For Quick Alerts
  ALLOW NOTIFICATIONS  
  For Daily Alerts

  Thor Love and Thunder Review: 'ಥಾರ್': ಸ್ಪಷ್ಟತೆ ಇಲ್ಲದ ಚಿತ್ರಕತೆಯಲ್ಲಿ ಕಳೆದು ಹೋದ ಸೂಪರ್ ಹೀರೋ

  By ಸಂಯುಕ್ತಾ ಠಾಕ್ರೆ
  |

  ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನ (ಎಂಸಿಯು)ನ ಅತ್ಯಂತ ಜನಪ್ರಿಯ ಪಾತ್ರಗಳಲ್ಲೊಂದಾದ 'ಥಾರ್'ನ ಹೊಸ ಸಿನಿಮಾ 'ಥಾರ್: ಲವ್ ಆಂಡ್ ಥಂಡರ್' ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ವಿಶ್ವದ ಸಿನಿಮಾ ಪ್ರಿಯರು ನಿರೀಕ್ಷೆಯಿಂದಿದ್ದರು. ಆದರೆ ನಿರೀಕ್ಷಿತ ಮಟ್ಟ ತಲುಪುವಲ್ಲಿ ವಿಫಲವಾಗಿದೆ ಸಿನಿಮಾ.

  'ಅವೇಂಜರ್ಸ್: ಎಂಡ್‌ ಗೇಮ್‌'ನಲ್ಲಿ ಅಶಿಸ್ತಿನ ಜೀವನ ಮಾಡುತ್ತಾ ಡೊಳ್ಳು ಹೊಟ್ಟೆಯವನಾಗಿದ್ದ ಥಾರ್ ಈ ಸಿನಿಮಾದಲ್ಲಿ ಮತ್ತೆ ಹಳೆಯ ಥಾರ್ ಆಗಲು ಯತ್ನಿಸುತ್ತಿರುತ್ತಾನೆ. ಈ ವೇಳೆಗೆ ಆತನಿಗೆ ಗಾರ್‌ನ ಬಗ್ಗೆ ತಿಳಿಯುತ್ತದೆ. ಗಾರ್ ದೇವರುಗಳನ್ನು ಕೊಲ್ಲುವ ವ್ಯಕ್ತಿ ತನ್ನನ್ನು ತಾನು ದೇವರುಗಳ ಕೊಲೆಗಡುಕ ಎಂದೇ ಕರೆದುಕೊಳ್ಳುತ್ತಾನೆ. ಆತನ ಕಣ್ಣು ಈಗ ಥಾರ್‌ನ ಆಸ್‌ಗಾರ್ಡ್‌ ಮೇಲೆ ಬಿದ್ದಿದೆ, ಅದನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಥಾರ್ ನಿರತರನಾಗುತ್ತಾನೆ. ಇದು ಸಿನಿಮಾದ ಒನ್‌ ಲೈನರ್‌ ಕತೆ.

  ಆಸ್ಕರ್ ವಿಜೇತ ಟೈಕಾ ವಾಟಿಟಿ ನಿರ್ದೇಶನ ಮಾಡಿರುವ ಕಾರಣ 'ಥಾರ್; ಲವ್ ಆಂಡ್ ಥಂಡರ್' ಕುರಿತು ಸಾಕಷ್ಟು ನಿರೀಕ್ಷೆ ಇತ್ತು. ಈ ಹಿಂದಿನ 'ಥಾರ್; ರ್ಯಾಗ್ನರಾಕ್' ಸಿನಿಮಾ ನಿರ್ದೇಶಿಸಿದ್ದು ಇವರೇ ಆಗಿರುವ ಕಾರಣ ನಿರೀಕ್ಷೆ ದುಪ್ಪಟ್ಟಾಗಿತ್ತು. ಆದರೆ 'ಥಾರ್; ಲವ್ ಆಂಡ್ ಥಂಡರ್' ನಿರೀಕ್ಷೆಯ ಮಟ್ಟ ತಲುಪಿಲ್ಲವೆಂದೇ ಹೇಳಬೇಕು.

