twitter
    For Quick Alerts
    ALLOW NOTIFICATIONS  
    For Daily Alerts

    ಉಳಿದವರು ಕಂಡಂತೆ: ಗೊಂದಲ, ಸಸ್ಪೆನ್ಸ್, ನಿರಂತರ

    By ಸಂದೇಶ್, ಮೈಸೂರು
    |

    ಜನರಿಗೆ ಅರ್ಥವಾಗುವಂತೆ ಹೇಳು ಇಲ್ಲದಿದ್ದರೆ ಕನ್ ಫ್ಯೂಸ್ ಮಾಡಿ ಬಿಟ್ಟರೆ ಸಾಕು ಎಂಬ ಹಳೆ ಫಾರ್ಮೂಲಾವನ್ನು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಸೂಕ್ತವಾಗಿ ಬಳಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಮೂಡುವ ಗೊಂದಲವೇ ಪ್ರೇಕ್ಷಕರನೇಕರಿಗೆ ಖುಷಿ ಕೊಡುತ್ತದೆ. ಖುಷಿ ಖುಷಿಯಾಗಿ ಮುಖ ಮುಖ ನೋಡುತ್ತಾ ಮುಂದಿನ ಸೀನ್ ನಿರೀಕ್ಷಿಸುತ್ತಾರೆ. ಗೊಂದಲದಿಂದ ಮೂಡುವ ಸಂತಸವನ್ನು ದುಡಿಸಿಕೊಳ್ಳುವ ಆಲೋಚನೆ ರಕ್ಷಿತ್ ಮಾಡಿದ್ದಾ?

    ಒಟ್ಟಾರೆ ಇದೊಂದು ಪ್ರಯೋಗಾತ್ಮಕ ಚಿತ್ರ, ಒಂದೇ ಕಥೆಯನ್ನು ಹಲವರ ದೃಷ್ಟಿಕೋನದಲ್ಲಿ ನೋಡಿ ಕೊನೆಗೊಮ್ಮೆ ಸಮೀಕರಿಸಿ ಕ್ಲೈಮ್ಯಾಕ್ಸ್ ನಲ್ಲಿ ಅಂತ್ಯಗಾಣಿಸುವುದನ್ನು ಉಳಿದವರು ಕಂಡಂತೆ ಎಂಬ ಹೊಸ ಅಲೆ ಚಿತ್ರದಲ್ಲಿ ಕಾಣಬಹುದು. ಈ ಚಿತ್ರದಿಂದ ಸಂಗೀತ ನಿರ್ದೇಶಕ ಅಜನೀಶ್, ಕೆಮೆರಾ ವರ್ಕ್ ಮಾಡಿದ ಕರಣ್, ಹೊಸ ನಿರ್ದೇಶಕ ರಕ್ಷಿತ್ ಶೆಟ್ಟಿಯನ್ನು ಗಾಂಧಿನಗರ ಕಂಡಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

    Rating:
    3.5/5
    Star Cast: ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞ ಶೆಟ್ಟಿ, ಶೀತಲ್ ಶೆಟ್ಟಿ, ತಾರಾ
    Director: ರಕ್ಷಿತ್ ಶೆಟ್ಟಿ

    ಸಿಂಪಲ್ ಆಗೋಂದು ಚಿತ್ರ ಡೈಲಾಗ್ ಗಳಲ್ಲಿ ಚಿತ್ರವನ್ನು ಓಡಿಸಿದರೆ ಈ ಚಿತ್ರ ವಿಭಿನ್ನ ಸ್ಕ್ರಿಪ್ಟ್ ನಿಂದಾಗಿ ಓಡುವ ಲಕ್ಷಣಗಳಿವೆ. ಜನಕ್ಕೆ ಅರ್ಥವಾಗದಿದ್ದರೆ ಅದೇ ಕೈ ಕೊಡುವ ಅಪಾಯವೂ ಇದೆ. ಕರಾವಳಿ ಜನರ ಬದುಕಿನ ಚಿತ್ರಣವನ್ನು ನೀಡುವ ಈ ಚಿತ್ರ ಒಪ್ಪಿಕೊಳ್ಳುವುದು ಬಿಡುವುದು ನಿಮ್ಮಿಷ್ಟ. ನಮ್ಮ ವಿಮರ್ಶಕ ಕಂಡಂತೆ ಚಿತ್ರ ಹೇಗಿತ್ತು ಮುಂದೆ ಓದಿ...

    ಉಳಿದವರು ಕಂಡಂತೆ ಚಿತ್ರದ ಕಥೆಯೇನು?

