Totapuri 2 Review: 'ತೋತಾಪುರಿ 2'ನಲ್ಲಿ ಉಪ್ಪು ಜಾಸ್ತಿ.. ಹುಳಿನೂ ಜಾಸ್ತಿ.. ತಿನ್ನುವಾಗ ಜಾಗ್ರತೆ

By ಯಶವಂತ್

Rating:
2.5/5
Star Cast: Jaggesh, Aditi Prabhudeva, Daali Dhananjaya, Suman Ranganath
Director: Vijay Prasad

ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಕಾಂಬಿನೇಷನ್ ಅಂದರೆ ಯುವಕರಿಗೆ ಹಬ್ಬ. ಗಂಭೀರ ವಿಷಯಗಳಿಗೆ ಹಾಸ್ಯರೂಪ ಕೊಟ್ಟು ಡಬಲ್ ಮೀನಿಂಗ್ ಡೈಲಾಗ್‌ಗಳನ್ನು ಸೇರಿಸಿ ಯುವಕರಿಗೆ ಕಚಗುಳಿ ಕೊಡುತ್ತೆ. 'ತೋತಾಪುರಿ' ಸಿನಿಮಾ ಕೂಡ ಹಾಗೇ ಇತ್ತು. ಈಗ ತೋತಾಪುರಿಯ ಎರಡನೇ ಚಾಪ್ಟರ್ ರಿಲೀಸ್ ಆಗಿದೆ.

ಮನುಷ್ಯತ್ವ, ಜಾತಿ-ಧರ್ಮ, ಮೇಲು-ಕೀಳು, ಪ್ರೀತಿ-ಮದುವೆ ಇಂತಹದ್ದೇ ಒಂದಿಷ್ಟು ವಿಷಯಗಳು ಪ್ರಧಾನ ವಿಷಯವಾಗಿಟ್ಟುಕೊಂಡು ತಮ್ಮದೇ ಶೈಲಿಯಲ್ಲಿ ಕಥೆ ಹೇಳಿದ್ದಾರೆ. 'ತೋತಾಪುರಿ' ಮೊದಲ ಭಾಗದ ಮುಂದುವರೆದ ಭಾಗವೇ 'ತೋತಾಪುರಿ 2'. ಹೀಗಾಗಿ ಕಥೆ ಎಲ್ಲಿಗೆ ಸಾಗುತ್ತೆ? ಅನ್ನೋದೇ ಕುತೂಹಲಕ್ಕೆ ತೆರೆ ಎಳೆಯಲಿದೆ.

totapuri-2-review-in-kannada

ಸಿನಿಮಾದಲ್ಲಿ ಸಂದೇಶವಿದೆ. ಆದರೆ, ಡಬಲ್ ಮೀನಿಂಗ್ ಡೈಲಾಗ್ ಸ್ವಲ್ಪ ಜಾಸ್ತಿ ಆಯ್ತು ಅನ್ನೋದು 'ತೋತಾಪುರಿ' ಸಿನಿಮಾ ನೋಡಿದವರ ಅಭಿಪ್ರಾಯ ಆಗಿತ್ತು. ಈಗ 'ತೋತಾಪುರಿ 2' ರಿಲೀಸ್ ಆಗಿದೆ. ಈ ಮುಂದುವರೆದ ಭಾಗ ಹೇಗಿದೆ? ವಿಶೇಷತೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ತೋತಾಪುರಿ'ಯ ಮುಂದುವರೆದ ಭಾಗ

'ತೋತಾಪುರಿ' ಸಿನಿಮಾದ ಕೊನೆಯಲ್ಲಿ ಧನಂಜಯ ಎಂಟ್ರಿ ಕೊಟ್ಟಿದ್ದರು. ಆದರೆ, ಅವರ ಪಾತ್ರ ಹೆಚ್ಚು ಸಮಯ ತೆರೆಮೇಲೆ ಕಾಣಿಸಿರಲಿಲ್ಲ. 'ತೋತಾಪುರಿ 2' ಧನಂಜಯ್ ಹೆಚ್ಚು ಹೊತ್ತು ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಸಿನಿಪ್ರಿಯರಿಗೆ ಇಲ್ಲಿ ಡಬಲ್ ಧಮಾಕ. ಧನಂಜಯ್ ಹಾಗೂ ನವರಸ ನಾಯಕ ಜಗ್ಗೇಶ್ ಇಬ್ಬರ ಅಭಿಮಾನಿಗಳಿಗೂ ಖುಷಿ ಕೊಡಬಹುದು.

