»   » ವಿಮರ್ಶೆ: 'ರಂಗ್' ಕುಟುಂಬಸಮೇತ ನೋಡುವ ಚಿತ್ರ

ವಿಮರ್ಶೆ: 'ರಂಗ್' ಕುಟುಂಬಸಮೇತ ನೋಡುವ ಚಿತ್ರ

By: ಅಮೃತ ವಿಠಲ್
Subscribe to Filmibeat Kannada

ದಕ್ಷಿಣ ಕನ್ನಡದವರು ತುಳುಬಾಷೆ ಸಿನಿಮಾಗಳನ್ನು ತುಂಬ ಇಷ್ಟ ಪಡುತ್ತಾರೆ . "ರಂಗ್ " ತುಳು ಸಿನಿಮಾ ಕಳೆದ ವಾರ ತೆರೆಗೆ ಬಂತು. ಈ ಸಿನಿಮಾದ ಬಗ್ಗೆ ಒಂದೆರೆಡು ಮಾತು ಹೇಳೋಣ ಅಂತ ಇದನ್ನು ಬರಿತಿದ್ದೀನಿ. ಒಂದು ಸಾಮಾನ್ಯ ಪ್ರೇಕ್ಷಕನಾಗಿ ಇದನ್ನು ಬರೀತಿಲ್ಲ. ಸಿನಿಮಾ ಬಗ್ಗೆ ನನ್ನದೇ ಅದ ಒಂದು ದೃಷ್ಟಿಕೋನದಿಂದ ನೋಡಿ ಇದನ್ನು ಬರೆದಿದ್ದೀನಿ.

ಈ ಸಿನಿಮಾ ನಮ್ಮ ಈ ತುಳುನಾಡಿನ ಜನರ ಮನೋರಂಜನೆಗಾಗಿ ಮಾಡಿರೊ ಪ್ರಯತ್ನ ಆದರಿಂದ ಅದನ್ನು ಮೆಚ್ಚುತ್ತೇನೆ. ಇತ್ತೀಚಿನ ದಿನಗಳಲ್ಲಿ ತುಂಬಾನೆ ತುಳು ಸಿನಿಮಾಗಳು ಬರುತ್ತಿರುವುದು ಒಳ್ಳೆಯ ವಿಚಾರ, ಆದರೂ ಅದರ ಗುಣಮಟ್ಟ ಉತ್ತಮವಾಗಿಲ್ಲ ಅನ್ನೋ ಕೊರಗು ಈ ಸಿನಿಮಾದಲ್ಲೂ ಕಾಣಿಸಿತು.

ಕಥೆ, ಹಾಡು, ಸಂಗೀತ ಎಲ್ಲಾ ಉತ್ತಮ ಗುಣಮಟ್ಟದತ್ತ ಹೆಜ್ಜೆ ಇಡುತ್ತಿದ್ದರೆ ಕ್ಯಾಮರಾ, ಬೆಳಕು, ಎಡಿಟಿಂಗ್ ಇನ್ನೂ ಉತ್ತಮವಾಗಬಹುದಿತ್ತು. ನಟನೆಯಲ್ಲಿ ನಾಯಕ ಮತ್ತು ಅವನ ಗೆಳೆಯ ಉತ್ತಮ ಪ್ರಯತ್ನವನ್ನೇ ಮಾಡಿದ್ದಾರೆ.

Tulu movie Rang review must watch family entertainer

ನಾಯಕನಿಗಿಂತ ಆತನ ಗೆಳೆಯ ಸಂಭಾಷಣೆ ಮಾಡುವಾಗ ಉತ್ತಮ ಮುಖಭಾವ ವ್ಯಕ್ತಪಡಿಸಿದ್ದಾರೆ. ನಾಯಕಿಯ ಆಯ್ಕೆ ಕೂಡ ಎಲ್ಲೊ ಸ್ವಲ್ಪ ಎಡವಟ್ಟು ಅನಿಸುತ್ತಿದೆ. ಖಳನಾಯಕನಾಗಿ ಭಟ್ ಉತ್ತಮ ಅಭಿನಯ ನೀಡಿದ್ದರು. ನಾಟಕದಿಂದ ಹೊರಬಂದು ಸಿನಿಮಾಕ್ಕೆ ಸ್ವಲ್ಪ ತಮ್ಮ ಧ್ವನಿಯನ್ನು ತಗ್ಗಿಸುವುದು ಉತ್ತಮ ಅಂತ ನನ್ನ ಅನಿಸಿಕೆ.

