Tiger Nageswara Rao Review: 'ಟೈಗರ್ ನಾಗೇಶ್ವರ್ ರಾವ್' ಪ್ರಪಂಚ ನೋಡಲು ತಾಳ್ಮೆ ಬೇಕು

By ರಾಜಾ ಬಾಬು

Rating:
2.5/5
Star Cast: ರವಿತೇಜ, ಅನುಪಮ್ ಖೇರ್, ನುಪುರ್ ಸನೂನ್, ರೇಣು ದೇಸಾಯಿ, ಹರೀಶ್ ಪೆರಾಡಿ ಮುಂತಾದವರು
Director: ವಂಶಿ

ದಸರಾ ಹಬ್ಬದ ಸಂಭ್ರಮದಲ್ಲಿ ರವಿತೇಜ ನಟನೆಯ ಟೈಗರ್ ನಾಗೇಶ್ವರ ರಾವ್ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ದಕ್ಷಿಣ ಭಾರತದ ಕುಖ್ಯಾತ ಕಳ್ಳ ಎನಿಸಿಕೊಂಡಿದ್ದ 'ಟೈಗರ್ ನಾಗೇಶ್ವರ್ ರಾವ್' ಕತೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ನಿರ್ದೇಶಕ ವಂಶಿ ಈ ಪೀರಿಯಡ್ ಆಕ್ಷನ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ಸಿನಿಮಾ ಕಥೆ?

ಸ್ಟುವರ್ಟ್ ಪುರಂನಲ್ಲಿ ನಾಗೇಶ್ವರ ರಾವ್ (ರವಿತೇಜ) ಕಳ್ಳತನ ಮಾಡಿ ಸರ್ಕಾರ ಮತ್ತು ಪೊಲೀಸರಿಗೆ ಸವಾಲಾಗಿರುತ್ತಾನೆ. ದರೋಡೆ ಮಾಡುವ ಮುನ್ನ ಪೊಲೀಸರಿಗೆ ಸುಳಿವು ನೀಡುವುದು ನಾಗೇಶ್ವರ ರಾವ್ ಸ್ಪೆಷಾಲಿಟಿ. ಕಳ್ಳತನ ಮಾಡುತ್ತಾ ಜೀವನ ಸಾಗಿರುವ ಆತ ಮಾರ್ವಾಡಿ ಹುಡುಗಿಯನ್ನು (ನೂಪುರ್ ಸನನ್) ಪ್ರೀತಿಸುತ್ತಾನೆ. ತನ್ನ ಜೀವನದಲ್ಲಿ ಸಾಕಷ್ಟು ಕಳ್ಳತನ ಮಾಡಿರುವ ಈತ ಏಕಾಏಕಿ ಪ್ರಧಾನಿ ಮನೆ ದರೋಡೆಗೆ ಪ್ಲಾನ್ ಮಾಡಿ ಸೆಕ್ಯೂರಿಟಿ ಬೆವರಿಳಿಸುತ್ತಾನೆ. ಮುಂದೆ ನಾಗೇಶ್ವರ ರಾವ್ ಮಾವನ ಮಗಳು (ಗಾಯತ್ರಿ ಭಾರದ್ವಾಜ್) ಆತನ ಜೀವನಕ್ಕೆ ಎಂಟ್ರಿ ಕೊಡುತ್ತಾಳೆ.

