'ತ್ರಾಟಕ' ವಿಮರ್ಶೆ : ಅವರ್ ಬಿಟ್.. ಇವರ್ ಬಿಟ್.. ಇವರ್ಯಾರು?

By Naveen

'ತ್ರಾಟಕ' ಒಂದು ಪಕ್ಕಾ ಕ್ರೈಂ ಥ್ರಿಲ್ಲರ್ ಸಿನಿಮಾ. ಸಿನಿಮಾ ಶುರುವಿನಿಂದ ಮುಗಿಯುವವರೆಗೆ ನೋಡುವವರಿಗೆ ಭಯ ಮತ್ತು ಕುತೂಹಲ ಎರಡು ಅಂಶಗಳು ಇರುತ್ತದೆ. ಚಿತ್ರದ ಕಥೆಯಲ್ಲಿ ಇರುವ ಟ್ವಿಸ್ಟ್ ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇದೊಂದು ಸೈಕಲಾಜಿಕಲ್ ಚಿತ್ರವಾಗಿದೆ.

Rating:
3.0/5

ಚಿತ್ರ: ತ್ರಾಟಕ

ನಿರ್ದೇಶನ: ಶಿವ ಗಣೇಶ್

ಕಥೆ : ನರು ನಾರಾಯಣ್, ಎ ಮಹಕೀರ್ತಿ

ನಿರ್ಮಾಣ: ರಾಹುಲ್ ಐನಾಪೂರ್

ಛಾಯಾಗ್ರಹಣ: ವಿನೋದ್ ಭಾರತಿ

ಸಂಕಲನ : ಸುರೇಶ್ ಅರುಮುಘಂ

ಕಲಾವಿದರು: ರಾಹುಲ್ ಐನಾಪೂರ್, ಅಜಿತ್ ಜಯರಾಜ್, ಭಾವಾನಿ ಪ್ರಕಾಶ್, ಯಶ್ ಶೆಟ್ಟಿ ಮತ್ತು ಇತರರು

ಬಿಡುಗಡೆ: ಆಗಸ್ಟ್ 31, 2018

ಒಂದು ಕೊಲೆಯ ಮೂಲಕ ಕಥೆ ಪ್ರಾರಂಭ

ಒಂದು ಕೊಲೆಯ ಮೂಲಕ ಕಥೆ ಪ್ರಾರಂಭ

ದೇವ್ (ರಾಹುಲ್ ಐನಾಪೂರ್) ಹಾಗೂ ರವಿ (ಅಜಿತ್ ಜಯರಾಜ್) ಎಂಬ ಇಬ್ಬರು ಪೋಲೀಸ್ ಆಫೀಸ್ ಗಳು ಇರುತ್ತಾರೆ. ಟ್ರೈನಿಂಗ್ ದಿನಗಳಿಂದ ಇಬ್ಬರು ಒಳ್ಳೆಯ ಗೆಳೆಯರಾಗಿರುತ್ತಾರೆ. ಈ ರೀತಿ ಇದ್ದಾಗ ದೇವ್ ಸಹೋದರ ನಿಖಿಲ್ ಕೊಲೆ ಆಗುತ್ತದೆ. ಆ ಕೊಲೆ ಯಾರು ಮಾಡಿದ್ದಾರೆ ಎಂದು ಪತ್ತೆ ಹಚ್ಚಲು ದೇವ್ ಹಾಗೂ ರವಿ ತನಿಖೆ ಶುರು ಮಾಡುತ್ತಾರೆ. ಹೀಗೆ ಸಿನಿಮಾ ಕಥೆ ಶುರು ಆಗುತ್ತದೆ.

ಒಂದು ಕೊಲೆ, ಇನ್ನೊಂದು ಕೊಲೆ, ಮತ್ತೊಂದು ಕೊಲೆ

ಒಂದು ಕೊಲೆ, ಇನ್ನೊಂದು ಕೊಲೆ, ಮತ್ತೊಂದು ಕೊಲೆ

ಪ್ರಾರಂಭದಲ್ಲಿ ಆಗುವ ಒಂದು ಕೊಲೆಯ ಮೂಲಕ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಆದರೆ, ಆ ಕೊಲೆಯ ಬಳಿಕ ಇನ್ನೊಂದು ಕೊಲೆ, ಮತ್ತೊಂದು ಕೊಲೆ ಆಗುತ್ತದೆ. ತನಿಖೆ ನಡೆಸುತ್ತಿರುವ ದೇವ್ ತನ್ನ ಅರಿವಿಲ್ಲದೆ ಆ ಕೊಲೆ ಮಾಡುತ್ತಾನೆ. ದೇವ್ ಮಾನಸಿಕ ಸ್ಥಿತಿ ಸರಿ ಇರದಿರುವ ಕಾರಣ ಅವನೇ ಈ ಕೊಲೆ ಮಾಡಿದ್ದಾನೆ ಎಂದು ಪ್ರೇಕ್ಷಕರು ಸಹ ನಿರ್ಧರಿಸಿ ಬಿಡುತ್ತಾರೆ.

