'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು!

Recommended Video

The Villain : ದಿ ವಿಲನ್ ಸಿನಿಮಾ ವಿಮರ್ಶೆ | FILMIBEAT KANNADA

'ಅಪ್ಪನಿಗಾಗಿ ರಾಮ ಕಾಡಿಗೆ ಹೋದ, ಅಮ್ಮನಿಗಾಗಿ ರಾವಣ ಶಿವನಿಂದ ಆತ್ಮಲಿಂಗ ಪಡೆದುಕೊಂಡ.' ಚಿತ್ರದಲ್ಲಿ ಒಂದು ಕಡೆ ತಾಯಿ ರಾಮನಾಗಿ ನೀನು ಬದುಕು ಎಂದರೆ, ಮತ್ತೊಂದು ಕಡೆ ತಂದೆ ರಾವಣನಾಗಿ ಇದ್ದರೆ ಮಾತ್ರ ಇಂದಿನ ಜಗತ್ತಿನಲ್ಲಿ ಬದುಕಲು ಸಾಧ್ಯ ಎಂದು ಹೇಳುತ್ತಾನೆ. ಈ ಎರಡೂ ವಿಚಾರಗಳ ನಡುವೆ ಸಾಗುವ ಪಕ್ಕಾ ಮನರಂಜನೆಯ ಸಿನಿಮಾ 'ದಿ ವಿಲನ್'.

Rating:
3.5/5
Star Cast: ಶಿವರಾಜ್ ಕುಮಾರ್, ಸುದೀಪ್, ಆಮಿ ಜಾಕ್ಸನ್
Director: ಪ್ರೇಮ್

ಒನ್ ಲೈನ್ ಸ್ಟೋರಿ

ಒನ್ ಲೈನ್ ಸ್ಟೋರಿ

ರಾಮ್ (ಸುದೀಪ್) ಚಿಕ್ಕ ವಯಸ್ಸಿನಲ್ಲಿ ತನ್ನ ತಾಯಿಯಿಂದ ದೂರ ಆಗಿರುತ್ತಾನೆ. ಆ ತಾಯಿಯನ್ನು ಮಗನಿಗೆ ಸೇರಿಸುವ ಜವಾಬ್ದಾರಿಯನ್ನು ರಾಮಣ್ಣ (ಶಿವಣ್ಣ) ತೆಗೆದುಕೊಳ್ಳುತ್ತಾನೆ. ಕೊನೆಗೆ ತಾಯಿ ಮಗ ಇಬ್ಬರೂ ಒಂದಾಗುತ್ತಾರ.. ಇಲ್ವಾ? ಎನ್ನುವುದು ಸಿನಿಮಾದ ಸ್ಟೋರಿ.

ಶಿವಣ್ಣ, ಸುದೀಪ್, ಆಮಿ ಜಾಕ್ಸನ್ ಪಾತ್ರ ಏನು?

ಶಿವಣ್ಣ, ಸುದೀಪ್, ಆಮಿ ಜಾಕ್ಸನ್ ಪಾತ್ರ ಏನು?

ಸುದೀಪ್ ಇಡೀ ಇಂಡಿಯಾಗೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಡಾನ್ ಪಾತ್ರ ಮಾಡಿದ್ದಾರೆ. ಅವರ ಪಾತ್ರದ ಹೆಸರು ರಾಮ್. ಶಿವಣ್ಣನದ್ದು ಇಲ್ಲಿ ರಾಮಣ್ಣ ಎಂಬ ಪಾತ್ರವಾಗಿದೆ. ಸುದೀಪ್ ಅವರನ್ನು ಹುಡುಕಿಕೊಂಡು ಹೋಗುವ ಪಾತ್ರ ಇದಾಗಿದೆ. ಜಾನಕಿ ಪಾತ್ರದಲ್ಲಿ ಆಮಿ ಜಾಕ್ಸನ್ ಕಾಣಿಸಿಕೊಂಡಿದ್ದಾರೆ. ಇದು ಸುದೀಪ್ ಪ್ರಿಯತಮೆಯ ಪಾತ್ರ.