Tiger Nageswara Rao Movie Review in Kannada: Ravi Tejas Action Film Evaluation and Ratings

ನಾಗೇಶ್ವರ ರಾವ್ ಬಾಲ್ಯದಲ್ಲಿ ಕಳ್ಳನಾದದ್ದು ಯಾಕೆ? 8ನೇ ವಯಸ್ಸಿಗೆ ಕಳ್ಳನಾದ ಆತ ತನ್ನ ತಂದೆಯನ್ನು ಕೊಂದಿದ್ದೇಕೆ? ಬರಗಾಲ ಸಂತ್ರಸ್ತರಿಗೆ ಆಹಾರ ಸಾಗಿಸುತ್ತಿದ್ದ ರೈಲನ್ನು ದರೋಡೆ ಮಾಡಲು ನಾಗೇಶ್ವರ ರಾವ್ ತಂಡ ಪ್ಲಾನ್ ಮಾಡಿದ್ದು ಯಾಕೆ? ಆಂಧ್ರದಲ್ಲಿ ಕಳ್ಳತನ ಮಾಡುತ್ತಿದ್ದ ನಾಗೇಶ್ವರ ರಾವ್ ತಮಿಳುನಾಡು ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ? ಪ್ರಧಾನಿ ಮನೆ ಕಳ್ಳತನದ ಹಿಂದಿನ ನಿಜವಾದ ಕಾರಣವೇನು? ಪ್ರಧಾನಿ ಮನೆಯಲ್ಲಿ ನಾಗೇಶ್ವರ ರಾವ್ ಕದ್ದದ್ದೇನು? ಪ್ರಧಾನಿ ಮನೆಯಲ್ಲಿ ಕಳ್ಳತನ ಮಾಡಿದ ನಂತರ ನಾಗೇಶ್ವರ ರಾವ್ ಜೀವನ ಹೇಗೆ ತಿರುವು ಪಡೆಯಿತು? ನಾಗೇಶ್ವರ ರಾವ್ ಟೈಗರ್ ನಾಗೇಶ್ವರ ರಾವ್ ಆದದ್ದು ಹೇಗೆ? ಹುಲಿ ಜೀವನದ ಮೇಲೆ ಹೇಮಲತಾ ಉಪ್ಪು (ರೇಣುದೇಸಾಯಿ) ಮಾವನ ಮಗಳನ್ನು ಮದುವೆಯಾದ ನಂತರ ಏನೆಲ್ಲಾ ಸಮಸ್ಯೆ ಎದುರಿಸಿದ? ನಾಗೇಶ್ವರ ರಾವ್ ಜೀವನ ಹೇಗೆ ಅಂತ್ಯವಾಯಿತು? ನಾಗೇಶ್ವರ ರಾವ್ ಜೀವನದ ಗುರಿ ಏನು? ಈ ಪ್ರಶ್ನೆಗಳಿಗೆ ಉತ್ತರವೇ ಟೈಗರ್ ನಾಗೇಶ್ವರ ರಾವ್ ಸಿನಿಮಾ ಕಥೆ.