ಮತ್ತೊಂದು ಋಣಾತ್ಮಕ ಅಂಶ ಖಳನಾಯಕನ ಜೊತೆಗಾರರ ಅಭಿನಯ, ಖಳನಾಯಕನ ಕೋಪದ ಮುಖ ಜೊತೆ ಇರುವ ಈ ನಟರ ಮುಖದಲ್ಲಿ ಯಾವುದೆ ವ್ಯತ್ಯಾಸ ಕಾಣುವುದಿಲ್ಲ. ಅದೇ ನಿರ್ಲಿಪ್ತ ಭಾವನೆ. ಇದು ನಿರ್ದೇಶಕನ ಅನುಭವ ಕೊರತೆ ಕಾಣಿಸುವಂತೆ ಮಾಡಿದೆ. ಇದು ಎಲ್ಲ ಸಹನಟರ ಬಗ್ಗೆಯೂ ಹೇಳಬಹುದಾದ ವಿಷಯ.

ಮತ್ತೆ ಎಡಿಟಿಂಗ್ ತುಂಬಾ ಜಾಳಾಗಿದೆ. ಇದು ಪ್ರೇಕ್ಷಕನ ತಾಳ್ಮೆ ಪರೀಕ್ಷಿಸುತ್ತದೆ. ಹಾಗೆಯೆ ಕ್ಯಾಮರಾ ಕೆಲಸ ಕೂಡ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಅನ್ನಬಹುದು. ಇನ್ನು ಹಾಸ್ಯ ಸನ್ನಿವೇಶ, ಸಂಬಾಷಣೆ, ಹಾಗೂ ಹಾಸ್ಯ ಕಲಾವಿದರು ಈ ಸಿನಿಮಾದ ಪ್ರಮುಖ ಆಕರ್ಷಣೆ. ಅವರು ಅದಕ್ಕೆ ನ್ಯಾಯ ಒದಗಿಸಿದ್ದಾರೆ ಅನ್ನಬಹುದು.

ಹಿಂದಿ ನಟ ಜಾನಿ ಲೀವರ್ ನನ್ನು ಉತ್ತಮವಾಗಿ ಉಪಯೋಗಿಸಿಕೋಂಡಿರೊದು ಪ್ಲಸ್ ಪಾಯಿಂಟ್. ಈಗ ಮಲ್ಟಿಫೆಕ್ಸ್ ಗಳಲ್ಲಿ ಕೂತು ಹಾಲಿವುಡ್ ಸಿನಿಮಾಗಳನ್ನು ನೋಡುವ ಜನರು ಅದರಷ್ಟು ಅಲ್ಲದಿದ್ದರೂ ಸ್ವಲ್ಪವಾದರೂ ಉತ್ತಮ ಗುಣಮಟ್ಟ ಬಯಸುತ್ತಾರೆ ಅನ್ನಿಸುತ್ತದೆ. ಒಟ್ಟಾರೆ ಹೇಳಬೇಕೆಂದರೆ ಈ ಸಿನಿಮಾದಲ್ಲಿ ಮನೋರಂಜನೆಗೆ ಕೊರತೆ ಇಲ್ಲ. ಒಮ್ಮೆ ಕುಟುಂಬಸಮೇತರಾಗಿ ನೋಡಬಹುದು.

English summary
Tulu movie 'Rang' is a must watch family entertainer. The film has all the commercial elements required in a film says Amruth Vittal. Comedy King Johny Lever is also seen in a cameo role.
Please Wait while comments are loading...