  Rating:
  2.5/5

  ಸಿನಿಮಾದ ಆರಂಭವೇ ಗೊಂದಲಮಯ ಹಾಗೂ ನೀರಸವಾಗಿದೆ. ಸಿನಿಮಾಗಳ ಆರಂಭದಲ್ಲಿ ಕತೆಯ ಹಿನ್ನೆಲೆ ತಿಳಿಸಲು ಹಿನ್ನೆಲೆ ಧ್ವನಿ ಬಳಸಿಕೊಳ್ಳುವುದು ಸಾಮಾನ್ಯ. 'ಥಾರ್; ಲವ್ ಆಂಡ್ ಥಂಡರ್‌'ನಲ್ಲಿ ಸಿನಿಮಾದ ಉದ್ದಕ್ಕೂ ಹಿನ್ನೆಲೆ ಧ್ವನಿ ಇದೆ. ಸಿನಿಮಾದ ಅರ್ಧ ಕತೆಯನ್ನು ಧ್ವನಿಯ ಮೂಲಕವೇ ಹೇಳಲಾಗಿದೆ ದೃಶ್ಯಗಳಲ್ಲಿ ತೋರಿಸುವುದು ಬಹಳ ಕಡಿಮೆ! ಸಿನಿಮಾದ ಪಾತ್ರಗಳು ಸಹ ತಮ್ಮ ಭಾವುಕ ಪಯಣದ ಬಗ್ಗೆ ಬಹುಸಮಯ ಮಾತನಾಡುತ್ತವೆ, ಜೊತೆಗೆ ಸಂಭಾಷಣೆ ಮೂಲಕವೇ ಸಿನಿಮಾದ ಕತೆ ಹೇಳುತ್ತವೆ.

  ಗಾಡ್ ಬುಚರ್‌

  ಗಾಡ್ ಬುಚರ್‌

  ಸಿನಿಮಾ ಪ್ರಾರಂಭವಾಗುವುದು 'ಗಾರ್ಡಿಯನ್ಸ್ ಆಫ್‌ ಗ್ಯಾಲೆಕ್ಸಿ' ಅವರೊಟ್ಟಿಗೆ ಸಾಹಸ ಯಾತ್ರೆಗೆ ಹೊರಡುವ ಮೂಲಕ. ಅಲ್ಲಿ ಆತನಿಗೆ ಗೊತ್ತಾಗುತ್ತದೆ ಯೂನಿವರ್ಸ್‌ನಲ್ಲಿರುವ ದೇವತೆಗಳನ್ನೆಲ್ಲ ವ್ಯಕ್ತಿಯೊಬ್ಬ ಕೊಲ್ಲುತ್ತಾ ಬರುತ್ತಿದ್ದಾನೆಂದು. ಅದೇ ಸಮಯಕ್ಕೆ ಆಸ್‌ಗಾರ್ಡ್‌ನ ಕಾವಲುಗಾರನಿಂದ ಸಂದೇಶ ಬಂದ ಕೂಡಲೇ ಆಸ್‌ಗಾರ್ಡ್‌ಗೆ ತೆರಳುವ ಥೋರ್‌ಗೆ ಆ ದೇವರುಗಳನ್ನು ಕೊಲ್ಲುವ ಗಾಡ್ ಬುಚರ್ ಆಸ್‌ಗಾರ್ಡ್‌ ಕಡೆ ಬರುತ್ತಿದ್ದಾನೆಂಬುದು ಗೊತ್ತಾಗುತ್ತದೆ. ಸಹಾಯಕ್ಕಾಗಿ ಆತ ಭೂಮಿಗೆ ಮರಳುತ್ತಾನೆ.