ರಾಮ್ ಹಾಗೂ ರಾಮಣ್ಣನ ನಡುವಿನ ಜೂಟಾಟ

ರಾಮ್ ಹಾಗೂ ರಾಮಣ್ಣನ ನಡುವಿನ ಜೂಟಾಟ

ರಾಮ್ (ಸುದೀಪ್) ಹಾಗೂ ರಾಮಣ್ಣ (ಶಿವಣ್ಣ) ಈ ಎರಡು ಪಾತ್ರಗಳ ಮೇಲೆ ಸಿನಿಮಾ ನಿಂತಿದೆ. ಇಂಡಿಯಾದಲ್ಲಿ ಡಾನ್ ಆಗಿರುವ ರಾಮ್ ಬಳಿಕ ಬ್ರಿಟಿಷ್ ಡಾನ್ ಆಗಲು ಹೊರಡುತ್ತಾನೆ. ಇತ್ತ ರಾಮ್ ನನ್ನು ಹುಡುಕಿಕೊಂಡು ರಾಮಣ್ಣ ಕೂಡ ಲಂಡನ್ ಗೆ ಹೋಗುತ್ತಾನೆ. ನಂತರ ಇಬ್ಬರ ನಡುವೆ ಜೂಟಾಟ, ಹೊಡೆದಾಟ, ಹೋರಾಟ ನಡೆಯುತ್ತದೆ.

ತೊಡೆ ತಟ್ಟಿದ್ದಾರೆ ಕರುನಾಡ ಚಕ್ರವರ್ತಿ, ಅಭಿನಯ ಚಕ್ರವರ್ತಿ

ತೊಡೆ ತಟ್ಟಿದ್ದಾರೆ ಕರುನಾಡ ಚಕ್ರವರ್ತಿ, ಅಭಿನಯ ಚಕ್ರವರ್ತಿ

ಶಿವರಾಜ್ ಕುಮಾರ್ ಹಾಗೂ ಸುದೀಪ್ ಇಡೀ ಸಿನಿಮಾವನ್ನು ಹೊತ್ತು ನಿಂತಿದ್ದಾರೆ. ಇಬ್ಬರು ತೊಡೆ ತಟ್ಟಿ ತಮ್ಮ ಪಾತ್ರದಲ್ಲಿ ನಟಿಸಿದ ಹಾಗಿದೆ. ಪರದೆ ಮೇಲೆ ಇಬ್ಬರ ಮುಖಾಮುಖಿ ಕಡಿಮೆ ಇದ್ದರೂ, ನಟನೆಯಲ್ಲಿ ಇಬ್ಬರ ನಡುವೆ ಪೈಪೋಟಿ ನಡೆಯುತ್ತಲೇ ಇರುತ್ತದೆ. ಇಬ್ಬರ ಲುಕ್, ಡೈಲಾಗ್, ಆಕ್ಟಿಂಗ್ ಒಳ್ಳೆಯ ಮಜಾ ನೀಡುತ್ತದೆ.

ಪಾತ್ರಗಳಲ್ಲಿ ಜೀವಂತಿಕೆ ಇದೆ

ಪಾತ್ರಗಳಲ್ಲಿ ಜೀವಂತಿಕೆ ಇದೆ

ಸಿನಿಮಾದ ಪ್ರತಿ ಪಾತ್ರದಲ್ಲೂ ಜೀವಂತಿಕೆ ಇದೆ. ತಾಯಿಯ ಪಾತ್ರದಲ್ಲಿ ನಟಿಸಿರುವ ಶರಣ್ಯಾ ಅವರ ನಟನೆ ಅದ್ಬುತ. ಈ ಪಾತ್ರ ಹಾಗೂ ಅವರ ಅಭಿನಯ ಸಿನಿಮಾದ ಜೀವ. ಉಳಿದಂತೆ, ರಾಮ್, ರಾಮಣ್ಣ, ಜಾನಕಿ ಹಾಗೂ ತಂದೆಯ ಪಾತ್ರಗಳಿಗೆ ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿ ಇದೆ.

