twitter
    For Quick Alerts
    ALLOW NOTIFICATIONS  
    For Daily Alerts

    The White Tiger Movie Review: ಎಲ್ಲರ ತಲೆಯೊಳಗಿನ 'ಬಿಳಿಹುಲಿ'

    |

    ಮಾಲೀಕನನ್ನು ಕೊಂದು ಹಣ ಕದ್ದೊಯ್ದ ನೌಕರರ ಒಂದೊ-ಎರಡೊ ಕಾಲಂ ನ ಸುದ್ದಿಗಳು ಆಗಾಗ್ಗೆ ವರದಿ ಆಗುತ್ತಲೇ ಇರುತ್ತವೆ. ಭಾರತದಲ್ಲಿ ಇಂಥಹಾ ಪ್ರಕರಣಗಳು ಹೊಸತಲ್ಲ. ಇಂಥಹುದೇ ಪ್ರಕರಣವನ್ನು ಬಳಸಿಕೊಂಡು ಭಾರತದ ಸಾಮಾಜಿಕ ಪಿಡುಗುಗಳಲ್ಲಿ ಒಂದಾದ 'ವರ್ಗ ಪದ್ಧತಿ'ಯ ಬಗ್ಗೆ ಚರ್ಚಿಸುತ್ತದೆ 'ದಿ ವೈಟ್ ಟೈಗರ್' ಸಿನಿಮಾ.

    ಮಾಲೀಕ-ನೌಕರನ ನಡುವಿನ ಸಬಂಧ, ಪರಸ್ಪರರ ಬಗ್ಗೆ ಅಭಿಪ್ರಾಯ, ತುಳಿತ, ದಬ್ಬಾಳಿಕೆ, ಬಂಡಾಯ, ನಕಲಿತನ, ಭಾರತದ ಮಧ್ಯಮ ವರ್ಗದ ಮನಸ್ಥಿ, ನೌಕರ ವರ್ಗದ ಮನಸ್ಥಿತಿ ಹೀಗೆ ವ್ಯಕ್ತಿಗಳಾಗಿ ನಾವು ಗುರುತಿಸಲು ಸೋತ ವಿಷಯಗಳನ್ನು 'ದಿ ವೈಟ್ ಟೈಗರ್' ಸಿನಿಮಾ ಪ್ರೇಕ್ಷಕನ ಮುಂದಿಡುತ್ತದೆ.

    ಸಿನಿಮಾ ಪ್ರಾರಂಭವಾಗುವುದು ಕತಾ ನಾಯಕ ಬಲರಾಮ್ ಹಲ್ವಾಯಿ ಚೀನಾದ ಅಧ್ಯಕ್ಷರಿಗೆ ತನ್ನ ಕತೆಯನ್ನು ಇ-ಮೇಲ್ ಮಾಡುವ ಮೂಲಕ. ಸಣ್ಣ ಹಳ್ಳಿಯ ಬಡ ಕುಟುಂಬದ ಬಲರಾಮ್ ಹಲ್ವಾಯಿ, ಶ್ರೀಮಂತ ಕುಟುಂಬಕ್ಕೆ ನೌಕರನಾಗಿ ಸೇರಿಕೊಳ್ಳುತ್ತಾನೆ.

    ಅಮೆರಿಕದಿಂದ ವಾಪಸ್ಸಾಗಿರುವ 'ಸಮಾಜವಾದ' ಮನಸ್ಥಿತಿಯ ಅಶೋಕ್ ನಿಗೆ ವಾಹನ ಚಾಲಕನಾಗಿ ಸೇವೆ ಮಾಡಲು ಆರಂಭಿಸುತ್ತಾನೆ ಬಲರಾಮ್. ತನ್ನ ಮಾಲೀಕನಿಗೆ ಸೇವೆ ಮಾಡುವುದೇ ಬಲರಾಮ್ ನ ಜೀವನೊದ್ದೇಶ. ಆದರೆ ಪರಿಸ್ಥಿತಿಗಳಿಗೆ ತಕ್ಕಂತೆ ಅಶೋಕ್ ನ 'ಸಮಾಜವಾದ'ದಲ್ಲಿ ಆಗುವ ಬದಲಾವಣೆ, ಬಲರಾಮ್‌ ನಲ್ಲಿ ಬಂಡಾಯದ ಭಾವ ಉಕ್ಕಿಸುತ್ತದೆ.