    ಉಳಿದವರು ಕಂಡಂತೆ ಚಿತ್ರದ ಕಥೆಯೇನು?

    ಪತ್ರಕರ್ತೆ ರೇಜಿನಾ ಪಾತ್ರಧಾರಿಯಾಗಿ ಶೀತಲ್ ಶೆಟ್ಟಿ ಅವರು ಪ್ರಕರಣವೊಂದರ ತನಿಖಾ ವರದಿ ಮಾಡುವುದರೊಂದಿಗೆ ಕಥೆ ಆರಂಭ. ಒಂದು ಪ್ರಕರಣವನ್ನು ಬೇರೆ ಬೇರೆ ವ್ಯಕ್ತಿಗಳು ಯಾವ ದೃಷ್ಟಿಕೋನದಿಂದ ನೋಡುತ್ತಾರೆ ಎಂಬುದನ್ನು ದಾಖಲಿಸುತ್ತಾ ಕೊನೆಯಲ್ಲಿ ಉಳಿದವರು ಕಂಡಂತೆ ಎಂದು ಬರೆದು ಅಂತ್ಯ ಹಾಡುತ್ತಾರೆ. ಪ್ರಕರಣವೇನು? ತನಿಖೆಯ ಅಂತ್ಯ ಹೇಗೆ ಆಗುತ್ತದೆ? ಪ್ರಕರಣಕ್ಕೆ ಸಂಬಂಧಿಸಿದಂಥ ವ್ಯಕ್ತಿಗಳು ಯಾರು? ಮುಂತಾದ ವಿವರಗಳನ್ನು ತೆರೆಯ ಮೇಲೆ ನೋಡಿ ಆನಂದಿಸಿ

    ಐದು ವಿಭಿನ್ನ ಕಥೆಗಳ ಗುಚ್ಛ

    ಐದು ವಿಭಿನ್ನ ಕಥೆಗಳ ಗುಚ್ಛ

    ಐದು ವಿಭಿನ್ನ ಕಥೆಗಳ ಗುಚ್ಛಗಳನ್ನು ಒಟ್ಟುಗೂಡಿಸಿ ಉಳಿದವರು ಕಂಡಂತೆ ಹೆಣೆಯಲಾಗಿತ್ತು. ಕ್ಲೈಮ್ಯಾಕ್ಸ್ ನಲ್ಲಿ ಎಲ್ಲವನ್ನು ಪೊಣಿಸಿ ಸೂಕ್ತ ಅಂತ್ಯಕಾಣಿಸಲಾಗಿದೆ.

    ಟ್ವಿಸ್ಟ್ ಗಳ ಮೇಲೆ ಟ್ವಿಸ್ಟ್

    ಟ್ವಿಸ್ಟ್ ಗಳ ಮೇಲೆ ಟ್ವಿಸ್ಟ್

    ರಿಚ್ಚಿ ಪಾತ್ರಧಾರಿ ರಕ್ಷಿತ್ ಶೆಟ್ಟಿ ಡೈಲಾಗ್ ಗಳು, ಸನ್ನಿವೇಶಗಳ ಗೊಂದಲದ ಟ್ವಿಸ್ಟ್ ಗಳನ್ನು ನೋಡುತ್ತಿದ್ದರೆ ಉಪೇಂದ್ರ ಚಿತ್ರದ ತಿರುವುಗಳು ನೆನಪಾಗುತ್ತದೆ. ಆದರೆ, ಕ್ವರಾಂಟಿನೋ ಚಿತ್ರಗಳ ಸ್ಪೂರ್ತಿ ಪಡೆದು ಕಥೆ ಹೆಣೆದು ನೀಡಲಾಗಿದೆ. ಪ್ರೇಕ್ಷಕರು ನೇರ ಕಥೆ ಬಯಸುವುದಾದರೆ ಕ್ಲೈಮ್ಯಾಕ್ಸ್ ನಲ್ಲಿ ಬಂದು ನೋಡಬಹುದು. ಇಲ್ಲದಿದ್ದಂತೆ ಟ್ವಿಸ್ಟ್ ಗಳ ಮಜಾ ತೆಗೆದುಕೊಳ್ಳಬಹುದು.