ಸಿನಿಮಾ ಫಸ್ಟ್‌ ಹಾಫ್

ಆಂಧ್ರ ಪೊಲೀಸ್ ಅಧಿಕಾರಿ (ಮುರಳಿ ಶರ್ಮಾ) ಪ್ರಧಾನ ಮಂತ್ರಿಯ ಭದ್ರತಾ ಅಧಿಕಾರಿಯನ್ನು (ಅನುಪಮ್ ಖೇರ್) ಭೇಟಿಯಾಗುವುದರೊಂದಿಗೆ ಟೈಗರ್ ನಾಗೇಶ್ವರ ರಾವ್ ಅಸಲಿ ಕತೆ ಶುರುವಾಗುತ್ತದೆ. ಮುರಳಿ ಶರ್ಮಾ ಹೇಳುವ ವಿಷಯಗಳೊಂದಿಗೆ ಕಥೆ ಫ್ಲ್ಯಾಷ್‌ಬ್ಯಾಕ್‌ಗೆ ಹೋಗುತ್ತದೆ. ಟ್ರೈನ್ ಎಪಿಸೋಡ್‌ನಲ್ಲಿರುವ ಆಕ್ಷನ್ ಮತ್ತು ಭಾವನಾತ್ಮಕವಾಗಿ ಚೆನ್ನಾಗಿದ್ದರೂ, ಗ್ರಾಫಿಕ್ ವರ್ಕ್ ಕಳಪೆಯಾಗಿದೆ. ಚಿತ್ರದ ಮೊದಲ 20 ನಿಮಿಷದ ನಂತರ ನೂಪುರ್ ಸನೋನ್ ಜೊತೆಗಿನ ಲವ್ ಟ್ರ್ಯಾಕ್ ಸಿನಿಮಾದ ಗತಿಗೆ ಬ್ರೇಕ್ ಬೀಳುತ್ತದೆ. ಜೊತೆಗೆ ಕಥೆ ಫ್ಲಾಟ್ ಆಗಿರುವುದರಿಂದ ಸಿನಿಮಾ ರೆಗ್ಯುಲರ್ ಎನಿಸಿಬಿಡುತ್ತದೆ. ಚಿತ್ರದ ಮೊದಲಾರ್ಧ ಭಾವನಾತ್ಮಕ ದೃಶ್ಯದೊಂದಿಗೆ ಕೊನೆಗೊಳ್ಳುತ್ತದೆ. ಚಿತ್ರಕಥೆ ಕುತೂಹಲ ಮೂಡಿಸಿದರೂ ಸನ್ನಿವೇಶಗಳಲ್ಲಿ ಬಲವಿಲ್ಲದೇ ಸೀದಾಸಾದಾ ಸಿನಿಮಾ ನೋಡಿದ ಅನುಭವವಾಗುತ್ತದೆ.

Tiger Nageswara Rao Movie Review in Kannada: Ravi Tejas Action Film Evaluation and Ratings

ಸೆಕೆಂಡ್ ಹಾಫ್ ಹೇಗಿದೆ?

ದ್ವಿತೀಯಾರ್ಧದಲ್ಲಿ ಕಥೆಯನ್ನು ಭಾವನಾತ್ಮಕವಾಗಿ ತೋರಿಸುವ ಪ್ರಯತ್ನ ಮಾಡಿರುವುದರಿಂದ ಸಿನಿಮಾ ಮತ್ತೆ ಟ್ರ್ಯಾಕ್‌ಗೆ ಬಂದಂತೆ ಅನಿಸುತ್ತದೆ. 2ನೇ ಭಾಗದಲ್ಲಿ ಕೆಲ ಸನ್ನಿವೇಶಗಳು ಚೆನ್ನಾಗಿದ್ದರೆ ಮತ್ತೆ ಕೆಲವು ಪೇಲವ ಎನಿಸಿಬಿಡುತ್ತದೆ. ರಿಪೀಟ್ ಶಾಟ್ಸ್‌ ಸಿನಿಮಾ ಎಳೆದಂತೆ ಭಾಸವಾಗುತ್ತದೆ. ಚಿತ್ರದಲ್ಲಿ ಹೇಮಲತಾ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದೆ ಎನ್ನಲಾಗಿತ್ತು. ಆದರೆ ಪ್ರೀ ಕ್ಲೈಮ್ಯಾಕ್ಸ್‌ ವೇಳೆಗೆ ಬರುವ ಪಾತ್ರ ಅಷ್ಟಾಗಿ ಪ್ರಭಾವ ಬೀರುವುದಿಲ್ಲ ಎಂದೇ ಹೇಳಬೇಕು. ನಾಲ್ಕೈದು ದೃಶ್ಯಗಳಿಗಷ್ಟೆ ರೇಣುದೇಸಾಯಿ ಪಾತ್ರ ಸೀಮಿತವಾಗಿಬಿಡುತ್ತದೆ. ಒಟ್ಟಾರೆಯಾಗಿ ಚಿತ್ರವನ್ನು ಎಮೋಷನಲ್ ಪಾಯಿಂಟ್‌, ಹೈ ಎನರ್ಜಿಯೊಂದಿಗೆ ಕೊನೆಗೊಳಿಸಿರುವುದರಿಂದ ಅಲ್ಲಿಯವರೆಗೆ ಬೇಸರ ಕೊಂಚ ಕಮ್ಮಿ ಆಗುತ್ತದೆ.