    'ಬಿಳಿ ಹುಲಿ' ಆಗುವ ಬಲರಾಮ್!

    'ಬಿಳಿ ಹುಲಿ' ಆಗುವ ಬಲರಾಮ್!

    ಒಂದರ ಹಿಂದೊಂದರಂತೆ ಶಿರಚ್ಛೇಧನಕ್ಕೆ ಒಳಗಾಗಲು ತಯಾರಾಗಿರುವ ಕೋಟ್ಯಂತರ ಕೋಳಿಗಳಲ್ಲಿ ತಾನೂ ಒಬ್ಬ ಆಗಲಾರೆ ಎಂದು ನಿರ್ಣಯಿಸುವ ಬಲರಾಮ್ ತನ್ನ ಮಾಲೀಕ ಅಶೋಕ್ ನ ಕೊಲೆ ಮಾಡಿ ಬೆಂಗಳೂರಿಗೆ ಪರಾರಿಯಾಗಿ ಅಲ್ಲಿ ಬ್ಯುಸಿನೆಸ್‌ ಮ್ಯಾನ್ ಆಗಿ ಬದಲಾಗುತ್ತಾನೆ. ಶಿರಚ್ಛೇಧನದಿಂದ ತಪ್ಪಿಸಿಕೊಳ್ಳುವ ಏಕಮಾತ್ರ 'ಕೋಳಿ' ಬಲರಾಮ್ ವಿರಳವಾದ 'ಬಿಳಿ ಹುಲಿ' ಎನಿಸಿಕೊಳ್ಳುತ್ತಾನೆ.

    'ದಿ ವೈಟ್ ಟೈಗರ್' ಭಾರತದ 'ಪ್ಯಾರಾಸೈಟ್'

    'ದಿ ವೈಟ್ ಟೈಗರ್' ಭಾರತದ 'ಪ್ಯಾರಾಸೈಟ್'

    92 ನೇ ಆಸ್ಕರ್ ಪ್ರಶಸ್ತಿಗೆ ಭಾಜನವಾದ ಸಿನಿಮಾ 'ಪ್ಯಾರಾಸೈಟ್' ಹಾಗೂ ವೈಟ್ ಟೈಗರ್ ಸಿನಿಮಾಕ್ಕೂ ವಿಷಯವಸ್ತುವಿನಲ್ಲಿ ಸಾಮ್ಯತೆ ಇದೆ. ಈ ಎರಡೂ ಸಿನಿಮಾಗಳು ಒಂದೇ ವಿಷಯದ ಬಗ್ಗೆ ಚರ್ಚಿಸುತ್ತವೆ. 'ದಿ ವೈಟ್ ಟೈಗರ್' ಸಿನಿಮಾವನ್ನು ಭಾರತದ 'ಪ್ಯಾರಾಸೈಟ್' ಎನ್ನಲು ಅಡ್ಡಿಯಿಲ್ಲ.