    ಈ ಚಿತ್ರ ನೋಡುವುದೇ ಚಾಲೆಂಜ್

    ಈ ಚಿತ್ರ ನೋಡುವುದೇ ಚಾಲೆಂಜ್

    ಈ ಚಿತ್ರದ ಕಥೆಯಲ್ಲಿ ಬರುವಂತೆ ಪ್ರತಿಯೊಬ್ಬರ ದೃಷ್ಟಿಕೋನದಂತೆ ಈ ಚಿತ್ರದ ಬಗ್ಗೆ ಜನರಲ್ಲಿ ಮೂಡುವ ಅಭಿಪ್ರಾಯ ಕೂಡಾ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಪ್ರತಿಯೊಬ್ಬರ ದೃಷ್ಟಿಕೋನ ಬೇರೆ ಬೇರೆ ಎಂಬ ಮಾತಿನ ಮೇಲೆ ರಕ್ಷಿತ್ ನಂಬಿಕೆ ಇಟ್ಟುಕೊಂಡಂತಿದೆ.

    ರಕ್ಷಿತ್ ಶೆಟ್ಟಿ ನಟ, ನಿರ್ದೇಶಕನಾಗಿ ಗೆದ್ದಿದ್ದಾರೆ

    ರಕ್ಷಿತ್ ಶೆಟ್ಟಿ ನಟ, ನಿರ್ದೇಶಕನಾಗಿ ಗೆದ್ದಿದ್ದಾರೆ

    ರಕ್ಷಿತ್ ಶೆಟ್ಟಿ ನಟ, ನಿರ್ದೇಶಕನಾಗಿ ಗೆದ್ದಿದ್ದಾರೆ. ಉಳಿದವರು ಕಂಡಂತೆ ಟ್ರೇಲರ್ ನಲ್ಲಿ ರಕ್ಷಿತ್ ಅವರ ರಿಚ್ಚಿ ಪಾತ್ರವನ್ನು ಗಮನಿಸಿದರೆ ಎಲ್ಲೋ ನೋಡಿದ ನೆನಪು ಕೆಲವರಿಗೆ ಬರುತ್ತದೆ. ಪಾತ್ರಧಾರಿ Antonio Montana ಎನ್ನುವ ಮೂಲಕ ಪಾತ್ರದ ಮೂಲ ಸ್ಪೂರ್ತಿಯ ಬಗ್ಗೆ ತಕ್ಷಣವೆ ಸುಳಿವು ನೀಡುತ್ತಾನೆ Antonio Montana Raimundo ಅಲಿಯಾಸ್ "Tony" Montana 1983ರ ಸ್ಕಾರ್ ಫೇಸ್ ಚಿತ್ರದ ಪಾತ್ರ. ಆಲಿವರ್ ಸ್ಟೋನ್ ಕಥೆಯುಳ್ಳ ಕ್ರೈಂ ಥ್ರಿಲ್ಲರ್ ಚಿತ್ರದಲ್ಲಿ ಟೋನಿಯಾಗಿ ಕ್ಯೂಬಾ ದೇಶದ ನಿರಾಶ್ರಿತನ ಪಾತ್ರಧಾರಿಯಾಗಿ ಆಲ್ ಪಾಸಿನೋ ನೀಡಿರುವ ಅದ್ಭುತ ಅಭಿನಯ ಮರೆಯಲು ಸಾಧ್ಯವಿಲ್ಲ

    ರಿಷಬ್ ಶೆಟ್ಟಿ ಅಚ್ಚರಿಯ ಪ್ಯಾಕೇಜ್

    ರಿಷಬ್ ಶೆಟ್ಟಿ ಅಚ್ಚರಿಯ ಪ್ಯಾಕೇಜ್

    ರಿಷಬ್ ಶೆಟ್ಟಿ ನಟನೆ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ. ರಿಚ್ಚಿಯ ಬಾಲ್ಯದ ಗೆಳೆಯ ರಘು ಪಾತ್ರದಲ್ಲಿ ಮಿಂಚಿದ್ದಾರೆ.

    ಮಂಡ್ಯದ ಪ್ರಣಯ ರಾಜ ಕಿಶೋರ್

    ಮಂಡ್ಯದ ಪ್ರಣಯ ರಾಜ ಕಿಶೋರ್

    ಕಿಶೋರ್ ಮಂಡ್ಯ ಕಡೆಯಿಂದ ಕರಾವಳಿಗೆ ಬಂದ 'ಮುನ್ನ' ಅಲಿಯಾಸ್ ಪ್ರಣಯರಾಜ ಪಾತ್ರಧಾರಿಯಾಗಿ ಗಮನ ಸೆಳೆಯುತ್ತಾರೆ. ಮಂಗ್ಲೂರು ಕನ್ನಡದ ಜತೆಗೆ ಮಂಡ್ಯದ ಕನ್ನಡ ಕೇಳಲು ಕಿಶೋರ್ ಪಾತ್ರ ಸಾಕು.

