ವಿಮರ್ಶೆ: ದೇಶಗಳ ನಡುವೆ ಬಾಂಧವ್ಯ ಬೆಸೆಯುವ 'ಟೈಗರ್'

By Pavithra

ಬಾಲಿವುಡ್ ಅಂಗಳದಲ್ಲಿ ಯಂಗ್ ಟೈಗರ್ ಅಂತಾನೇ ಫೇಮಸ್ ಆಗಿರೋ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಅಭಿನಯದ 'ಟೈಗರ್ ಜಿಂದಾ ಹೈ' ಸಿನಿಮಾ ತೆರೆಕಂಡಿದೆ. ಕಂಪ್ಲೀಟ್ ಆಕ್ಷನ್ ಥ್ರಿಲ್ಲರ್ ಚಿತ್ರ ನೋಡಿ ಸಲ್ಮಾನ್ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ. ಅದ್ಬುತವಾದ ಮೇಕಿಂಗ್ ಜೊತೆಯಲ್ಲಿ ಉತ್ತಮವಾದ ಸಂದೇಶ ಇರುವ ಸಿನಿಮಾವನ್ನ ಅಭಿಮಾನಿಗಳಿಗೆ ನೀಡಿದ್ದಾರೆ ಸಲ್ಲು ಬಾಯ್.

ಪ್ರಾರಂಭದಿಂದಲೂ ಕುತೂಹಲ ಮೂಡಿಸಿದ್ದ 'ಟೈಗರ್ ಜಿಂದಾ ಹೈ' ಚಿತ್ರ ದೇಶಗಳ ನಡುವೆ ಬಾಂದವ್ಯ ಬೆಸೆಯುವಂತ ಕಥಾಹಂದರ ಹೊಂದಿದೆ. ಭಾರತದ 'ರಾ ಏಜೆಂಟ್' ಆಗಿ ಸಲ್ಮಾನ್ ಖಾನ್ ಅಭಿನಯಿಸಿದ್ದು ಪಾಕಿಸ್ತಾನದ 'ರಾ ಏಜೆಂಟ್' ಆಗಿ ನಟಿ ಕತ್ರಿಕಾ ಕೈಫ್ ಕಾಣಿಸಿಕೊಂಡಿದ್ದಾರೆ.

Tiger Zinda Hai movie review

ಇರಾಕ್ ನಲ್ಲಿ ಉಗ್ರರು ಭಾರತೀಯ ನರ್ಸ್ ಗಳನ್ನ ಸೆರೆಹಿಡಿದಿರುತ್ತಾರೆ. ಅವರನ್ನ ರಕ್ಷಣೆ ಮಾಡಲು ಭಾರತದ ಪೊಲೀಸ್ ಅಧಿಕಾರಿಗಳು ಕರೆತರುವ 'ರಾ ಏಜೆಂಟ್' ಟೈಗರ್ ಸಲ್ಮಾನ್ ಖಾನ್. ಭಾರತೀಯ ನರ್ಸ್ ಗಳ ಜೊತೆಯಲ್ಲಿ ಪಾಕಿಸ್ತಾನದ ನರ್ಸ್ ಗಳನ್ನೂ ಬಂಧಿಸಲಾಗಿರುತ್ತದೆ. ಈ ವಿಚಾರ ತಿಳಿದ ನಂತರ ಟೈಗರ್ ಜೊತೆಯಲ್ಲಿ ಕತ್ರಿನಾ ಕೂಡ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಇಬ್ಬರು ತಮ್ಮ ದೇಶಕ್ಕಾಗಿ ಹೇಗೆ ಹೋರಾಟ ಮಾಡುತ್ತಾರೆ ಎನ್ನುವುದು ಟೈಗರ್ ಜಿಂದಾ ಹೈ ಚಿತ್ರದ ಕಂಪ್ಲೀಟ್ ಸ್ಟೋರಿ.

Tiger Zinda Hai movie review

'ಏಕ್ತಾ ಥಾ ಟೈಗರ್' ಚಿತ್ರದ ಕಥೆಗೂ 'ಟೈಗರ್ ಜಿಂದಾ ಹೈ' ಸ್ಟೋರಿಗೂ ಯಾವುದೇ ಸಂಬಂಧವಿಲ್ಲ. ಆದರೆ ಚಿತ್ರದಲ್ಲಿ ಪಾತ್ರಗಳು ಮಾತ್ರ ಹಾಗೆಯೇ ಮುಂದುವರೆದಿವೆ. ಟೈಗರ್ ಜಿಂದಾ ಹೈ' ಪಕ್ಕಾ ಆಕ್ಷನ್ ಸಿನಿಮಾ, ಕತ್ರಿನಾ ಸ್ಟಂಟ್ಸ್ ಮತ್ತು ಚಿತ್ರದ ಮೇಕಿಂಗ್ ನೋಡುಗರನ್ನ ಇಂಪ್ರೆಸ್ ಮಾಡುತ್ತೆ.

Tiger Zinda Hai movie review

ಸಕ್ಸಸ್ ಫುಲ್ ಜೋಡಿ ಎನ್ನಿಸಿಕೊಂಡಿರುವ ಕ್ಯಾಟ್ ಹಾಗೂ ಸಲ್ಮಾನ್ ಮಧ್ಯೆ ಯಾವುದೇ ರೊಮ್ಯಾಂಟಿಕ್ ದೃಶ್ಯಗಳು ಇಲ್ಲದೆ ಇರುವುದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಒಟ್ಟಾರೆ ಆಕ್ಷನ್ ಸಿನಿಮಾಗಳನ್ನ ಇಷ್ಟ ಪಡುವವರಿಗೆ ಹಾಗೂ ಸಲ್ಲು ಅಭಿಮಾನಿಗಳಿಗೆ ಟೈಗರ್ ಜಿಂದಾ ಹೈ ಹೇಳಿ ಮಾಡಿಸಿರುವ ಚಿತ್ರ.

More from Filmibeat

English summary
Bollywood actor Salman Khan's Tiger Zinda Hai movie released.Tiger Zinda Hai Action, Thriller Cinema, audience liked Salman Khan and Katrina Kaif's action scenes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X