twitter
    For Quick Alerts
    ALLOW NOTIFICATIONS  
    For Daily Alerts

    'ಟೈಗರ್ ಗಲ್ಲಿ' ಚಿತ್ರದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವಿಮರ್ಶೆ ಇಲ್ಲಿದೆ.!

    By Bharath Kumar
    |

    ಈ ವಾರ ಕನ್ನಡದಲ್ಲಿ ಒಟ್ಟು 6 ಸಿನಿಮಾಗಳು ಬಿಡುಗಡೆಯಾಗಿದೆ. ಅದರಲ್ಲಿ ಸತೀಶ್ ನೀನಾಸಂ ಅಭಿನಯದ 'ಟೈಗರ್ ಗಲ್ಲಿ' ಸ್ವಲ್ಪ ನಿರೀಕ್ಷೆ ಮೂಡಿಸಿತ್ತು. ಆದ್ರೆ, ನಿರೀಕ್ಷೆ ಮಟ್ಟವನ್ನ ತಲುಪವಲ್ಲಿ 'ಟೈಗರ್ ಗಲ್ಲಿ' ಎಡವಿದೆ.

    ಈ ಚಿತ್ರದ ಬಗ್ಗೆ ವಿರ್ಮಶಕರು ಏನಂದ್ರು? ಸಿನಿಮಾದಲ್ಲಿ ಇಷ್ಟವಾಗಿದ್ದೇನೆ? ಕಷ್ಟವಾಗಿದ್ದೇನು? ಕಥೆ ಹೇಗಿದೆ? ಕಲಾವಿದರ ನಟನೆ ಹೇಗಿದೆ? ಎಂಬುದನ್ನ ಸಂಕ್ಷಿಪ್ತವಾಗಿ ವಿಮರ್ಶೆ ಬರೆದಿದ್ದಾರೆ.

    'ಟೈಗರ್ ಗಲ್ಲಿ' ಚಿತ್ರದ ಬಗ್ಗೆ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ವಿಮರ್ಶೆ. ಮುಂದೆ ಓದಿ.....

    ಗಲ್ಲಿಯಲ್ಲಿ ಬರೀ ಘರ್ಜನೆ - ಉದಯವಾಣಿ

    ಗಲ್ಲಿಯಲ್ಲಿ ಬರೀ ಘರ್ಜನೆ - ಉದಯವಾಣಿ

    ''ಒಂದಕ್ಕಿಂತ ಒಂದು ಆವೇಶಭರಿತ ಪಾತ್ರಗಳು, ಬಾಯಿಬಿಟ್ಟರೆ "ಬೋ.. ಸೂ .. ಮಗ ಪದಗಳು, ಗಲ್ಲಿಯ ಮೂಲೆ ಮೂಲೆಯಲ್ಲೂ ಝಳಪಿಸೋ ಲಾಂಗು ಮಚ್ಚು, ಕೂದಲನ್ನೇ ಬಂಡವಾಳವಾಗಿಟ್ಟುಕೊಂಡವನಂತೆ ಫೋಸ್ ಕೊಡುವ ವಿಲನ್, ರೊಚ್ಚಿಗೆದ್ದು ಹೊಡೆದಾಡೋ ಒಬ್ಬ ಹೀರೋ ... ಇವೆಲ್ಲವೂ "ಟೈಗರ್‌ ಗಲ್ಲಿ'ಯ ಸರಕು. ಇಷ್ಟು ಹೇಳಿದ ಮೇಲೆ ಸಿನಿಮಾವನ್ನು ಊಹಿಸಿಕೊಳ್ಳೋದು ನಿಮಗೆ ಕಷ್ಟದ ಕೆಲಸವಲ್ಲ. ಆ ಮಟ್ಟಿಗೆ "ಟೈಗರ್‌ ಗಲ್ಲಿ' ಒಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್ ಸಿನಿಮಾ. ಇಲ್ಲಿ ಏನಿದೆ ಎಂದರೆ ಕೆಜಿ ಗಟ್ಟಲೇ ಮಾತಿದೆ ಎನ್ನಬಹುದು'' - ಉದಯವಾಣಿ