  ಲೇಡಿ ಥಾರ್ ಜೇಮ್ಸ್ ಫಾರೆಸ್ಟ್

  ಲೇಡಿ ಥಾರ್ ಜೇಮ್ಸ್ ಫಾರೆಸ್ಟ್

  ಅಲ್ಲಿ ಥಾರ್‌ನ ಮೊದಲ ಗರ್ಲ್‌ಫ್ರೆಂಡ್ ಜೇಮ್ಸ್ ಫಾಸ್ಟರ್‌ ವೈದ್ಯ ವೃತ್ತಿಯಲ್ಲಿ ತೊಡಗಿರುತ್ತಾಳೆ. ಆಕೆಗೆ ಕ್ಯಾನ್ಸರ್ ಆಗಿರುತ್ತದೆ. ಜೊತೆಗೆ ಕ್ಯಾನ್ಸರ್‌ಗೆ ಪರಿಣಾಮಕಾರಿ ಮದ್ದು ಹುಡುಕುವ ಕಾರ್ಯದಲ್ಲಿ ನಿರತಳಾಗಿರುತ್ತಾಳೆ. ಆಕೆಗೆ ಮೆಯೋನಿಯರ್ ತನ್ನನ್ನು ಕರೆಯುತ್ತಿರುವುದು ಕೇಳುತ್ತದೆ. ಆಕೆ ಅದರ ಕರೆಗೆ ಓಗೊಟ್ಟ ಕಾರಣ ಆಕೆ ಲೇಡಿ ಥಾರ್ ಆಗಿ ಬದಲಾಗುತ್ತಾಳೆ. ಜೇಮ್ಸ್ ಫಾಸ್ಟರ್ ಮೈಟಿ ಥಾರ್ ಆಗುವ ಕಲ್ಪನೆ ಚೆನ್ನಾಗಿದೆ, ಆಕೆಗೆ ಕೆಲವು ಒಳ್ಳೆಯ ಹಿರೋಯಿಕ್ ದೃಶ್ಯಗಳು ಇವೆ. ಆದರೆ ಗೊಂದಲಮಯ ಚಿತ್ರಕತೆಯಲ್ಲಿ ಆಕೆಯ ಪಾತ್ರ ಹೊಳೆಯಬೇಕಾದಷ್ಟು ಹೊಳೆಯುವುದಿಲ್ಲ.

  ಗೊಂದಲಮಯ ದೃಶ್ಯಗಳು

  ಗೊಂದಲಮಯ ದೃಶ್ಯಗಳು

  ಟೈಮಿಂಗ್ ಅತ್ಯಂತ ಮುಖ್ಯವಾಗುವ ಈ ರೀತಿಯ ಕಥಾನಕದಲ್ಲಿ ಅದೇ ಮಿಸ್ಸಿಂಗ್ ಆಗಿದೆ. ಆರಂಭದಿಂದ ಕೊನೆಯ ವರೆಗೆ ಸಿನಿಮಾದ ಚಿತ್ರಕತೆ, ದೃಶ್ಯಗಳು ಗೊಂದಲಮಯವಾಗಿಯೇ ಇವೆ. ಪ್ರೇಕ್ಷಕನಿಗೆ ಹಲವು ಅನುಮಾನಗಳು ಏಳುತ್ತವೆ. ಸಿನಿಮಾದ ಹಾಸ್ಯ ದೃಶ್ಯಗಳು ಸಹ ನಗು ತರಿಸುವುದು ಅಪರೂಪ. ಮೊದಲಾರ್ಧ ಬಹುತೇಕ ಪಾತ್ರಗಳ ಅನಾವರಣ, ಯಾವ ಪಾತ್ರ ಏನಾಗಿತ್ತು, ಏನು ಮಾಡುತ್ತಿತ್ತು ಇತ್ಯಾದಿಗಳ ವಿವರಣೆಯಲ್ಲಿಯೇ ಸಾಗುತ್ತದೆ.