ಟಿಪಿಕಲ್ ವಿಜಯ್ ಪ್ರಸಾದ್ ಸಿನಿಮಾ

'ತೋತಾಪುರಿ' ಮೊದಲ ಭಾಗದಲ್ಲಿ ಪಾತ್ರಗಳ ಪರಿಚಯವನ್ನು ಮಾಡಲಾಗಿತ್ತು. ಜೊತೆ ಸಮಾಜದಲ್ಲಿ ಧರ್ಮ, ಜಾತಿ ವ್ಯವಸ್ಥೆಯ ಬಗ್ಗೆ ಚಿಕ್ಕದೊಂದು ಸಂದೇಶವನ್ನು ನೀಡಲಾಗಿತ್ತು. ಎರಡನೇ ಭಾಗದಲ್ಲಿಯೂ ಕೂಡ ಸಾಮಾಜಿಕ ಸಂದೇಶವನ್ನು ವಿಜಯ್ ಪ್ರಸಾದ್ ತಮ್ಮದೇ ಸ್ಟೈಲ್‌ನಲ್ಲಿ ಹೇಳಿದ್ದಾರೆ. ಧರ್ಮದ ಪಾಠ, ಅಂತರಧರ್ಮೀಯ ಮದುವೆ, ಪ್ರೀತಿ ಅವರು ಎದುರಿಸುವ ಸಂಕಷ್ಟಗಳು, ಏನೆಲ್ಲಾ ಅಡೆ ತಡೆಗಳಾಗುತ್ತವೆ ಅನ್ನೋದನ್ನು ಈ ಸಿನಿಮಾದಲ್ಲಿ ಹೇಳಿದ್ದಾರೆ. ಜೊತೆಗೆ ಜಾತಿ ವ್ಯವಸ್ಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

totapuri-2-review-in-kannada

ಡಬಲ್ ಮೀನಿಂಗ್ ಡೈಲಾಗ್‌ಗಳೇ ಪ್ರಧಾನ

'ತೋತಾಪುರಿ 2' ಸಿನಿಮಾದಲ್ಲಿ ಒಂದಿಷ್ಟು ಕೌಟುಂಬಿಕ ಭಾವನೆಗಳನ್ನು ತೋರಿಸಲಾಗಿದೆ. ಆದರೆ, ಇದರೊಂದಿಗೆ ಡಬಲ್ ಮೀನಿಂಗ್ ಡೈಲಾಗ್‌ಗಳೇ ಪ್ರಧಾನ ಎನಿಸುತ್ತವೆ. ಎಲ್ಲಾ ಪಾತ್ರಗಳಿಗೂ ವಿಜಯ ಪ್ರಸಾದ್ ಪಂಚಿಂಗ್ ಡೈಲಾಗ್‌ಗಳನ್ನು ಇಟ್ಟಿದ್ದಾರೆ. ಡಬಲ್ ಮೀನಿಂಗ್ ಡೈಲಾಗ್ ಹೆಚ್ಚಿರುವುದರಿಂದ ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟ ಆಗದೆ ಹೋಗಬಹುದು.

'ತೋತಾಪುರಿ 2' ಪ್ಲಸ್ ಪಾಯಿಂಟ್ ಏನು?

ಸಮಾಜದಲ್ಲಿರೋ ಜಾತಿ-ಧರ್ಮದ ಸಮಸ್ಯೆಗೆ ಹಾಸ್ಯದ ರೂಪ ಕೊಟ್ಟು ಹೇಳುವ ಪ್ರಯತ್ನ ಮಾಡಿದ್ದಾರೆ. ಜಗ್ಗೇಶ್ ಮ್ಯಾನರಿಸಂ ಇಷ್ಟ ನಗು ತರಿಸುತ್ತೆ. ಧನಂಜಯ್, ಅದಿತಿ ಪ್ರಭುದೇವ ಹಾಗೂ ಸುಮನ್ ರಂಗನಾಥನ್, ವೀಣಾ ಸುಂದರ್ ಪಾತ್ರಗಳು ಗಮನ ಸೆಳೆಯುತ್ತವೆ. ಯುವಕರಿಗೆ ಈ ಸಿನಿಮಾ ಹೆಚ್ಚು ಇಷ್ಟ ಆಗಬಹುದು.

'ತೋತಾಪುರಿ 2' ಮೈನಸ್ ಏನು?

ಸಿನಿಮಾದಲ್ಲಿ ಡಬಲ್ ಮೀನಿಂಗ್ ಡೈಲಾಗ್‌ಗಳೇ ಮೈನಸ್ ಆಗಬಹುದು. ಚಿತ್ರಕಥೆಗೆ ಒಂದಿಷ್ಟು ಕತ್ತರಿ ಪ್ರಯೋಗ ಮಾಡಬೇಕಿತ್ತು. ಫ್ಲ್ಯಾಶ್ ಬ್ಯಾಕ್‌ನಲ್ಲೇ ಸ್ಟೋರಿಗಳನ್ನು ಹೇಳುತ್ತಾ ಹೋಗುತ್ತಾರೆ. ಎಲ್ಲಾ ಸನ್ನಿವೇಶಕ್ಕೂ ಪ್ಲ್ಯಾಶ್ ಬ್ಯಾಕ್‌ ಹೇಳಿದ್ದು ಇರಿಸು ಮುರಿಸು ಆಗುವ ಸಾಧ್ಯತೆಯಿದೆ. ಫ್ಯಾಮಿಲಿ ಅಲ್ಲದೆ ಹೋದರೂ, ಯುವಕರಿಗೆ ಈ ಸಿನಿಮಾ ಇಷ್ಟ ಆಗುವ ಸಾಧ್ಯತೆಗಳಿವೆ.

More from Filmibeat

English summary
Jaggesh, Aditi Prabhudeva and Daali Dhananjaya Starrer Thothapuri 2 Review in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X