ಅವರ್ ಬಿಟ್ ಇವರ್ ಬಿಟ್ ಇವರ್ಯಾರು

ಅವರ್ ಬಿಟ್ ಇವರ್ ಬಿಟ್ ಇವರ್ಯಾರು

ಸಿನಿಮಾದಲ್ಲಿ ನಡೆಯುವ ಈ ಕೊಲೆಗಳನ್ನು ಯಾರು ಮಾಡಿದರು ಎಂಬುದು ಪ್ರೇಕ್ಷಕರ ದೊಡ್ಡ ಪ್ರಶ್ನೆ ಆಗುತ್ತದೆ. ಈ ಕೊಲೆಯನ್ನು ದೇವ್ ಮಾಡಿದ್ನಾ ಅಥವಾ ಬೇರೆ ಯಾರಾದರೂ ಮಾಡಿದ್ರಾ ಎನ್ನುವುದು ಚಿತ್ರದ ಕಥೆ. ಮೊದಲು ದೇವ್ ಈ ಕೊಲೆ ಮಾಡಿರಬೇಕು ಎಂದು ಅನಿಸಿದರೂ ನಂತರ ಬೇರೆ, ಬೇರೆಯವರ ಬಗ್ಗೆ ಅನುಮಾನ ಮೂಡುತ್ತದೆ.

ಪಾತ್ರಕ್ಕೆ ತಕ್ಕ ಅಭಿನಯ

ಪಾತ್ರಕ್ಕೆ ತಕ್ಕ ಅಭಿನಯ

ರಾಹುಲ್ ಐನಾಪೂರ್ ಮೊದಲ ಸಿನಿಮಾದಲ್ಲಿಯೇ ಒಂದು ಶಕ್ತಿಯುತ ಪಾತ್ರವನ್ನು ತೆಗೆದುಕೊಂಡಿದ್ದಾರೆ. ನಗು, ತಮಾಷೆ ಯಾವುದೂ ಇಲ್ಲದ ಆ ಪಾತ್ರವನ್ನು ಅವರು ಚೆನ್ನಾಗಿ ನಿರ್ವಹಿಸಿದ್ದಾರೆ. ಅಜಿತ್ ಜಯರಾಜ್ ಕೂಡ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಹೃದಯ ತೆರೆ ಮೇಲೆ ಕಡಿಮೆ ಸಮಯ ಇದ್ದರೂ ಇಷ್ಟ ಆಗುತ್ತಾರೆ. ಭಾವಾನಿ ಪ್ರಕಾಶ್ ಹಾಗೂ ಯಶ್ ಶೆಟ್ಟಿ ನಟನೆ ನೆನಪಿನಲ್ಲಿ ಉಳಿಯುತ್ತದೆ.

ಸಂಗೀತ, ಮೇಕಿಂಗ್, ನಿರ್ದೇಶನ

ಸಂಗೀತ, ಮೇಕಿಂಗ್, ನಿರ್ದೇಶನ

ತಮ್ಮ ಮೊದಲ ಸಿನಿಮಾದಲ್ಲಿ ಒಳ್ಳೆಯ ಮೇಕಿಂಗ್ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಶಿವ ಗಣೇಶ್ ಇಲ್ಲಿಯೂ ಜನರ ಮೆಚ್ಚುಗೆ ಪಡೆಯುತ್ತಾರೆ. ಸಿನಿಮಾದ ಕ್ವಾಲಿಟಿ ಚೆನ್ನಾಗಿದೆ. ಹಿನ್ನಲೆ ಸಂಗೀತ ಮಜಾ ನೀಡುತ್ತದೆ. ಮೂರು ಹಾಡುಗಳಿದ್ದು, ಇನ್ನೂ ಚೆನ್ನಾಗಿ ಮಾಡಬಹುದಿತ್ತು. ಜೊತೆಗೆ ಕಥೆಯಲ್ಲಿ ಕೆಲ ಲಾಜಿಲ್ ಗಳು ಮಿಸ್ ಆಗಿವೆ.

ಕೊನೆಯ ಮಾತು

ಕೊನೆಯ ಮಾತು

ಚಿತ್ರದಲ್ಲಿ ಪ್ರತಿ 15 ನಿಮಿಷಕ್ಕೆ ಬಂದರಂತೆ ಟ್ವಿಸ್ಟ್ ಸಿಗುತ್ತದೆ. ಒಂದು ಕ್ರೈಂ ಥ್ರಿಲ್ಲರ್ ಸಿನಿಮಾಗೆ ಬೇಕಾದ ಎಲ್ಲ ಅಂಶಗಳು ಚಿತ್ರದಲ್ಲಿ ಇವೆ. ಲವ್ ಸ್ಟೋರಿ, ಮಾಸ್‌, ಆಕ್ಷನ್ ಬಿಟ್ಟು ಕೊಂಚ ಬೇರೆಯ ಫೀಲ್ ಈ ಸಿನಿಮಾ ನೀಡುತ್ತದೆ. ಸೋ, ಆರಾಮಾಗಿ ಯಾವುದೇ ಅಡ್ಡಿ ಇಲ್ಲದೆ ಈ ಸಿನಿಮಾ ನೋಡಬಹುದು.

More from Filmibeat

English summary
Trataka kannada movie review. The movie is complete crime thriller.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X