    ಸ್ವತಃ ಬಲರಾಮ್ ಆಗಿಬಿಟ್ಟಿದ್ದಾರೆ ನಟ ಆದರ್ಶ್ ಗೌರವ್

    ಸ್ವತಃ ಬಲರಾಮ್ ಆಗಿಬಿಟ್ಟಿದ್ದಾರೆ ನಟ ಆದರ್ಶ್ ಗೌರವ್

    ಸಿನಿಮಾದಲ್ಲಿ ಕತೆಯಷ್ಟೆ ಸೆಳೆಯುವುದು ಡ್ರೈವರ್ ಬಲರಾಮ್ ಪಾತ್ರ. ಆದರ್ಶ್ ಗೌರವ್ ಸ್ವತಃ ಆತನೇ ಬಲರಾಮ್ ಆಗಿಬಿಟ್ಟಿದ್ದಾರೆ. ಸಿನಿಮಾ ಮುಗಿದ ಮೇಲೂ ಆದರ್ಶ್ ಗೌರವ್ ರ ನಟನೆ ಸ್ಮೃತಿಪಟಲದಿಂದ ಸರಿಯುವುದಿಲ್ಲ. ನಟಿ ಪ್ರಿಯಾಂಕಾ ಚೋಪ್ರಾ ರದ್ದು ಸಹ ಅದ್ಭುತವಾದ ನಟನೆ. ಈ ಇಬ್ಬರಿಗೆ ಹೋಲಿಸಿದರೆ ನಟ ರಾಜ್‌ಕುಮಾರ್ ರಾವ್ ತುಸು ಡಲ್ ಹೊಡೆಯುತ್ತಾರೆ. ನಕಲಿ ಆಕ್ಸೆಂಟ್‌, ನಕಲಿ ವಿದೇಶಿ ಸ್ಟೈಲ್ ಅವರಿಗೆ ಒಗ್ಗಿಲ್ಲ.

    ಸಂಭಾಷಣೆ ಸಿನಿಮಾದ ಪ್ರಮುಖ ಅಂಶ

    ಸಂಭಾಷಣೆ ಸಿನಿಮಾದ ಪ್ರಮುಖ ಅಂಶ

    ಸಂಭಾಷಣೆ ಸಿನಿಮಾದ ಅತ್ಯಂತ ಪ್ರಮುಖ ಅಂಶ. ಕತೆಯೊಳಗಿದ್ದರೂ ಅದರಿಂದ ಹೊರಗೆ ವಿಶಾಲಾರ್ಥ ಒದಗಿಸುವ ಹಲವು 'ಹಾರ್ಡ್ ಹಿಟ್ಟಿಂಗ್' ಸಂಭಾಷಣೆಗಳು ಸಿನಿಮಾದಲ್ಲಿವೆ. ಬಲರಾಮ್ ಪಾತ್ರದ ಮೂಲಕ ಆಡಿಸುವ ಹಲವು ಮಾತುಗಳು ಭಾರತದ ಬಹುತೇಕ ಬಡವ, ಮಧ್ಯಮವರ್ಗದವರ ಮನದ ಮಾತುಗಳೇ ಆಗಿವೆ.

    ಪ್ರಶಸ್ತಿ ವಿಜೇತ ಪುಸ್ತಕವನ್ನು ಸಿನಿಮಾ ಮಾಡಲಾಗಿದೆ

    ಪ್ರಶಸ್ತಿ ವಿಜೇತ ಪುಸ್ತಕವನ್ನು ಸಿನಿಮಾ ಮಾಡಲಾಗಿದೆ

    'ದಿ ವೈಟ್ ಟೈಗರ್' ಸಿನಿಮಾ ಅದೇ ಹೆಸರಿನ ಪುಸ್ತಕವನ್ನು ಆಧರಿಸಿದೆ. ಅರವಿಂದ ಅಡಿಗ ಬರೆದಿರುವ ಬೂಕರ್ ಪ್ರಶಸ್ತಿ ವಿಜೇತ 'ದಿ ವೈಟ್ ಟೈಗರ್' ಕಾದಂಬರಿಯನ್ನು ಎರಡು ಗಂಟೆಯ ಸಿನಿಮಾ ಮಾಡಿದ್ದಾರೆ ನಿರ್ದೇಶಕ ರಮಿನ್ ಬಹ್ರಾನಿ. ವಿಶೇಷವೆಂದರೆ 'ದಿ ವೈಟ್ ಟೈಗರ್' ಪುಸ್ತಕವನ್ನು ಲೇಖಕ ಅರವಿಂದ ಅಡಿಗ ಅರ್ಪಣೆ ಮಾಡಿದ್ದಿದ್ದು ರಮಿನ್ ಬಹ್ರಾನಿ ಅವರಿಗೆ.

    English summary
    The White Tiger Movie Review in Kannada. This movie is streaming in Netflix.
    Sunday, January 24, 2021, 20:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X