  ಕ್ರಿಸ್ಟಿಯನ್ ಬೇಲ್ ಅದ್ಭುತವಾಗಿ ನಟಿಸಿದ್ದಾರೆ

  ಕ್ರಿಸ್ಟಿಯನ್ ಬೇಲ್ ಅದ್ಭುತವಾಗಿ ನಟಿಸಿದ್ದಾರೆ

  ದ್ವಿತೀಯಾರ್ಧದಲ್ಲಿ ಕೆಲವು ಅದ್ಭುತ ಸಿನಿಮ್ಯಾಟೊಗ್ರಫಿ ಹಾಗೂ ಆಕ್ಷನ್ ನೋಡಲು ಸಿಗುತ್ತದೆ. ಗಾಡ್ ಬುಚರ್ ಗೋರ್ ಪಾತ್ರದಲ್ಲಿ ನಟಿಸಿರುವ ಆಸ್ಕರ್ ವಿಜೇತ ಕ್ರಿಸ್ಟಿಯನ್ ಬೇಲ್ ಮಾತ್ರವೇ ತಮ್ಮ ನಟನೆಯನ್ನು, ಪಾತ್ರವನ್ನು ಗಂಭೀರವಾಗಿ ಪರಿಗಣಿಸಿದಂತಿದೆ. ಕ್ರಿಸ್ಟಿಯನ್ ಬೇಲ್ ನಟನೆ ಅದ್ಭುತ, ಅವರ ಪಾತ್ರದ ಪೋಷಣೆಯೂ ಚೆನ್ನಾಗಿಯೇ ಇದೆ. ಹೀರೋ ಪಾತ್ರಗಳು, ಹೀರೋ ಜೊತೆಗಿನ ಮುಖ್ಯ ಪಾತ್ರಗಳು ಜೋಕರ್‌ಗಳಂತೆ ವರ್ತಿಸವಾಗ ಕ್ರಿಸ್ಟಿಯನ್ ಬೇಲ್ ಮಾತ್ರ ತಮ್ಮ ಪಾತ್ರವನ್ನು ಘನ ಗಂಭೀರವಾಗಿ ನಿಭಾಯಿಸಿದ್ದಾರೆ.

  ಒಟ್ಟಾರೆ ಸಿನಿಮಾ ಹೇಗಿದೆ?

  ಒಟ್ಟಾರೆ ಸಿನಿಮಾ ಹೇಗಿದೆ?

  ಅಂತಿಮವಾಗಿ, ಥೋರ್ ಕೇವಲ ಎಂಸಿಯು ಅಭಿಮಾನಿಗಳನ್ನು ನಿರಾಸೆಗೊಳಿಸಿಲ್ಲ ಬದಲಿಗೆ ಎಂಸಿಯುವಿನ ಅತ್ಯಂತ ಜನಪ್ರಿಯ ಪಾತ್ರವೊಂದರ ತೂಕವನ್ನು ಕಡಿಮೆ ಮಾಡಿದೆ. 'ಥಾರ್; ರ್ಯಾಗ್ನರಾಕ್' ಸಿನಿಮಾದ ಮುಂದುವರೆದ ಭಾಗವಾಗಿ ಅದ್ಭುತವಾದ ಸಿನಿಮಾ ಆಗಬೇಕಿದ್ದ 'ಥಾರ್: ಲವ್ ಆಂಡ್ ಥಂಡರ್' ಭಾರಿ ನಿರಾಸೆಯನ್ನು ಥಾರ್ ಅಭಿಮಾನಿಗಳಿಗೆ ಮೂಡಿಸುತ್ತದೆ. ನಿರ್ದೇಶಕ ಟಾಕಿಯಾ ಕೆಲವು ಒಳ್ಳೆಯ ಉದ್ದೇಶಗಳೊಂದಿಗೆ ಸಿನಿಮಾ ಆರಂಭಿಸಿದ್ದಾರೂ ಕೇವಲ ಉದ್ದೇಶ ಒಳ್ಳೆಯದಿದ್ದರೆ ಸಾಕಾಗುವುದಿಲ್ಲ ಸರಿಯಾದ ಚಿತ್ರಕತೆ ಬೇಕು ಎಂಬುದನ್ನು ಮರೆತುಬಿಟ್ಟಿದ್ದಾರೆ.

  English summary
  Thor Love and Thunder English movie review in Kannada. Movie released in India on July 07.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X