    ಶೀತಲ್ ಶೆಟ್ಟಿ ನಟನೆ ಬಗ್ಗೆ

    ಶೀತಲ್ ಶೆಟ್ಟಿ ನಟನೆ ಬಗ್ಗೆ

    ಶೀತಲ್ ಶೆಟ್ಟಿ ಅವರಿಗೆ ನಟನೆ ಬಗ್ಗೆ ಇರುವ ಆಸಕ್ತಿ ಎದ್ದು ಕಾಣುತ್ತದೆ. ಆದರೆ, ಯಾಕೋ ಶೀತಲ್ ಅವರು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ ಹಾವಭಾವ, ನಟನಾ ಶೈಲಿಯನ್ನು ಅನುಕರಿಸಿದಂತೆ ಅಥವಾ ಪ್ರಭಾವಿತರಾದಂತೆ ತೋರುತ್ತದೆ

    ಉಳಿದ ಪಾತ್ರವರ್ಗ ನಾವು ಕಂಡಂತೆ

    ಉಳಿದ ಪಾತ್ರವರ್ಗ ನಾವು ಕಂಡಂತೆ

    ರಘು ತಾಯಿಯಾಗಿ ಪ್ರಬುದ್ಧ ನಟಿ ತಾರಾ, ಶಾರದಾ ಪಾತ್ರದಲ್ಲಿ ಯಜ್ಞ ಶೆಟ್ಟಿ, ದಿನೇಶ್ ಮಂಗಳೂರು, ಅಚ್ಯುತ್ ಕುಮಾರ್ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಿದ್ದಾರೆ.

    ಚಿತ್ರಕ್ಕೆ ತಕ್ಕ ಸಂಗೀತ ಕಿವಿಗೆ ಇಂಪು

    ಚಿತ್ರಕ್ಕೆ ತಕ್ಕ ಸಂಗೀತ ಕಿವಿಗೆ ಇಂಪು

    ಅಜನೀಶ್ ಲೋಕನಾಥ್ ಅವರು ರಕ್ಷಿತ್ ಅವರ ಕೋರಿಕೆಗೆ ತಕ್ಕ ಸಂಗೀತ ನೀಡಿದ್ದಾರೆ. ಕಥೆಯ ವೇಗಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ, ಸಾಹಿತ್ಯ ಒಗ್ಗಿಕೊಂಡಿದೆ. ಕೆಲ ಹಾಡುಗಳು ಮತ್ತೆ ಮತ್ತೆ ಗುನುಗುವಂತೆ ಮಾಡುತ್ತವೆ

    ಚಿತ್ರದ ಬಗ್ಗೆ ಕೊನೆ ಮಾತು

    ಚಿತ್ರದ ಬಗ್ಗೆ ಕೊನೆ ಮಾತು

    ಚಿತ್ರದಲ್ಲಿ ಸಸ್ಪೆನ್ಸ್, ಥ್ರಿಲ್, ಕನ್ ಫ್ಯೂಸ್ ಎಲ್ಲವೂ ಇದೆ. ಯುಗಾದಿ ಹಬ್ಬಕ್ಕೆ ಹೊಸತನ ಚಿತ್ರ ನೋಡಲು ಬಯಸಿದರೆ ತಪ್ಪದೇ ಚಿತ್ರಮಂದಿರಕ್ಕೆ ಹೋಗಿ ಬನ್ನಿ. ಚಿತ್ರದಲ್ಲಿ ಮಂಗಳೂರು ಕಡೆ ಭಾಷೆ ಇದೆ, ಚಿತ್ರ ತುಂಬಾ ಗೊಂದಲದಿಂದ ಕೂಡಿದೆ. ಡೈಲಾಗ್ಸ್ ಅರ್ಥ ಆಗಲಿಲ್ಲ ಎಂಬ ಸಬೂಬು ನೀಡುವ ಪೈಕಿ ಆಗದೆ ನೀವೇ ಖುದ್ದು ಚಿತ್ರವನ್ನು ನೋಡಿ ಅನುಭವಿಸಿ ಚಿತ್ರದ ಬಗ್ಗೆ ನಿಮ್ಮ ದೃಷ್ಟಿಕೋನ ನೀವು ನಿರ್ಧರಿಸಿ..ಚಿತ್ರದ ಆದಿ ಅಂತ್ಯವೂ ಕೂಡಾ ನಿಮ್ಮ ಕೈಲಿದೆ

    English summary
    Rakshith Shetty has become one of the promising directors in Kannada film industry. Ulidavaru Kandanthe (as seen by others) will depends on how we see the movie (subjective opinion), but it is not just one time watchable. The suspense and confusions will continues till the end. The movie is biggest feast for Kannada audience for Ugadi festival.
    Thursday, August 2, 2018, 18:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X