕಾಮಿಡಿ ಮಿಸ್ ಆಯ್ತು
ಒಂದೊಳ್ಳೆ ಸಿನಿಮಾ.. ಫಸ್ಟ್ ಹಾಫ್ ಚೆನ್ನಾಗಿದೆ.. ಸೆಕೆಂಡ್ ಹಾಫ್ ಓಕೆ ಓಕೆ.. ಕ್ಲೈಮ್ಯಾಕ್ಸ್‌ನಲ್ಲಿ ಹೊಸ ಕಾನ್ಸೆಪ್ಟ್ ಟ್ರೈ ಮಾಡಿದ್ದಾರೆ ಆದರೆ ಅದನ್ನು ಸರಿಯಾಗಿ ತೆರೆಗೆ ತಂದಿಲ್ಲ. ತಮನ್ ದಯವಿಟ್ಟು ಒಳ್ಳೆ ಮ್ಯೂಸಿಕ್ ಕೊಡಿ, ಪ್ರಭಾಸ್ ನಟನೆ ಬಗ್ಗೆ ದೂಸ್ರಾ ಮಾತಿಲ್ಲ. ಮಾರುತಿ ನಿರ್ದೇಶನದ ಚಿತ್ರದಲ್ಲಿ ಒಳ್ಳೆ ಕಾಮಿಡಿ ಬಯಸಿದ್ದೆ. ಆದರೆ ಮಿಸ್ ಆಯ್ತು ಎಂದು ಇನ್ನೊಬ್ಬರು ಟ್ವೀಟ್ ಮಾಡಿರುವುದು ವೈರಲ್ ಆಗ್ತಿದೆ.
ಪ್ರಭಾಸ್ ಆರ್ಭಟ ಜೋರು
ಬ್ಲಾಕ್‌ಬಸ್ಟರ್ ಫಸ್ಟ್ ಹಾಫ್.. ಮಾರುತಿ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಎಂದಿನಂತೆ ಪ್ರಭಾಸ್ ಗೆದ್ದ ಬೀಗಿದ್ದಾರೆ. ಇಂಟರ್‌ವರ್ ಬ್ಲಾಕ್ ಚೆನ್ನಾಗಿದೆ. ಸೆಕೆಂಡ್ ಹಾಫ್ ಬಗ್ಗೆ ನಿರೀಕ್ಷೆ ಹೆಚ್ಚಿಸುತ್ತದೆ. ಮಾಳವಿಕಾ, ನಿಧಿ, ರಿದ್ದಿ ಚೆನ್ನಾಗಿ ಕಾಣುತ್ತಾರೆ. ಸಂಜಯ್ ದತ್ ಲುಕ್, ಹಾರರ್ ಸನ್ನಿವೇಶಗಳ ಸೊಗಸಾಗಿದೆ. ಪಕ್ಕಾ ಬ್ಲಾಕ್‌ಬಸ್ಟರ್ ಎನ್ನುವುದು ಮತ್ತೊಬ್ಬರ ಅಭಿಪ್ರಾಯ.


Click it and Unblock the Notifications