ನಿರ್ದೇಶಕ ವಂಶಿ ಆಯ್ದುಕೊಂಡ ಪಾಯಿಂಟ್, ಆ ಅಂಶವನ್ನು ಕಥೆಯಾಗಿ ಹಿಗ್ಗಿಸಿಕೊಂಡ ರೀತಿ ಬರೆದುಕೊಂಡ ಚಿತ್ರಕಥೆ ಚಿತ್ರಕ್ಕೆ ಪ್ಲಸ್ ಆಗಿದೆ. ಬರವಣಿಗೆ ಮತ್ತಷ್ಟು ಚೆನ್ನಾಗಿ ಇರಬಹುದಿತ್ತು. ವಿಲನಿಸಂ ಅಷ್ಟಾಗಿ ಅಷ್ಟಾಗಿ ಬಲವಿಲ್ಲದ ಕಾರಣ ಈ ರಿವೇಂಜ್ ಡ್ರಾಮಾ ಅಷ್ಟಾಗಿ ಮಜಾ ಕೊಡಲ್ಲ ಅನ್ನಿಸುತ್ತೆ.

ಕಲಾವಿದರ ಅಭಿನಯ

ರವಿತೇಜ ಅಭಿನಯ ಹಾಗೂ ಪರ್ಫಾರ್ಮನ್ಸ್ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ. ನಾಗೇಶ್ವರ ರಾವ್‌ನಿಂದ ಟೈಗರ್ ನಾಗೇಶ್ವರ ರಾವ್ ಆಗಿ ಬದಲಾಗುವ ಪಾತ್ರದಲ್ಲಿ ಬೆರತು ಹೋಗಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ಎಂದಿನಂತೆ ತಮ್ಮ ಟ್ರೇಡ್‌ಮಾರ್ಕ್ ಅಭಿನಯದಿಂದ ಮೋಡಿ ಮಾಡುತ್ತಾರೆ. ಆದರೆ ಡೈಲಾಗ್ ಡೆಲಿವರಿ ವಿಚಾರದಲ್ಲಿ, ಡಬ್ಬಿಂಗ್ ವಿಷಯದಲ್ಲಿ ಸ್ವಲ್ಪ ವ್ಯತ್ಯಾಸ ಎನಿಸುತ್ತದೆ. ಆಕ್ಷನ್ ವಿಚಾರಕ್ಕೆ ಬಂದರೆ ರಕ್ತಪಾತ ಅತಿಯಾಯಿತು ಎನಿಸದೇ ಇರಲ್ಲ. ನೂಪುರ್ ಸನೋನ್ ತನ್ನ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಗಾಯತ್ರಿ ಭಾರದ್ವಾಜ್ ಕ್ಲೈಮ್ಯಾಕ್ಸ್‌ನಲ್ಲಿ ಅಭಿನಯದೊಂದಿಗೆ ಪಾತ್ರವನ್ನು ಭಾವನಾತ್ಮಕವಾಗಿಸುತ್ತಾರೆ. ಇನ್ನುಳಿದಂತೆ ಹರೀಶ್ ಪೆರಾಡಿ, ಅನುಪಮ್ ಖೇರ್, ಮುರಳಿ ಶರ್ಮಾ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಟೆಕ್ನಿಕಲಿ ಸಿನಿಮಾ ಹೇಗಿದೆ?