ಕುತೂಹಲಕಾರಿ ಅಂಶಗಳು

ಕುತೂಹಲಕಾರಿ ಅಂಶಗಳು

ಚಿತ್ರದಲ್ಲಿ ಶಿವಣ್ಣ ಹಾಗೂ ಸುದೀಪ್ ಇಬ್ಬರೂ ಅಣ್ಣ ತಮ್ಮಂದಿರೇ? ಹಾಗಾದರೆ, ಇಲ್ಲಿ 'ವಿಲನ್' ಯಾರು? ಇಬ್ಬರ ಪಾತ್ರಗಳಲ್ಲಿ ಯಾವ ಪಾತ್ರಕ್ಕಾದರೂ ನೆಗೆಟಿವ್ ಶೇಡ್ ಇದ್ಯಾ? ಈ ರೀತಿ ಚಿತ್ರದಲ್ಲಿ ಅನೇಕ ಕುತೂಹಲಕಾರಿ ಅಂಶಗಳು ಇದ್ದು, ಕೊನೆಯವರೆಗೂ ಅವುಗಳನ್ನು ಬಿಟ್ಟುಕೊಟ್ಟಿಲ್ಲ. ಇದನ್ನು ಸಿನಿಮಾದಲ್ಲಿಯೇ ನೀವು ನೋಡಬೇಕು.

ಇಬ್ಬರ ಫ್ಯಾನ್ಸ್ ಗಳಿಗೆ ನ್ಯಾಯ

ಇಬ್ಬರ ಫ್ಯಾನ್ಸ್ ಗಳಿಗೆ ನ್ಯಾಯ

ಶಿವರಾಜ್ ಕುಮಾರ್ ಹಾಗೂ ಸುದೀಪ್ ಇಬ್ಬರೂ ಅಭಿಮಾನಿಗಳಿಗೆ ಪ್ರೇಮ್ ಮೋಸ ಮಾಡಿಲ್ಲ. ಇಬ್ಬರ ಸ್ಕ್ರೀನ್ ಸ್ಪೇಸ್, ಪಾತ್ರ, ಡೈಲಾಗ್, ಹಾಡುಗಳು, ಫೈಟ್ಸ್ ಹೀಗೆ ಎಲ್ಲ ವಿಚಾರಗಳಲ್ಲೂ ಎರಡೂ ಪಾತ್ರಗಳಿಗೆ ಅಷ್ಟೇ ಪ್ರಾಮುಖ್ಯತೆ ಇದೆ. ಇಬ್ಬರೂ ಅಭಿಮಾನಿಗಳಿಗೆ ಸಿನಿಮಾ ಇಷ್ಟ ಆಗುತ್ತದೆ.

ಮನಸ್ಸಿಗೆ ಹಿಡಿಸುವ ಸಂಭಾಷಣೆಗಳು

ಮನಸ್ಸಿಗೆ ಹಿಡಿಸುವ ಸಂಭಾಷಣೆಗಳು

ಮಳವಳ್ಳಿ ಸಾಯಿಕೃಷ್ಣ ಅವರ ಸಂಭಾಷಣೆ ತುಂಬ ಚೆನ್ನಾಗಿದೆ. ಕೆಲವು ಡೈಲಾಗ್ ಗಳು ಮನಸ್ಸು ಮುಟ್ಟಿದರೆ, ಇನ್ನೂ ಕೆಲವು ಮಾಸ್ ಡೈಲಾಗ್ ಗಳು ಶಿಳ್ಳೆ ಚಪ್ಪಾಳೆ ಗಿಟ್ಟಿಸುತ್ತವೆ.

ಕೆಲವು ಕಡೆ ಅಡ್ಡಗಾಲು ಹಾಕುವ ಹಾಡುಗಳು

ಕೆಲವು ಕಡೆ ಅಡ್ಡಗಾಲು ಹಾಕುವ ಹಾಡುಗಳು

ಸಿನಿಮಾದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ. ಅವುಗಳನ್ನು ತೆರೆ ಮೇಲೆ ನೋಡುವಾಗ ಖುಷಿ ಆಗುತ್ತದೆ. ಆದರೆ, ಕೆಲವು ಕಡೆ ಕಥೆಯ ವೇಗಕ್ಕೆ ಹಾಡುಗಳು ಅಡ್ಡಗಾಲು ಹಾಕಿದಂತೆ ಅನಿಸುತ್ತದೆ.