    ಟೈಗರ್‌ ಗಲ್ಲಿಯೆಂಬ ವಿಧ್ವಂಸಕ ಕೃತ್ಯ - ಪ್ರಜಾವಾಣಿ

    ಟೈಗರ್‌ ಗಲ್ಲಿಯೆಂಬ ವಿಧ್ವಂಸಕ ಕೃತ್ಯ - ಪ್ರಜಾವಾಣಿ

    '' ಅಸಂಬದ್ಧಗಳನ್ನೆಲ್ಲ ಸೇರಿಸಿ ಹೇಗೆ ಸಿನಿಮಾ ಮಾಡಬಹುದು ಎಂಬುದನ್ನು ಈ ಚಿತ್ರದಲ್ಲಿ ರವಿ ಶ್ರೀವತ್ಸ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ. ಇಡೀ ಚಿತ್ರದಲ್ಲಿ ಯಾರೂ ಸಹಜವಾಗಿ ಮಾತಾಡುವುದೇ ಇಲ್ಲ. ಎಲ್ಲರೂ ಲಯಬದ್ಧ ಉದ್ದುದ್ದ ಡೈಲಾಗ್‌ಗಳಲ್ಲಿ ಕಿರುಚುತ್ತಲೇ ಇರುತ್ತಾರೆ. ಆ ಕೀರಲು ಸ್ವರದಲ್ಲಿ ನಾಮರ್ಧ, ಬೋ... ಮಗ, ಸೂ... ಮಗ, ಚೂತ್ಯಾ ಸರ್ಕಾರ, ತುಕಾಲಿಗಳಂಥ ಹಲವು ಶಬ್ದಗಳು ಯಾವ ಎಗ್ಗಿಲ್ಲದೇ ನುಗ್ಗುತ್ತವೆ. ಅದಕ್ಕೆ, ಸ್ಲಂ ಹುಡುಗ, ಪೊಲೀಸ್‌, ನ್ಯಾಯಾಧೀಶ, ಮುಖ್ಯಮಂತ್ರಿ ಎಂಬುದೆಲ್ಲ ಯಾವ ಭೇದವೂ ಇಲ್ಲ. ಕಿರುಚುವಿಕೆಯೇ ಎಲ್ಲವನ್ನೂ ಮುಚ್ಚಿಹಾಕುವುದರಿಂದ ಯಾವ ನಟರ ಅಭಿನಯದ ಬಗ್ಗೆಯೂ ಮಾತನಾಡುವಂತಿಲ್ಲ. ತಮ್ಮ ವೃತ್ತಿಜೀವನದ ಆಕ್ಷನ್ ಅಧ್ಯಾಯವನ್ನು ಸತೀಶ್ ತಪ್ಪು ಚಿತ್ರದ ಮೂಲಕ ಆರಂಭಿಸಿದ್ದಾರೆ'' - ಪ್ರಜಾವಾಣಿ

    ಟೈಗರ್ ಗಲ್ಲಿಯಲ್ಲಿ ಮಾತಿನ ರಕ್ತಪಾತ - ಕನ್ನಡ ಪ್ರಭ

    ಟೈಗರ್ ಗಲ್ಲಿಯಲ್ಲಿ ಮಾತಿನ ರಕ್ತಪಾತ - ಕನ್ನಡ ಪ್ರಭ

    ''ಮಾರುಕಟ್ಟೆಗೋ ಬೆಳಗ್ಗೆ ಲೋಡುಗಟ್ಟಲೇ ಬಂದು ಬೀಳುವ ಮೂಟೆಗಂತೆ ಲಾರಿ ಲೆಕ್ಕದಲ್ಲಿ ಸಂಭಾಷಣೆಗಳ ಸುರಿಮಳೆ. ಮುಖ್ಯಪಾತ್ರಗಳು, ಸಣ್ಣ ಪುಟ್ಟ ಪಾತ್ರಗಳು ಎಲ್ಲವೂ ಒಂದೇ ಉಸರಿನಲ್ಲಿ ಉದ್ದುದ್ದ ಡೈಲಾಗ್ ಗಳನ್ನ ಹೇಳುತ್ತಾರೆ. ಮಾತಿನ ಜಲ್ಲಿಕಲ್ಲುಗಳನ್ನ ತಿಂಬಿ ಪ್ರೇಕ್ಷಕರ ಮುಂದೆ ಸುರಿದಿದ್ದಾರೆ ನಿರ್ದೇಶಕ ಶ್ರೀವತ್ಸ. ನಟನೆ ವಿಚಾರಕ್ಕೆ ಬಂದರೆ ಎಲ್ಲರದ್ದು ಒಂದೇ ರೀತಿ. ವಿರಾಮದ ನಂತರ ಬರುವ ಪಾತ್ರದಲ್ಲಿ ಸತೀಶ್ ಕಾಣಿಸಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಅವರತನ ಉಳಿದುಕೊಂಡಿದೆ. ಮೊದಲ ಚಿತ್ರದಲ್ಲೇ ಪೊಲೀಸ್ ಪಾತ್ರ ನಿರ್ವಹಿಸಿರುವ ರೋಶಿನಿ ಭರವಸೆ ಮೂಡಿಸುತ್ತಾರೆ. ರಾಜಕಾರಣಿಯಾಗಿ ಜಟ್ಟ ಗಿರಿರಾಜ್ ನಟನೆ ಮೆಚ್ಚುಕೊಳ್ಳುವಂತಿದೆ'' - ಕನ್ನಡ ಪ್ರಭ

    'Silly Point Next to The Gully' - Bangalore mirror

    'Silly Point Next to The Gully' - Bangalore mirror

    ''its attempt to become a cult film, Tiger Galli takes artistic liberties to new heights. Unbelievable scenes follow impossible incidents. If characters have to behave like they do in the film, there is not an iota of justification for it. For the sake of creating provocative situations for the underdogs to rise up, the story is ripped out and taken to China in an unpresidented act. Avoid taking mobile phones or anything valuable when you go to watch Tiger Galli because there is a possibility of you throwing it at the screen in frustration'' - Bangalore mirror

    English summary
    Kannada Actor Sathish neenasam Starrer Tiger Galli Movie Critics Review. ಶರಣ್ ನಾಯಕನಾಗಿ ಅಭಿನಯಿಸಿರುವ ಸತ್ಯ ಹರಿಶ್ಚಂದ್ರ ಚಿತ್ರದ ಬಗ್ಗೆ ಕರ್ನಾಟಕ ಪತ್ರಿಕೆಗಳು ಪ್ರಕಟಿಸಿರುವ ವಿಮರ್ಶೆ.
    Saturday, October 28, 2017, 14:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X