ಸಿನಿಮಾಟೋಗ್ರಫಿ ಹಾಗೂ ಸಂಗೀತ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಪಿರಿಯಾಡಿಕ್ ಬ್ಯಾಕ್ ಡ್ರಾಪ್ ಇರುವ ಈ ಕಥೆಯ ಫೀಲ್ ಕೊಡಲು ಬಳಸಿರುವ ಕಲರ್ ಟೋನ್ ಚೆನ್ನಾಗಿದೆ. ಕೆಲವು ದೃಶ್ಯಗಳನ್ನು ಬಿಜಿಎಂನಿಂದ ಎಲಿವೇಟ್ ಮಾಡಲಾಗಿದೆ. ಎಡಿಟಿಂಗ್ ಚೆನ್ನಾಗಿದೆ. ಅಭಿಷೇಕ್ ಅಗರ್ವಾಲ್ ಯಾವುದೇ ವಿಚಾರದಲ್ಲಿ ರಾಜಿಯಾಗದೇ ಹಣ ಸುರಿದಿದ್ದು ಇಡೀ ಸಿನಿಮಾ ಬಹಳ ಶ್ರೀಮಂತವಾಗಿ ಕಾಣುತ್ತದೆ.

ಕೊನೆ ಮಾತು

ಭ್ರಷ್ಟ ರಾಜಕೀಯ ನಾಯಕರು ಹಾಗೂ ಪೊಲೀಸ್ ಅಧಿಕಾರಿಗಳಿಂದಾಗಿ ಜನ ದಂಗೆ ಏಳುವುದು ಸಹಜ. ಆ ದಂಗೆ ವಿವಿಧ ರೀತಿಯಲ್ಲಿ ಚಳುವಳಿಯಾಗಿ ಕಂಡುಬರುತ್ತದೆ. ಆದರೆ ನಾಗೇಶ್ವರ ರಾವ್ ತಮ್ಮ ಪ್ರದೇಶಕ್ಕೆ ಒಳ್ಳೆಯದನ್ನು ಮಾಡಬೇಕೆಂಬ ಹಂಬಲದಿಂದ ಆಯ್ದುಕೊಂಡ ಮಾರ್ಗ ಸ್ವಲ್ಪ ವಿವಾದಕ್ಕೀಡಾಗಿದ್ದರೂ, ಆ ಪ್ರದೇಶಕ್ಕೆ ಅದು ಹೇಗೆ ಒಳಿತನ್ನು ಮಾಡಿತು ಎನ್ನುವುದನ್ನು ಚಿತ್ರದಲ್ಲಿ ಹೇಳಿರುವುದನ್ನು ಮೆಚ್ಚಲೇಬೇಕು. ಆದರೆ ಆಭಾಗದ ಸಾಮಾಜಿಕ ಸಮಸ್ಯೆಗಳು ಮತ್ತಷ್ಟು ಚೆನ್ನಾಗಿ ತೋರಿಸಿದ್ದರೆ ಟೈಗರ್ ನಾಗೇಶ್ವರ ರಾವ್ ಸಿನಿಮಾ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಿತ್ತು.

ಸ್ಕ್ರಿಪ್ಟ್ ವಿಷಯದಲ್ಲಿ ಕೆಲ ನ್ಯೂನತೆಗಳಿವೆ. ಜೊತೆಗೆ ಸತ್ಯಕ್ಕೆ ದೂರವಾದ ಕೆಲವು ವಿಷಯಗಳಿವೆ ಎಂದು ಹೇಳಿದರೂ ಸಿನಿಮಾ ಭಾವನಾತ್ಮಕವಾಗಿ ಗಮನ ಸೆಳೆಯುತ್ತದೆ. ಒಂದಷ್ಟು ನಿರೀಕ್ಷೆಯೊಂದಿಗೆ ಹೋದರೂ ಸಿನಿಮಾ ಒಳ್ಳೆ ಅನುಭವ ನೀಡುತ್ತದೆ. ಥಿಯೇಟರ್‌ನಲ್ಲಿ ಟೈಗರ್ ನಾಗೇಶ್ವರ ರಾವ್ ಸಿನಿಮಾ ನೋಡುವುದು ಉತ್ತಮ. ಸಿನಿಮಾ ಭವಿಷ್ಯ ಏನಾಗುತ್ತದೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.

More from Filmibeat

English summary
Ravi Teja Starrer Tiger Nageswara Rao Movie Review In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X