ಪ್ಲಸ್ ಅಂಡ್ ಮೈನಸ್

ಪ್ಲಸ್ ಅಂಡ್ ಮೈನಸ್

ಸಿನಿಮಾದಲ್ಲಿ ಅನೇಕ ಒಳ್ಳೆಯ ಅಂಶಗಳು ಇವೆ. ರಾಮಾಯಣ, ಮಹಾಭಾರತದ ಸಂದೇಶಗಳು, ತಾಯಿ ಮಗನ ಸೆಂಟಿಮೆಟ್, ಶಿವರಾಜ್ ಕುಮಾರ್ ಮತ್ತು ಸುದೀಪ್ ನಟನೆ ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ಗಳಾಗಿವೆ. ಇವೆಲ್ಲ ಇದ್ದರೂ ಅಲ್ಲಲ್ಲಿ ಸಿನಿಮಾ ಬೋರ್ ಹೊಡೆಸುತ್ತದೆ. ಕೆಲವು ಕಡೆ ವೈಭವೀಕರಣ ಹೆಚ್ಚಾಯ್ತು ಎನಿಸುತ್ತದೆ. ಸಿನಿಮಾ ಇನ್ನೂ ಚೆನ್ನಾಗಿ ಇರಬಹುದಾಗಿತ್ತು.

ಪ್ರೇಮ್ ಪ್ರಯತ್ನ ಮೆಚ್ಚಬೇಕು

ಪ್ರೇಮ್ ಪ್ರಯತ್ನ ಮೆಚ್ಚಬೇಕು

ತನ್ನ ಕಥೆ, ಇಬ್ಬರು ದೊಡ್ಡ ಸ್ಟಾರ್ ಗಳ ಇಮೇಜ್, ಅವರ ಅಭಿಮಾನಿಗಳ ಅಭಿರುಚಿ, ಕಮರ್ಷಿಯಲ್ ಲೆಕ್ಕಾಚಾರಗಳು ಈ ಎಲ್ಲವನ್ನು ಸಿನಿಮಾದಲ್ಲಿ ಪ್ರೇಮ್ ನಿಭಾಯಿಸಿರುವ ರೀತಿಯನ್ನು ಎಲ್ಲರೂ ಮೆಚ್ಚಿಕೊಳ್ಳಬೇಕು. ಸಿನಿಮಾ 100% ತೃಪ್ತಿ ನೀಡದೆ ಇದ್ದರೂ ಅವರ ಪ್ರಯತ್ನಕ್ಕೆ ಚಪ್ಪಾಳೆ ಹೊಡೆಯಬೇಕು.

ಹೆಚ್ಚು ನಿರೀಕ್ಷೆ ಬೇಡ

ಹೆಚ್ಚು ನಿರೀಕ್ಷೆ ಬೇಡ

'ದಿ ವಿಲನ್' ಸಿನಿಮಾ ದೊಡ್ಡ ನಿರೀಕ್ಷೆಯನ್ನು ಈಗಾಗಲೇ ಹುಟ್ಟುಹಾಕಿದೆ. ಆದರೆ, ಚಿತ್ರಮಂದಿರಕ್ಕೆ ಹೋಗುವ ಮುನ್ನ ಅದನ್ನು ಮರೆತು ಸಿನಿಮಾ ನೋಡಿ. ಹೆಚ್ಚು ನಿರೀಕ್ಷೆ ಇಟ್ಟು ಈ ಸಿನಿಮಾ ನೋಡಿದರೆ ಕೊಂಚ ನಿರಾಸೆ ಆಗಬಹುದು.

More from Filmibeat

English summary
Actor Shivarajkumar and Sudeep starrer kannada movie 'The Villain' kannada movie review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X